ನಾನೂ ರಾಮಭಕ್ತೆ, ಪ್ಲೀಸ್ ಕ್ಷಮಿಸಿಬಿಡಿ... ಅತಿಥಿಗಳನ್ನು ಹೊಗಳೋ ಭರದಲ್ಲಿ ಎಡವಟ್ಟು ಮಾಡಿ ಪೇಚಿನಲ್ಲಿ ಆ್ಯಂಕರ್​

Published : Jan 10, 2025, 04:46 PM ISTUpdated : Jan 10, 2025, 04:49 PM IST
ನಾನೂ ರಾಮಭಕ್ತೆ, ಪ್ಲೀಸ್ ಕ್ಷಮಿಸಿಬಿಡಿ... ಅತಿಥಿಗಳನ್ನು ಹೊಗಳೋ ಭರದಲ್ಲಿ ಎಡವಟ್ಟು ಮಾಡಿ ಪೇಚಿನಲ್ಲಿ ಆ್ಯಂಕರ್​

ಸಾರಾಂಶ

ಚಿತ್ರ ನಿರ್ಮಾಪಕರನ್ನು ಹೊಗಳುತ್ತಾ ರಾಮ-ಲಕ್ಷ್ಮಣರನ್ನು ಕಾಲ್ಪನಿಕರೆಂದು ಕರೆದ ನಿರೂಪಕಿ ಶ್ರೀಮುಖಿ, ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾದರು. ತಪ್ಪಿನ ಅರಿವಾಗಿ ಕ್ಷಮೆ ಯಾಚಿಸಿದ ಅವರು, ತಾವು ಹಿಂದೂ ಮತ್ತು ರಾಮಭಕ್ತೆ ಎಂದೂ ಸ್ಪಷ್ಟಪಡಿಸಿದರು. ನಿಜಾಮಾಬಾದ್‌ನ ಚಿತ್ರ ಬಿಡುಗಡೆ ಸಮಾರಂಭದಲ್ಲಿ ನಡೆದ ಈ ಘಟನೆ, ಅವರ ಮಾತಿನ ಭರದಿಂದಾದ ತಪ್ಪು ಎಂದು ವಿವರಿಸಿದರು.

ಕಾರ್ಯಕ್ರಮವೊಂದರಲ್ಲಿ ಅತಿಥಿಗಳಾಗಿ ಆಗಮಿಸಿದ ಚಿತ್ರ ನಿರ್ಮಾಪಕರನ್ನು ಹೊಗಳುವ ನಿರೂಪಕಿ ಒಬ್ಬರು, ರಾಮ-ಲಕ್ಷ್ಮಣರು ಕಾಲ್ಪನಿಕ ಎಂದು ಹೇಳುವ ಮೂಲಕ ಪೇಚಿಗೆ ಸಿಲುಕಿದ್ದಾರೆ. ಆ್ಯಂಕರ್​ ವಿರುದ್ಧ ಸೋಷಿಯಲ್​  ಮೀಡಿಯಾದಲ್ಲಿ ಕಿಡಿ ಹೊತ್ತಿಕೊಂಡ ಬೆನ್ನಲ್ಲೇ ಕೊನೆಗೆ ಸೋಷಿಯಲ್​ ಮೀಡಿಯಾದಲ್ಲಿಯೇ ವಿಡಿಯೋ ಮಾಡಿ ಕ್ಷಮೆ ಕೋರಿದ್ದಾರೆ ಆ್ಯಂಕರ್​. ತೆಲುಗಿನ ಖ್ಯಾತ ಆ್ಯಂಕರ್​ ಶ್ರೀಮುಖಿ ಅವರು ಇದೀಗ ವಿಡಿಯೋ ಒಂದನ್ನು ಶೇರ್​ ಮಾಡಿದ್ದು, “ಮಾತನಾಡುವ ಭರದಲ್ಲಿ  ರಾಮಲಕ್ಷ್ಮಣರನ್ನು ಕಾಲ್ಪನಿಕ ಎಂದು ಹೇಳಿಬಿಟ್ಟೆ. ನನ್ನಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿಬಿಡಿ. ನಾನು ಕೂಡ ಹಿಂದೂ. ರಾಮನನ್ನು ಆರಾಧಿಸುತ್ತೇನೆ. ನನ್ನ ಈ ತಪ್ಪಿನಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ' ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ.  

ಅಷ್ಟಕ್ಕೂ ಆಗಿದ್ದೇನೆಂದರೆ,  ಇದೇ 6 ರಂದು ನಿಜಾಮಾಬಾದ್‌ನಲ್ಲಿ "ಸಂಕ್ರಾಂತಿಕಿ ವಸ್ತುನ್ನಂ" ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತು. ಆ ಕಾರ್ಯಕ್ರಮವನ್ನು ಆ್ಯಂಕರ್ ಶ್ರೀಮುಖಿ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಚಿತ್ರದ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ಬಂದಿದ್ದರು. ಅವರನ್ನು ಶ್ರೀಮುಖಿ ಸಹಜವಾಗಿ ಹೊಗಳಬೇಕಿತ್ತು. ಅವರಿಬ್ಬರೂ ಅಣ್ಣ-ತಮ್ಮಂದಿರ ರೀತಿಯಲ್ಲಿ ಇದ್ದಾರೆ ಎಂದು ಹೋಲಿಕೆ ಮಾಡಬೇಕಿತ್ತು. ಅದಕ್ಕೆ ಅವರು ಆರಿಸಿಕೊಂಡದ್ದು ಶ್ರೀರಾಮ ಮತ್ತ ಲಕ್ಷ್ಮಣರನ್ನು. ಶ್ರೀರಾಮ ಮತ್ತು ಲಕ್ಷ್ಮಣರ ಸಹೋದರತ್ವವನ್ನು ಸಾಮಾನ್ಯವಾಗಿ ಹೋಲಿಕೆ  ಮಾಡಲಾಗುತ್ತದೆ. ಅದೇ ರೀತಿ ಆ್ಯಂಕರ್​ ಕೂಡ ಮಾಡಿದ್ದಾರೆ. ಅದರಲ್ಲೇನೂ ತಪ್ಪಿರಲಿಲ್ಲ. ಆದರೆ ಹಾಗೆ ಹೇಳುವಾಗ ಅವರು,  "ರಾಮ ಲಕ್ಷ್ಮಣರು ಕಾಲ್ಪನಿಕ, ಆದರೆ ನಿಜ ಜೀವನದಲ್ಲಿ ಅವರಂತೆ ಬದುಕುತ್ತಿರುವ ದಿಲ್ ರಾಜು ಮತ್ತು ಶಿರೀಷ್" ಎಂದುಬಿಟ್ಟಿದ್ದಾರೆ.

ಕ್ಯಾನ್ಸರ್​ ಚಿಕಿತ್ಸೆಗೆ ಹಣವಿಲ್ಲದೇ ಬಳಲ್ತಿರೋ 'ಗಟ್ಟಿಮೇಳ'ದ ನಟಿ: ನೋವಿನ ಕಥೆ ಬಿಚ್ಚಿಟ್ಟ ಕಮಲಶ್ರೀ

ಇದು ರಾಮ ಭಕ್ತರನ್ನು ಕೆರಳಿಸಿದೆ. ಸೋಷಿಯಲ್​ ಮೀಡಿಯಾದಲ್ಲಿ ಆ್ಯಂಕರ್​ ಸಕತ್​ ಟ್ರೋಲ್​ಗೆ ಒಳಗಾದರು. ಓರ್ವ ಹಿಂದೂ ಆಗಿ ನೀವು ಹೀಗೆ ಹೇಳುವುದು ಎಂದರೆ ಏನು? ರಾಮಲಕ್ಷ್ಮಣರನ್ನು ಕಾಲ್ಪನಿಕ ಎಂದು ಹೇಳಲು ನೀವು ಯಾರು? ಅದನ್ನು ಹೇಗೆ ಹೇಳುತ್ತೀರಿ? ಮಾತಿನ ಮೇಲೆ ನಿಗಾ ಇಲ್ಲವೆ ಎಂದೆಲ್ಲಾ ಕೆಟ್ಟ ಕೆಟ್ಟದ್ದಾಗಿ ಆ್ಯಂಕರ್​ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ವೈರಲ್​ ಆಗುತ್ತಿದ್ದಂತೆಯೇ ತಾವು ತಪ್ಪು ಆಡಿದ್ದು ಅವರಿಗೆ ತಿಳಿದು ಕ್ಷಮೆ ಕೋರಿದ್ದಾರೆ.
 
ನನ್ನ ಉದ್ದೇಶ ಆ ರೀತಿ ಇರಲಿಲ್ಲ. ಹಾಗೆ ಮಾತನಾಡುವಾಗ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ, ನಿಮ್ಮ ಮನಸ್ಸಿಗೆ ನೋವಾಗಿದೆ ಎನ್ನುವುದು ನನಗೆ ಗೊತ್ತು. ನಾನು ಕೂಡ ರಾಮನ ಆರಾಧಕಳೇ ಎಂದೆಲ್ಲಾ ಆ್ಯಂಕರ್​ ಹೇಳಿದ್ದಾರೆ. ಇದು ವೈರಲ್​  ಆಗುತ್ತಿದ್ದಂತೆಯೇ ಕೇವಲ ತೆಲಗು ಜನಕ್ಕೆ ಗೊತ್ತಿದ್ದ  ಆ್ಯಂಕರ್​ ಎಲ್ಲೆಡೆ ಫೇಮಸ್​ ಆಗುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ
BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ