12 ವರ್ಷಗಳಿಂದ ಕರ್ನಾಟಕದಲ್ಲಿ ಇದ್ಕೊಂಡು ಗೌತಮಿಗೆ ಕನ್ನಡ ಓದಲು ಬರೆಯಲು ಬರಲ್ಲ; ಯಮುನಾ ಶ್ರೀನಿಧಿ ಗರಂ

Published : Jan 10, 2025, 05:22 PM IST
12 ವರ್ಷಗಳಿಂದ ಕರ್ನಾಟಕದಲ್ಲಿ ಇದ್ಕೊಂಡು ಗೌತಮಿಗೆ ಕನ್ನಡ ಓದಲು ಬರೆಯಲು ಬರಲ್ಲ; ಯಮುನಾ ಶ್ರೀನಿಧಿ ಗರಂ

ಸಾರಾಂಶ

ಬಿಗ್‌ಬಾಸ್‌ನ ಗೌತಮಿ ಜಾದವ್ ಕನ್ನಡ ರಾಜ್ಯೋತ್ಸವದಂದು ನಾಡಗೀತೆ ಹಾಡದೆ ಮೌನವಾಗಿದ್ದಕ್ಕೆ ಯಮುನಾ ಶ್ರೀನಿಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹನ್ನೆರಡು ವರ್ಷಗಳಿಂದ ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಗೌತಮಿಗೆ ಕನ್ನಡ ಗೀತೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ವಿದೇಶದಲ್ಲಿರುವ ಮಕ್ಕಳೇ ಕನ್ನಡ ಕಲಿಯುತ್ತಿರುವಾಗ, ಇಲ್ಲಿನವರಿಗೆ ಕಲಿಯಲು ಏಕೆ ಸಾಧ್ಯವಿಲ್ಲ ಎಂದು ಯಮುನಾ ವಿಷಾದಿಸಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಆಗಿದ್ದ ಯಮುನಾ ಶ್ರೀನಿಧಿ ಈಗ ಮನೆಯೊಳಗೆ ಇರುವ ಗೌತಮಿ ಜಾದವ್ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ. ತುಂಬಾ ಸ್ಪಷ್ಟವಾಗಿ ಕನ್ನಡ ಬರುತ್ತೆ, ಹಾಗೆ ಉಚ್ಛಾರಣೆ ಮಾಡಬಾರದು ಹೀಗೆ ಮಾಡಬೇಕು ಎಂದು ಪ್ರತಿಯೊಬ್ಬರನ್ನು ತಿದ್ದುವ ಗೌತಮಿ ಮಾತ್ರ ಯಾಕೆ ಕನ್ನಡ ರಾಜ್ಯೋತ್ಸವದ ದಿನ ಮೌನವಾಗಿ ನಿಂತಿದ್ದರು? ತಡವಾಗಿ ಯಮುನಾ ಶ್ರೀನಿಧಿ ಪಾಯಿಂಟ್ ಎತ್ತಿದ್ದರು ವೀಕ್ಷಕರು ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ. 

'ಸೋಷಿಯಲ್ ಮೀಡಿಯಾದಲ್ಲಿ ನಾನು ಒಂದು ವಿಚಾರ ಗಮನಿಸಿದ್ದೀನಿ ಆದರೆ ಯಾಕೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡದಾಗಿಲ್ಲ ನನಗೆ ಗೊತ್ತಿಲ್ಲ. ನವೆಂಬರ್ 1ರಂದು ಕನ್ನಡಿಗರು ಹೆಮ್ಮೆ ಪಡುವ ದಿನ, ಕನ್ನಡ ರಾಜ್ಯೋತ್ಸವ ದಿನವನ್ನು ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಬ್ಬರು ಹೆಮ್ಮೆಯಿಂದ ಆಚರಿಸುತ್ತಾರೆ. ಎಲ್ಲರೂ ನಾಡ ಗೀತೆ ಹಾಡುವಾಗ ಗೊತ್ತಿರುವವರು ಜೋರಾಗಿ ಶಿಶಿರ್ ತರ ಹಾಡುತ್ತಾರೆ. ನಾಡಗೀತೆ ಗೊತ್ತಿಲ್ಲದೆ ಇರುವವರು ಆದಷ್ಟು ಹಾಡುತ್ತಾರೆ ಇಲ್ಲವಾದರೆ ಲಿಪ್ ಸಿಂಕ್ ಮಾಡುತ್ತಾರೆ. ಎಲ್ಲರಿಗೂ ಎಲ್ಲ ಸಾಲುಗಳು ಬರುತ್ತೆ ಅಂತ ಹೇಳಲು ಆಗಲ್ಲ. ಆದರೆ ಅಲ್ಲಿರುವ ಗೌತಮಿ ಬಾಯಿ ಮುಚ್ಚಿಕೊಂಡು ನಿಂತಿರುತ್ತಾರೆ. ನಾವು ಹೊರ ದೇಶಕ್ಕೆ ಹೋದಾಗ ಅಲ್ಲಿನ ಭಕ್ತಿ ಗೀತ ಬರಲ್ಲ ಅಂತ ಸುಮ್ಮನೆ ನಿಂತಿರುತ್ತೀವಿ ತಾನೇ ಹಾಗೆ ಬಿಗ್ ಬಾಸ್ ಮನೆಯಲ್ಲಿ ನಿಂತಿದ್ದರು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಯಮುನಾ ಶ್ರೀನಿಧಿ ಮಾತನಾಡಿದ್ದಾರೆ.

ಬಿಗ್ ಬಾಸ್ ಗೌತಮಿ ಬಾಯಲ್ಲಿ ಪದೇ ಪದೇ ಕೇಳಿ ಬರುವ ವನದುರ್ಗ ದೇವಿ ಎಲ್ಲಿದೆ? ಅದ್ಭುತ ಪವಾಡಗಳ ಸ್ಥಳವಿದು

'ಗೌತಮಿ ಜಾದವ್ ಅವರು ಮರಾಠಿ ಕುಟುಂಬದವರು ಎನ್ನಲಾಗಿದೆ ಆದರೆ 12 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದು ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಲ್ಲಿನ ನೆಲ ಬೇಕು ಇಲ್ಲಿನ ಜಲ ಬೇಕು ಇಲ್ಲಿನ ಅವಕಾಶಗಳು ಬೇಕು ಇಲ್ಲನ ಎಲ್ಲವೂ ಬೇಕು ಆದರೆ ನಮ್ಮ ನಾಡ ಗೀತ ಬರಲ್ವಾ ನಿಮಗೆ? ಎಷ್ಟು ದಿನ ಬೇಕು ನಿಮಗೆ ಕಲಿಯುವುದಕ್ಕೆ? ಬೇರೆ ದೇಶದಲ್ಲಿ ಹುಟ್ಟಿ ಬೆಳೆದ ಮಕ್ಕಳ ಕನ್ನಡವನ್ನು ಬರೆಲು ಮಾತನಾಡಲು ಕಲಿಯುತ್ತಿದ್ದಾರೆ. ಅಮೆರಿಕಾದ ಕನ್ನಡ ಸಂಘದಲ್ಲಿ ನಾನು ಇದ್ದೆ, ಅಲ್ಲಿ ಮಕ್ಕಳು ಎಷ್ಟು ಚೆನ್ನಾಗಿ ಕನ್ನಡ ಗೀತೆ ಹಾಡುತ್ತಾರೆ ನೋಡಬೇಕು. ಆದರೆ ಆ ಮಹಾತಾಯಿಗೆ ಕನ್ನಡ ಓದಲು ಬರೆಯಲು ಬರಲ್ಲ ಹೀಗಾಗಿ ನೋಡಿ ಒಂದು ಟಾಸ್ಕ್‌ ರೂಲ್‌ ಬುಕ್‌ನ ಬಿಗ್ ಬಾಸ್ ಮನೆಯಲ್ಲಿ ಓದಿಲ್ಲ' ಎಂದು ಯಮುನಾ ಶ್ರೀನಿಧಿ ಹೇಳಿದ್ದಾರೆ.

ಗೆಳೆಯ ಗೆಳೆಯ ಎನ್ನುತ್ತಿದ್ದ ಮಂಜುಗೆ 'ಇದೆಲ್ಲ ನನ್ನ ಹತ್ರ ಇಟ್ಕೋಬೇಡ' ಎಂದು ಖಡಕ್ ವಾರ್ನಿಂಗ್ ಕೊಟ್ಟ ಗೌತಮಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?