ಸೋಷಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಇತ್ತೀಚೆಗೆ ಸಾಕಷ್ಟು ವೈರಲ್ ಆಗ್ತಿದೆ. ಅದು ಒಬ್ಬ ಫೇಮಸ್ ನಟಿ ಬಾಲ್ಯದಲ್ಲಿ ರಿಯಾಲಿಟಿ ಶೋದಲ್ಲಿ ನಟಿಸಿದ ವೀಡಿಯೋ. ಆ ಶೋ ಯಾವುದು? ಆ ನಟಿ ಯಾರು?
ಸೋಷಿಯಲ್ ಮೀಡಿಯಾದಲ್ಲಿ ಮೊನ್ನೆಯಿಂದ ಒಂದು ವೀಡಿಯೊ ಸಖತ್ ವೈರಲ್ ಆಗ್ತಿದೆ. ಅದು ಈಗ ಫೇಮಸ್ ನಟಿಯಾದವರೊಬ್ಬರ ಬಾಲ್ಯದ ವೀಡಿಯೋ. ಇದರಲ್ಲಿ ಅವರ ಪ್ರತಿಭೆ ಬಹಳ ಸೊಗಸಾಗಿ ಹೊರಬರುತ್ತಿದೆ. ಇದನ್ನು ಕಂಡು ಅಬ್ಬಾ ಎಂಥಾ ಟ್ಯಾಲೆಂಟ್ ಅಂತ ಮೆಚ್ಚಿಕೊಳ್ಳುತ್ತಿದ್ದಾರೆ. ಅಂದಹಾಗೆ ಈಕೆ ಜೀ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಈಕೆ ಭಾಗವಹಿಸಿದ್ದರು. ಇನ್ನೊಂದು ವಿಶೇಷ ಅಂದರೆ ಈ ರಿಯಾಲಿಟಿ ಶೋದಲ್ಲಿ ಸ್ಯಾಂಡಲ್‌ವುಡ್‌ನ ಕುಳ್ಳ ಅಂತಲೇ ಫೇಮಸ್ ಆದ ಪ್ರಖ್ಯಾತ ನಟ, ನಿರ್ದೇಶಕ ದ್ವಾರಕೀಶ್ ಜಡ್ಜ್ ಆಗಿದ್ದರು. ಅವರು ಸಹ ಈ ಬಾಲ ನಟಿಯ ಪ್ರತಿಭೆಗೆ ಶಹಭಾಸ್ ಅಂದಿದ್ದರು. ಇದರಲ್ಲಿ ಈ ಬಾಲ ನಟಿ ಸೊಗಸಾಗಿ ಸಂಸ್ಕೃತ ಶ್ಲೋಕವನ್ನು ಬಹಳ ಲೀಲಾಜಾಲವಾಗಿ ಹಾಡಿದ್ದಾರೆ. ಜೊತೆಗೆ ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ ಅನ್ನೋ ಹಾಡು ಹಾಡಿದ್ದಾರೆ.
ಅಷ್ಟೇ ಅಲ್ಲ, ಭಗವದ್ಗೀತೆಯ ಶ್ಲೋಕವನ್ನು ಬಹಳ ಅರ್ಥಪೂರ್ಣವಾಗಿ ಉಚ್ಛರಿಸಿದ್ದಾರೆ. ಭರತನಾಟ್ಯ, ಹಾಡು, ಶ್ಲೋಕ ಅಂತ ಸೊಗಸಾಗಿ ಪ್ರತಿಭಾ ಪ್ರದರ್ಶನ ನೀಡಿದ ಈಕೆಯ ಟ್ಯಾಲೆಂಟ್ ಕಂಡು ಜಡ್ಜ್‌ಗಳು ಮಾತ್ರವಲ್ಲ, ಈ ವೀಡಿಯೋ ನೋಡಿದ ನೆಟ್ಟಿಗರೂ ಶಹಭಾಸ್ ಅಂದಿದ್ದಾರೆ.
undefined
ಪದವಿ ಪಡೆದ ಮಗಳು.. ಸಾಧನೆಯನ್ನು ಮೆಚ್ಚಿ ಭಾವುಕ ಪತ್ರ ಬರೆದ ಗಾಯಕ ವಿಜಯ್ ಪ್ರಕಾಶ್
ಅಂದಹಾಗೆ ಈ ನಟಿ ಮತ್ಯಾರೂ ಅಲ್ಲ, 'ಲಕ್ಷ್ಮೀ ಬಾರಮ್ಮ' ದ ಕೀರ್ತಿ. ಅಂದರೆ ತನ್ವಿ ರಾವ್ ಎಂಬ ವೆರಿ ಟ್ಯಾಲೆಂಟೆಡ್ ನಟಿ. ಯೆಸ್, ಸದ್ಯ ಈ ಸೀರಿಯಲ್‌ನಲ್ಲಿ ಕೀರ್ತಿ ಇಲ್ಲ ಅಂತ ಜನ ಅಂದುಕೊಳ್ಳುತ್ತಿರುವಾಗಲೇ ಅತ್ತ ಕೀರ್ತಿಯ ಆಗಮನವಾಗಿದೆ. ಸದ್ಯ ಈ ಸೀರಿಯಲ್‌ನಲ್ಲಿ ಕೀರ್ತಿ ಪಾತ್ರ ಸಖತ್ ಫೇಮಸ್ ಆಗಿತ್ತು. ಶುರು ಶುರುವಿನಲ್ಲಿ ಎಲ್ಲರೂ ಈ ಪಾತ್ರವನ್ನು ದ್ವೇಷಿಸುತ್ತಿದ್ದರು. ಈಕೆಯ ಪಾತ್ರ ಬರೋದೇ ಬೇಡ, ಒಮ್ಮೆ ಸ್ಟಾಪ್ ಆಗಲಿ ಅನ್ನೋ ಮಾತನ್ನು ಹೇಳುತ್ತಿದ್ದರು. ಆದರೆ ಬರು ಬರುತ್ತಾ ಈ ಪಾತ್ರ ಇಷ್ಟವಾಗತೊಡಗಿತು. ಒಳ್ಳೆ ಮನಸ್ಸಿನ ಹುಡುಗಿಯಾಗಿ ಭಗ್ನ ಪ್ರೇಮಿಯಾಗಿ ಹಲವು ಶೇಡ್‌ಗಳುಳ್ಳ ಈ ಪಾತ್ರವನ್ನು ಜನ ಇಷ್ಟಪಡತೊಡಗಿದರು.
ತನ್ವಿ ರಾವ್ ಅವರನ್ನು ಜನ ಸದ್ಯ ಕೀರ್ತಿ ಪಾತ್ರದ ಮೂಲಕ ಗುರುತಿಸುತ್ತಿದ್ದಾರೆ. ಆದರೆ ಇವರು ಈ ಪಾತ್ರವನ್ನೂ ಮೀರಿ ಸಖತ್ ಪ್ರತಿಭಾವಂತೆ. ಹತ್ತನೇ ಕ್ಲಾಸಿನಲ್ಲಿ 98 ಪರ್ಸೆಂಟ್ ಮಾರ್ಕ್ಸ್ ತೆಗೆದುಕೊಂಡ ಈಕೆ ಕಲಿಕೆಯಲ್ಲೂ ಸಖತ್ ಶಾರ್ಪ್. ಕೇವಲ ಏಳು ಮಾರ್ಕ್ ಅಂತರದಿಂದ ಅವರಿಗೆ ಸ್ಟೇಟ್ ರ್ಯಾಂಕ್ ತಪ್ಪಿ ಹೋಗಿತ್ತು. ಅಷ್ಟೇ ಅಲ್ಲ ಸೈನ್ಸ್ ವಿಭಾಗದಲ್ಲೂ ಹತ್ತನೆಯ ತರಗತಿಯಷ್ಟೇ ಅಂದರೆ 98 ಪರ್ಸೆಂಟ್ ಮಾರ್ಕ್ಸ್ ಪಡೆದ ಈ ಪ್ರತಿಭಾವಂತೆ ಮುಂದೆ ವಿಜ್ಞಾನ ಬಿಟ್ಟು ಆರ್ಟ್ಸ್ ಸಬ್ಜೆಕ್ಟ್‌ನತ್ತ ಹೊರಳುತ್ತಾಳೆ. ಕ್ರೈಸ್ಟ್ ಯೂನಿರ್ಸಿಟಿಯಲ್ಲಿ ಮೊದಲ ರ್ಯಾಂಕ್‌ನೊಂದಿಗೆ ಆರ್ಟ್ಸ್ ಪದವಿ ಪಡೆದಿದ್ದು ಈಕೆ ಎಂಥಾ ಟ್ಯಾಲೆಂಟ್ ಅನ್ನೋದಕ್ಕೆ ಉತ್ತಮ ಸಾಕ್ಷಿ.
ಸದ್ಯ ಈಕೆ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನ ಕೀರ್ತಿ ಪಾತ್ರವನ್ನು ಬಹಳ ಸೊಗಸಾಗಿ ನಟಿಸಿದ್ದಾರೆ. ಈ ಪಾತ್ರವೇ ತಾನಾಗಿದ್ದಾರೆ. ಈ ಪಾತ್ರ ಸಾಕಷ್ಟು ಫೇಮಸ್ ಆಗಿ ಆ ಬಳಿಕ ಸತ್ತುಹೋದಂತೆ ತೋರಿಸಲಾಗಿತ್ತು. ಆದರೆ ಇದೀಗ ಸೀರಿಯಲ್‌ನಲ್ಲಿ ಆಕೆಯನ್ನು ಮತ್ತೆ ತೋರಿಸಲಾಗುತ್ತಿದೆ. ಕೀರ್ತಿ ಮತ್ತೆ ಬರ್ತಿದ್ದಾಳೆ ಅಂತ ಜನ ಬಹಳ ಖುಷಿಯಿಂದ ಈ ಪಾತ್ರವನ್ನು ಮತ್ತೆ ಸ್ವಾಗತಿಸಿದ್ದಾರೆ. ಈ ಪಾತ್ರ ಮುಗಿದೇಹೋಯ್ತು ಅಂದಾಗ ಬಹಳಷ್ಟು ಮಂದಿ ಬೇಸರ ತೋಡಿಕೊಂಡಿದ್ದರು.
ದೀಪಿಕಾ ಪಡುಕೋಣೆ ಎಷ್ಟು ಚೆನ್ನಾಗಿ ಕೊಂಕಣಿ ಮಾತಾಡ್ತಾರೆ ನೋಡಿ! ಕುಂದಾಪ್ರ ಕೊಂಕಣಿಯಂತೆ ಇದು..
ಹೀಗೆ ಬಾಲ್ಯದಿಂದಲೇ ತನ್ನ ಪ್ರತಿಭೆ ಮೆರೆದು ಆ ಬಳಿಕ ತನ್ನ ಪ್ರತಿಭೆಯಿಂದಲೇ ಮನೆಮಾತಾದ ಈ ನಟಿ ಮತ್ತೆ ಬರುತ್ತಾಳೆ ಅಂದಾಗ ಬಹಳ ಮಂದಿ ಖುಷಿ ಆಗಿದ್ದಾರೆ. ಅದೇ ಟೈಮಲ್ಲಿ ಈಕೆಯ ಹಳೆಯ ಈ ವೀಡಿಯೋ ಕೂಡ ವೈರಲ್ ಆಗುತ್ತಿದೆ. ಇಂಥಾ ಟ್ಯಾಲೆಂಟೆಡ್ ನಟಿ ಕಿರುತೆರೆ, ಸಿನಿಮಾದಲ್ಲಿ ಮತ್ತೆ ಫೇಮಸ್ ಆಗಲಿ ಅಂತ ಈಕೆಯ ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಇತ್ತೀಚೆಗೆ ಸಾಕಷ್ಟು ವೈರಲ್ ಆಗ್ತಿದೆ. ಅದು ಒಬ್ಬ ಫೇಮಸ್ ನಟಿ ಬಾಲ್ಯದಲ್ಲಿ ರಿಯಾಲಿಟಿ ಶೋದಲ್ಲಿ ನಟಿಸಿದ ವೀಡಿಯೋ. ಆ ಶೋ ಯಾವುದು? ಆ ನಟಿ ಯಾರು?