ಕಣ್ಣು ಮುಚ್ಚಿಕೊಂಡು ಚಿಕನ್ ಬಿರಿಯಾನಿ ಮಾಡಿದ ನಿವೇದಿತಾ ಗೌಡ. ಕಣ್ಣು ಕಟ್ಟ ಬಿರಿಯಾನಿ ಎಂದು ಹೆಸರಿಟ್ಟ ಪತಿ ಚಂದನ್ ಶೆಟ್ಟಿ.
ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ವಾರಕ್ಕೊಂದು ಡಿಫರೆಂಟ್ ಅಡುಗೆಯನ್ನು ಮಾಡಿ ಚಾನೆಲ್‌ನಲ್ಲಿ ಅಪ್ಲೊಡ್ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಒತ್ತಾಯ ಮಾಡಿ ಅಡುಗೆ ಮಾಡಿಸುತ್ತಾರೆ. ಈಗ ಕಣ್ಣು ಮುಚ್ಚಿಕೊಂಡು ಬಿರಿಯಾನಿ ಮಾಡಿದ್ದಾರೆ.
'ಜೀವನದಲ್ಲಿ ನಾನು ಫಸ್ಟ್ ಟೈಂ ಬಿರಿಯಾನಿ ಮಾಡುತ್ತಿರುವುದು. ಬಿರಿಯಾನಿ ಮಾಡುವುದು ಮೊದಲೇ ಕಷ್ಟ ಆದರಲೂ ನಾನು ಕಣ್ಣು ಮುಚ್ಚಿಕೊಂಡು ಅಡುಗೆ ಮಾಡುತ್ತಿರುವೆ. ಯಾವ ಲೆವೇಲ್‌ಗೆ ಬರುತ್ತೆ ಗೊತ್ತಿಲ್ಲ. ಬಿರಿಯಾನಿ ಮಾಡಲು ಈರುಳ್ಳಿ ಟೊಮ್ಯಾಟೋ ಬೇಕು ಅದನ್ನು ಕಣ್ಣು ಮುಚ್ಚಿಕೊಂಡು ಕಟ್ ಮಾಡುವೆ. ನನ್ನ ಅಡುಗೆ ಮನೆ ಹೇಗಿದೆ ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ಎಲ್ಲಿ ಏನಿಟ್ಟಿರುವೆ ಎಂದು ಚೂರು ನೆನಪಿಲ್ಲ' ಎಂದು ಹೇಳುವ ಮೂಲಕ ಅಡುಗೆ ಆರಂಭಿಸುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಲ್ಲೇ ಇಟ್ಟಿದ್ದ ಕಟಿಂಗ್ ಬೋರ್ಡ್, ಚಾಕು ಮತ್ತು ಈರುಳ್ಳಿ ಎತ್ತುಕೊಂಡಿದ್ದಾರೆ.
ನಿವೇದಿತಾ ಅಡುಗೆ ಮಾಡುವಾಗ ಮೊದಲ ಸಲ ಮನೆಯಲ್ಲಿ ಚಂದನ್ ಕಂಪನಿ ಕೊಡುತ್ತಿದ್ದಾರಂತೆ. ಬಿರಿಯಾನಿ ಎಂದು ತಿಳಿಯುತ್ತಿದ್ದಂತೆ ವಾವ್ ರುಚಿ ನೋಡಬೇಕು ಎಂದು ಹೇಳಿದ್ದಾರೆ. ನಿವಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ಮನೆಗೆ ಬೇಗ ಬಂದಿರುವುದಕ್ಕೆ ಈ ಬಿರಿಯಾನಿಯನ್ನು ನಾನೇ ತಿನ್ನಬೇಕು. ನಿಮ್ಮನ್ನು ಮದುವೆ ಆಗಿರುವ ಅದೃಷ್ಟಕ್ಕೆ ರುಚಿ ನೋಡಬೇಕು. ಏನೋ ಒಂದು ಮಾಡಿ ಎಂದು ಚಂದನ್ ಹೇಳಿ ಅಡುಗೆ ಮನೆಯಿಂದ ಹೊರ ಹೋಗುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ನನ್ನ ಮೈಂಡ್‌ನಲ್ಲಿರುವ ಕಣ್ಣಿ ಓಪನ್ ಅಗಿರುತ್ತದೆ ಎಂದು ಹಾಸ್ಯ ಮಾಡಿದ್ದಾರೆ ನಿವಿ.
ನನಗೆ ಅವಾರ್ಡ್ ಕೊಡಬೇಕು ಅದ್ರೆ ಯಾರೂ ಗುರುತಿಸುತ್ತಿಲ್ಲ: ನಿವೇದಿತಾ ಗೌಡ ಮತ್ತೊಂದು ವಿಡಿಯೋ ವೈರಲ್
'ತರಕಾರಿ ಕಟ್ ಮಾಡುವಾಗ ನಾನು ಕೈ ಬೆರಳು ಕಟ್ ಮಾಡಿಸಿಕೊಳ್ಳುದಿಲ್ಲ ಏಕೆಂದರೆ ನನ್ನ ಉಗುರು ತುಂಬಾ ಉದ್ದ ಇದೆ. 500 ಗ್ರಾಮ ಚಿಕನ್ ಬಳಸಿ ಅಡುಗೆ ಮಾಡುತ್ತಿರುವೆ. ಯೂಟ್ಯೂಬ್‌ಗಾಗಿ ಅಡುಗೆ ಮಾಡಿ ಮಾಡಿ ನಾನು ರುಚಿಯಾಗಿ ಅಡುಗೆ ಮಾಡಲು ಶುರು ಮಾಡಿರುವೆ. ಹೋಟೆಲ್ ಓಪಮ್ ಮಾಡುವ ಸಾಮರ್ಥ್ಯ ನನಗಿದೆ ಆದರೆ ಜನರು ಹೆಚ್ಚಿಗೆ ಬಂದರೆ ಕಷ್ಟ ಆಗುತ್ತದೆ ಎಂದು ಓಪನ್ ಮಾಡುತ್ತಿಲ್ಲ. ಬಿರಿಯಾನಿ ಮಸಾಲದಲ್ಲಿ ಉಪ್ಪು ಇರುವುದರಿಂದ ಉಪ್ಪು ಹಾಕುವುದು ಬೇಡ ಎಂದು ಯೂಟ್ಯೂಬ್‌ನಲ್ಲಿ ಹೇಳಿದ್ದಾರೆ. ಕಣ್ಣು ತೆರೆದು ಬಿರಿಯಾನಿ ಮಾಡಿದ್ದರೂ ಇಷ್ಟು ಚೆನ್ನಾಗಿ ಅಡುಗೆ ಮಾಡುತ್ತಿರಲಿಲ್ಲ' ಎಂದಿದ್ದಾರೆ ನಿವಿ.
ಕುಕ್ಕರ್‌ನಿಂದ ಬಿರಿಯಾನಿ ಓಪ್ ಮಾಡಿದ ಮೇಲೆ 'ಬಿರಿಯಾನಿಗಿಂತ ಇದು ನೋಡಲು ಟೊಮ್ಯಾಟೋ ಬಾತ್ ರೀತಿ ಇದೆ. ಮಕ್ಕಳಿಗೆ ಅನ್ನ ಮಾಡಿ ಕೊಡುವ ರೀತಿ ಅನ್ನ ಮುದ್ದೆ ಆಗಿದೆ. ಮೊದಲು ಚಂದನ್ ತಿಂದು ರುಚಿ ನೋಡಬೇಕು..ಅವರಿಗೆ ಸ್ವಲ್ಪ ಭಯ ಏಕೆಂದರೆ ಒಮ್ಮೆ ಆಸ್ಪತ್ರೆಗೆ ಸೇರಿಕೊಂಡಿದ್ದರು' ಎಂದಿದ್ದಾರೆ. 'ನಿವಿ ಮಾಡಿರುವ ಬಿರಿಯಾನಿಯಲ್ಲಿ ಉಪ್ಪು ಇಲ್ಲ. ಕಣ್ಣು ತೆರೆದು ಮಾಡುವ ಅಡುಗೆನೇ ತಿನ್ನೋಕೆ ಆಗುತ್ತಿಲ್ಲ ಈಗ ಕಣ್ಣು ಮುಚ್ಚಿಕೊಂಡು ಮಾಡಿರುವುದು ಓಕೆ. ಕಣ್ಣು ಪೆಟ್ಟು ಚಿಕನ್ ಬಿರಿಯಾನಿ ಎಂದು ನಾಮಕರಣ ಮಾಡುವೆ' ಎಂದು ಚಂದನ್ ಹೇಳಿದ್ದಾರೆ ಚಂದನ್.
'ನಾನು ಮಾಡುವೆ ಅಡುಗೆಯನ್ನು ಕ್ಯಾನೆಡಾದಲ್ಲಿರುವ ಜನರು ತುಂಬಾ ಇಷ್ಟ ಪಡುತ್ತಾರೆ. ತುಂಬಾ ಜನರು ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ' ಎಂದು ಹೇಳುವ ಮೂಲಕ ನಿವಿ ವಿಡಿಯೋ ಮುಗಿಸಿದ್ದಾರೆ.