ನನಗೆ ಅಂದೇ ಒಂದು ಸಂಗತಿ ಬಗ್ಗೆ ಕಳವಳ ಶುರುವಾಗಿತ್ತು. ನಾನು ಬಯಸಿದ್ದನ್ನು ಪಡೆಯಲು ಬೇಕಾಗಿದ್ದು ನನ್ನ ಬಳಿ ಇರಲಿಲ್ಲ. ಆಗ ಅದನ್ನು ಪಡೆಯುವ ವಯಸ್ಸಾಗಲೀ ಸಾಮರ್ಥ್ಯವಾಗಲೀ ನನ್ನಲ್ಲಿ ಇರಲಿಲ್ಲ.
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಹಳೆಯ ವೀಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬದುಕಿದ್ದು ಕೇವಲ 34 ವರ್ಷಗಳು, ಆದರೆ ಅಷ್ಟರಲ್ಲಿಯೇ ಅವರು ಟಿವಿ ಸೀರಿಯಲ್‌ಗಳು ಹಾಗು ಸಿನಿಮಾಗಳ ಮೂಲಕ ಬಹಳಷ್ಟು ಹೆಸರು ಮಾಡಿದ್ದರು. ಕಿರುತೆರೆ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟ ಸುಶಾಂತ್ ಸಿಂಗ್ ಅವರು ಅಲ್ಲಿ ಸಾಕಷ್ಟು ಹೆಸರು, ಹಣ ಮಾಡಿದ್ದಾರೆ. ಆದರೆ ಅದಕ್ಕೂ ಮೊದಲು, ಅಂದರೆ ಸುಶಾಂತ್ ಬಾಲ್ಯದಲ್ಲಿ ಬಡತನ ಅವರ ಕುಟುಂಬವನ್ನು ಇನ್ನಿಲ್ಲದಂತೆ ಕಾಡಿತ್ತು. ಆ ಬಗ್ಗೆ ಸುಶಾಂತ್ ಮಾತನಾಡಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರು ಸಂದರ್ಶನವೊಂದರಲ್ಲಿ 'ನನಗೆ 18-19 ವರ್ಷವಾಗಿದ್ದಾಗ ಯಾರೊಬ್ಬರೂ ನನಗೆ ನೀನು ಈ ಜಗತ್ತಿನಲ್ಲಿ ಬದುಕಿದ್ದೀಯಾ ಎಂದು ಕೇಳಿರಲೇ ಇಲ್ಲ. ಅದಕ್ಕೆ ನಾನೇ ಕಾರಣ ಎಂದೂ ಹೇಳಬಹುದು. ಏಕೆಂದರೆ, ನಾನು ಅಷ್ಟೊಂದು ಅಂತರ್ಮುಖಿ ಆಗಿದ್ದೆ. ನಾನು ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ಜಗತ್ತನ್ನು ನೋಡುತ್ತಲೇ ಇರಲಿಲ್ಲ. ಈ ಕಾರಣಕ್ಕೆ ನನ್ನನ್ನೂ ಯಾರೂ ಮಾತನಾಡಿಸುತ್ತಿರಲಿಲ್ಲ. ನಾನು ಚಿಕ್ಕ ಮಗುವಾಗಿದ್ದಾಗ ನನ್ನನ್ನು ಯುನಿವರ್ಸರಿಗೆ ಕಳಿಸೋದಕ್ಕೂ ನನ್ನ ಕುಟುಂಬದ ಬಳಿ ದುಡ್ಡಿರಲಿಲ್ಲ.
ನಾಗರಹಾವು ಚಿತ್ರಕ್ಕೆ ವಿಷ್ಣುವರ್ಧನ್ ಆಯ್ಕೆಯಾಗಿದ್ದು ಹೇಗೆ, ಯಾಕೆ? ಪುಟ್ಟಣ್ಣ ಕಣಗಾಲ್ ಅಂದು ಹೇಳಿದ್ದೇನು?
ನನಗೆ ಅಂದೇ ಒಂದು ಸಂಗತಿ ಬಗ್ಗೆ ಕಳವಳ ಶುರುವಾಗಿತ್ತು. ನಾನು ಬಯಸಿದ್ದನ್ನು ಪಡೆಯಲು ಬೇಕಾಗಿದ್ದು ನನ್ನ ಬಳಿ ಇರಲಿಲ್ಲ. ಆಗ ಅದನ್ನು ಪಡೆಯುವ ವಯಸ್ಸಾಗಲೀ ಸಾಮರ್ಥ್ಯವಾಗಲೀ ನನ್ನಲ್ಲಿ ಇರಲಿಲ್ಲ. ಬಳಿಕ ನಾನು ಬೆಳೆದ ಮೇಲೆ ಟಿವಿ ಸೀರಿಯಲ್ ಮೂಲಕ ಹೆಸರು, ಹಣ, ಪ್ರಸಿದ್ಧಿ ಎಲ್ಲವನ್ನೂ ಪಡೆದುಕೊಂಡೆ. ಆದರೆ, ಜೀವನದ ಒಂದು ವಿರೋಧಾಭಾಸವನ್ನು ಕೂಡ ನಾನು ಕಂಡುಕೊಂಡೆ. ಅದೇನೆಂದು ಹೇಳಿದರೆ ನಿಮಗೂ ಅಚ್ಚರಿಯಾಗಬಹುದು.
ಅರೆರೆ ಎಂಥ ನಟನೆ, ರಶ್ಮಿಕಾಗೆ ಸಿಕ್ತು ಪುಷ್ಪಾ ಹೀರೋ ಸರ್ಟಿಫಿಕೇಟ್; ಏನಂದ್ರು ಅಲ್ಲು ಅರ್ಜುನ್?
ನಮ್ಮಲ್ಲಿ ಏನೂ ಇಲ್ಲದಿರುವಾಗ, ಅಂದರೆ ಸ್ವಲ್ಪವೂ ಹಣವಿಲ್ಲದಿರುವಾಗ ನಾವು ಇರುವುದರಲ್ಲೇ ನಮಗೆ ಬೇಕಾದಷ್ಟು ಚಿಕ್ಕಚಿಕ್ಕ ಬಯಕೆಯನ್ನು ಪೂರೈಸಿಕೊಂಡಿರುತ್ತೇವೆ. ಆದರೆ, ನಮ್ಮಲ್ಲಿ ಹೇರಳವಾಗಿ ಹಣ ಇರುವಾಗ ನಾವು ದೊಡ್ಡ ದೊಡ್ಡ ಬಯಕೆಗಳನ್ನು ಹೊಂದಿರುತ್ತೇವೆ. ಅದನ್ನು ಪೂರೈಸಿಕೊಳ್ಳಲು ನಮಗೆ ಎಷ್ಟೇ ಹಣವಿದ್ದರೂ ಸಾಧ್ಯವಾಗುವುದೇ ಇಲ್ಲ. ಹಣ ಎಹಚ್ಚು ಇರುವಾಗ ಅದ್ಯಾಕೆ ಚಿಕ್ಕಚಿಕ್ಕ ಬಯಕೆಗಳು ಮಾಯವಾಗಿ ಬಿಡುತ್ತವೆಯೋ ಗೊತ್ತಿಲ್ಲ. ಇಂದು ಹಣ, ಹೆಸರು ಎಲ್ಲವೂ ನನ್ನ ಬಳಿ ಇದೆ. ಆದರೆ, ಹಣ ತುಂಬಾ ಕಡಿಮೆ ಇದ್ದಾಗ ಇದ್ದಷ್ಟು ಖುಷಿ ಈಗ ನನ್ನಲಿಲ್ಲ' ಎಂದಿದ್ದರು ನಟ ಸುಶಾಂತ್ ಸಿಂಗ್ ರಜಪೂತ್.