Shweta Tiwari ಪ್ಯಾಂಟ್​ಲೆಸ್​ ಫೋಟೋ ಶೇರ್​: ತೊಡೆ ನೋಡಿ ಆ್ಯಕ್ಸಿಡೆಂಟ್​ ಆಗೋಯ್ತು ಎಂದ ಫ್ಯಾನ್​!

By Suvarna NewsFirst Published Jul 15, 2023, 12:37 PM IST
Highlights

ನಟಿ ಶ್ವೇತಾ ತಿವಾರಿ ಸ್ಟನ್ನಿಂಗ್​ ಫೋಟೋ ಶೇರ್​ ಮಾಡಿದ್ದು, ಈಕೆಯ ತೊಡೆಯ ಮೇಲೆ ನೆಟ್ಟಿಗರ ಕಣ್ಣು ನೆಟ್ಟಿದೆ. 
 

'ಬಿಗ್ ಬಾಸ್' ಖ್ಯಾತಿಯ ಭೋಜ್‌ಪುರಿ ಮತ್ತು ಕಿರುತೆರೆ ನಟಿ ಶ್ವೇತಾ ತಿವಾರಿ 'ಬಿಗ್ ಬಾಸ್' ವಿನ್ನರ್‌ ಕೂಡ ಹೌದು.  ವಯಸ್ಸು 42 ಆದರೂ ಈಕೆಯ ಸೌಂದರ್ಯ ಇನ್ನೂ ಕುಗ್ಗಿಲ್ಲ. ಯುವತಿಯಂತೆಯೇ ಕಂಗೊಳಿಸುತ್ತಿದ್ದಾರೆ. ಆಗಾಗ್ಗೆ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯವಾಗಿರುವ ನಟಿ ತನ್ನ ಬೋಲ್ಡ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  ಈಕೆ ಹಲವಾರು ಧಾರಾವಾಹಿಗಳನ್ನು ಮಾಡಿದರೂ ಮೈ ಹೂಂ ಅಪರಾಜಿತಾ ಧಾರಾವಾಹಿಯ ಮೂಲಕ ಚಿರಪರಿಚಿರತಾಗಿದ್ದಾರೆ. ಹೆಚ್ಚಾಗಿ ಈಕೆ ಧಾರಾವಾಹಿಗಳಲ್ಲಿ ಸಾಂಪ್ರದಾಯಿಕ ಪಾತ್ರಗಳನ್ನು ಮಾಡಿದರೂ  ನಿಜ ಜೀವನದಲ್ಲಿ ಅವರ ವ್ಯಕ್ತಿತ್ವವೇ ಬೇರೆ. 42 ನೇ ವಯಸ್ಸಿನಲ್ಲಿ, ಶ್ವೇತಾ ಫಿಟ್​ನೆಸ್​ಗೆ ಫ್ಯಾನ್ಸ್​ ಫಿದಾ ಆಗುವುದು ಇದೆ. ಸೀರೆಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡರೂ, ಸೆಕ್ಸಿ ಇಮೇಜಿನಲ್ಲಿ ಈಕೆ ಕಾಣಿಸಿಕೊಳ್ಳುತ್ತಾರೆ. 

ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ ಶ್ವೇತಾ. ಕುತೂಹಲದ ವಿಷಯವೆಂದರೆ, ಇವರ ಮಗಳಿಗೆ ಈಗ 22 ವರ್ಷ. ಇದರ ಹೊರತಾಗಿಯೂ ಕಿರುತೆರೆಯಲ್ಲಿ (Hindi serial) ಜನಪ್ರಿಯತೆ ಪಡೆದಿದ್ದಾರೆ  ನಟಿ ಶ್ವೇತಾ ತಿವಾರಿ. ತಮ್ಮ ಸೌಂದರ್ಯವನ್ನು ತೋರಿಸುವ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ.  ತಮ್ಮ ಎರಡನೇ ಮಗುವಿನ ಜನನದ ನಂತರ ಒಮ್ಮೆ 73 ಕೆಜಿ ತೂಕವನ್ನು ಹೊಂದಿದ್ದರು. ಇದರಿಂದ ಸಕತ್​ ಟೆನ್ಷನ್​ ಆಗಿತ್ತಂತೆ. ಈ ಕುರಿತು  ಟಿವಿ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿಕೊಂಡಿದ್ದರು. ಸಿಂಗಲ್​ ಪೇರೆಂಟ್​ ಆಗಿರುವ ಶ್ವೇತಾ ತಮ್ಮ ಫಿಟ್​ನೆಸ್​ ಗುಟ್ಟನ್ನು ಬಿಟ್ಟುಕೊಟ್ಟಿದ್ದರು. ನನ್ನ  ಪೌಷ್ಟಿಕತಜ್ಞರು  ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬಿನ ಉತ್ತಮ ಮಿಶ್ರಣವನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ನಾನು ನಡೆದುಕೊಂಡೆ.  

Latest Videos

ಕುಡಿಯುವ ನೀರಿನ ಬಗ್ಗೆ ವಿಶೇಷ ಜಾಗರೂಕಳಾಗಿದ್ದೆ.  ಆದ್ದರಿಂದ ನನ್ನ ಊಟ ಮತ್ತು ನಾರಿನಂಶವಿರುವ ಆಹಾರಗಳಲ್ಲಿ ತುಪ್ಪವನ್ನೂ ಸೇರಿಸಿ ತಿನ್ನುತ್ತಿದ್ದೇನೆ. ಇದು ನನ್ನ ತೂಕದ ನಷ್ಟಕ್ಕೆ  ಕಾರಣವಾಯಿತು ಎಂದಿದ್ದಾರೆ. ಅದರಲ್ಲಿಯೂ ಖತ್ರೋನ್ ಕೆ ಖಿಲಾಡಿ 11 ರಲ್ಲಿ ಭಾಗವಹಿಸಲು ನಿರ್ಧರಿಸಿದ ನಂತರ ಶ್ವೇತಾ ತಮ್ಮ  ಫಿಟ್‌ನೆಸ್ ಬಗ್ಗೆ ಹೆಚ್ಚು ಜಾಗರೂಕರಾದರು. ಆಟವನ್ನು   ತೂಕ ಮತ್ತು ಶಕ್ತಿ ತರಬೇತಿಯನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ  ಶ್ರಮದಾಯಕ ವರ್ಕ್‌ಔಟ್‌ಗಳನ್ನು ಮಾಡಿರುವುದಾಗಿ ಹೇಳಿ ಅವುಳ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. 

Shweta Tiwari: 10 ಕೆಜಿ ತೂಕ ಇಳಿಸಿಕೊಂಡ 41 ವರ್ಷದ ನಟಿ ಶ್ವೇತಾ: ಈ ಡಯಟ್‌ ನಿಮ್ಗೆ ಆಗುತ್ತಾ?

ಶ್ವೇತಾ 2000ನೇ ಇಸವಿಯಲ್ಲಿ ಕಿರುತೆರೆಯನ್ನು ಆಳುತ್ತಿದ್ದರು. ಇವರು ನಟಿಸಿದ ‘ಕಸೌಟಿ ಜಿಂದಗೀ ಕೆ’ ಸೀರಿಯಲ್ ಎಷ್ಟೊಂದು ಹಿಟ್ ಆಗಿತ್ತು ಎಂದರೆ ಮನೆ ಮನೆಯಲ್ಲೂ ಇವರಿಗೊಬ್ಬ ಅಭಿಮಾನಿ ಹುಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೆ ಇವರು ಹಲವಾರು ರೀತಿಯ ದೈಹಿಕ ಬದಲಾವಣೆಗಳನ್ನು ಕಂಡಿದ್ದರು. ಮತ್ತೆ ವರ್ಕ್ ಔಟ್ ಡಯಟ್ ಮೂಲಕ ಇಂದಿಗೂ ಸಹ ಅದೇ ಚಾರ್ಮ್ ಉಳಿಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್  ಸೃಷ್ಟಿಸುತ್ತಿದ್ದಾರೆ ಈ ನಟಿ. ಕೆಲ ದಿನಗಳ ಹಿಂದೆ ಶ್ವೇತಾ ಅವರು  ಅವರು ವೆಸ್ಟರ್ನ್ ವೇರ್ (western wear)ನಲ್ಲಿ ಸುಂದರವಾಗಿ ಕಾಣುತ್ತಿರುವ ಫೋಟೋ ಸೀರೀಸ್ ಪೋಸ್ಟ್ ಮಾಡಿದ್ದರು. ಕಂದು ಬಣ್ಣದ ಸ್ಟೈಲಿಶ್ ಉಡುಪನ್ನು ಧರಿಸಿರುವ ನಟಿ ಚಿತ್ರಗಳಲ್ಲಿ ಲೇಡಿ ಬಾಸ್ ನಂತೆ ಕಾಣಿಸುತ್ತಿದ್ದರು.  ಇವರು ತನ್ನ ಡ್ರೆಸ್ ಜೊತೆ ದೊಡ್ಡ ಕಿವಿಯೋಲೆಗಳು, ನ್ಯಾಚುರಲ್ ಹೇರ್ ಸ್ಟೈಲ್, ಪರ್ಫೆಕ್ಟ್ ಮೇಕಪ್ ಲುಕ್ ಜೊತೆ ಸ್ಟೈಲಿಶ್ ಆಗಿ ಕಾಣಿಸ್ತಿದ್ದರು. 

ಅದು ಸೀರೆಯಾಗಿರಲಿ ಅಥವಾ ಗೌನ್ ಅಥವಾ ಸಲ್ವಾರ್ ಸೂಟ್ ಆಗಿರಲಿ, ಇವರು ಪ್ರತಿಯೊಂದು ಔಟ್ ಫಿಟ್‌ನಲ್ಲೂ ಔಟ್ ಸ್ಟ್ಯಾಂಡಿಂಗ್ (out standing) ಆಗಿ ಕಾಣಿಸುತ್ತಾರೆ. ಪ್ರತಿಯೊಂದು ಡ್ರೆಸ್‌ಗಳನ್ನು ಇವರು ಕ್ಯಾರಿ ಮಾಡುತ್ತಿರುವ ರೀತಿ ಅದ್ಭುತ. ಇವರನ್ನು ನೋಡಿದ್ರೆ ಈಗಷ್ಟೆ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಯುವತಿಯ ತರ ಕಾಣುತ್ತಾರೆ. ಇಂತಿಪ್ಪ ನಟಿ ಶ್ವೇತಾ, ಈಗ ಇನ್ನೊಂದು ಸ್ಟನ್ನಿಂಗ್​ ಫೋಟೋ ಶೇರ್​ ಮಾಡಿದ್ದಾರೆ. ಅದರಲ್ಲಿ ಪ್ಯಾಂಟ್​ಲೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದವರು ಈಕೆ 22 ವರ್ಷದ ಮಗಳ ತಾಯಿ ಎಂದು ಹೇಳಲು ಸಾಧ್ಯವೇ ಇಲ್ಲ, ಆ ರೀತಿಯಲ್ಲಿ ಕಾಣಿಸುತ್ತಿದ್ದಾರೆ. ಈ ಫೋಟೋಗೆ ಹಲವಾರು ಮಂದಿ ಫಿದಾ ಆಗಿದ್ದಾರೆ. ಇದೇ ವೇಳೆ ಕೆಲವರು ಈಕೆಯನ್ನು ಟ್ರೋಲ್​ ಕೂಡ ಮಾಡಿದ್ದಾರೆ.

ಕಿಮ್ ಕಾರ್ಡಶಿಯಾನ್ ಮನೇಲಿ ದೆವ್ವ, ನಾನಾದರೂ ಆ ಆತ್ಮ ಆಗಬಾರದಿತ್ತಾ ಅಂತಿದ್ದಾರೆ ಫ್ಯಾನ್ಸ್!

ಈ ಫೋಟೋದಲ್ಲಿ ಎಲ್ಲರ ಕಣ್ಣು ನೆಟ್ಟಿರುವುದು ಶ್ವೇತಾ ಅವರ ತೊಡೆಯ ಮೇಲೆ. ಏಕೆಂದರೆ ಮೇಕಪ್​ ಮಾಡಿರುವ ಜೊತೆಗೆ ಈಕೆ ಫಿಟ್​ನೆಸ್​ ಕಾಯ್ದುಕೊಂಡು ಸುಂದರಿಯಾಗಿ ಕಾಣಿಸುತ್ತಿದ್ದರೂ ತೊಡೆಯ ಭಾಗ ತೀರಾ ದಪ್ಪ ಎನ್ನಿಸುವಂತಿದೆ. ಇದೇ ಕಾರಣಕ್ಕೆ ತೊಡೆಯನ್ನು ತೋರಿಸುವ ಅಗತ್ಯವೇನಿತ್ತು ಎಂದು ಕೆಲವರು ಪ್ರಶ್ನಿಸಿದರೆ ನಿಮ್ಮ ತೊಡೆಯನ್ನು ನೋಡುತ್ತಾ ನನಗೆ ಆ್ಯಕ್ಸಿಡೆಂಟ್ ಆಗೋಯ್ತು ಎಂದಿದ್ದಾರೆ ಅಭಿಮಾನಿಯೊಬ್ಬ. ಇದಕ್ಕೆ ಕೆಲವರು ಪ್ರತಿಕ್ರಿಯೆ ನೀಡಿದ್ದು, ಹೌದೌದು. ಇದನ್ನು ನೋಡುತ್ತಿದ್ದರೆ ನನಗೂ ಆ್ಯಕ್ಸಿಡೆಂಟ್​ ಆಗುವಂತೆ ಕಾಣಿಸುತ್ತಿದೆ ಎಂದಿದ್ದಾರೆ. ಹೀಗೆ ಈ ಫೋಟೋಗೆ ಸಕತ್​ ರೆಸ್​ಪಾನ್ಸ್​ ಬಂದಿದ್ದು, ಈಕೆಯ ಸೌಂದರ್ಯಕ್ಕಿಂತ ತೊಡೆಯ ಮೇಲೆ ಜನರ ಗಮನ ಕೇಂದ್ರೀಕೃತವಾಗಿದೆ. ಹಲವರು  Stunning Shweta Tiwari ಎಂದು ಕಮೆಂಟ್ ಮಾಡುತ್ತಿದ್ದಾರೆ. 


click me!