ನಿತ್ಯಾ-ಕರ್ಣ ಮದುವೆಯಾದ ನಂತರ 'ಕರ್ಣ' ಧಾರಾವಾಹಿ ವೀಕ್ಷಕರಿಗೆ ಮುಂದೇನಾಗುತ್ತದೆ ಎಂಬ ಕುತುಹೂಲ ಹೆಚ್ಚಿದಂತಿದೆ. ಸದ್ಯ ಗರ್ಭಿಣಿ ನಿತ್ಯಾಳನ್ನು ಜೋಪಾನವಾಗಿ ಆರೈಕೆ ಮಾಡ್ತಿದ್ದಾನೆ ಕರ್ಣ. ಆದರೆ ನಿತ್ಯಾಳಿಗೆ ತಾನು ಪ್ರಗ್ನೆಂಟ್ ಎಂಬ ವಿಷಯವೇ ತಿಳಿದಿಲ್ಲ. ಹಾಗಾಗಿ ಆರೋಗ್ಯದ ಕಡೆ ಆಕೆ ನಿಗಾವಹಿಸಿದಿದ್ದರೂ, ಕರ್ಣ ಟೈಂ ಟು ಟೈಂ ಮೆಡಿಸಿನ್ ಕೊಡುತ್ತಾ, ಟ್ರೀಟ್‌ಮೆಂಟ್ ಮಾಡುತ್ತಿದ್ದಾನೆ. ಇದನ್ನೆಲ್ಲಾ ಗಮನಿಸಿದ ಕರ್ಣನ ಅಪ್ಪ ರಮೇಶನಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಹಾಗಾಗಿ ಇವರಿಬ್ಬರ ನಡುವೆ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಕೋಣೆಯೊಳಗೆ ಹೋದ ರಮೇಶನಿಗೆ ಅವನು ಆರಾಮಾಗಿರುವುದನ್ನು ಕಂಡು ಕಸಿವಿಸಿಯಾಗುತ್ತದೆ.
ಸಹಜವಾಗಿಯೇ ಕರ್ಣನ ಬಳಿ ನಾಟವಾಡುತ್ತಾ ಹೇಗಿದೆ ಮದುವೆಯಾದ ನಂತರ ಜೀವನ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆದರೆ ಅಷ್ಟರಲ್ಲಿ ನಿತ್ಯಾಳಿಗೆ ಸ್ವಿಮ್ಮಿಂಗ್‌ಪೂಲ್‌ಗೆ ಬೀಳಿಸುತ್ತಾಳೆ ಕರ್ಣನ ಚಿಕ್ಕಮ್ಮ. ಕೊನೆಗೆ ಜೋರಾಗಿ ಕರ್ಣ..ಕರ್ಣ...ಎಂದು ಕೂಗಿದಾಗ ಕರ್ಣ ಓಡೋಡಿ ಬರುತ್ತಾನೆ. ಆಗ ರಮೇಶನಿಗೆ ಅಯ್ಯೋ! ಸತ್ಯ ತಿಳಿದುಕೊಳ್ಳುವುದಕ್ಕೆ ಆಗಲಿಲ್ಲ ಎಂದು ಸಿಕ್ಕಾಪಟ್ಟೆ ಕೋಪ ಬರುತ್ತದೆ. ಅಂತೂ ನಿತ್ಯಾಳನ್ನು ಕಾಪಾಡಿ ಸರಿಯಾದ ಚಿಕಿತ್ಸೆ ನೀಡುತ್ತಾನೆ ಕರ್ಣ. ಒಂದು ವೇಳೆ ನಿಧಿ ನಿತ್ಯಾಳನ್ನು ಟೆಸ್ಟ್ ಮಾಡಲು ಹೋದರೆ ನಿತ್ಯಾ ಗರ್ಭಿಣಿಯಾಗಿರುವ ವಿಷಯ ಎಲ್ಲಿ ತಿಳಿಯುತ್ತದೆಯೋ ಎಂದು ಸ್ವತಃ ಕರ್ಣನೇ ಮುಂದೆ ಬಂದು ಪರೀಕ್ಷಿಸಿದ್ದಾನೆ. ಇದರಿಂದ ಕೊಂಚ ನಿತ್ಯಾಳಿಗೆ ಬೇಸರವಾದಂತಿದೆ.
ಏತನ್ಮಧ್ಯೆ ಅಜ್ಜಿಯಂದಿರು ಬಂದು ಕರ್ಣನ ಚಿಕ್ಕಮ್ಮಳಿಗೆ "ಅಲ್ಲಿ ಏನಾಯ್ತು ಹೇಳು" ಎಂದಾಗ ಆಕೆ ನಿತ್ಯಾ-ನಿಧಿ ಅಜ್ಜಿಗೆ, ಕರ್ಣನ ಅಜ್ಜಿಗೆ ಹರ್ಟ್ ಆಗುವ ಹಾಗೆ ಮಾತನಾಡಿ ಹೊರಟು ಹೋಗುತ್ತಾಳೆ. ಇದನ್ನೆಲ್ಲಾ ಮೇಲೆ ನಿಂತುಕೊಂಡೇ ಕರ್ಣ ಗಮನಿಸಿದ್ದಾನೆ. ಜೊತೆಗೆ ಹೇಗಾದರೂ ನಿತ್ಯಾ ಜೀವನ ಸರಿ ಮಾಡಿ, ನಿಧಿಯ ದುಃಖ ಕಡಿಮೆ ಮಾಡಬೇಕು ಅಂದುಕೊಳ್ಳುತ್ತಾನೆ.
ಇದೇ ಸಮಯಕ್ಕೆ ಗಾರ್ಡನ್‌ನಲ್ಲಿ ಕುಳಿತು ರಮೇಶ ಹಾಗೂ ಅವನ ಮಗ ಸಂಜಯ್ ತೇಜಸ್ ಅಪ್ಪ-ಅಮ್ಮನಿಗೆ ಕಾಲ್ ಮಾಡಿ ವಿಚಾರಿಸಿಕೊಳ್ಳುತ್ತಾರೆ. ತೇಜಸ್‌ಗೆ ಕರ್ಣನೇ ಇದನ್ನೆಲ್ಲಾ ಮಾಡಿಸುತ್ತಿದ್ದಾನೆ ಎಂಬಂತೆ ಬಿಂಬಿಸಿದ್ದು, ಇದನ್ನೇ ನಿಜ ಎಂದು ನಂಬಿಕೊಂಡಿದ್ದಾನೆ ತೇಜಸ್. ತೇಜಸ್‌ನನ್ನು ಚಿಕ್ಕಮಗಳೂರಿನ ತೋಟದ ಮನೆಯೊಂದರಲ್ಲಿ ಕಟ್ಟಿ ಹಾಕಿದ್ದು, ಈ ವಿಚಾರವನ್ನು ಅಲ್ಲಿಯೇ ನಿಂತಿದ್ದ ಕರ್ಣನ ಅಮ್ಮ ಕೇಳಿಸಿಕೊಳ್ಳುತ್ತಾಳೆ. ಇದನ್ನು ಕರ್ಣನ ಬಳಿ ಹೇಳಿದ್ದಾಳೆ. "ತೇಜಸ್ ಚಿಕ್ಕಮಗಳೂರಿನಲ್ಲಿರುವ ವಿಚಾರ ನಿನಗೆ ಹೇಗೆ ಗೊತ್ತಾಯ್ತು"? ಅಮ್ಮ ಎಂದು ಕರ್ಣ ಕೇಳಿದಾಗ, ಆಕೆ ರಮೇಶ್ ವಿಚಾರವನ್ನ ಮುಚ್ಚಿಟ್ಟು, "ನನ್ನ ಆತ್ಮೀಯ ಸ್ನೇಹಿತರ ಬಳಿ ಈ ವಿಚಾರ ಕೇಳಿ ತಿಳಿದುಕೊಂಡೆ" ಎಂದಿದ್ದಾಳೆ. ಇದೇ ವಿಷಯವನ್ನು ಈಗ ಅವನು ನಿತ್ಯಾ ಮುಂದೆ ಪ್ರಸ್ತಾಪಿಸಿದ್ದಾನೆ.
ಹೌದು, ಇಂದಿನ ಸಂಚಿಕೆಯಲ್ಲಿ ನಿತ್ಯಾಳ ಬಳಿ ಬಂದು ಕರ್ಣ, "ತೇಜಸ್ ಎಲ್ಲಿದ್ದಾನೆ ಎಂಬ ವಿಚಾರ ನನಗೆ ಗೊತ್ತಾಗಿದೆ. ನಡೆಯಿರಿ ಹೊರಡೋಣ". ಎನ್ನುತ್ತಾನೆ. ಆದರೆ ಇವರಿಬ್ಬರೂ ಖುಷಿ ಖುಷಿಯಾಗಿರುವುದನ್ನು ನೋಡಿ ಅಲ್ಲಿಗೆ ಬರುವ ರಮೇಶ ಏನೆಂದು ವಿಚಾರಿಸುತ್ತಾನೆ. ಆಗ ನಿತ್ಯಾ ತಾವು ಚಿಕ್ಕಮಗಳೂರಿಗೆ ಹೋಗುತ್ತಿರುವ ವಿಚಾರ ಹೇಳುತ್ತಾಳೆ. ಆದರೆ ಈ ವಿಷಯವನ್ನ ಯಾರ ಬಳಿಯೂ ಹೇಳಬಾರದೆಂದು ಕರ್ಣನ ಅಮ್ಮ ಹೇಳಿರುತ್ತಾಳೆ. ಆದರಿಲ್ಲಿ ನಿತ್ಯಾ ಸತ್ಯ ಬಾಯ್ಬಿಟ್ಟಿದ್ದಾಳೆ. ಹಾಗಾಗಿ ವೀಕ್ಷಕರು ನಿಮ್ಮ ಪ್ಲಾನ್ ಫ್ಲಾಫ್. ರಮೇಶ್ ತೇಜಸ್‌ನನ್ನು ಅಲ್ಲಿಂದ ಬೇರೆ ಕಡೆ ಶಿಫ್ಟ್ ಮಾಡೋದು ಗ್ಯಾರಂಟಿ ಎಂದಿದ್ದಾರೆ. ಅಷ್ಟೇ ಅಲ್ಲ, ನಿತ್ಯಾಗೂ ಚಿಕ್ಕಮಗಳೂರಿಗೆ ಹೋಗುವ ಸತ್ಯ ಹೇಳಿದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಏನಂತ ಗೊತ್ತಾ?.
*"ಅದಕ್ಕೆ ಹೇಳೋದು ಹೆಣ್ಣುಮಕ್ಕಳ ಬಾಯಿ ಎಲ್ಲಿ ಮಾತು ನಿಲ್ಲೋದು ಇಲ್ಲಾ ಅಂತ".
*"ಎಲ್ಲಾ ಆಗೋದು ಮುದುಕಿಯರಿಂದ ಮತ್ತು ಕರ್ಣನ ತಾಯಿಯಿಂದ ನಿಜ ಹೇಳಿದರೆ ಆಗ್ತಿತ್ತು, ಕರ್ಣನ ಪ್ರೀತಿ ಉಳಿತಿತ್ತು".
*"ಕರ್ಣನ ಅಮ್ಮ ಕರ್ಣನಿಗೆ ನಿಜ ಹೇಳಿದ್ರೆ ಸರಿ ಇರ್ತಾ ಇತ್ತು, ಈಗ ಮತ್ತೆ ಜಾಗ ಚೇಂಜ್ ಮಾಡ್ತಾನೆ ರಮೇಶ" ಎಂಬಿತ್ಯಾದಿ ಕಾಮೆಂಟ್ಸ್ ಮಾಡಿರುವುದನ್ನ ನೀವು ನೋಡಬಹುದು".
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.