
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಾಲೇಜು ಟಾಸ್ಕ್ ನಡೆಯುತ್ತಿದೆ. ದೊಡ್ಮನೆ ಈಗ ಕಂಪ್ಲೀಟ್ ಕಾಲೇಜುಮಯವಾಗಿದೆ. ಕಾಲೇಜಿನಲ್ಲಿ ನಡೆಯುವ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಅಂದಹಾಗೆ ಇಲ್ಲಿ ಎಂಟು ಜನರು ಇರುವ ಎರಡು ಟೀಂಗಳನ್ನು ಮಾಡಲಾಗಿದೆ. ದೊಡ್ಮನೆಯ ಆರಂಭದಲ್ಲಿಯೇ ಅಶ್ವಿನಿ ಗೌಡ v/s ಗಿಲ್ಲಿ ನಟ, ಕಾವ್ಯ ಶೈವ ಎನ್ನುವ ರೀತಿ ಆಗಿತ್ತು. ಈಗ ತಾಕತ್ತು ಎಂದರೇನು ಎಂಬ ಪ್ರಶ್ನೆ ಬಂದಿದೆ. ಆಗ ಗಿಲ್ಲಿ ನಟ ನೀಡಿದ ಉತ್ತರ ಎಲ್ಲರನ್ನು ನಗಿಸಿದೆ. ಸದ್ಯ ವಾಹಿನಿ ಇದರ ಪ್ರೋಮೋ ರಿಲೀಸ್ ಮಾಡಿದ್ದಾರೆ.
ಈ ಕಾಲೇಜ್‌ಗೆ ರಾಘವೇಂದ್ರ ಅವರು ಪ್ರಿನ್ಸಿಪಾಲ್ ಆಗಿದ್ದರು. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರಿಗೆ ತಾಕತ್ತು ಎಂದರೇನು ಎಂದು ರಘು ಅವರು ಪ್ರಶ್ನೆ ಮಾಡಿದ್ದಾರೆ. ಆಗ ಅಶ್ವಿನಿ ಗೌಡ, ಗಿಲ್ಲಿ ನಟ ಅವರು ತಾಕತ್ತು ಎಂದರೇನು ಎಂದು ಹೇಳಿದ್ದಾರೆ. ಅಶ್ವಿನಿ ಗೌಡ ಮಾತು ಕೇಳಿ ಗಿಲ್ಲಿ ನಟ ಅವರು ಸೆಲ್ಫ್ ಎಲಿಮಿನೇಶನ್ ಆಗ್ತೀನಿ, ನನ್ನನ್ನು ಡಿಬಾರ್ ಮಾಡಿ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಉಳಿದವರು ನಕ್ಕಿದ್ದಾರೆ. ಇದು ಕೇವಲ ತಮಾಷೆ ಅಷ್ಟೇ.
ಗಿಲ್ಲಿ ನಟ: ಒಂದು ಟೀಂನಲ್ಲಿ ಎಂಟು ಜನರು ಇರುತ್ತಾರೆ, ಏಳು ಜನರು ಒಬ್ಬರಿಗೆ ಸ್ಟುಡೆಂಟ್ ಆಫ್ ದಿ ವೀಕ್ ಇರುತ್ತಾರೆ. ಆದರೆ ಈ ಸಿಂಗಲ್ ಸಿಂಹ ನನಗೆ ಬೇಕು ಅಂತ ನಿಲ್ಲುತ್ತಾನೆ, ಅದು ಡೇರಿಂಗ್ ಅಂದರೆ.
ಅಶ್ವಿನಿ ಗೌಡ: ಅಶ್ವಿನಿ ಗೌಡ ಅಂದರೆ ತಾಕತ್ತು, ತಾಕತ್ತು ಅಂದರೆ ಅಶ್ವಿನಿ ಗೌಡ
ಗಿಲ್ಲಿ ನಟ: ಸರ್, ನನ್ನ ಪ್ಲೀಸ್ ಡಿಬಾರ್ ಮಾಡಿ, ಡಿಸ್ಮಿಸ್ ಮಾಡಿ ಕಳಿಸಿ, ನಾನು ಆಚೆ ನಿಂತುಕೊಳ್ಳುವೆ
ಅಶ್ವಿನಿ ಗೌಡ: ಏನೇ ಆಗಬಹುದು, ಹೋರಾಟ ಅಂತ ನಾವು ಮಾಡಿದಾಗ ಬಕೆಟ್, ಸೌಟು ಅಂತ ಕರೆಯಬಹುದು. ಇನ್ನೊಂದಿಷ್ಟು ಕೀಳಾಗಿ ಮಾತನಾಡಬಹುದು. ಆದರೆ ಎಲ್ಲವನ್ನು ಎದುರಿಸಿ ನಿಂತಿರೋದು ನನ್ನ ತಾಕತ್ತು
ಗಿಲ್ಲಿ ನಟ: ಸೆಲ್ಫ್ ಎಲಿಮಿನೇಶನ್ ಆಗ್ತೀನಿ, ದಂಡಿಗೆ ಹೆದರದೆ ಇರಬಹುದು, ದಾಳಿಗೆ ಹೆದರದೆ ಇರಬಹುದು, ಆದರೆ ಈ ಗೂಳಿಗೆ ಹೆದರ್ತಾರೆ
ಅಂದಹಾಗೆ ಗಿಲ್ಲಿ ನಟ ಮಾತು ಕೇಳಿ ಚಂದ್ರಪ್ರಭ, ಧ್ರುವಂತ್, ರಾಶಿಕಾ, ಕಾವ್ಯ ಶೈವ, ರಾಶಿಕಾ ಶೆಟ್ಟಿ, ಅಭಿಷೇಕ್ ಶ್ರೀಕಾಂತ್, ಕಾಕ್ರೋಚ್ ಸುಧಿ, ಧನುಷ್ ಗೌಡ, ಜಾಹ್ನವಿ ಕೂಡ ಸಿಕ್ಕಾಪಟ್ಟೆ ನಕ್ಕಿದ್ದಾರೆ.
ಸ್ಟುಡೆಂಟ್ ಆಫ್ ದಿ ವೀಕ್ ಪಟ್ಟವನ್ನು ರಾಶಿಕಾಗೆ ಕೊಡಬೇಕು ಎಂದು ಅಶ್ವಿನಿ ಗೌಡ ಟೀಂ ರೆಡಿಯಾಗಿತ್ತು. ಆ ವೇಳೆ ಅದೇ ಟೀಂನಲ್ಲಿದ್ದ ಗಿಲ್ಲಿ ನಟ ವಿರೋಧಿಸಿದರು. ಇದರಿಂದ ಈ ಟೈಟಲ್ ಕ್ಯಾನ್ಸಲ್ ಆಯ್ತು. ಇದಕ್ಕಾಗಿ ರಾಶಿಕಾ ಶೆಟ್ಟಿಯಂತೂ ಸಿಕ್ಕಾಪಟ್ಟೆ ಅತ್ತಿದ್ದಾರೆ. ಸೂರಜ್ ಕೂಡ ರಾಶಿಕಾಗೆ ಸಪೋರ್ಟ್ ಮಾಡಿದರು.
ಆರ್‌ಜೆ ಅಮಿತ್, ಸತೀಶ್ ಕ್ಯಾಡಬಮ್ಸ್, ಅಶ್ವಿನಿ ಎಸ್ ಎನ್, ಮಂಜುಭಾಷಿಣಿ, ಕರಿಬಸಪ್ಪ ಅವರು ಈಗಾಗಲೇ ಎಲಿಮಿನೇಟ್ ಆಗಿದ್ದಾರೆ. ಈ ವಾರ ಯಾರು ಹೊರಗಡೆ ಬರ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.