ಬಿಗ್ ಬಾಸ್ ಕನ್ನಡ ಸೀಸನ್‌ 10; ಸ್ಪರ್ಧಿಗಳಾಗಿ ಟ್ರಾನ್ಸ್‌ಜೆಂಡರ್ ನೀತು ವನಜಾಕ್ಷಿ, ಸಿರಿ ಮತ್ತು ಸ್ನೇಕ್ ಶಾಮ್ ಎಂಟ್ರಿ

Published : Oct 08, 2023, 10:41 PM ISTUpdated : Oct 09, 2023, 10:43 AM IST
 ಬಿಗ್ ಬಾಸ್ ಕನ್ನಡ ಸೀಸನ್‌ 10; ಸ್ಪರ್ಧಿಗಳಾಗಿ  ಟ್ರಾನ್ಸ್‌ಜೆಂಡರ್ ನೀತು ವನಜಾಕ್ಷಿ, ಸಿರಿ ಮತ್ತು ಸ್ನೇಕ್ ಶಾಮ್ ಎಂಟ್ರಿ

ಸಾರಾಂಶ

ಇನ್ನೊಬ್ಬರು ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದವರು ಮೈಸೂರಿನ ಸ್ನೇಕ್ ಶಾಮ್. ಇವರು ಇಲ್ಲಿಯವರೆಗೆ ಸುಮಾರು 58,000 ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾಗಿ ಹೇಳಿದ್ದಾರೆ. ಅವರಿಗೆ ಬಿಗ್ ಬಾಸ್ ಬುಟ್ಟಿಯೊಳಗೆ ಪ್ಲಾಸ್ಟಿಕ್ ಹಾವೊಂದನ್ನು ಕೊಟ್ಟು ಮನೆಯೊಳಗೆ ಕಳಿಸಿದ್ದರು. 

ಟ್ರಾನ್ಸ್‌ಜೆಂಡರ್‌ ಸಮುದಾಯದಿಂದ ಬಂದು, ಬಿಗ್‌ಬಾಸ್‌ ಮನೆಯೊಳಗೆ ಅಡಿಯಿಟ್ಟ ನೀತು ವನಜಾಕ್ಷಿ 'ಯಾರಮ್ಮಾ ಇವಳು ಚೆಲುವೆ…'ಎಂಬ ಹಾಡಿನೊಂದಿಗೆ ಬಿಗ್‌ಬಾಸ್‌ ವೇದಿಕೆಯ ಮೇಲೆ ಕಾಣಿಸಿಕೊಂಡ ನೀತು ವನಜಾಕ್ಷಿ, ಟ್ರಾನ್ಸ್‌ಜೆಂಡರ್‌ ಬಗ್ಗೆ ಇರುವ ಪೂರ್ವಗ್ರಹಗಳನ್ನು ಹೋಗಲಾಡಿಸುವ ಉದ್ದೇಶದಿಂದ ಬಿಗ್‌ಬಾಸ್‌ ವೇದಿಕೆಗೆ ಬಂದಿದ್ದಾಗಿ ಹೇಳಿದ್ದಾರೆ. 

ತನ್ನ ಬದುಕಿನಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಮಹಾನಗರಕ್ಕೆ ಬಂದ ಮಂಜು, ನೀತು ವನಜಾಕ್ಷಿಯಾಗಿದ್ದು ಒಂದು ಸಾಧನೆಯ ಕಥೆ. ತಾನೊಬ್ಬಳು ಟ್ರಾನ್ಸ್‌ಜೆಂಡರ್‌ ಎಂದು ಗುರ್ತಿಸಿಕೊಂಡ ಬಳಿಕ, ಅದನ್ನು ತನ್ನ ತಾಯಿಗೆ ಈಗಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಯಶಸ್ವಿಯಾದವರು. ತಮ್ಮ ಹೆಸರಿನೊಂದಿಗೇ ತಾಯಿನ ಹೆಸರನ್ನೂ ಸೇರಿಸಿಕೊಂಡಿರುವ ನೀತುಗೆ ಅವರ ತಾಯಿ ವನಜಾಕ್ಷಿ ಅವರ ಬದುಕಿನ ಜೊತೆಗೂ ಇದ್ದಾರೆ ಎನಿಸಿದೆಯಂತೆ. 

ಚಿತ್ರಕಲೆಯ ಅವರ ಆಸಕ್ತಿ, ತನ್ನ ಐಡೆಂಟಿಟಿ ಬೆಳೆಸಿಕೊಳ್ಳಬೇಕು ಎಂದು ಟ್ಯಾಟೋ ಆರ್ಟಿಸ್ಟ್ ಆಗಿ ಬದುಕಿನ ಸುಂದರ ಚಿತ್ರವನ್ನು ತಾವೇ ಬಿಡಿಸಿಕೊಳ್ಳಲು ಆರಂಭಿಸಿರುವ ಅವರು ಮಾಡೆಲಿಂಗ್‌ ಕ್ಷೇತ್ರದಲ್ಲಿಯೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಮಾಡೆಲಿಂಗ್‌ನಿಂದ ನಟನೆಯ ಕ್ಷೇತ್ರಕ್ಕೂ ಕಾಲಿಟ್ಟಿರುವ ಅವರು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಹೂಕಟ್ಟುವ ಕುಟುಂಬದಿಂದ ಬಂದಿರುವ ನೀತು ಅವರಿಗೆ ಮನೆಯೇ ಮೊದಲ ಪಾಠಶಾಲೆ. ತನ್ನ ಸಮುದಾಯವನ್ನು ಸುಧಾರಿಸಬೇಕು ಎಂಬ ಸದುದ್ದೇಶವನ್ನೂ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. 'ಜನರ ಮಧ್ಯ ಇದ್ದು ಗೆದ್ದು ಬಂದಿರುವ ನನಗೆ ಬಿಗ್‌ಬಾಸ್‌ ಮನೆಯಲ್ಲಿ ಗೆಲ್ಲುವುದು ಕಷ್ಟವಲ್ಲ' ಎಂಬ ವಿಶ್ವಾಸದಲ್ಲಿರುವ ನೀತು ಅವರಿಗೆ ಪ್ರೇಕ್ಷಕಪ್ರಭುಗಳು  86% ವೋಟ್‌ ನೀಡಿ ಮನೆಯೊಳಗೆ ಕಳಿಸಿದ್ದಾರೆ.

ಇನ್ನು, ಬಿಗ್ ಬಾಸ್‌ನ ಇನ್ನೊಬ್ಬರು ಸ್ಪರ್ಧಿ ಸಿರಿ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. 'ನಾನು ನಾನಾಗಿರಬೇಕು' ಎಂಬ ಆಸೆಯೊಂದಿಗೆ ಅವರು ಬಿಗ್‌ಬಾಸ್‌ ವೇದಿಕೆಗೆ ಬಂದಿದ್ದಾರಂತೆ. ಸಿರಿಯನ್ನು ತೆರೆಯ ಮೇಲಿನ ಪಾತ್ರವಾಗಿಯಷ್ಟೇ ನೋಡಿದ್ದ ಜನರಿಗೆ ತನ್ನ ನಿಜವಾದ ವ್ಯಕ್ತಿತ್ವವನ್ನು ತೋರಿಸಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದಾರಂತೆ. ಸೂಕ್ಷ್ಮ ವ್ಯಕ್ತಿತ್ವದ, ತುಸು ಕೋಪಿಷ್ಠರಾದ ಸಿರಿ ಅವರಿಗೆ ಜನರು 83% ವೋಟ್ ಮಾಡಿ ಮನೆಯೊಳಗೆ ಕಳುಹಿಸಿದ್ದಾರೆ.ತಂದೆಯ ನೆನಪಿಸಿಕೊಂಡು ಬಲಗಾಲಿಟ್ಟು ಸಿರಿ ಮನೆಯೊಳಗೆ ಹೋಗಿದ್ದಾರೆ.

ಇನ್ನೊಬ್ಬರು ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದವರು ಮೈಸೂರಿನ ಸ್ನೇಕ್ ಶಾಮ್. ಇವರು ಇಲ್ಲಿಯವರೆಗೆ ಸುಮಾರು 58,000 ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾಗಿ ಹೇಳಿದ್ದಾರೆ. ಅವರಿಗೆ ಬಿಗ್ ಬಾಸ್ ಬುಟ್ಟಿಯೊಳಗೆ ಪ್ಲಾಸ್ಟಿಕ್ ಹಾವೊಂದನ್ನು ಕೊಟ್ಟು ಮನೆಯೊಳಗೆ ಕಳಿಸಿದ್ದರು. ಅದನ್ನು ನಮೃತಾ ಗೌಡ ಓಪನ್ ಮಾಡಲು ಅವರಿಗೇ ಅದನ್ನು ಕೊರಳಿಗೆ ಹಾಕಿ ಬಿಗ್ ಬಾಸ್ ಮನೆಯೊಳಗೆ ಹೋಗಿರುವ ಸ್ಪರ್ಧಿಗಳು ಎಂಜಾಯ್ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ