'ಕನ್ನಡ ಸಿನಿಮಾದಲ್ಲಿ ವಿಲನ್ ಗ್ಯಾಂಗ್‌ನಲ್ಲಿದ್ದ ಹುಡುಗ ಇವತ್ತು ಕರ್ನಾಟಕದ ಕುಬೇರ: ಸ್ಯಾಂಡಲ್‌ವುಡ್‌ ಅನುಭವ ಬಿಚ್ಚಿಟ್ಟ ಜೆರೋಧಾ ನಿತಿನ್‌ ಕಾಮತ್!

Published : Oct 23, 2026, 08:10 PM ISTUpdated : Oct 23, 2026, 08:12 PM IST
Zerodha nithin kamath

ಸಾರಾಂಶ

ಜೆರೋಧಾ ಸಹಸಂಸ್ಥಾಪಕ ನಿತಿನ್ ಕಾಮತ್ ಅವರು ತಾವು ನಟಿಸಿದ ಏಕೈಕ ಕನ್ನಡ ಸಿನಿಮಾದ ರಹಸ್ಯವನ್ನು ಸುನಿಲ್ ಶೆಟ್ಟಿ ಅವರ ಪಾಡ್‌ಕಾಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವಾಗ ವಿಲನ್ ಗ್ಯಾಂಗ್‌ನಲ್ಲಿ ನಟಿಸುವ ಆಫರ್ ಪಡೆದಿದ್ದ ಅವರು, ಇಂದು ಕರ್ನಾಟಕದ ಅತಿ ದೊಡ್ಡ ಶ್ರೀಮಂತರಾಗಿದ್ದಾರೆ.

ಬೆಂಗಳೂರು (ಅ.23): ಭಾರತದ ಪ್ರಮುಖ ಬ್ರೋಕರೇಜ್ ಸಂಸ್ಥೆ 'ಜೆರೋಧಾ' (Zerodha) ಕಟ್ಟಿ ಬೆಳೆಸುವ ಮೊದಲು, ಅದರ ಸಹಸಂಸ್ಥಾಪಕ ನಿತಿನ್‌ ಕಾಮತ್ (nithin kamath) ಕನ್ನಡ ಸಿನಿಮಾದಲ್ಲಿ ಒಂದು ಅನಿರೀಕ್ಷಿತ ಹಾಗೂ ಕುತೂಹಲಕಾರಿ ಅನುಭವವನ್ನು ಪಡೆದಿದ್ದರು. ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರೊಂದಿಗಿನ ತಮ್ಮ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ (Podcast) ಭಾಗವಹಿಸಿದ್ದ ನಿತಿನ್‌ ಕಾಮತ್, ತಾವು ನಟಿಸಿದ ಮೊದಲ ಹಾಗೂ ಏಕೈಕ ಕನ್ನಡ ಸಿನಿಮಾದ ರಹಸ್ಯವನ್ನು ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ.

ಅಂದು ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದ ಹುಡುಗನೊಬ್ಬನಿಗೆ ಸಿಕ್ಕ ಆ ಸಣ್ಣ ಸಿನಿಮಾ ಆಫರ್, ಇಂದು ಭಾರತದ ಆರ್ಥಿಕ ಕ್ಷೇತ್ರದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಪ್ರತಿಯೊಬ್ಬ ಯಶಸ್ವಿ ಉದ್ಯಮಿಯ ಹಿಂದೆಯೂ ಯಾರಿಗೂ ಊಹಿಸಲು ಸಾಧ್ಯವಾಗದ ಹಲವು ರೋಚಕ ಹಳೆಯ ಕಥೆಗಳಿರುತ್ತವೆ ಎಂಬುದಕ್ಕೆ ನಿಖಿಲ್ ಕಾಮತ್ ಅವರ ಈ ಅನುಭವವೇ ಸಾಕ್ಷಿಯಾಗಿದೆ.

ಜಿಮ್‌ನಲ್ಲಿ ಸಿಕ್ಕಿತ್ತು ವಿಲನ್ ಗ್ಯಾಂಗ್‌ನಲ್ಲಿ ನಟಿಸುವ ಆಫರ್

ತಮ್ಮ ಹಳೆಯ ನೆನಪುಗಳಿಗೆ ಜಾರಿದ ನಿತಿನ್‌ ಕಾಮತ್, "ಹೌದು, ನಾನು ಒಂದು ಕನ್ನಡ ಸಿನಿಮಾದಲ್ಲಿ ನಟಿಸಿದ್ದೇನೆ. ನಾನು ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುತ್ತಿದ್ದಾಗ, ಸ್ಯಾಂಡಲ್‌ವುಡ್‌ ಸಿನಿಮಾ ನಿರ್ಮಾಪಕರೊಬ್ಬರು ಪ್ರತಿದಿನ ಅಲ್ಲಿಗೆ ವರ್ಕ್‌ಔಟ್‌ ಮಾಡಲು ಬರುತ್ತಿದ್ದರು. ಆ ಸಮಯದಲ್ಲಿ ಅವರೊಂದು ಸಿನಿಮಾ ಮಾಡುತ್ತಿದ್ದು, ಅದರಲ್ಲಿ ಒಂದು ನಿರ್ದಿಷ್ಟ ಸೀನ್ ಇತ್ತು. ವಿಲನ್‌ಗಳು ನಾಯಕಿಯನ್ನು ಬೆನ್ನಟ್ಟಿಕೊಂಡು ಹೋಗುವ ದೃಶ್ಯವದು. ಆ ಸೀನ್‌ಗಾಗಿ ವಿಲನ್‌ ಜೊತೆ ಇರಲು ದೈತ್ಯಾಕಾರದಲ್ಲಿ ಭರ್ಜರಿಯಾಗಿ ಕಾಣುವ ಬಾಡಿಬಿಲ್ಡರ್ ಮಾದರಿಯ ಹುಡುಗರು ಬೇಕಾಗಿತ್ತು" ಎಂದು ನೆನಪಿಸಿಕೊಂಡರು.

"ಆ ಹುಡುಗಿಯನ್ನು ಬೆನ್ನಟ್ಟಿಕೊಂಡು ಹೋಗುವ ದೃಶ್ಯದ ಶೂಟಿಂಗ್‌ಗಾಗಿ ಜಿಮ್‌ನಲ್ಲಿದ್ದ ನನ್ನನ್ನು ನೋಡಿ ಅವರು 'ಬನ್ನಿ ಬನ್ನಿ, ನೀವು ಕೂಡ ಜಾಯಿನ್‌ ಆಗಿ' ಎಂದು ಪ್ರೀತಿಯಿಂದ ಕರೆದಿದ್ದರು. ಕೊನೆಗೆ ನಾನು ಅವರೆಲ್ಲರೊಂದಿಗೆ ಸೇರಿಕೊಂಡು ಹುಡುಗಿಯನ್ನು ಚೇಸ್‌ ಮಾಡಿಕೊಂಡು ಹೋಗುವ ವಿಲನ್‌ ಪಾತ್ರದಲ್ಲಿ ನಟಿಸಿದೆ. ಆದರೆ ತಮಾಷೆಯೆಂದರೆ, ಆ ಸಿನಿಮಾ ಕೊನೆಗೂ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲೇ ಇಲ್ಲ!" ಎಂದು ನಗುತ್ತಲೇ ಹೇಳಿದರು.

ಅಂದು ಸಣ್ಣ ಪಾತ್ರ ಮಾಡಿದ್ದ ಹುಡುಗ ಇಂದು ಕರ್ನಾಟಕದ ಅತಿ ದೊಡ್ಡ ಶ್ರೀಮಂತ!

ವಿಚಿತ್ರವೆಂದರೆ, ಅಂದು ಶೂಟಿಂಗ್‌ಗಾಗಿ ಜಿಮ್‌ನಿಂದ ಕರೆದೊಯ್ದು ವಿಲನ್ ಗ್ಯಾಂಗ್‌ನಲ್ಲಿ ಹುಡುಗಿಯನ್ನು ಚೇಸ್ ಮಾಡುವ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದ ಅದೇ ನಿತಿನ್‌ ಕಾಮತ್, ಇಂದು ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲೇ ಅತ್ಯಂತ ಪ್ರಭಾವಿ ಮತ್ತು ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ತಮ್ಮ ಕಠಿಣ ಪರಿಶ್ರಮ, ಆರ್ಥಿಕ ಕ್ಷೇತ್ರದಲ್ಲಿನ ಹೊಸ ಆಲೋಚನೆ ಹಾಗೂ 'ಜೆರೋಧಾ' ಸಂಸ್ಥೆಯ ಮೂಲಕ ಕ್ರಾಂತಿ ಸೃಷ್ಟಿಸಿದ ನಿತಿನ್‌ ಕಾಮತ್, ಪ್ರಸ್ತುತ ಕರ್ನಾಟಕದ ಅತ್ಯಂತ ಶ್ರೀಮಂತ ವ್ಯಕ್ತಿಗಳ (Richest Persons in Karnataka) ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ. ಬಿಲಿಯನೇರ್ ಉದ್ಯಮಿಯಾಗಿ ಕೋಟ್ಯಂತರ ಯುವಕರಿಗೆ ಸ್ಪೂರ್ತಿಯಾಗಿರುವ ಕಾಮತ್ ಅವರ ಬದುಕಿನ ಈ ಹಳೆಯ ಸಿನಿಮಾ ಅಧ್ಯಾಯವು ಅವರ ಅಭಿಮಾನಿಗಳಿಗೆ ಹಾಗೂ ನೆಟ್ಟಿಗರಿಗೆ ತೀವ್ರ ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾವಿರಾರು ಫ್ಯಾನ್ಸ್ ಇದ್ರೂ ಹೆಂಡ್ತಿಯಾಗಲ್ಲ, ಗುಮಾಸ್ತನಿಗಿರೋ ಬೆಲೆ ನಮಗಿಲ್ಲ: ಮದುವೆ ಬಗ್ಗೆ ರಾಜೇಶ್ ಹೇಳಿದಿಷ್ಟು
'ನಿನ್ ತಾಳಿ ಎಲ್ಲಿ ಅಕ್ಕ... ಯಾಕೆ ಎತ್ತಿಟ್ಟಿದೀಯಾ' ? ಸೋನಿಕಾ ಕಾರ್ನರ್ ಮಾಡಲು ಹೋಗಿ ತಾನೇ ಸಿಕ್ಕಿಬಿದ್ದ ಕುಮಾರಿ!