'ನಿನ್ ತಾಳಿ ಎಲ್ಲಿ ಅಕ್ಕ... ಯಾಕೆ ಎತ್ತಿಟ್ಟಿದೀಯಾ' ? ಸೋನಿಕಾ ಕಾರ್ನರ್ ಮಾಡಲು ಹೋಗಿ ತಾನೇ ಸಿಕ್ಕಿಬಿದ್ದ ಕುಮಾರಿ!

Published : Oct 23, 2026, 11:12 AM IST
BBK trending news

ಸಾರಾಂಶ

Bigg Boss Kannada: ಬಿಗ್‌ಬಾಸ್ ಮನೆಯಲ್ಲಿ ಸೋನಿಕಾ ಅವರ ಮದುವೆ ಹಾಗೂ ತಾಳಿ-ಕಾಲುಂಗುರದ ವಿಚಾರ ಕೆದಕಿ ಇಕ್ಕಟ್ಟಿಗೆ ಸಿಲುಕಿಸಲು ಹೋದ ಕುಮಾರಿಗೆ, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೋನಿಕಾರನ್ನು ಕೆಣಕಲು ಹೋಗಿ ಕುಮಾರಿ ತಾನೇ ಹೇಗೆ ಮುಖಭಂಗ ಅನುಭವಿಸಿದಳು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಮಾತುಕತೆಗಳು ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿವೆ. ಇತ್ತೀಚೆಗೆ ಕುಮಾರಿ, ಸಹ-ಸ್ಪರ್ಧಿ ಸೋನಿಕಾ ಅವರ ವೈಯಕ್ತಿಕ ಬದುಕಿನ ಕುರಿತು ಕೇಳಿದ ಪ್ರಶ್ನೆಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

ಆಸಿಯಾ ಎದುರೇ ಕುಮಾರಿ, ಸೋನಿಕಾಗೆ "ನಿಮಗೆ ಮದುವೆಯಾಗಿದೆಯಾ? ಮಗುವಿದೆಯಾ? ಹಾಗಿದ್ದರೆ ತಾಳಿ, ಕಾಲುಂಗುರ, ಕುಂಕುಮ ಯಾಕೆ ಹಾಕಿಲ್ಲ? ಗಂಡನ ಹೆಸರೇನು?" ಎಂದು ಖಾಸಗಿ ವಿಚಾರಗಳನ್ನು ಕೆದಕಲು ಶುರುಮಾಡಿದ್ದರು. ಕುಮಾರಿಯ ಕುತೂಹಲ ಮತ್ತು ಆಟವನ್ನು ಅರಿತ ಸೋನಿಕಾ ಹಾಗೂ ಆಸಿಯಾ, ಆಕೆಯನ್ನು ಆಟವಾಡಿಸುವ ಸಲುವಾಗಿಯೇ ತಮಾಷೆಯಾಗಿ ಉತ್ತರಿಸುತ್ತಾ ಹೋದಂತೆ ಕಂಡುಬಂದಿದೆ. "ಇವತ್ತಿನ ಕಾಲದಲ್ಲಿ ವೆಸ್ಟರ್ನ್ ಬಟ್ಟೆಗೆ ಯಾರು ತಾಳಿ-ಕಾಲುಂಗುರ ಹಾಕ್ತಾರೆ? ಮೊನ್ನೆ ಫ್ಯಾಷನ್ ಶೋನಲ್ಲಿ ಹಾಕಿದ್ದೆ," ಎಂದು ಸೋನಿಕಾ ಕೂಲ್ ಆಗಿಯೇ ಆಕೆಯ ಕಾಲೆಳೆದಿದ್ದಾರೆ.

ಆದರೆ, ಇನ್ನೊಬ್ಬರ ಪರ್ಸನಲ್ ಲೈಫ್ ಬಗ್ಗೆ ಇಷ್ಟೊಂದು ಆಳವಾಗಿ ಮೂಗು ತೂರಿಸಿದ ಕುಮಾರಿಯ ನಡವಳಿಕೆ ವೀಕ್ಷಕರಿಗೆ ಹಾಗೂ ನೆಟ್ಟಿಗರಿಗೆ ತೀವ್ರ ಅಸಮಾಧಾನ ತರಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಕುಮಾರಿ ವಿರುದ್ಧ ಆಕ್ರೋಶದ ಮಹಾಪೂರವೇ ಹರಿದುಬಂದಿದೆ.

"ಕುಮಾರಿಗೆ ಇನ್ನೊಬ್ಬರ ಖಾಸಗಿ ಬದುಕು ಯಾಕೆ ಬೇಕು? ತಾಳಿ ಧರಿಸುವುದು ಬಿಡುವುದು ಅವರವರ ವೈಯಕ್ತಿಕ ಆಯ್ಕೆ. ಇಂತಹ ಕೀಳು ಮಟ್ಟದ ಪ್ರಶ್ನೆಗಳನ್ನು ಕೇಳುವುದು ಕುಮಾರಿಯ ಗುಣಮಟ್ಟವನ್ನು (Character) ತೋರಿಸುತ್ತದೆ. ಈಕೆ ಬರೀ ಪೆದ್ದಿ ತರ ಆಕ್ಟಿಂಗ್ ಮಾಡೋ ಅಧಿಕಪ್ರಸಂಗಿ," ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಅಷ್ಟಕ್ಕೇ ನಿಲ್ಲದ ಪ್ರೇಕ್ಷಕರು ಕುಮಾರಿಯ ಹಳೆಯ ಮುಖವಾಡಗಳನ್ನು ಎಳೆದು ತಂದಿದ್ದಾರೆ. "ಮನೆಯಲ್ಲಿ ದೊಡ್ಡ ಟಿವಿ, ಫ್ರಿಡ್ಜ್ ಎಲ್ಲವೂ ಇದ್ದರೂ 'ನಾನು ಬಡವಿ' ಎಂದು ಡ್ರಾಮಾ ಮಾಡ್ತೀಯಾ? ತಿಂಗಳಿಗೆ ನೂರು ರೂಪಾಯಿ ದುಡಿದು ಅವನ್ನೆಲ್ಲ ತಗೊಂಡಿದ್ದೀಯಾ? ಅಮ್ಮನಿಗೆ ಆಪರೇಷನ್ ಅಂತ ಸುಳ್ಳು ಹೇಳಿ, ಮುಗ್ಧೆಯಂತೆ ನಾಟಕವಾಡುವುದನ್ನು ಮೊದಲು ನಿಲ್ಲಿಸು. ಹೆತ್ತವರ ಜೊತೆ ನೀನೇಕೆ ಇಲ್ಲ ಎಂದು ಮೊದಲು ಜನರಿಗೆ ಹೇಳು," ಎಂದು ಕಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ, ಸೋನಿಕಾರನ್ನು ಕಾರ್ನರ್ ಮಾಡಿ ಕೆಣಕಲು ಹೋದ ಕುಮಾರಿಗೆ ಈ ಪ್ರಸಂಗ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ. ಇದೇ ವೇಳೆ, ಯಾವುದೇ ಗಲಿಬಿಲಿ ಇಲ್ಲದೆ ತಾಳ್ಮೆಯಿಂದಲೇ ಕುಮಾರಿಯ ಕಾಲೆಳೆದ ಸೋನಿಕಾ ಪರ ವೀಕ್ಷಕರು ಬ್ಯಾಟ್ ಬೀಸಿದ್ದು, "ಸೋನಿಕಾ ಮುಖಚರ್ಯೆ ನೋಡಲು ಥೇಟ್ ನಟಿ ರಶ್ಮಿಕಾ ಮಂದಣ್ಣ ಥರಾನೇ ಇದೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಬಿಗ್‌ಬಾಸ್ ಮನೆಯಲ್ಲಿ ಈ ವಾರ ನಡೆದ ‘ಟಾಸ್ಕ್’ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದೆ. ಈ ವಾರ ಬಿಗ್‌ಬಾಸ್ ನೀಡಿದ್ದ 'ಲೂಟಿಕೋರರು ವರ್ಸಸ್ ರಕ್ಷಕರು' ಟಾಸ್ಕ್ ಇಡೀ ವಾರದ ಹೈಲೈಟ್ ಆಗಿದ್ದು, ಸ್ಪರ್ಧಿಗಳ ಕಾದಾಟ ಹಾಗೂ ರಣತಂತ್ರಗಳು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿವೆ.

ಮಿಂಚಿದ ಲೂಟಿಕೋರರ ಪಡೆ

ಈ ವಾರದ ಟಾಸ್ಕ್‌ನಲ್ಲಿ ಲೂಟಿಕೋರರ ತಂಡದಲ್ಲಿದ್ದ ತಾಂಡವ್, ಆಸಿಯಾ, ಸೌಂದರ್ಯ ಹಾಗೂ ಲಕ್ಷ್ಮೀ, ಕುಮಾರಿ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿದರು. ಅದರಲ್ಲೂ ವಿಶೇಷವಾಗಿ ತಾಂಡವ್, ಸೌಂದರ್ಯ ಮತ್ತು ಆಸಿಯಾ ಅವರ ಆಟ ಅದ್ಭುತವಾಗಿತ್ತು. ತಂಡದ ಗೆಲುವಿಗಾಗಿ ಈ ಮೂವರು ತೋರಿದ ಚಾಕಚಕ್ಯತೆ, ಆಕ್ರಮಣಕಾರಿ ಆಟ ಹಾಗೂ ಸಮರ್ಪಣಾ ಭಾವಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ.

ದೂರವಾಯ್ತು ವೈಮನಸ್ಸು, ಒಂದಾದ ತಾಂಡವ್ - ಸೌಂದರ್ಯ

ಕಳೆದ ಕೆಲವು ದಿನಗಳಿಂದ ತಾಂಡವ್ ಹಾಗೂ ಸೌಂದರ್ಯ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮತ್ತು ವೈಮನಸ್ಸು ಮೂಡಿತ್ತು. ಆದರೆ, ಈ 'ಲೂಟಿಕೋರರು' ಟಾಸ್ಕ್ ಇಬ್ಬರನ್ನೂ ಮತ್ತೆ ಒಂದು ಮಾಡಿದೆ. ಟಾಸ್ಕ್ ಗೆಲ್ಲುವ ಭರದಲ್ಲಿ ಇಬ್ಬರೂ ಪರಸ್ಪರ ಬೆಂಬಲವಾಗಿ ನಿಂತು, ತಮ್ಮ ನಡುವಿನ ಮುನಿಸನ್ನು ಮರೆತು ಒಂದಾಗಿ ಆಡಿದ್ದು ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.

"ನಾಮಿನೇಟ್ ಆಗಿದ್ದೇ ಒಳ್ಳೆದಾಯ್ತು": ಆಸಿಯಾ ಸಂತಸ

ಇದೇ ವೇಳೆ ಅದ್ಭುತ ಪ್ರದರ್ಶನ ನೀಡಿದ ಆಸಿಯಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದು, "ನಾವು ಈ ವಾರ ನಾಮಿನೇಟ್ ಆಗಿದ್ದೇ ಒಳ್ಳೆಯದಾಯ್ತು. ಇಲ್ಲದಿದ್ದರೆ ಇಷ್ಟೊಂದು ಅದ್ಭುತವಾಗಿ ಆಟವಾಡಲು ಹಾಗೂ ನಮ್ಮ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗುತ್ತಿರಲಿಲ್ಲ," ಎಂದು ಹೇಳುವ ಮೂಲಕ ಪಾಸಿಟಿವ್ ಆಗಿ ರಿಯಾಕ್ಟ್ ಮಾಡಿದ್ದಾರೆ.

ಕಿಚ್ಚನ ಚಪ್ಪಾಳೆ ಯಾರಿಗೆ?

ಇಡೀ ವಾರ ಪ್ರೇಕ್ಷಕರ ಮನಗೆದ್ದ ಲೂಟಿಕೋರರ ಈ ಆಟವನ್ನು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಹೇಗೆ ಪ್ರಶಂಸಿಸಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ. ಮೂವರೂ ಅದ್ಭುತವಾಗಿ ಆಡಿರುವುದರಿಂದ, ಈ ವಾರದ ಬಹುನಿರೀಕ್ಷಿತ 'ಕಿಚ್ಚನ ಚಪ್ಪಾಳೆ' ತಾಂಡವ್, ಸೌಂದರ್ಯ ಅಥವಾ ಆಸಿಯಾ ಅವರಲ್ಲಿ ಯಾರ ಪಾಲಾಗಲಿದೆ ಎಂದು ತಿಳಿಯಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅರಸನಕೋಟೆ ಅಖಿಲಾಂಡೇಶ್ವರಿ ಕಂಬ್ಯಾಕ್‌ಗೆ ಮುಹೂರ್ತ ಫಿಕ್ಸ್! ಈ ಬಾರಿ ಹೊಸ ಕಥೆಯೊಂದಿಗೆ ಬರುತ್ತಿದ್ದಾರೆ ವಿನಯ ಪ್ರಸಾದ್
ಕಾಮಿಡಿ ಟೈಮ್‌ ಪ್ರೋಗ್ರಾಮ್‌ ಮಾಡಲೇಬಾರದು ಅಂದುಕೊಂಡಿದ್ದ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಆ ಶೋ ಸಿಕ್ಕಿದ್ದು ಹೇಗೆ?