
ಟೆಂಪಲ್ ಪುಳಿಯೋಗರೆ ಮಾಡ್ತೀನಿ ಎಂದು ಹೇಳಿದರು ನಟ, ನಿರೂಪಕ ನಿರಂಜನ ಶೆಟ್ಟಿ. ಶುರು ಮಾಡಿದ್ದು ಟೆಂಪಲ್ ಪುಳಿಯೋಗರೆ ಆದರೂ ಮುಂದುವರೆದಿದ್ದು ಅವರ ಮತ್ತು ಅವರ ಹೆಂಡತಿಯ ಲವ್ ಸ್ಟೋರಿ ಮತ್ತು ಮದುವೆ. ಜೀ ಕನ್ನಡದ ಕಪಲ್ಸ್ ಕಿಚನ್ ಶೋನಲ್ಲಿ ತಮ್ಮ ಪತ್ನಿಯೊಂದಿಗೆ ಬಂದಿದ್ದ ನಿರಂಜನ್ ದೇಶಪಾಂಡೆ, ತಮ್ಮಿಬ್ಬರ ಲವ್ ಹಾಗೂ ಮ್ಯಾರೇಜ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದನ್ನು ನೋಡಿ ಹಲವರು ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ಕಮೆಂಟ್ ಮಾಡಿದ್ದಾರೆ.
'ನೀನು ಅವ್ಳನ್ನ ಮದುವೆ ಆಗ್ಬಾರ್ದು, ಆದ್ರೆ ಇಬ್ರಲ್ಲಿ ಒಬ್ರ ತಲೆ ಎತ್ತಿಬಿಡ್ತೀನಿ ಎಂದು ನಮ್ಮಪ್ಪ ಕೂಗಾಡಿದ್ರು' ಅಂದ್ರ ನಿರಂಜನ್ ದೇಶಪಾಂಡೆ ಪತ್ನಿ. ಮುಂದುವರೆಸಿದ ನಿರಂಜನ್ 'ಅವ್ಳ ಕತ್ತಿಗೆ ಮಚ್ಚು ಹಿಡಿದು ಅವಳನ್ನು ಕಂಪೌಂಡ್ ಎಗರಿಸಿಕೊಂಡು ತಿರುಪತಿಗೆ ಕರೆದುಕೊಂಡು ಹೋಗ್ಬಿಟ್ರು. ಅವ್ರಮ್ಮ ಶರಪಂಜರ ಕಲ್ಪನಾ ತರ 'ಅವ್ಳಿಲ್ಲಪ್ಪ. ಅವ್ರ ಅಪ್ಪನೂ ಇಲ್ಲ' ಅಂತ ಹೇಳಿದ್ರು. ನಿಜವಾದ ಲವ್ವು ಅಂದ್ರೆ ಕಷ್ಟಪಟ್ಟು ಪಡ್ಕೊಂಡಿರ್ತೀರಲ್ಲ, ಆ ಫೀಲಿಂಗ್ ಒಂಥರಾ ಸ್ವರ್ಗ' ಎಂದು ಹೇಳಿ ಪಕ್ಕದಲ್ಲೇ ಇದ್ದ ತಮ್ಮ ಪತ್ನಿಯನ್ನು ಬರಸೆಳೆದು ಅಪ್ಪಿಕೊಂಡಿದ್ದಾರೆ ನಿರಂಜನ್ ದೇಶಪಾಂಡೆ. ಅವರಿಬ್ಬರ ಲವ್ ನೋಡಿ ನೆಟ್ಟಿಗರು ಕ್ಯೂಟ್ ಕಪಲ್ಸ್ ಎಂದು ಕಾಮೆಂಟ್ ಮಾಡುತ್ತಲೇ ಇದ್ದಾರೆ.
ಪ್ರಿಯಾಂಕಾ ಚೋಪ್ರಾ ಜತೆ ನಟಿಸಿದ್ದ ಟ್ಯಾಲೆಂಟೆಡ್ ನಟ ಈಗ ಮುಂಬೈನಲ್ಲಿ ಹೊಟ್ಟೆಪಾಡಿಗೆ ಹಣ್ಣು ಮಾರುತ್ತಿದ್ದಾರೆ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಿಚನ್ ಕಪಲ್ಸ್ ಶೋದಲ್ಲಿ ಹಲವು ಖ್ಯಾತ ಸೆಲೆಬ್ರಿಟಿಗಳು ಬಂದು ಅಲ್ಲಿ ತಮ್ಮ ಲವ್, ಮ್ಯಾರೇಜ್, ಹಾಬೀಸ್ ಹಾಗೂ ಸ್ಪೆಷಲ್ ಅನುಭವಗಳು ಎಲ್ಲವನ್ನು ಹಂಚಿಕೊಂಡಿದ್ದಾರೆ. ಹಲವು ವೀಕ್ಷಕರು ಅವುಗಳಿಂದ ತಾವು ಪ್ರೇರಣೆ ಪಡೆದುಕೊಂಡಿದ್ದಾಗಿ ಕಾಮೆಂಟ್ ಕೂಡ ಮಾಡಿದ್ದಾರೆ. ಇದೀಗ ನಿರಂಜನ್ ದೇಶಪಾಂಡೆ ಕಪಲ್ಸ್ ಬಗ್ಗೆ ಕೂಡ ಸಾಕಷ್ಟು ಮೆಚ್ಚುಗೆ ಕಮೆಂಟ್‌ಗಳು ಹರಿದು ಬಂದಿವೆ. ಅವರಿಬ್ಬರ ಚಾಲೆಂಜಿಂಗ್ ಲವ್ ಸ್ಟೋರಿ ಕೇಳಿ ಹಲವರು ಹಲವು ರೀತಿಯಲ್ಲಿ ಸ್ಪಂದಿಸಿದ್ದಾರೆ.
ಒಟ್ಟಿನಲ್ಲಿ, ಹಲವು ಸೆಲೆಬ್ರೆಟಿಗಳ ಜೀವನ ಮತ್ತು ನಡೆ ವೀಕ್ಷಕವರ್ಗದಲ್ಲಿ ಸಂಚಲನ ಉಂಟುಮಾಡುತ್ತಲೇ ಇರುತ್ತವೆ ಎನ್ನಬಹುದು. ಅದೂ ಇದೂ ಶೋಗಳಲ್ಲಿ ತಾರಾಜೋಡಿಗಳು, ತಾರೆಗಳು ಹೇಳುವ ಮಾತುಗಳಿಂದ ಬಹಳಷ್ಟು ಜನರು ಇನ್‌ಸ್ಪಾಯರ್ ಆಗುತ್ತಾರೆ ಎಂಬುದನ್ನು ನಾವು ಸೋಷಿಯಲ್ ಮೀಡಿಯಾ ಸೇರಿದಂತೆ ಹಲವು ಪ್ಲಾಟ್‌ಫಾರಂಗಳ ಮೂಲಕ ಅರಿಯಬಹುದು. ಅಂದಹಾಗೆ, ಈ ಕಿಚನ್ ಕಪಲ್ಸ್ ಶೋ ಜೀ ಕನ್ನಡ ವಾಹಿನಿಯಲ್ಲಿ ಶನಿವಾರ-ಭಾನುವಾರ ಮದ್ಯಾಹ್ನ 12.00ಕ್ಕೆ ಪ್ರಸಾರವಾಗುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.