ಕಳೆದ ವಾರದ ಸಂಚಿಕೆಯಲ್ಲಿ ಸೋಪ್ ನೀರಿನ ಎರಚಾಟದಲ್ಲಿ ಸಂಗೀತಾ ಶೃಂಗೇರಿ ಹಾಗೂ ಡ್ರೋಣ್ ಪ್ರತಾಪ್ ಅವರಿಗೆ ಸಮಸ್ಯೆ ಉಂಟಾಗಿ ಅವರಿಬ್ಬರೂ ಮನೆಯಿಂದ ಚಿಕಿತ್ಸೆಗಾಗಿ ಹೊರಹೋಗಿದ್ದಾರೆ. ಆದರೆ, ಇಂದಿನ ಕಿಚ್ಚನ ಪಂಚಾಯಿತಿ ಸಂಚಿಕೆಯಲ್ಲಿ ಅವರಿಬ್ಬರೂ ಇರಲಿದ್ದಾರೆ ಎಂಬುದು ಬಿಗ್‌ಬಾಸ್ ಪ್ರಿಯರ ಲೆಕ್ಕಾಚಾರ.
ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆಯಲ್ಲಿ ಸ್ಪರ್ಧಿಗಳ ಜರ್ನಿ ಈಗ 9 ವಾರಗಳನ್ನು ಪೂರೈಸಿದೆ. ಇಂದು ಶನಿವಾರ, ವಾರದ ಕತೆ ಕಿಚ್ಚನ ಜೊತೆ ಸಂಚಿಕೆ ಪ್ರಸಾರವಾಗಲಿದೆ. ಇಂದು ಕಿಚ್ಚನ ಪಂಚಾಯಿತಿ ಸಂಚಿಕೆ ಎಪಿಸೋಡ್‌ನಲ್ಲಿ ನಾಮಿನೇನ್ ನಡೆಯಲಿದ್ದು, ಬರೋಬ್ಬರಿ 9 ಜನರು ನಾಮಿನೇಟ್ ಆಗಿದ್ದಾರೆ. 9ನೇ ವಾರದಲ್ಲಿ 9 ಜನರು ನಾಮಿನೇಟ್ ಆಗಿರುವುದು ಕಾಕತಾಳೀಯ ಎನಿಸಿದ್ದರೂ ಆ ಒಂಬತ್ತು ಮಂದಿಗೂ ಸಖತ್ ಟೆನ್‌ಷನ್ ಶುರುವಾಗಿದೆ. ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯಿಂದ ಯಾರು ಹೊರಹೋಗಲಿದ್ದಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್.
ಕಳೆದ ವಾರದ ಸಂಚಿಕೆಯಲ್ಲಿ ಸೋಪ್ ನೀರಿನ ಎರಚಾಟದಲ್ಲಿ ಸಂಗೀತಾ ಶೃಂಗೇರಿ ಹಾಗೂ ಡ್ರೋಣ್ ಪ್ರತಾಪ್ ಅವರಿಗೆ ಸಮಸ್ಯೆ ಉಂಟಾಗಿ ಅವರಿಬ್ಬರೂ ಮನೆಯಿಂದ ಚಿಕಿತ್ಸೆಗಾಗಿ ಹೊರಹೋಗಿದ್ದಾರೆ. ಆದರೆ, ಇಂದಿನ ಕಿಚ್ಚನ ಪಂಚಾಯಿತಿ ಸಂಚಿಕೆಯಲ್ಲಿ ಅವರಿಬ್ಬರೂ ಇರಲಿದ್ದಾರೆ ಎಂಬುದು ಬಿಗ್‌ಬಾಸ್ ಪ್ರಿಯರ ಲೆಕ್ಕಾಚಾರ. 9 ನೇ ವಾರದ ಪ್ರಯಾಣದ ತನಕ ಬಂದಿರುವ ಯಾರೋ ಒಬ್ಬರು ಸ್ಪರ್ಧಿ ಅನಿವಾರ್ಯವಾಗಿ ಇಂದು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಅದ್ಯಾರು ಎಂಬುದು ಎಲ್ಲರ ಕುತೂಹಲದ ಕೇಂದ್ರ ಬಿಂದು.
ಮನೆಯ ಕಾರಿಡಾರ್‌ನಲ್ಲಿ ವಾಕ್ ಮಾಡುವಾಗ ಅಮ್ಮ ನನ್ನ ಸುತ್ತಲೂ ಇದ್ದಾರೆ ಅನ್ನಿಸುತ್ತೆ; ಜಾನ್ವಿ ಕಪೂರ್
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು ಮತ್ತು ರಕ್ಕಸರು ಟಾಸ್ಕ್ ನಡೆದಿದ್ದು ಹಲವು ಹೊಸತನಗಳಿಗೆ ಸಾಕ್ಷಿಯಾಗಿದೆ. ಅಲ್ಲಿಯವರೆಗೆ ಸ್ನೇಹಿತರಂತಿದ್ದ ಕೆಲವರು ಈಗ ವಿರೋಧಿಗಳಾಗಿದ್ದಾರೆ. ಈ ಮೊದಲು ವಿರೋಧಿಗಳು ಎನಿಸಿದ್ದರವರು ಮತ್ತೆ ಫ್ರೆಂಡ್ಸ್ ಎಂಬಂತಾಗಿದೆ. ಎಲ್ಲರೂ ಅಲ್ಲಿಗೆ ಬಂದಿರುವುದು ಗೆಲ್ಲಲಿಕ್ಕಾಗಿಯೇ ಎಂಬುದು ಸತ್ಯ ಸಂಗತಿ. ಹೀಗಾಗಿ ಸಹಜವಾಗಿಯೇ ಅಲ್ಲಿ ಸ್ನೇಹ, ದ್ವೇಷ, ಕೋಪ, ತಾಪ ಎಲ್ಲವೂ ಇದೆ. ಟಾಸ್ಕ್, ಜವಾಬ್ದಾರಿ, ಆಟ, ಹೋರಾಟಗಳ ಸಂಗಮದ ಈ ಬಿಗ್ ಬಾಸ್ ಜರ್ನಿಯಲ್ಲಿ ಕೊನೆಗೆ ಗೆಲ್ಲುವುದು ಯಾರು ಎಂಬುದಷ್ಟೇ ಸದ್ಯದ ಕುತೂಹಲ.
ಜೀವನದ ಬಹುದೊಡ್ಡ ಗುಟ್ಟನ್ನು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ!
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.