ಶ್ರೀರಸ್ತು ಶುಭಮಸ್ತು ಸೀರಿಯಲ್ ಸಂಧ್ಯಾ ಪಾತ್ರಧಾರಿ ತಮ್ಮನ್ನು ಹೊರಗಡೆ ಜನ ಹೇಗೆ ನೋಡುತ್ತಾರೆ ಎಂಬ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಹಿಂದೆಲ್ಲಾ ರಾಮಾಯಣ, ಮಹಾಭಾರತ ಧಾರಾವಾಹಿ ಪ್ರಸಾರ ಆಗ್ತಿದ್ದ ಸಂದರ್ಭದಲ್ಲಿ ಎಷ್ಟೋ ಮನೆಗಳಲ್ಲಿ ಟಿ.ವಿಗೆ ಹೂವು ಹಾರ ಹಾಕಿ ಪೂಜೆ ಮಾಡಿ ನೋಡುತ್ತಿದ್ದರು. ಇದರಲ್ಲಿ ದೇವತೆಗಳ ಪಾತ್ರಧಾರಿಗಳು ಎಲ್ಲಾದರೂ ಸಿಕ್ಕರೆ ನಿಜವಾದ ದೇವರೇ ಪ್ರತ್ಯಕ್ಷರಾದರೆಂದುಕೊಂಡು ಕಾಲಿಗೆ ಬೀಳುತ್ತಿದ್ದರು. ವಿಲನ್ ಅಂದರೆ ರಕ್ಕಸ ಪಾತ್ರಧಾರಿಗಳನ್ನು ಕಂಡರೆ ಎಷ್ಟೋ ಕಾರ್ಯಕ್ರಮಗಳಲ್ಲಿ ಎಂಟ್ರಿನೂ ಕೊಡುತ್ತಿರಲಿಲ್ಲ. ಆ ರೀತಿಯಾಗಿ ಧಾರಾವಾಹಿಗಳು ವೀಕ್ಷಕರ ಮನಸ್ಸನ್ನು ಗೆದ್ದಿದ್ದವು. ಕಾಲ ಬದಲಾಗಿರಬಹುದು. ಆದರೆ ವೀಕ್ಷಕರ ಮನಸ್ಥಿತಿ ಮಾತ್ರ ಇಂದಿಗೂ ಅದೇ ರೀತಿ ಇದೆ. ಇದೇ ಕಾರಣಕ್ಕೆ ಸೀರಿಯಲ್ಗಳಲ್ಲಿನ ನಾಯಕ-ನಾಯಕಿಯರನ್ನು ಹಾಗೂ ವಿಲನ್ ಪಾತ್ರಧಾರಿಗಳನ್ನು ನೋಡುವ ರೀತಿಯೇ ಬೇರೆಯಾಗಿರುತ್ತದೆ.
ತಾವು ಟಿ.ವಿಯಲ್ಲಿ ನೋಡುತ್ತಿರುವುದು ಕಾಲ್ಪನಿಕ ಕಥೆ, ಇಲ್ಲಿರುವವರು ಪಾತ್ರಧಾರಿಗಳಷ್ಟೇ. ಈ ಸೀರಿಯಲ್ನಲ್ಲಿ ವಿಲನ್ ಆಗಿದ್ದರೆ, ಇನ್ನೊಂದು ಸೀರಿಯಲ್ನಲ್ಲಿ ನಾಯಕ-ನಾಯಕಿಯಾಗುತ್ತಾರೆ ಎನ್ನುವ ಯೋಚನೆ ಮಾಡದ ಹಲವು ಮಂದಿ ಇಂದಿಗೂ ಇದ್ದಾರೆ. ಇದೇ ಕಾರಣಕ್ಕೆ ವಿಲನ್ ಪಾತ್ರಧಾರಿಗಳು ತಾವು ಎಲ್ಲಾದರೂ ಹೋದರೆ ಜನ ತಮ್ಮನ್ನು ನೋಡುವ ರೀತಿ ಹೇಗಿರುತ್ತದೆ ಎನ್ನುವುದನ್ನು ವಿವರಿಸುತ್ತಾರೆ. ಇದೀಗ ಅದೇ ಮಾತನ್ನು ಹೇಳಿದ್ದಾರೆ ಶ್ರೀರಸ್ತು ಶುಭಮಸ್ತು ಸೀರಿಯಲ್ನ ತುಳಸಿ ಮಗಳಾಗಿರುವ ಹಾಗೂ ಒಂದು ರೀತಿಯಲ್ಲಿ ವಿಲನ್ ಎನಿಸಿಕೊಂಡಿರುವ ಸಂಧ್ಯಾ. ಇವರ ನಿಜವಾದ ಹೆಸರು ದೀಪಾ ಕಟ್ಟೆ.
ನನ್ನಮ್ಮ ಕಣ್ಣೀರು ಹಾಕಿದ್ಲು! ಕೀಳು ಮಟ್ಟದ ಪ್ರಚಾರ ಬೇಕಾ? ಪಾಪಿಗಳ ಸಂತೆಯಲ್ಲಿ ಪ್ರಾಣಕ್ಕೆ ಬೆಲೆಯೇ ಇಲ್ವಾ?
ಮಲೆನಾಡ ಬೆಡಗಿ ದೀಪಾ ಕಟ್ಟೆ ಇಂಜಿನಿಯರ್ ಆಗಿದ್ದು, ಐಟಿ ಕಂಪನಿಯಲ್ಲಿ (IT company) ಕೆಲಸ ಮಾಡುತ್ತಿದ್ದರು, ಆದರೆ ನಟನೆಯಲ್ಲಿ ಆಸಕ್ತಿ ಇದ್ದ ಅವರು ಬಳಿಕ ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು. ಬಳಿಕ ಸಾಕಷ್ಟು ಸೀರಿಯಲ್ ನಲ್ಲಿ ನಟಿಸಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ, ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ಕೃಷ್ಣಾನುಗ್ರಹ ಸಭಾ ಭವನದಲ್ಲಿ ದೀಪಾ ಕಟ್ಟೆ ಅವರು ರಕ್ಷಿತ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ. ಇವರು ಈ ಹಿಂದೆ ಮಿಥುನ ರಾಶಿ, ಹಿಟ್ಲರ್ ಕಲ್ಯಾಣ, ಜೀವ ಹೂವಾಗಿದೆ’ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿರೋ ನಟಿ, ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕಿಚನ್ ಕಾರ್ಯಕ್ರಮದಲ್ಲಿ ಪತಿ ಜೊತೆ ಕಾಣಿಸಿಕೊಂಡಿದ್ದಾರೆ.
ನುಗ್ಗೆಕಾಯಿ ಬಿರಿಯಾನಿ ಮಾಡುವುದನ್ನು ಹೇಳಿಕೊಟ್ಟಿರುವ ದೀಪಾ ಅವರು, ಜನರು ಹೊರಗಡೆ ಹೋದಾಗ ಜನ ತಮ್ಮನ್ನು ಹೇಗೆ ಕೆಟ್ಟ ರೀತಿಯಲ್ಲಿ ನೋಡುತ್ತಾರೆ ಎನ್ನುವುದನ್ನು ಹೇಳಿದ್ದಾರೆ. ಒಮ್ಮೆ ನಾನು ದೇವಸ್ಥಾನಕ್ಕೆ ಹೋಗಿದ್ದರೆ. ಅಲ್ಲಿ ನನ್ನನ್ನು ಕೆಲವು ಮಹಿಳೆಯರು ನೋಡಿದರು. ಅವರಲ್ಲಿಯೇ ಮಾತನಾಡಿಕೊಳ್ಳುವುದು ನನಗೆ ಕೇಳಿಸಿತು. ನನ್ನನ್ನು ನೋಡಿದ ಆ ಮಹಿಳೆಯರು ಇವಳು ಅವಳೇ ಅಲ್ವಾ ಅಂದು ಅವರಲ್ಲಿಯೇ ಮಾತನಾಡುತ್ತಿದ್ದರು. ನಂತರ ಅದರಲ್ಲಿ ಒಬ್ಬ ಮಹಿಳೆ, ಥೂ ಅವ್ಳೇ ಇವ್ಳು.. ಇವ್ಳಿಗೇನ್ ಮಾತಾಡ್ಸೋದು ಅಂದರು ಎಂದು ನೆನಪಿಸಿಕೊಂಡಿರುವ ದೀಪಾ, ಒಂದು ಕೆಟ್ಟ ಪಾತ್ರ ಹೇಗೆ ಜನರ ಮನಸ್ಸನ್ನು ಕದಡುತ್ತದೆ ಎಂಬುದನ್ನು ತಿಳಿಸಿದ್ದಾರೆ.
ಐಶ್-ಅಭಿಷೇಕ್ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಸೊಸೆಯನ್ನು ಅನ್ಫಾಲೋ ಮಾಡಿದ ಅಮಿತಾಭ್? ಅಸಲಿಯತ್ತೇನು?