ಮ.. ಮ.. ಮ.. ಮಹೇಸಾ.. ಅನ್ನೋ ಬ್ಯಾಗ್ರೌಂಡ್ ಸ್ಕೋರ್ ಜೊತೆಗೇ ಭಾಗ್ಯಲಕ್ಷ್ಮೀ ಸೀರಿಯಲ್ಲಿಗೆ ಎಡಗಾಲಿಟ್ಟು ಎಂಟ್ರಿಕೊಟ್ಟಿದ್ದು 'ಅಂತರ್ ಪಟ'ದ ಮಹೇಶ. ಈ ಪುಣ್ಯಾತ್ಮನ ಜೊತೆ ಸುಂದ್ರಿ ಅನ್ನೋ ಆಂಟಿನೂ ಸೇರಿ ಭಾಗ್ಯ ಗಂಡ ತಾಂಡವ್ ಲೈಫು ಚಿತ್ರಾನ್ನ ಆಗಿಬಿಟ್ಟಿದೆ.
ಭಾಗ್ಯಲಕ್ಷ್ಮೀ ಕಲರ್ಸ್ ಕನ್ನಡದ ಫೇಮಸ್ ಸೀರಿಯಲ್. ಇದರಲ್ಲಿ ಈಗ ಟ್ವಿಸ್ಟೋ ಟ್ವಿಸ್ಟು. ಈ ಟ್ವಿಸ್ಟಿಗೆ ಕಾರಣ ಮ.. ಮ.. ಮ... ಮಹೇಸ. ಎಸ್. 'ಅಂತರ್‌ಪಟ' ದಲ್ಲಿ ಆರಾಧನಾ ಲೈಫು ಹಾಳು ಮಾಡಿದ್ದು ಸಾಲ್ದೇ ಈಗ 'ಭಾಗ್ಯಲಕ್ಷ್ಮಿ'ಯ ತಾಂಡವ್ ಲೈಫಿಗೆ ಉಪ್ಪು ಖಾರ ಅರೀಲಿಕ್ಕೆ ಇದೀಗ ಮಹೇಶನ ಎಂಟ್ರಿ ಆಗಿದೆ. ಈ ಪುಣ್ಯಾತ್ಮ ತಾಂಡವ್ ನ ತಂದೆಯಾಗಿ ಆಕ್ಟ್ ಮಾಡಲು ಬಂದಿದ್ದಾನೆ. ಆದರೆ ಸ್ವಭಾವ ಥೇಟ್ ಮಹೇಶನದೇ. ಅದೇ ಅಂತರ್‌ಪಟದ ಮಹೇಶನ ಮನೆಹಾಳು ಐಡಿಯಾಗಳೇ ಇಲ್ಲೂ ಇವೆ. ಈ ನಡುವೆ ಮಹೇಶ ತಾಂಡವ್‌ನ ರಿಯಲ್ ತಂದೆಯ ಮುಖಾಮುಖಿ ಆಗಿದೆ ಅಲ್ಲೂ ತನ್ನ ನಿಜರೂಪ ತೋರಿಸಿದ್ದಾನೆ. ಇದನ್ನೆಲ್ಲ ನೋಡಿದ್ರೆ ತಾಂಡವ್ ನಿಜರೂಪ ಹೊರಬರೋದ್ರಲ್ಲಿದೆ ಅನಿಸುತ್ತದೆ.
ಇನ್ನೊಂದು ಕಡೆ ಶ್ರೇಷ್ಠ ಕಾರಣಕ್ಕೆ ತಾಂಡವ್ ಪೇಚಿಗೆ ಸಿಲುಕಿದ್ದಾನೆ. ಇಷ್ಟು ದಿನ ಹೇಗೋ ಶ್ರೇಷ್ಠಾ ಜೊತೆಗೆ ಡೇಟ್ ಮಾಡಿಕೊಂಡು ತಕ್ಕಮಟ್ಟಿಗೆ ಆರಾಮಾಗೇ ಇದ್ದ ತಾಂಡವ್ ಈಗ ಸಂಕಷ್ಟಕ್ಕೆ ಸುಲುಕಿ ಬಿದ್ದಿದ್ದಾನೆ. ಯಾಕೆಂದರೆ ಶ್ರೇಷ್ಠ ಕೊಡುತ್ತಿರುವ ಟಾರ್ಚರ್ ಅಂತದ್ದಾಗಿದೆ. ತಾಂಡವ್‌ಗೆ ಹೆಜ್ಜೆ ಹೆಜ್ಜೆಗೂ ಸಹ ಇರಿಟೇಶನ್ ಆಗುತ್ತಿದೆ. ತಾಂಡವ್‌ಗೆ ಶ್ರೇಷ್ಠ ಈಗೇಕೆ ಮಾಡುತ್ತಿದ್ದಾಳೆ ಎಂಬುದು ಗೊತ್ತಿಲ್ಲ. ಶ್ರೇಷ್ಠ ಹೇಳಿರುವುದು ನಾನು ಒಂದು ವರ್ಷ ಮದುವೆಯಿಂದ ತಪ್ಪಿಸಿಕೊಂಡರೆ ಸಾಕು ಎಂದು. ಆದರೆ ತಾಂಡವ್‌ಗೆ ಶ್ರೇಷ್ಠಾ ತನ್ನನ್ನು ಒಂದು ದೊಡ್ಡ ಬಲೆಯಲ್ಲಿ ಸಿಕ್ಕಿಸಿ ಹಾಕುತ್ತಿದ್ದಾಳೆ ಎಂಬುದು ಗೊತ್ತಿಲ್ಲ. ಡೂಪ್ಲಿಕೇಟ್ ತಂದೆ ಆಗಿ ಬಂದಿರುವ ಮಹೇಶ್ ನಿಜವಾದ ತಂದೆ ಧರ್ಮರಾಜ್ ಅವರ ಬೈಕಿಗೆ ಗುದ್ದಿದ್ದಾನೆ. ನ್ಯಾಯ ಕೇಳಲು ಬಂದ ಧರ್ಮರಾಜ್‌ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಇದೇ ವೇಳೆ ಧರ್ಮರಾಜ್ ನಿನ್ನಂತವರಾ ಜೊತೆ ಮಾತನಾಡಿದರೆ ನಮ್ಮ ಸಮಯವೇ ಹಾಳಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಧರ್ಮರಾಜ್ ಗಾಡಿ ಬಣ್ಣ ಹೋಗಿದೆ ಎಂದಿದ್ದಕ್ಕೆ ನೋಟುಗಳನ್ನು ತೆಗೆದು ಮುಖದ ಮೇಲೆ ಎಸೆದಿದ್ದಾನೆ.
ಗೃಹಪ್ರವೇಶ ಸೀರಿಯಲ್ ಜಂಭದ ಹುಡುಗಿ ರಾಗಿಣಿ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ!
ಇನ್ನೊಂದು ಕಡೆ ತಾಂಡವ್ ತನ್ನ ತಂದೆ ತಾಯಿಯ ಗುಣಗಾನ ಮಾಡುತ್ತಿದ್ದಾನೆ. ಆದರೆ ಯಾವ ಹೋಲಿಕೆಯು ಮಹೇಶ್ ಹಾಗೂ ಸುಂದರಿ ಅವರಲ್ಲಿ ಇಲ್ಲ. ಅವರು ಬೇರೆ ವೇಷದಲ್ಲೇ ರೆಡಿ ಆಗಿ ಬಂದಿದ್ದಾರೆ. ಸುಂದರಿಗೆ ಮೊದಲೇ ಕಳ್ಳತನ ಮಾಡುವುದೇ ಕೆಲಸವಾಗಿದ್ದು ಯಾರದೇ ಪರ್ಸ್ ನೋಡಿದರೂ ಮಾಡಬೇಕು ಎನಿಸುತ್ತದೆ.
ಇದೀಗ ಇವರಿಬ್ಬರ ವೇಷ ಭೂಷಣ ತಾಂಡವ್ ಹೇಳಿದ ತನ್ನ ತಂದೆ ತಾಯಿ ವೇಷಭೂಷಣ, ಸ್ವಭಾವಕ್ಕೆ ಮ್ಯಾಚ್ ಆಗ್ತಾ ಇಲ್ಲ. ತಾಂಡವ್ ನನ್ನ ತಂದೆ ತಾಯಿ ಬರುವುದಿಲ್ಲ ಎಂದು ಶ್ರೇಷ್ಠ ತಂದೆ ತಾಯಿಯ ಬಳಿ ಹೇಳಿದ್ದನು. ಆದರೆ ಇಲ್ಲಿ ಮಹೇಶ್ ಹಾಗೂ ಸುಂದರಿ ಇಬ್ಬರು ಸಹ ನಾವು , ಅಮ್ಮ ಅಪ್ಪ ಎಂದು ಹೇಳಿಕೊಂಡು ಬಂದಿದ್ದಾರೆ. ಅಪ್ಪ ಅವರಿಬ್ಬರನ್ನ ನೋಡಿ ಯಾರು ನೀವು ಎಂದು ಪ್ರಶ್ನೆಯನ್ನ ಮಾಡಿದ್ದಾರೆ. ಈ ರೀತಿ ಪ್ರಶ್ನೆ ಮಾಡಿದ್ದಕ್ಕೆ ಡುಬ್ಲಿಕೇಟ್ ಅಮ್ಮ ಅಪ್ಪ ಶಾಕ್ ಆಗಿದ್ದಾರೆ. ಮಹೇಶ್ ತನ್ನ ಹರುಕು ಮುರುಕು ಇಂಗ್ಲೀಷ್‌ನಲ್ಲಿ ಸರ್ ವಾಟ್ ಇಸ್ ದಿಸ್ ನೋ ಇಂಟ್ರೊಡಕ್ಷನ್ ಎಂದು ಕೇಳಿದ್ದಾನೆ.
ಶ್ರೇಷ್ಠಾ ತಂದೆ-ತಾಯಿಗೆ ನಂಬಿಕೆಯೇ ಬರುತ್ತಿಲ್ಲ: ಇನ್ನೊಂದುಕಡೆ ಮಹೇಶ್ ಹಾಗು ಸುಂದರಿ ಓವರ್ ಆ್ಕ್ಟಿಂಗ್ ಮಾಡುತ್ತಿದ್ದಾರೆ. ಇಂತಹ ಥರ್ಡ್ ಕ್ಲಾಸ್ ನನ್ನ ಮಕ್ಕಳನ್ನೆಲ್ಲ ನಾನು ನನ್ನ ತಂದೆ ಹಾಗೂ ತಾಯಿ ಎಂದುಕೊಳ್ಳಬೇಕು ಎಂದು ತಾಂಡವ್ ಬೈದುಕೊಳ್ಳುತ್ತಿದ್ದಾನೆ. ಇದೇ ವೇಳೆ ಶ್ರೇಷ್ಠ ತಂದೆ ತಾಂಡವ್ ಇವರೇನೂ ಡ್ಯಾಡಿ ಗಿಡಿಯನ್ನುತ್ತಿದ್ದಾರೆ. ಇವರು ನಿಮ್ಮ ಅಪ್ಪನ ಎಂದು ತಾಂಡವ್‌ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶ್ರೇಷ್ಠಾ ಹೌದು ಎಂದು ಉತ್ತರ ಕೊಟ್ಟಿದ್ದಾಳೆ. ಈ ನಡುವೆ ಶ್ರೇಷ್ಠ ಮಾತಿಗೆ ಮಹೇಶ್ ಅಡ್ಡಬಾಯಿ ಹಾಕಿದ್ದಾನೆ. ಕರೆಕ್ಟ್ ನನ್ನ ಮುದ್ದು ಸೊಸೆ ನೀನು ಬಹಳ ಚುರುಕು ಎಂದೆಲ್ಲಾ ಹೇಳಿದ್ದಾನೆ. ಇದೇ ವೇಳೆ ಶ್ರೇಷ್ಠಗೆ ಸೊಸೆ ಮುದ್ದು ಹೇಗಿದ್ದೀಯಾ ಇವರೇನಾ ನಿಮ್ಮ ಮಮ್ಮಿ ಡ್ಯಾಡಿ ಎಂದು ಕೇಳಿದ್ದಾನೆ. ಇದಕ್ಕೆ ಶ್ರೇಷ್ಠ ಹೌದು, ಇವರೇ ನನ್ನ ತಂದೆ ತಾಯಿ ಎಂದು ಪರಿಚಯ ಮಾಡಿಕೊಟ್ಟಿದ್ದಾಳೆ. ಸುಂದರಿಗೆ ಶ್ರೇಷ್ಠ ಹಾಕಿರುವ ಬ್ಯಾಗ್ ಮೇಲೆ ಕಣ್ಣು ಬಿದ್ದಿದೆ. ಈ ನಡುವೆ ನೀವು ನಿಜವಾಗಲೂ ಸಹ ತಾಂಡವ್ ಅಪ್ಪ ಅಮ್ಮನೇನಾ ಎಂದು ಶ್ರೇಷ್ಠ ತಂದೆ ತಾಯಿ ಪ್ರಶ್ನೆಯನ್ನ ಮಾಡಿದ್ದಾರೆ.
ಮನಸೆಂಬ ಮನೆಯಲ್ಲಿ ಗೋಡೆ ಇಲ್ಲ, ಅಣೆಕಟ್ಟೆ ಮಾತು ಆಡಬೇಕೆ: ಅನುಶ್ರೀ
ಇದೆಲ್ಲ ನೋಡ್ತಿದ್ರೆ ಡ್ಯೂಪ್ಲಿಕೇಟ್ ಅಪ್ಪ ಅಮ್ಮನ ದೆಸೆಯಿಂದ ಶೀಘ್ರ ತಾಂಡವ್ ಹಣೆಬರಹ ಬದಲಾಗೋ ಹಾಗೆ ಕಾಣ್ತಿದೆ. ಮನೆಹಾಳು ಮಹೇಶನ ಪಾತ್ರದಲ್ಲಿ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ ನಟಿಸಿದ್ದಾರೆ. ಸುದರ್ಶನ್ ತಾಂಡವ್ ಪಾತ್ರದಲ್ಲಿ, ಸುಷ್ಮಾ ರಾವ್ ಭಾಗ್ಯ ಪಾತ್ರದಲ್ಲಿ, ಸುನೇತ್ರ ಪಂಡಿತ್ ಸುಂದರಿಯಾಗಿ ನಟಿಸಿದ್ದಾರೆ.