ಲಕ್ಷ್ಮೀ ಬಾರಮ್ಮದ ಶಮಂತ್ ಗೌಡಗೆ ಬ್ರೇಕಪ್ ಆಗಿತ್ತಾ? ಅವರ ಲೈಫಲ್ಲಿ ಬಂದ ಆ ಹುಡುಗಿ ಯಾರು?

Published : Aug 22, 2023, 03:27 PM IST
ಲಕ್ಷ್ಮೀ ಬಾರಮ್ಮದ ಶಮಂತ್ ಗೌಡಗೆ ಬ್ರೇಕಪ್ ಆಗಿತ್ತಾ? ಅವರ ಲೈಫಲ್ಲಿ ಬಂದ ಆ ಹುಡುಗಿ ಯಾರು?

ಸಾರಾಂಶ

ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಹೀರೋ ವೈಷ್ಣವ್ ಪಾತ್ರದಲ್ಲಿ ನಟಿಸುತ್ತಿರುವ ಶಮಂತ್ ಗೌಡ ಲವ್ ಬ್ರೇಕ್‌ ಅಪ್ ಮಾಡ್ಕೊಂಡಿದ್ದಾರೆ. ಅವರು ತಮ್ಮ ಎಕ್ಸ್‌ ಗರ್ಲ್ ಫ್ರೆಂಡ್ ಬಗ್ಗೆ ಹೇಳಿರೋ ಮಾತುಗಳು ಇದೀಗ ವೈರಲ್ ಆಗ್ತಿವೆ.

ಮಧ್ಯರಾತ್ರಿ ಬಾರ್‌ನಲ್ಲಿ ಕುಡೀತಾ ತನ್ನ ಬ್ರೇಕಪ್ ಸ್ಟೋರಿಯನ್ನು ಬ್ರೋ ಗೌಡ ಅಂತಲೇ ಫೇಮಸ್ ಆಗಿರೋ ಶಮಂತ್ ಗೌಡ ಹೇಳ್ಕೊಂಡಿದ್ದಾರೆ. ಹೀಗೆ ಆಡಿರೋ ಮಾತುಗಳು ಈಗ ವೈರಲ್ ಆಗಿವೆ. ಬ್ರೋ ಗೌಡ ಅಂತ ತನ್ನ ಕರೆಸಿಕೊಳ್ಳೋ ವೈಷ್ಣವ್ ಗೌಡ ಬಿಗ್‌ಬಾಸ್‌ ಮನೆಯಲ್ಲೂ ಮಿಂಚಿದವರು. ಅಲ್ಲಿ ಪ್ರಿಯಾಂಕಾ ಜೊತೆಗೆ ಒಂಚೂರು ಕ್ಲೋಸ್ ಇದ್ರು. ಹಾಗಿದ್ರೆ ಬ್ರೇಕಪ್ ಮಾಡ್ಕೊಂಡಿದ್ದು ಪ್ರಿಯಾಂಕಾ ತಿಮ್ಮೇಶ್ ಜೊತೆಗೆನೇ. ಅಥವಾ ಅವರಿಗೆ ಬೇರೆ ಹುಡುಗಿ ಜೊತೆಗೆ ಅಫೇರ್ ಇತ್ತಾ ಅನ್ನೋದು ಕುತೂಹಲಕಾರಿ ಸಂಗತಿ. ಈ ಬಗೆಗಿನ ವಿವರಕ್ಕೆ ಆಮೇಲೆ ಬರೋಣ. ಸದ್ಯ ಈ ಶಮಂತ್ ಗೌಡ ಮಿಂಚುತ್ತಿರೋದು 'ಲಕ್ಷ್ಮೀ ಬಾರಮ್ಮ' ಅನ್ನೋ ಸೀರಿಯಲ್‌ನಲ್ಲಿ. ಇದರಲ್ಲಿ ಹಠಮಾರಿ ಅಮ್ಮ, ಅವಳ ಅತಿ ಪ್ರೀತಿ ತನ್ನ ಬದುಕನ್ನೇ ನರಕ ಮಾಡುತ್ತಿದ್ದರೂ ಅದನ್ನು ಎದುರಿಸಿ ನಿಲ್ಲುವ, ತಾನೇ ಬ್ರೇಕಪ್ ಮಾಡಿಕೊಂಡ ಮೇಲೂ ಮದುವೆ ಆದವನ ಮೇಲೆ ಅಧಿಕಾರ ಚಲಾಯಿಸುವ ಗರ್ಲ್ ಫ್ರೆಂಡ್ ಜೊತೆಗೆ ಒದ್ದಾಡುವ ಹುಡುಗನ ಪಾತ್ರದಲ್ಲಿ ಶಮಂತ್ ಗೌಡ ಕಾಣಿಸಿಕೊಂಡಿದ್ದಾರೆ. ಇದೊಂದು ತ್ರಿಕೋನ ಪ್ರೇಮ ಕಥೆಯಾಗಿದ್ದು, ಒಂದು ಕಡೆ ಹೆಂಡತಿ ಲಕ್ಷ್ಮೀ ಇನ್ನೊಂದು ಕಡೆ ಎಕ್ಸ್‌ ಗರ್ಲ್ ಫ್ರೆಂಡ್ ಕೀರ್ತಿ ನಡುವೆ ಒದ್ದಾಡುವ ಹುಡುಗ ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ ನಟಿಸುತ್ತಿದ್ದಾರೆ.

ಸೀರಿಯಲ್‌ನಲ್ಲಿ ಶಮಂತ್ ಗೌಡಗೆ ಹೇಗಿದ್ದರೂ ತನ್ನ ಲವರ್ ನಿಂದ ತಿರಸ್ಕೃತಗೊಂಡ ಹುಡುಗನ ಪಾತ್ರ. ಆದರೆ ರಿಯಲ್ ಲೈಫೂ ಇದಕ್ಕಿಂತ ಭಿನ್ನವಾಗಿ ಇದ್ದಂಗಿಲ್ಲ. ಇದರಲ್ಲೂ ಅವರ ಗರ್ಲ್ ಫ್ರೆಂಡ್ ಅವರಿಗೆ ಕೈ ಕೊಟ್ಟಿದ್ದಾರೆ. ಹಾಗೆ ಕೈ ಕೊಟ್ಟಿರೋದಕ್ಕೆ ಕಾರಣನೂ ಇದೆ. ಅದು ಇವರೇ ಮಾಡ್ಕೊಂಡಿರೋ ಎಡವಟ್ಟು. ಆ ಎಡವಟ್ಟೇ ಇವರನ್ನು ಇವರು ಪ್ರೀತಿಸುವ ಹುಡುಗಿಯಿಂದ ಬೇರಾಗುವಂತೆ ಮಾಡಿದೆ. ಹಾಗೆ ನೋಡಿದರೆ ಈ ಶಮಂತ್ ಗೌಡ ಬಿಹೇವಿಯರ್ ಯಾವ ರೀತಿಯದ್ದು, ಅವರು ಎಂಥಾ ಮನಸ್ಸಿನ ಹುಡುಗ ಅನ್ನೋದನ್ನು ಹೆಚ್ಚಿನ ಕಿರುತೆರೆ ವೀಕ್ಷಕರು ಬಿಗ್‌ ಬಾಸ್ ಶೋನಲ್ಲಿ ನೋಡಿದ್ದಾರೆ. ಮೃದು ಮನಸ್ಸಿನ ಹೃದಯವಂತ ಹುಡುಗ ತಾನು ಅನ್ನೋದನ್ನು ಇಲ್ಲಿ ಶಮಂತ್ ಗೌಡ ತನ್ನ ನಡವಳಿಕೆ ಮೂಲಕವೇ ತೋರಿಸಿಕೊಟ್ಟಿದ್ದರು. ಅವರ ಈ ನಡವಳಿಕೆ ನೋಡಿಯೇ ಬಹಳಷ್ಟು ಮಂದಿ ಅವರ ಫ್ಯಾನ್ ಆಗಿದ್ದುಂಟು. ತಾನಾಯ್ತು, ತನ್ನ ಆಲ್ಬಂ ಆಯ್ತು ಅಂತಿದ್ದ ಸೈಲೆಂಟ್ ಹುಡುಗನನ್ನು ಬಿಗ್‌ಬಾಸ್ ತನ್ನ ತೆಕ್ಕೆಗೆ ಸೆಳೆದುಕೊಂಡು ಬಿಟ್ಟಿತು. ಅಷ್ಟಕ್ಕೇ ಮುಗೀತಿಲ್ಲ ಅಂತ ಕಲರ್ಸ್ ಕನ್ನಡ ವಾಹಿನಿ ತನ್ನ ಹೊಸ ಸೀರಿಯಲ್‌ನಲ್ಲಿ ಅವರನ್ನು ಹೀರೋ ಆಗಿ ಆಯ್ಕೆ ಮಾಡಿತ್ತು.

ಬೆಳಗ್ಗೆ ಸರ್ಕಾರಿ ಶಾಲೆ, ಸಂಜೆ ಪಬ್‌ನಲ್ಲಿ ಪಾರ್ಟಿ; ನೇಹಾ ಗೌಡ ಫೋಟೋ ವೈರಲ್!

ಪರಿಸ್ಥಿತಿ ಹೀಗಿರುವಾಗ ಎಂಥವರ ತಲೆಯಾದ್ರೂ ತಿರುಗುತ್ತಲ್ವಾ? ಬ್ರೋ ಗೌಡ ಅವರಿಗೂ ಹೀಗೇ ಆಯ್ತಾ ಅಂದರೆ ಖಂಡಿತಾ ಇಲ್ಲ. ಗರ್ಲ್ ಫ್ರೆಂಡೇ ಅವರಿಗೆ ಕೈ ಕೊಟ್ಟಿದ್ದಾರೆ. ತನ್ನನ್ನು ನೆಗ್ಲೆಕ್ಟ್ ಮಾಡ್ತಿದ್ದಾನೆ, ತನ್ನ ಬರ್ತ್ ಡೇ ಡೇಟನ್ನೇ ಮರ್ತಿದ್ದಾನೆ ಅನ್ನೋ ಕಾರಣ ನೀಡಿ ಆತನಿಂದ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. 'ನಮ್ ಹುಡುಗರು ಲೈಫಲ್ಲಿ (life) ಯಾವ್ದಕ್ಕೂ ಕಣ್ಣೀರು ಹಾಕಲ್ಲ. ಅದೇ ಒಂದು ಹುಡುಗಿ ಕೈ ಕೊಟ್ಳು ಅಂದರೆ ದಿನ ರಾತ್ರಿ ಬಕೀಟ್ ಗಟ್ಲೆ ಕಣ್ಣೀರು ಸುರಿಸ್ತಾನೆ ಇರ್ತಾರೆ' ಅಂತ ಬ್ರೋ ಗೌಡ ಫ್ರೆಂಡ್ಸ್ (feriend) ಹೇಳ್ತಾರೆ.

ಅಂದಹಾಗೆ ಇಷ್ಟೆಲ್ಲ ಆಗಿರೋದು ಬ್ರೋ ಗೌಡ ರಿಯಲ್ ಲೈಫಲ್ಲಿ ಏನೂ ಅಲ್ಲ. 'ಎಕ್ಸ್ ಗರ್ಲ್ ಫ್ರೆಂಡ್' ಅನ್ನೋದು ಅವರ ಮ್ಯೂಸಿಕ್ (music) ಆಲ್ಬಂ. ಈ ಆಲ್ಬಂ ರಿಲೀಸ್ ಆಗಿ ಎರಡು ತಿಂಗಳು ಕಳೆದಿದೆ. ಹದಿನಾರು ಲಕ್ಷಕ್ಕೂ ಹೆಚ್ಚು ಜನ ಈ ವೀಡಿಯೋ ನೋಡಿ ವಾವ್ ಅಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಿಜಕ್ಕೂ ತನ್ನ ಬ್ರೇಕ್‌ಅಪ್ ಆದಂಗೆ ಹೇಳಿಕೊಳ್ಳುತ್ತಲೇ ಶಮಂತ್ ತನ್ನ ಈ ಹೊಸ ಆಲ್ಬಂ ಬಗ್ಗೆ ಮಾತನಾಡಿದ್ದಾರೆ. ಬರ್ತ್ ಡೇಗೆ (birth day)  ವಿಶ್ ಮಾಡಿಲ್ಲ ಅನ್ನೋ ಕಾರಣಕ್ಕೆ ಬ್ರೇಕ್ಅಪ್ ಮಾಡಿಕೊಂಡ ಗರ್ಲ್ ಫ್ರೆಂಡ್ ಬಗ್ಗೆ ಅವರಿಲ್ಲಿ ಅಲ್ಬಂ ಮಾಡಿದ್ದಾರೆ. ಅವರ ಗರ್ಲ್ ಫ್ರೆಂಡ್ ಪಾತ್ರದಲ್ಲಿ ನಿವೇದಿತಾ ಗೌಡ ಆಕ್ಟ್ ಮಾಡಿದ್ದಾರೆ.

ಸದಾ ದೂಷಿಸುವುದು ಹಂಗಿಸುವುದು; ಶೂಟಿಂಗ್‌ ನಡುವೆ ನಿದ್ರೆಗೆ ಜಾರಿದ ಅನುಶ್ರೀ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ