ರ‍್ಯಾಪ್​ಗೆ ಭರ್ಜರಿ ಸ್ಟೆಪ್‌ ಹಾಕಿದ ಸತ್ಯ ಸೀರಿಯಲ್‌ ಕೀರ್ತನಾ: ಫ್ಯಾನ್ಸ್‌ ಫಿದಾ!

Published : Aug 23, 2023, 01:01 PM IST
 ರ‍್ಯಾಪ್​ಗೆ ಭರ್ಜರಿ ಸ್ಟೆಪ್‌ ಹಾಕಿದ ಸತ್ಯ ಸೀರಿಯಲ್‌ ಕೀರ್ತನಾ: ಫ್ಯಾನ್ಸ್‌ ಫಿದಾ!

ಸಾರಾಂಶ

ಸತ್ಯ ಧಾರಾವಾಹಿಯಲ್ಲಿ ವಿಲನ್‌ ಪಾತ್ರ ಮಾಡುತ್ತಿರುವ ಅನು ಜನಾರ್ದನ ಅವರು ಪಾಪ್‌ ಹಾಡೊಂದಕ್ಕೆ ಸಕತ್‌ ಸ್ಟೆಪ್‌ ಹಾಕಿದ್ದು ಅದೀಗ ವೈರಲ್‌ ಆಗಿದೆ. ಫ್ಯಾನ್ಸ್‌ ಫಿದಾ ಆಗಿದ್ದಾರೆ.   

ಟಿ.ವಿ. ಧಾರಾವಾಹಿಗಳು ಇಂದು ಎಷ್ಟೋ ಮಂದಿಗೆ ಅದರಲ್ಲಿಯೂ ಮಹಿಳೆಯರ ಪ್ರಾಣವಾಗಿಬಿಟ್ಟಿದೆ.   ಚಿಕ್ಕ ಕಥೆಯನ್ನು ವರ್ಷಗಟ್ಟಲೆ ಎಳೆಯುತ್ತಾರೆ, ಮಹಿಳೆಯರನ್ನೇ ವಿಲನ್‌ (Villian) ಆಗಿ ತೋರಿಸುತ್ತಾರೆ, ಅಕ್ರಮ ಸಂಬಂಧ, ಅತ್ತೆ-ಸೊಸೆ ಜಗಳ, ಎರಡು ಮದುವೆ, ಮದುವೆಯಾದರೂ ದಂಪತಿ ನಡುವೆ ಸಂಬಂಧ ಇಲ್ಲದೇ ಇರುವುದು... ಹೀಗೆ ಒಂದೇ ರೀತಿಯ ಕಥೆಯನ್ನು ವಿಭಿನ್ನವಾಗಿ ತೋರಿಸುತ್ತಾರೆ ಎಂದೆಲ್ಲಾ ಪ್ರತಿನಿತ್ಯ ದೂಷಿಸುತ್ತಲೇ, ಧಾರಾವಾಹಿಯನ್ನು ಗೊಣಗುತ್ತಲೇ  ಒಂದು ದಿನವೂ ಮಿಸ್‌ ಮಾಡದೇ ನೋಡುವ ಮಹಿಳೆಯರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿ ಇದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಚಾನೆಲ್‌ಗಳಲ್ಲಿ ಧಾರಾವಾಹಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಾತ್ರಿ ಮಾತ್ರ ಪ್ರಸಾರವಾಗುತ್ತಿದ್ದ ಧಾರಾವಾಹಿಗಳು ಮಧ್ಯಾಹ್ನ ಕೂಡ ಪ್ರಸಾರ ಆಗುವಷ್ಟರ ಮಟ್ಟಿಗೆ ಇದರ ಬೇಡಿಕೆ ಹೆಚ್ಚಿದೆ. ಅದೇ ರೀತಿ ಧಾರಾವಾಹಿಯ ಪಾತ್ರಧಾರಿಗಳೂ ಜನರಿಗೆ ಆಪ್ತರಾಗಿಬಿಡುತ್ತಾರೆ.  ತಮ್ಮದೇ ಮನೆಯ ಕಥೆಯಂತೆ ನೋಡುವ ಜನರು, ಆ ಪಾತ್ರಧಾರಿಗಳಲ್ಲಿಯೂ ತಮ್ಮನ್ನೇ ತಾವು ಪ್ರತಿಬಿಂಬಿಸಿಕೊಳ್ಳುವುದು ಇದೆ.

ಅದರೆ ಕೆಲವೊಂದು ಧಾರಾವಾಹಿಗಳು ವಿಭಿನ್ನ ಎನಿಸಿಕೊಂಡು ಜನರನ್ನು ಇನ್ನಷ್ಟು ಹತ್ತಿರಗೊಳಿಸುತ್ತದೆ. ಅಂಥ ಧಾರಾವಾಹಿಗಳಲ್ಲಿ ಒಂದು ಜೀ ಟಿ.ವಿಯಲ್ಲಿ ನಿತ್ಯ ಪ್ರಸಾರವಾಗ್ತಿರೋ ಸತ್ಯ (Sathya) ಧಾರಾವಾಹಿ. ಈ ಧಾರಾವಾಹಿ ಕಳೆದ ಎರಡೂವರೆ ವರ್ಷಗಳಿಂದ ಜನಮನ ಗೆದ್ದಿದೆ. 2020ರ ಡಿಸೆಂಬರ್​ನಿಂದ ಪ್ರಸಾರವಾಗ್ತಿರೋ ಈ ಧಾರಾವಾಹಿಗೆ ಅದರದ್ದೇ ಆದ ಪ್ರೇಕ್ಷಕರಿದ್ದಾರೆ. ಮಾಮೂಲು ಧಾರಾವಾಹಿಗಳಂತೆ ನಾಯಕಿ, ಮನೆಯಲ್ಲೊಬ್ಬಳು ವಿಲನ್​ ಕಥಾ ವಸ್ತು ಇದ್ದರೂ ಬೇರೆ ಧಾರಾವಾಹಿಗಳಿಗಿಂತಲೂ ತುಸು ಭಿನ್ನ ಎನ್ನುವಂಥ ಪಾತ್ರ ಇದರಲ್ಲಿ ಇರುವ ಕಾರಣ ಜನರಿಗೆ ಇದು ತುಂಬಾ ಇಷ್ಟವಾಗುತ್ತಿದೆ. ಗಂಡುಬೀರಿಯಂತಿದ್ದ ನಾಯಕಿ ಸತ್ಯ ಅನಿವಾರ್ಯವಾಗಿ ಮದುವೆಯಾಗಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹೊಂದಿಕೊಳ್ಳಲು ಹೆಣಗಾಡುವುದು, ಇವಳು ಹೊಂದಿಕೊಳ್ಳಲು ನೋಡಿದರೂ ಅತ್ತೆಗೆ ಇವಳನ್ನು ಕಂಡರೆ ಆಗಿರುವುದು, ಪತ್ನಿಯನ್ನು ಕಂಡರೆ ಸಿಡಿಮಿಡಿ ಎನ್ನುತ್ತಿರುವ ಗಂಡ ಕಾರ್ತೀಕ್​ಗೆ ಕೊನೆಗೂ ಪತ್ನಿ ಮೇಲೆ ಲವ್​ ಆಗುವುದು... ಹೀಗೆ ಒಂದು ಸಂಸಾರದ ಸುತ್ತಲೂ ಹೆಣೆದಿರುವ ಈ ಕಥೆಯಲ್ಲಿ ನಾಯಕಿಯಂತೆಯೇ ಎಲ್ಲರ ಗಮನ ಸೆಳೆಯುವುದು ವಿಲನ್​ ಪಾತ್ರಧಾರಿ ಕೀರ್ತನಾ. 

'ಬ್ರೋ' ಶಬ್ದಕ್ಕೆ ಅರ್ಥ ತಿಳಿದ್ಮೇಲೆ, ಯಾರನ್ನೂ ಹಾಗೆ ಕರೀತಿಲ್ಲವೆಂದ ಸತ್ಯ ಸೀರಿಯಲ್​ 'ಕೀರ್ತನಾ'!

ಸುಂದರಿ ಕೀರ್ತನಾ ಅವರನ್ನು ನೋಡಿದಾಗ ವಿಲನ್​ ಎಂದು ಕರೆಯುವುದು ಹೆಚ್ಚಿನವರಿಗೆ ಸಹ್ಯ ಎನ್ನಿಸದಿದ್ದರೂ ತಮ್ಮ ಅದ್ಭುತ ನಟನೆಯಿಂದ ಥೇಟ್​ ಮನೆಹಾಳಿಯಂತೆಯೇ ಕಾಣಿಸಿಕೊಳ್ಳುತ್ತಿದ್ದಾರೆ ಕೀರ್ತನಾ. ಮದುವೆಯಾದರೂ ತವರಿನಲ್ಲಿಯೇ ಇದ್ದು, ತಮ್ಮನ ಪತ್ನಿಯ (ನಾಯಕಿ ಸತ್ಯ) ಮೇಲೆ ಸದಾ ಕುತಂತ್ರ ಹೆಣೆಯುತ್ತಾ ಇರುವ ಈ ಕೀರ್ತನಾಳ ನಿಜವಾದ ಹೆಸರು ಅನು ಜನಾರ್ದನ.

ಅನು ಜನಾರ್ದನ (Anu Janardhana) ಅವರು ಸೋಷಿಯಲ್‌ ಮೀಡಿಯಾದಲ್ಲಿಯೂ ಸಕತ್‌ ಆಕ್ಟೀವ್‌ ಆಗಿದ್ದಾರೆ. ಆಗಾಗ್ಗೆ ಅವರು ರೀಲ್ಸ್‌ಗಳನ್ನು ಮಾಡಿ ಅದನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಇವರಿಗೆ ಫಾಲೋವರ್ಸ್‌ ಸಂಖ್ಯೆಯೂ ಹೆಚ್ಚಿದೆ. ಇದೀಗ ಕೀರ್ತನಾ ಅಲಿಯಾಸ್‌ ಅನು ಅವರು ಪಾಪ್‌ ಹಾಡಿಗೆ ಒಂದು ರೀಲ್ಸ್‌ ಮಾಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ. ನೀವು ಕೇವಲ ನಟನೆಗೆ ಮಾತ್ರವಲ್ಲದೇ ಡ್ಯಾನ್ಸ್‌ಗೂ ಸೂಪರ್‌ ಮೇಡಂ ಎನ್ನುತ್ತಿದ್ದಾರೆ. ಹಾರ್ಟ್‌ ಎಮೋಜಿಗಳಿಂದ ಕಮೆಂಟ್‌ ಬಾಕ್ಸ್‌ ತುಂಬಿದೆ. ಇವರ ಈ ಡ್ಯಾನ್ಸ್‌ಗೆ ವ್ಹಾರೆವ್ಹಾ ಎನ್ನುತ್ತಿದ್ದಾರೆ.

ಕಾವಾಲಯ್ಯ ಹಾಡಿಗೆ 'ಪುಟ್ಟಕ್ಕನ ಮಕ್ಕಳು' ಸ್ನೇಹಾ ಮಿನಿ ಸ್ಕರ್ಟ್​ನಲ್ಲಿ ಭರ್ಜರಿ ಸ್ಟೆಪ್​: ಉಫ್​ ಎಂದ ಫ್ಯಾನ್ಸ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಮನೆಯಿಂದ ಹೊರಬಂದ ಗಿಲ್ಲಿನಟ: ಫ್ಯಾನ್ಸ್​ ಭರ್ಜರಿ ಸ್ವಾಗತ- ಆಟದ ದಿಕ್ಕು ಬದಲಾಯ್ತು ಎಂದದ್ಯಾಕೆ ಬಿಗ್​ಬಾಸ್​​?
ಶ್ರೀನಿವಾಸ್-ಲಕ್ಷ್ಮೀಗೆ ಯಾಕಿಷ್ಟು ಅವಸರ? ಇದು ಸಿನಿಮಾ ಅಲ್ಲ, ಸೀರಿಯಲ್ ಅಂದ್ರು ವೀಕ್ಷಕರು!