ಅನಿಷ್ಟ ಪಂಚಮಿ ನಾಗ ಕನ್ನಿಕೆಯಾಗಿ ಬದಲಾಗಿದ್ದು ಹೇಗೆ? ಹೊಸ ಧಾರಾವಾಹಿ ಆರಂಭ

Published : Jul 28, 2023, 02:31 PM ISTUpdated : Jul 28, 2023, 04:25 PM IST
ಅನಿಷ್ಟ ಪಂಚಮಿ ನಾಗ ಕನ್ನಿಕೆಯಾಗಿ ಬದಲಾಗಿದ್ದು ಹೇಗೆ? ಹೊಸ ಧಾರಾವಾಹಿ ಆರಂಭ

ಸಾರಾಂಶ

ದ್ವೇಷ ಮರೆಸಿ ಪ್ರೀತಿ ಹಂಚಲು ಜನ್ಮವೆತ್ತಿದೆ ನಾಗಕನ್ನಿಕೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಾಗಕನ್ನಿಕೆ ಕಥೆ ಇರುವ ನಾಗಪಂಚಮಿ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗುತ್ತಿದೆ. ಇದೇ ತಿಂಗಳಿಂದ ಪ್ರಸಾರ ಪ್ರಾರಂಭಿಸಲಿದೆ. 

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಅನೇಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಒಂದಕ್ಕಿಂತ ಒಂದು ಅದ್ಭುತ ಎನ್ನುವ ಹಾಗೆ ಸೀರಿಯಲ್‌ಗಳು ಪ್ರಸಾರವಾಗುತ್ತಿದೆ. ಇದೀಗ ಮತ್ತೊಂದು ಹೊಸ ಧಾರಾವಾಹಿ ಸೇರ್ಪಡೆಯಾಗುತ್ತಿದೆ.  ಹೌದು 'ಸ್ಟಾರ್ ಸುವರ್ಣ' ವಾಹಿನಿಯು ಇದೀಗ ಪ್ರೇಕ್ಷಕರಿಗೆ  ನಾಗಕನ್ನಿಕೆಯ ಕಥೆಯನ್ನು ಹೇಳಲು ಸಜ್ಜಾಗಿದೆ. 'ನಾಗಪಂಚಮಿ' ಹೆಸರಿನಲ್ಲಿ  ನಾಗಕನ್ನಿಕೆಯ ಕಥೆ ಮೂಡಿಬರುತ್ತಿದೆ. 

ಅಲೌಕಿಕ ಶಕ್ತಿಯಿಂದಾಗಿ ಶಿವನ ಸನ್ನಿಧಾನದಲ್ಲಿ ಕಥಾನಾಯಕಿ 'ಪಂಚಮಿ' ಜನಿಸಿರುತ್ತಾಳೆ. ವಿಚಿತ್ರ ರೀತಿಯಲ್ಲಿ ಜನ್ಮಪಡೆದ ಕಾರಣ ಊರಿನ ಜನ ಪಂಚಮಿಯನ್ನು ಅನಿಷ್ಟವೆಂದು ದೊಷಿಸುತ್ತಿದ್ದರೆ ಪಂಚಮಿ ನಾಗಕನ್ನಿಕೆಯಾಗಿ ಹೇಗೆ ಬದಲಾಗುತ್ತಾಳೆ ಎಂಬುದೇ ಕುತೂಹಲ. ಆಕೆಗೆ ತಿಳಿಯಲಾರದ ಶಕ್ತಿಯೊಂದು ಅವಳ ರೂಪದಲ್ಲಿ ಊರಿನ ಜನರಿಗೆ ಮಾಡುವ ಸಹಾಯ, ಪವಾಡಗಳು ನೋಡುಗರಿಗೆ ಮೈನವಿರೇಳಿಸುವಂತೆ ಮಾಡುತ್ತದೆ. ಇನ್ನು ಕಥಾನಾಯಕ ಮೋಕ್ಷ, ಈತನ ಕುಟುಂಬ ವಂಶ ಪಾರಂಪರೆಯಿಂದ ಅಲ್ಪಾಯುಷ್ಯರಾಗಿ ಮುಂದುವರಿಯುವಂತೆ ಶಾಪಗ್ರಸ್ತವಾಗಿರುತ್ತದೆ. ನಾಗದೇವತೆಯ ಆರಾಧನೆಯನ್ನು ಮಾಡಿಕೊಂಡು ಬಂದಿರುವ ಪಂಚಮಿ, ಮೋಕ್ಷನ ಕುಟುಂಬವನ್ನು ಹೇಗೆ ರಕ್ಷಿಸುತ್ತಾಳೆ ಎಂಬುದೇ 'ನಾಗಪಂಚಮಿ' ಧಾರಾವಾಹಿಯ ಕಥಾಹಂದರ.

ಮದ್ವೆಯಾದ 5 ತಿಂಗಳಿಗೆ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಸಿಡಿಲು ಬಡಿದಂತಾಯ್ತು: ಹಾಸ್ಯ ನಟ ಲೋಕೇಶ್ ಬಸವಟ್ಟಿ!

'ನಾಗಪಂಚಮಿ' ಧಾರಾವಾಹಿಯು ಅದ್ಧೂರಿ ತಾರಾಬಳಗವನ್ನು ಹೊಂದಿದ್ದು. ಪೃಥ್ವಿ ಶೆಟ್ಟಿ, ದರ್ಶಿನಿ ಗೌಡ, ಚೈತ್ರ ಹಳ್ಳಿಕೆರೆ, ಸುನಿಲ್ ಪುರಾಣಿಕ್, ಪ್ರಿಯಾಂಕಾ ಶಿವಣ್ಣ, ಮೇಘನಾ ಖುಷಿ, ಪ್ರೀತಿ ಶ್ರೀನಿವಾಸ್ ಸೇರಿದಂತೆ ಇನ್ನು ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಅಂದಹಾಗೆ ಈ ಧಾರಾವಾಹಿ ಇದೇ ಜುಲೈನಿಂದ ಪ್ರಸಾರವಾಗುತ್ತಿದೆ ಎನ್ನುವುದು ವಿಶೇಷ. ಅಂದಹಾಗೆ ಮಧ್ಯಾಹ್ನ ಈ ಸೀರಿಯಲ್ ಪ್ರಸಾರವಾಗಲಿದೆ. ದ್ವೇಷ ಮರೆಸಿ, ಪ್ರೀತಿ ಹಂಚಲು ಜನ್ಮವೆತ್ತಿದ ನಾಗಕನ್ನಿಕೆಯ ಕಥೆ 'ನಾಗಪಂಚಮಿ' ಇದೇ ಜುಲೈ 31 ರಿಂದ ಸೋಮವಾರದಿಂದ - ಶುಕ್ರವಾರದ ವರೆಗೆ ಮಧ್ಯಾಹ್ನ 1 ಗಂಟೆಗೆ ಕಿರುತೆರೆ ಪ್ರೇಕ್ಷಕರ ಮುಂದೆ ಬರಲಿದೆ. 

ಹೆಂಡತಿಗೆ ಸಣ್ಣ ನೋವು ಕಾಣಿಸಿಕೊಂಡಿತ್ತು 15 ನಿಮಿಷದಲ್ಲಿ ಮಗ ಹುಟ್ಟಿದ; 2ನೇ ಮಗುವಿನ ಸಂಭ್ರಮದಲ್ಲಿ ವಿಜಯ್ ಸೂರ್ಯ

ವೀಕ್ಷಕರ ಗಮನಕ್ಕೆ,

ಅಂದಹಾಗೆ ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಡೀ ದೇಶ ಗೆದ್ದ ಗೃಹಿಣಿಯ ಕಥೆ "ಅನುಪಮ"  ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದೀಗ ಸಮಯ ಬದಲಾಗಿದೆ. ಅನುಪಮಾ ಧಾರಾವಾಹಿ ಇದೇ ಸೋಮವಾರದಿಂದ ಬೆಳಗ್ಗೆ 11.30 ಕ್ಕೆ ಹಾಗು ರಾತ್ರಿ 10.30 ಕ್ಕೆ ಪ್ರಸಾರವಾಗುತ್ತಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್