ಸಿಹಿಯ ನಟನೆಗೆ ಕಣ್ಣೀರು ಹಾಕಿದ ಫ್ಯಾನ್ಸ್‌: ನಿನಗೆ ನೀನೇ ಸಾಟಿ ಕಂದಾ ಎಂದ ಅಭಿಮಾನಿಗಳು

By Suvarna News  |  First Published Feb 28, 2024, 3:07 PM IST

ಸೀತಾರಾಮ ಸೀರಿಯಲ್‌ನಲ್ಲಿ ಸಿಹಿಯ ನಟನೆ ಕಂಡು ನೆಟ್ಟಿಗರ ಕಣ್ಣೀರು. ಧಾರಾವಾಹಿ ಎಂದು ಗೊತ್ತಿದ್ದರೂ ಅಳು ತಡೆಯಲು ಆಗಲಿಲ್ಲ ಎನ್ನುತ್ತಿರೋ ಫ್ಯಾನ್ಸ್‌... 
 


ಪ್ರೀತಿಯನ್ನು ಹೇಳಿಕೊಂಡು ಬಂದ ರಾಮ್​ನನ್ನು ಬೈದು ಸೀತಾ ಮನೆಯಿಂದ ಹೊರಕ್ಕೆ ಕಳಿಸಿದ್ದಾಳೆ. ಇದೇ ಅವಮಾನದಲ್ಲಿ ರಾಮ್​ ಏನು ಮಾಡಬೇಕು ಎಂದು ತಿಳಿಯುವಷ್ಟರಲ್ಲಿಯೇ ಭಯಾನಕ ಅಪಘಾತ ಸಂಭವಿಸಿದೆ. ಅಷ್ಟಕ್ಕೂ ಈ ಆ್ಯಕ್ಸಿಡೆಂಟ್​ ಮಾಡಿಸಿದ್ದು, ಖುದ್ದು ಆತನ ಚಿಕ್ಕಮ್ಮ. ಸೀತಾಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗಲು ಹೊರಟಿದ್ದ ರುದ್ರಪ್ರತಾಪ್​ನ ಕೈಜೋಡಿಸಿ ಚಿಕ್ಕಮ್ಮ ಅಪಘಾತ ಮಾಡಿಸಿದ್ದಾಳೆ. ಜೈಲು ಸೇರಿದ್ದ ರುದ್ರಪ್ರತಾಪ್​ನಿಗೆ ಜಾಮೀನು ಕೊಡಿಸಿ ಹೊರಕ್ಕೆ ಕರೆದುಕೊಂಡು ಬಂದಿರುವ ಚಿಕ್ಕಮ್ಮ, ರುದ್ರಪ್ರತಾಪ್​ ಕೈಯಲ್ಲಿ ಅಪಘಾತ ಮಾಡಿಸಿದ್ದಾಳೆ. ಭೀಕರ ಅಪಘಾತದಲ್ಲಿ ರಾಮ್​ ಆಸ್ಪತ್ರೆಗೆ ಸೇರಿದ್ದಾನೆ.  ಸೀತಾ ರಕ್ತ ಕೊಟ್ಟು ಪ್ರಾಣ ಕಾಪಾಡಿದ್ದಾರೆ. 

ಅದೇ ಇನ್ನೊಂದೆಡೆ ಸೀತಾಳಿಗೆ ಅಪಘಾತದ ವಿಷಯ ತಿಳಿದು ಗಾಬರಿಯಾಗಿದ್ದಾಳೆ. ಜೋರಾಗಿ ಅಳುತ್ತಾ ಆಸ್ಪತ್ರೆಗೆ ಧಾವಿಸಿದ್ದಾಳೆ. ತನ್ನಿಂದ ತಪ್ಪಾಯ್ತು ಎಂದು ಗೋಳೋ ಎಂದಿದ್ದಾಳೆ. ಆಸ್ಪತ್ರೆಗೆ ಧಾವಿಸುತ್ತಿರುವ ಹೊತ್ತಿನಲ್ಲಿಯೇ ಸೀರಿಯಲ್​ಗೆ ಭಾರಿ ಟ್ವಿಸ್ಟ್​ ಬಂದಿದೆ. ರಾಮ್​ನ ಮಾಜಿ ಪ್ರೇಯಸಿಯ ಎಂಟ್ರಿ ಆಗಿದೆ. ಹೂಗುಚ್ಛ ಹಿಡಿದುಕೊಂಡು ಬಂದಿದ್ದಾಳೆ. ರಾಮ್‌ ಬಾಳಿನಿಂದ ಸೀತಾಳನ್ನು ದೂರ ಮಾಡಲು ಚಿಕ್ಕಮ್ಮ ಪ್ರೇಯಸಿಯ ಕೈಜೋಡಿಸಿದ್ದಾಳೆ. ಎಚ್ಚರಗೊಂಡ ರಾಮ್‌ ಸೀತಾಳಿಗೆ ಮೌನವಾಗಿಯೇ ಪ್ರೀತಿ ನಿವೇದನೆ ಮಾಡಿಕೊಂಡಿದ್ದಾನೆ. ತನ್ನ ಫ್ರೆಂಡ್‌ ನೋಡಲು ಸಿಹಿ ಆಸ್ಪತ್ರೆಗೆ ಬಂದಿದ್ದಾಳೆ. ಆದರೆ ರಾಮ್‌ ಸ್ಥಿತಿಯನ್ನು ಕಂಡು ಅವಳಿಗೆ ದುಃಖ ಉಮ್ಮಳಿಸಿ ಬಂದಿದೆ. ರಾಮ್‌ ಸ್ನೇಹಿತ ಅಶೋಕ ಸಿಹಿಯನ್ನು ತನ್ನದೇ ಆದ ರೀತಿಯಲ್ಲಿ ಸಮಾಧಾನ ಪಡಿಸುತ್ತಿದ್ದಾನೆ. ಗಾಯಾಳು ರಾಮ್‌ನನ್ನು ನೋಡಲು ಸಿಹಿಗೆ ಆಗುತ್ತಿಲ್ಲ. ಇದಿಷ್ಟು ಸೀತಾರಾಮ ಸೀರಿಯಲ್‌ ಇಲ್ಲಿಯವರೆಗಿನ ಕಥೆಯಾಯಿತು. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Zee Kannada (@zeekannada)

ಬಾನದಾರಿಯಲ್ಲಿ ಸೂರ್ಯ... ಹಾಡು ಹೇಳಿ ಸೀತಮ್ಮನನ್ನು ಮಲಗಿಸಿದ ಸಿಹಿ: ಸೋ ಕ್ಯೂಟ್​ ಎಂದ ಫ್ಯಾನ್ಸ್​

ಆದರೆ ಇಲ್ಲೀಗ ಎಲ್ಲರ ಗಮನ ಸೆಳೆದಿರುವುದು ಮುದ್ದು ಸಿಹಿ. ಐದು ವರ್ಷದ ಪುಟಾಣಿ, ತನ್ನ ಪಾತ್ರವನ್ನು ಅರಗಿಸಿಕೊಂಡು ನಟನೆ ಮಾಡುವುದು ಸುಲಭದ ಮಾತಲ್ಲ. ನಿಜ ಜೀವನದಲ್ಲಿಯಾದರೆ ನೋವು, ಖುಷಿ, ನಲಿವು, ದುಃಖ, ಅಳು ಎಲ್ಲವೂ ನ್ಯಾಚುರಲ್‌ ಆಗಿ ಬಂದುಬಿಡುತ್ತದೆ. ಆದರೆ ಶೂಟಿಂಗ್‌ ಸಮಯದಲ್ಲಿ ನಟನೆ ಮಾಡುವುದು ಎಂದರೆ ಅದಕ್ಕೆ ಬಹಳ ಟ್ಯಾಲೆಂಟ್‌ ಬೇಕು. ಇದೀಗ ನಟನೆಯ ಮೂಲಕ ಇದಾಗಲೇ ಮನ ಗೆದ್ದಿರುವ ಸಿಹಿ ಅರ್ಥಾತ್‌ ರಿತು ಸಿಂಗ್‌, ಈಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾಳೆ. ಆಸ್ಪತ್ರೆಗೆ ಸೇರಿರುವ ರಾಮ್‌ನನ್ನು ನೋಡಲು ಆಗದೇ ಆಕೆ ಪರಿತಪಿಸುವ ಪರಿಯನ್ನು ಕಂಡು ನೆಟ್ಟಿಗರು ಕಣ್ಣೀರು ಹಾಕಿದ್ದಾರೆ. ಇದು ಸೀರಿಯಲ್‌ ಎಂದು ತಿಳಿದರೂ ನಿನ್ನ ಪಾತ್ರ ನೋಡಿ ಕಣ್ಣೀರು ತಡೆದುಕೊಳ್ಳಲು ಆಗಲಿಲ್ಲ ಎನ್ನುತ್ತಿದ್ದಾರೆ. ನಿನಗೆ ನೀನೇ ಸಾಟಿ ಎಂದು ಹೇಳುತ್ತಿದ್ದಾರೆ. 

ಅಂದಹಾಗೆ, ಸಿಹಿಯ ನಿಜವಾದ ಹೆಸರು ರೀತು ಸಿಂಗ್​. ಈಕೆ ನೇಪಾಳದವಳು. ನೇಪಾಳ ಮೂಲದ ರಿತು, ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್​ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ. 

ರಿಯಲ್​ ಲೈಫ್​ನಲ್ಲೂ ನೋವುಂಡ ಸೀತಾರಾಮ ಸಿಹಿಯ ವಿಶೇಷ ವಿಡಿಯೋ ರಿಲೀಸ್​

click me!