
ಕರಿಮಣಿ ಮಾಲಿಕ ನೀನಲ್ಲ.. ಹಾಡಿನ ಸಾಲು ಕೇಳಿ ಕೇಳಿ ಸಾಕಾಯ್ತು ಅಂತ ಹೇಳೋರನ್ನು ಕೇಳಿರಬಹುದು, ಹಾಗೆ ಹೇಳುತ್ತಲೇ ಮತ್ತೆ ಮತ್ತೆ ಈ ಹಾಡು ಕಿವಿಗೆ ಬೀಳುತ್ತಿರುತ್ತೆ. ಜನ ಮತ್ತೆ ಕಿವಿಗೊಡ್ತಾರೆ. ಸಾಲ್ದು ಅಂತ ವಿದೇಶಿಯರ ಬಾಯಲ್ಲೂ ಈ ಹಾಡನ್ನು ಕೇಳಿ ಪುನೀತರಾಗಬೇಕಾದ ಸ್ಥಿತಿ ನಮಗೆ ಬಂದಿದೆ ಅಂತ ಹೇಳಿದ್ರೆ ತಪ್ಪಾಗಲಿಕ್ಕಿಲ್ಲ ಫ್ರೆಂಡ್ಸ್. ಆ ಲೆವೆಲ್‌ಗೆ ಕರಿಮಣಿ ಮಾಲಿಕ ಫೇಮಸ್ ಆಗಿ ಬಿಟ್ಟಿದ್ದಾನೆ. ಬಹುಶಃ ಈ ಹಾಡು ರಿಲೀಸ್ ಆದ ಟೈಮಲ್ಲೇ ಈ ಮಟ್ಟಿನ ಹೈಪ್ ಕ್ರಿಯೇಟ್ ಆಗಿದ್ದರೆ ಸಿಚುವೇಶನ್ನೇ ಬೇರೆ ಆಗಿ ಬಿಡ್ತಿತ್ತು.
ಸೂಪರ್ ಹಿಟ್ 'ಉಪೇಂದ್ರ' ಚಿತ್ರದ ಸೂಪರ್ ಹಿಟ್ ಗೀತೆ 'ಏನಿಲ್ಲ.. ಏನಿಲ್ಲ'. ಹಲವು ವರ್ಷಗಳ ಬಳಿಕ ಈ ಹಾಡು ದಿಢೀರ್ ಟ್ರೆಂಡ್ ಆಗೋಯ್ತು.. ಅದಕ್ಕೆ ಕಾರಣ ರೀಲ್ಸ್ ಕ್ರಿಯೇಟರ್ ಕನಕ ಮಾಡಿದ ಒಂದು ವಿಡಿಯೋ.
ಆಮೇಲೆ ಇತ್ತೀಚೆಗೆ ಕನಕ ಮಾಡಿದ ರೀಲ್ಸ್ ಸಖತ್ ಸದ್ದು ಮಾಡ್ತಿಲ್ಲ. ಆದರೆ ಬಹಳ ಜನ ಈ ರೀಲ್ಸ್ ಮಾಡಿ ವೈರಲ್ ಮಾಡಿದ್ದಾರೆ. ಹೋಟೆಲ್ ಉದ್ಯಮಿ ಹಾಗೂ ಬಾಣಸಿಗ ಚಂದ್ರು ಮಾಡಿದ ತಮ್ಮ ವಿಡಿಯೋಗಳಲ್ಲಿ 'ರಾಹುಲ್ಲಾ.. ರಾಹುಲ್ಲಾ' ಎಂದು ಹೇಳಿರುವುದು ವೈರಲ್ ಆಗಿಬಿಟ್ಟಿತ್ತು. ಕೆಲವರು ಇದನ್ನು ಸಖತ್ ಟ್ರೋಲ್ ಸಹ ಮಾಡಿದ್ದರು. ಚಂದ್ರು ಯುಟ್ಯೂಬ್ ಚಾನಲ್‌ನಲ್ಲಿ ತಮ್ಮ ಅಡುಗೆ ರೆಸೆಪಿಗಳನ್ನು ತೋರಿಸುತ್ತಿರುತ್ತಾರೆ. ಈ ವೇಳೆ ತಮ್ಮ ಆಪ್ತನನ್ನು ರಾಹುಲ್ಲಾ ರಾಹುಲ್ಲಾ ಎಂದು ಕರೆದಿರುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಲಾಯ್ತು. 'ರಾಹುಲ್ಲಾ ಬೇಗ ಅಲ್ಲಾಡಿಸಪ್ಪಾ.. ರಾಹುಲ್ಲಾ ರುಬ್ಬಿ ರುಬ್ಬಿ ಕೊಡಪ್ಪಾ' ಎನ್ನುವ ಮಾತುಗಳು ಎಲ್ಲೆಲ್ಲೂ ಫೇಸ್‌ಬುಕ್, ಇನ್‌ಸ್ಟಾ, ವಾಟ್ಸಪ್ ಸ್ಟೇಟಸ್‌ಗಳಲ್ಲಿ ಹರಿದಾಡಿತು.
ಆದರೆ ಇದರಿಂದ ಕ್ರುದ್ಧರಾದ ಚಂದ್ರು ಅವರ ಬಾಣಸಿಗ ಆ ರಾಹುಲ್ಲ ಪರಮ ಸೋಮಾರಿಯಾಗಿ ಬಿಟ್ಟಿದ್ದಾನೆ. ಈ ಲೆವೆಲ್ ರೀಲ್ಸ್ ವೈರಲ್ ಆಗಿರೋದ್ರಿಂದ ಅವನಿಗೆ ಸಿಕ್ಕಾಪಟ್ಟೆ ದುರಂಹಾರ ಬಂದಿದೆ. ಇಲ್ಲಿ ಕಷ್ಟಪಡೋನು ನಾನು, ಆದರೆ ಫೇಮಸ್ ಆಗಿರೋದು ಅವನು ಅಂತೆಲ್ಲ ಹೇಳಿದ್ದು ಕೂಡ ಸುದ್ದಿಯಾಯ್ತು.
ಲಕ್ಷ್ಮೀ ನಿವಾಸದ ಸಿದ್ಧೇ ಗೌಡ್ರ ಪಾತ್ರದ ಮೂಲಕ ಜನಮನ ಗೆದ್ದ ನಟ ಇವರೇ ನೋಡಿ
ಆದರೆ ಈಗ ವಿಷಯ ಅದಲ್ಲ. ಈ ಹಾಡು ರಾವುಲ್ಲನ ಮರ್ಯಾದೆ ಹೆಚ್ಚಿಸಿ, ಬಾಣಸಿಗನ ಮೂಲಕ ಮರ್ಯಾದೆ ತೆಗೆದು ಇಷ್ಟೆಲ್ಲ ಅವಾಂತರ ಮಾಡಿದ ಮೇಲೆ ಗೋಕರ್ಣದ (Gokarna) ಸಮುದ್ರ ದಂಡೆಯಲ್ಲಿ ಮತ್ತೆ 'ಕರಿಮಣಿ ' ಸಾಂಗ್ ಅನುರಣಿಸುತ್ತಿದೆ. ಅಲ್ಲಿ ವಿದೇಶಿಗರು ಈ ಹಾಡನ್ನು ಹಾಡ್ತಾ ಇರೋ ವೀಡಿಯೋ ಸಖತ್ ವೈರಲ್ ಆಗ್ತಿದೆ. ಅವರಿಗೆ 'ಕರಿಮಣಿ' (Karimani song) ಅಂದರೇನು ಅಂತಾಗಲಿ, ಕರಿಮಣಿ ಮಾಲಿಕ ಅಂದರೇನು ಅಂತಾಗಲೀ ತಿಳಿದಂಗಿಲ್ಲ. ಹೋಗಲಿ, ಈ ಹಾಡು ಸೃಷ್ಟಿಯಾದ ಕನ್ನಡ ಭಾಷೆಯ ಬಗ್ಗೆಯೂ ತಿಳಿದಂಗಿಲ್ಲ. ರೀಲ್ಸ್ (Reels) ನೋಡಿ ನೋಡಿ ಹಾಡಂತೂ ಬಾಯಿಪಾಠ ಆಗಿದೆ. ಆ ಟ್ಯೂನ್ ಅವರಿಗೂ ಇಷ್ಟ ಆದ ಹಾಗಿದೆ. ಸೋ, ಗೋಕರ್ಣ ಕಡಲ ದಂಡೆಯ ಮೇಲೆ ತಂಗಾಳಿಗೆ ಮೈಯ್ಯೊಡ್ಡಿ ಗಿಟಾರ್ ಬಾರಿಸುತ್ತಾ, 'ಕರಿಮಣಿ ಮಾಲಿಕ ರಾವುಲ್ಲಾ..' ಹಾಡನ್ನು ಹಾಡಿದ್ದಾರೆ.
ಬಹುಶಃ ಈ ಹಾಡು ಇತ್ತೀಚೆಗೆ ಇದನ್ನು ಸಖತ್ ವೈರಲ್ ಮಾಡಿದ ವಿಕಿಪೀಡಿಯಾ ಕಿವಿಗೆ ಬಿದ್ದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದಿಷ್ಟು ಜನ ನೆಟ್ಟಿಗರ ಕಣ್ಣಿಗಂತೂ ಬಿದ್ದಿದೆ. ಅವರ ಮೂಲಕ ಎಲ್ಲೆಡೆ ಮತ್ತೆ ವೈರಲ್ ಆಗ್ತಿದೆ. ಗೋಕರ್ಣದ ಬೀಚ್‌ನಲ್ಲಿ ವಿದೇಶಿಗರ ಬಾಯಲ್ಲಿ ಕನ್ನಡ ಹಾಡನ್ನು ಅಷ್ಟು ಮೆಲೋಡಿಯಸ್ ಆಗಿ ಕೇಳಿ ಕನ್ನಡಿಗರೇ ಥ್ರಿಲ್ ಆಗಿದ್ದಾರೆ.
ಲಕ್ಷ್ಮೀ ನಿವಾಸದ ಸಿದ್ಧೇ ಗೌಡ್ರ ಪಾತ್ರದ ಮೂಲಕ ಜನಮನ ಗೆದ್ದ ನಟ ಇವರೇ ನೋಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.