ಭೂಮಿಕಾ ಅಪಹರಣದ ಜಾಗದ ಕುರಿತು ಹಿಂಟ್ ಕೊಟ್ಟ ದೇವಸ್ಥಾನದ ಕುರಿತು ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ.
ಭೂಮಿಕಾಳ ಅಪಹರಣವಾಗಿದೆ. ಚಿಕ್ಕಮಗಳೂರಿನಲ್ಲಿ ಹನಿಮೂನ್ ಮೂಡ್ನಲ್ಲಿದ್ದ ಗೌತಮ್ ಮತ್ತು ಭೂಮಿಕಾರಿಗೆ ಬರಸಿಡಿಲು ಬಡಿಸಿದೆ. ಗೌತಮ್ ಚಿಕ್ಕಮ್ಮ ಶಕುಂತಲಾ ದೇವಿ ಮತ್ತು ಮಗ ಜೈದೇವ್ರ ಕುತಂತ್ರದಿಂದ ಭೂಮಿಕಾಳನ್ನು ಕಿಡ್ನ್ಯಾಪ್ ಮಾಡಿಸಲಾಗಿದೆ. ಭೂಮಿಕಾಳನ್ನು ಹುಡುಕಿಕೊಂಡು ಗೌತಮ್ ಮತ್ತು ಆನಂದ್ ಬಂದಿದ್ದಾರೆ. ದೇವಸ್ಥಾನದ ಸಮೀಪವೇ ಭೂಮಿಕಾಳ ಕಿವಿಯೋಲೆ ಗೌತಮ್ಗೆ ಸಿಕ್ಕಿದೆ. ಸೀತಾಮಾತೆಯ ಅಪಹರಣದ ಸಮಯದಲ್ಲಿ ತನ್ನ ಕುರುಹನ್ನು ಸೀತೆ ಬಿಟ್ಟುಹೋದಂತೆ, ಭೂಮಿಕಾ ತನ್ನ ಕಿವಿಯೋಲೆ, ಬಳೆಗಳನ್ನು ದಾರಿಯುದ್ದಕ್ಕೂ ಹಾಕುತ್ತಾ ಬಂದಿದ್ದಳು. ಇದನ್ನು ನೋಡಿದ ಗೌತಮ್ ಅದೇ ದಾರಿಯಲ್ಲಿ ಸಾಗಿದ್ದಾನೆ. ಹೇಗಾದರೂ ಮಾಡಿ ಭೂಮಿಕಾಳನ್ನು ರಕ್ಷಿಸುವುದು ಅವನ ಉದ್ದೇಶ. ಒಟ್ಟಿನಲ್ಲಿ ಭೂಮಿಕಾ ಸಂಕಷ್ಟದಲ್ಲಿದ್ದಾಳೆ.
ಅತ್ತ, ಗೌತಮ್ ಭೂಮಿಕಾಳನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಇತ್ತ ಸೀರಿಯಲ್ ಪ್ರೇಮಿಗಳ ಕಣ್ಣು ಭೂಮಿಕಾಳ ಹಿಂಟ್ ಕೊಟ್ಟ ದೇವಸ್ಥಾನದತ್ತ ನೆಟ್ಟಿದೆ. ಕೆಂಚ ಹಣಕ್ಕಾಗಿ ಗೌತಮ್ಗೆ ಕರೆ ಮಾಡಿದಾಗ, ಈ ದೇವಸ್ಥಾನದ ಗಂಟೆ ಮೊಳಗಿತ್ತು. ಅದರಿಂದಲೇ ಗೌತಮ್ಗೆ ಸಮೀಪದಲ್ಲಿ ದೇವಸ್ಥಾನವಿದ್ದು, ಅಲ್ಲೇ ಭೂಮಿಕಾಳ ಅಪಹರಣ ಆಗಿದ್ದಿರಬಹುದು ಎಂದು ಹಿಂಟ್ ಸಿಕ್ಕಿತ್ತು. ಅದನ್ನು ಹಿಂಬಾಲಿಸಿಕೊಂಡು ಹೋಗಿದ್ದ. ಅದು ನಿಜ ಕೂಡ ಆಯ್ತು. ಅದಕ್ಕಾಗಿಯೇ ಈಗ ಸುಂದರ, ಭವ್ಯ ದೇಗುಲದ ಮೇಲೆ ಸೀರಿಯಲ್ ಪ್ರೇಮಿಗಳ ಕಣ್ಣು ನೆಟ್ಟಿದೆ.
ಭೂಮಿಕಾಳನ್ನು ಡ್ರಮ್ನಲ್ಲಿ ಹೂತು ಹಾಕಿದ ರೌಡಿಗಳು! ಅತ್ತ ಮಲ್ಲಿಯ ಪ್ರಾಣಕ್ಕೂ ಸಂಚಕಾರ...
ಅಷ್ಟಕ್ಕೂ ಈ ದೇವಾಲಯ ಚಿಕ್ಕಮಗಳೂರಿನ ಮೂಡಿಗೆರೆಯ ಮಾಕೋನಹಳ್ಳಿಯಲ್ಲಿರುವ ದೇವಾಲಯ ಎನ್ನಲಾಗಿದೆ. ಇದರ ಮೇಲೆ ನೆಟ್ಟಿಗರ ಕಣ್ಣು ನೆಟ್ಟಿದೆ. ಈ ದೇವಾಲಯ ಕೊಟ್ಟ ಹಿಂಟ್ನಿಂದಲೇ ಭೂಮಿಯತ್ತ ತಲುಪಲು ಗೌತಮ್ಗೆ ಸಾಧ್ಯವಾಗಿತ್ತು. ಭೂಮಿಕಾಳ ಕಥೆ ಮುಗಿಸಿದರೆ ದುಡ್ಡು ನೀಡುವುದಾಗಿ ಜೈದೇವ್ ಹೇಳಿರುತ್ತಾನೆ. ಅವನ ಬಳಿ ಹಣ ಪಡೆಯುವ ಬದಲು ನೇರವಾಗಿ ಗೌತಮ್ಗೆ ಬ್ಲ್ಯಾಕ್ಮೇಲ್ ಮಾಡಿದ್ರೆ ಹೆಚ್ಚು ಹಣ ಸಿಗುತ್ತದೆ ಎಂದು ರೌಡಿ ಕೆಂಚ ಕರೆ ಮಾಡುತ್ತಾನೆ. ಆ ಸಮಯದಲ್ಲಿ ದೇವಸ್ಥಾನದ ಗಂಟೆ ಕೇಳಿಸುತ್ತದೆ. ಭೂಮಿಕಾ ಬಿಟ್ಟ ಕುರುಹು ಮತ್ತು ಗಂಟೆಯ ನಾದ ಇವುಗಳ ಬೆನ್ನತ್ತಿ ಗೌತಮ್ ಮತ್ತು ಆನಂದ್ ಅದೇ ದಾರಿಯಲ್ಲಿ ಸಾಗುತ್ತಾರೆ. ಕೊನೆಗೂ ಕೆಂಚ ಸಿಗುತ್ತಾನೆ. ಬಂದೂಕಿನಿಂದ ಕೆಂಚನನ್ನು ಗೌತಮ್ ಹೆದರಿಸುತ್ತಾನೆ. ಈ ಆಟದ ಗನ್ ಬೇಡ ಎಂದು ಕೆಂಚ ತಮಾಷೆ ಮಾಡುತ್ತಾನೆ. ನಂತರ ಬಂದೂಕಿನಿಂದ ಕೆಂಚನ ಕಾಲಿಗೆ ಗುಂಡು ಹಾರಿಸುತ್ತಾನೆ ಗೌತಮ್
ಅದೇ ವೇಳೆ ಹಣಕ್ಕಾಗಿ ರೌಡಿಗಳ ಕರೆ ಬರುತ್ತದೆ. ಭೂಮಿಕಾಳ ಕಥೆ ಮುಗಿಸಿದರೆ ದುಡ್ಡು ನೀಡುವುದಾಗಿ ಜೈದೇವ್ ಹೇಳಿರುತ್ತಾನೆ. ಅವನ ಬಳಿ ಹಣ ಪಡೆಯುವ ಬದಲು ನೇರವಾಗಿ ಗೌತಮ್ಗೆ ಬ್ಲ್ಯಾಕ್ಮೇಲ್ ಮಾಡಿದ್ರೆ ಹೆಚ್ಚು ಹಣ ಸಿಗುತ್ತದೆ ಎಂದು ರೌಡಿ ಕೆಂಚ ಕರೆ ಮಾಡುತ್ತಾನೆ. ಆ ಸಮಯದಲ್ಲಿ ದೇವಸ್ಥಾನದ ಗಂಟೆ ಕೇಳಿಸುತ್ತದೆ. ಭೂಮಿಕಾ ಬಿಟ್ಟ ಕುರುಹು ಮತ್ತು ಗಂಟೆಯ ನಾದ ಇವುಗಳ ಬೆನ್ನತ್ತಿ ಗೌತಮ್ ಮತ್ತು ಆನಂದ್ ಅದೇ ದಾರಿಯಲ್ಲಿ ಸಾಗುತ್ತಾರೆ. ಕೊನೆಗೂ ಕೆಂಚ ಸಿಗುತ್ತಾನೆ. ಬಂದೂಕಿನಿಂದ ಕೆಂಚನನ್ನು ಗೌತಮ್ ಹೆದರಿಸುತ್ತಾನೆ. ಈ ಆಟದ ಗನ್ ಬೇಡ ಎಂದು ಕೆಂಚ ತಮಾಷೆ ಮಾಡುತ್ತಾನೆ. ನಂತರ ಬಂದೂಕಿನಿಂದ ಕೆಂಚನ ಕಾಲಿಗೆ ಗುಂಡು ಹಾರಿಸುತ್ತಾನೆ ಗೌತಮ್.
ಪುಟ್ಟಕ್ಕನ ಮನೆಯಲ್ಲಿ ಶ್ರಾದ್ಧ ಮಾಡುವ ಹೊತ್ತಲ್ಲೇ ಸಹನಾ ಪ್ರತ್ಯಕ್ಷ! ಆದರೆ ಇವಳು ಅವಳಲ್ಲ?