Latest Videos

ಶ್ರೇಷ್ಠಾಳ ಜೊತೆ ತಾಂಡವ್​ ಮದ್ವೆಗೆ ರೆಡಿಯಾಗ್ತಿದ್ರೆ ಅಮ್ಮ- ಮಗಳು ಈ ಪರಿ ಡ್ಯಾನ್ಸ್​ ಮಾಡೋದಾ?

By Suchethana DFirst Published May 24, 2024, 3:35 PM IST
Highlights

ಶ್ರೇಷ್ಠಾಳ ಜೊತೆ ತಾಂಡವ್​ ಮದ್ವೆಗೆ ರೆಡಿಯಾಗಿದ್ದಾನೆ. ಇತ್ತ ಪತಿಯನ್ನೂ ಸೇರಿಕೊಂಡು ಭಾಗ್ಯ- ತನ್ವಿ ಡ್ಯಾನ್ಸ್​ ಮಾಡುತ್ತಿದ್ದಾರೆ.  ಏನಿದು ಟ್ವಿಸ್ಟ್​?
 

ಸದ್ಯ, ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಟ್ವಿಸ್ಟ್​ ಬಂದಿದೆ. ಭಾಗ್ಯಾಳದ್ದು ಎಂದು ಭಗಾಯ ಸಿವಿ ನೋಡುವ ಸೂಪರ್‌ವೈಸರ್‌, ಭಾಗ್ಯಾಳನ್ನು ಕರೆದು ನಿಮ್ಮ ಸಿವಿ ನೋಡಿದೆ, ನೀವು ವೆಡ್ಡಿಂಗ್‌ ಡೆಕೊರೇಷನ್‌ನಲ್ಲಿ ಸ್ಪೆಷಲ್‌ ಕೋರ್ಸ್‌ ಮಾಡಿದ್ದೀರ ಎಂದು ನೋಡಿದೆ. ಆದ್ದರಿಂದ ಇಂದು ನೀವು ಅದೇ ಕೆಲಸ ಮಾಡಿ, ಮದುವೆ ಬಗ್ಗೆ ವಿಚಾರಿಸಲು ಒಬ್ಬರು ಕ್ಲೈಂಟ್‌ ಇಲ್ಲಿಗೆ ಬರುತ್ತಿದ್ದಾರೆ. ಅವರ ಜೊತೆ ನೀವೇ ಮಾತನಾಡಿ ಎನ್ನುತ್ತಾನೆ. ಇದನ್ನು ಕೇಳಿ ಭಾಗ್ಯಳಿಗೆ ತಲೆತಿರುಗಿದಂತೆ ಆಗುತ್ತದೆ. ಇಲ್ಲೇನು ಆಗುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಮಳ್ಳಿಯಂತೆ ತಲೆಯಲ್ಲಾಡಿಸುತ್ತಾಳೆ. ಆದರೆ ಮದುವೆಯ ಬಗ್ಗೆ ಈ ಹೋಟೆಲ್​ಗೆ ಮಾತನಾಡಲು ಬರುತ್ತಿರುವವರು ತನ್ನ ಗಂಡ ಮತ್ತು ಶ್ರೇಷ್ಠಾ ಎನ್ನುವುದನ್ನು ಭಾಗ್ಯ ಕನಸಿನಲ್ಲಿಯೂ ಊಹಿಸಿರುವುದಿಲ್ಲ. ಆದರೆ ಅದು ಆಗಿಯೇ ಹೋಗಿದೆ. ಶ್ರೇಷ್ಠಾ ಮತ್ತು ತಾಂಡವ್​ ಮದುವೆ ಪ್ಲ್ಯಾನ್​ಗಾಗಿ ಈ ಹೋಟೆಲ್​ಗೆ ಬಂದಿದ್ದಾರೆ.  

ಶ್ರೇಷ್ಠಾಳನ್ನು ಭಾಗ್ಯ ನೋಡಿದ್ದಾಳೆ. ಹೇಗಾದರೂ ಮಾಡಿ ಅಲ್ಲಿಂದ ಅವಳು ತಪ್ಪಿಸಿಕೊಳ್ಳಬೇಕು. ಹೇಗೆ ಎಂದು ತಿಳಿಯದೇ ಕಂಗಾಲಾಗಿದ್ದಾಳೆ. ಅದೇ ಇನ್ನೊಂದೆಡೆ ಮದುವೆ ಹುಡುಗ ತಾಂಡವ್​ ಕೂಡ ಅಲ್ಲಿಗೆ ಆಗಮಿಸುತ್ತಿದ್ದಾನೆ. ಅವನನ್ನು ನೋಡಿಯಾದ್ರೂ ಇವರಿಬ್ಬರು ಮದ್ವೆಯಾಗುವ ಪ್ಲ್ಯಾನ್ ಮಾಡಿದ್ದಾರೆ ಎಂದು ಭಾಗ್ಯಳಿಗೆ ತಿಳಿಯುವುದೇ ಅಥವಾ ಅವರ ಕಣ್ಣಿಗೆ ಬೀಳದಂತೆ ಅಲ್ಲಿಂದ ಕಾಲ್ಕಿತ್ತು ಬೇರೆ ಏನು ಪ್ಲ್ಯಾನ್​ ಮಾಡುವಳೇ ಕಾದು ನೋಡಬೇಕಿದೆ.  

ಗಂಡನ ಮತ್ತೊಂದು ಮದ್ವೆಗೆ ಭಾಗ್ಯಳದ್ದೇ ಡೆಕೊರೇಷನ್​! ಇದೇನಿದು ಭಾಗ್ಯಲಕ್ಷ್ಮಿ ಸೀರಿಯಲ್​ ಹೊಸ ಟ್ವಿಸ್ಟ್​?

ಇದರ ನಡುವೆಯೇ ಸೀರಿಯಲ್​ ಶೂಟಿಂಗ್​ನ ಫ್ರೀ ಟೈಂನಲ್ಲಿ ತಾಂಡವ್​, ಅಮ್ಮ ಮತ್ತು ಮಗಳು ತನ್ವಿ ಜೊತೆ ಭಾಗ್ಯ ರೀಲ್ಸ್​ ಮಾಡಿದ್ದಾಳೆ. ಎಲ್ಲರೂ ಸೇರಿ ರೀಲ್ಸ್​ ಮಾಡಿದ್ರೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಗಂಡ ಶ್ರೇಷ್ಠಾಳ ಜೊತೆ ಮದ್ವೆಯಾಗೋಕೆ ರೆಡಿ ಆಗಿದ್ರೆ ಅಮ್ಮ-ಮಗಳು ಸೇರಿ ಡ್ಯಾನ್ಸ್​ ಮಾಡ್ತಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್​, ತಾಂಡವ್​ ಪಾತ್ರಧಾರಿ ಸುದರ್ಶನ್‌ ರಂಗಪ್ರಸಾದ್‌, ತನ್ವಿ ಪಾತ್ರಧಾರಿ ಅಮೃತಾ ರೀಲ್ಸ್​ ಮಾಡಿದ್ದಾರೆ. ಶೂಟಿಂಗ್​ನಿಂದ ಬಿಡುವು ಸಿಕ್ಕಾಗ ಹೀಗೆ ಸೀರಿಯಲ್​ ತಾರೆಯರು ರೀಲ್ಸ್​ ಮಾಡುವುದು ಮಾಮೂಲು. ಅದರಂತೆಯೇ ಈ ರೀಲ್ಸ್​ ಅನ್ನು ಸುಷ್ಮಾ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಭಾಗ್ಯಲಕ್ಷ್ಮಿ ಫ್ಯಾನ್ಸ್​ ನಟಿಯ ಕಾಲೆಳೆಯುತ್ತಿದ್ದಾರೆ. 

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಸದ್ಯ, ಆದರೆ ಭಾಗ್ಯಳ ಸ್ಥಿತಿ ಮಾತ್ರ ಯಾರಿಗೂ ಬೇಡವಾಗಿದೆ. ವೇಟ್ರೆಸ್​ ಕೆಲಸವನ್ನು ಭಾಗ್ಯಳಿಗೆ ನೀಡಲಾಗಿದೆ. ಬರುವ ಗ್ರಾಹಕರು ಇಂಗ್ಲಿಷ್​ನಲ್ಲಿ ಮಾತನಾಡುತ್ತಿದ್ದಾರೆ. ಅವರು ಆರ್ಡರ್​ ಮಾಡುವ ತಿನಿಸು ಯಾವುದು ಎಂದು ಭಾಗ್ಯಳಿಗೆ ತಿಳಿಯುವುದಿಲ್ಲ. ಇದರಿಂದ ಪರದಾಡುತ್ತಿದ್ದಾಳೆ ಭಾಗ್ಯ. ನನಗೆ ಆರ್ಡರ್‌ ತೆಗೆದುಕೊಳ್ಳುವುದಕ್ಕಿಂತ ಅಡುಗೆ ಮಾಡುವುದು ಚೆನ್ನಾಗಿ ಬರುತ್ತದೆ. ಅದನ್ನೇ ಮಾಡುತ್ತೇನೆ ಎಂದು ಶೆಫ್​ಗೆ ಹೇಳುತ್ತಾಳೆ. ಅವನು ಈಕೆಯನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಾನೆ. ಒಟ್ಟಿನಲ್ಲಿ ಕೆಲಸವಂತೂ ಭಾಗ್ಯಳಿಗೆ ಬೇಕೇ ಬೇಕು. ಏಕೆಂದರೆ, ಗಂಡ- ಹೆಂಡತಿ ನಡುವೆ ಬಿರುಕು ಮೂಡಿದೆ. ಮನೆ ಎರಡು ಭಾಗವಾಗಿದೆ. ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಅಚಾನಕ್​ ಆಗಿ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಆದರೆ ಅಲ್ಲಿ ಪರದಾಡುತ್ತಿದ್ದಾಳೆ. 

ಮೆಟ್ಟಿಲ ಮೇಲಿನಿಂದ ಸೀರಿಯಲ್​ ತಾರೆಯರು ಉರುಳಿ ಉರುಳಿ ಬೀಳುವ ದೃಶ್ಯ ಶೂಟ್​ ಮಾಡೋದು ಹೀಗೆ ನೋಡಿ...

click me!