
ಬೆಂಗಳೂರು: ಬಿಗ್‌ಬಾಸ್ ರಿಯಾಲಿಟಿ ಶೋ ಮುಕ್ತಾಯವಾಗಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ನೆಟ್ಟಿಗರು ತಮಾಷೆಯಾಗಿ ವಿಡಿಯೋಗಳನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಬಿಗ್‌ಬಾಸ್ ಯಶಸ್ವಿಯಾಗಿ 11 ಸೀಸನ್‌ಗಳನ್ನು ಪೂರೈಸಿದೆ. ವರ್ಷದಿಂದ ವರ್ಷಕ್ಕೆ ಶೋ ಜನಪ್ರಿಯತೆಯೂ ಹೆಚ್ಚಾಗುತ್ತಿದೆ. 11ನೇ ಸೀಸನ್‌ನ ಬಿಗ್‌ಬಾಸ್ ಶೋ ವಿನ್ನರ್ ಹನುಮಂತ 5 ಕೋಟಿಗೂ ಅಧಿಕ ಮತಗಳನ್ನು ಪಡೆದುಕೊಂಡಿದ್ದರು. 11ನೇ ಸೀಸನ್ ಟಾಪ್ 2 ಸ್ಥಾನದಲ್ಲಿ ಗಾಯಕ ಹನುಮಂತ ಮತ್ತು ನಟ ತ್ರಿವಿಕ್ರಂ ನಿಂತಿದ್ದರು.
ಬಿಗ್‌ಬಾಸ್ ನಿರೂಪಕ, ನಟ ಸುದೀಪ್ ಅವರು ವಿನ್ನರ್ ಹನುಮಂತ ಕೈಯನ್ನು ಮೇಲಕ್ಕೆತ್ತುತ್ತಿದ್ದಂತೆ ಇನ್ನೋರ್ವ ಸ್ಪರ್ಧಿ ಭವ್ಯ ಗೌಡರ ಮುಖದ ರಿಯಾಕ್ಷನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕ್ಲಿಪ್‌ಗೆ ಮತ್ತೋರ್ವ ಬಿಗ್‌ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಉರುಡುಗ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಯಾಕೆ ಈ ಹೋಲಿಕೆ ಎಂಬುದರ ಕುರಿತ ವರದಿ ಇಲ್ಲಿದೆ.
ಬಿಗ್‌ಬಾಸ್ ಮನೆ ಅಂದ್ರೆ ಅಲ್ಲೊಂದು ಕ್ಯೂಟ್ ಲವ್ ಸ್ಟೋರಿ ಇರಲೇಬೇಕು. ಈ ಬಾರಿಯ 11ನೇ ಸೀಸನ್‌ನಲ್ಲಿ ತ್ರಿವಿಕ್ರಮ್ ಮತ್ತು ಭವ್ಯ ಗೌಡ ಕ್ಯೂಟ್ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಶೋನಲ್ಲಿಯೇ ಭವ್ಯಾ ಗೌಡಗೆ ತ್ರಿವಿಕ್ರಂ ಪ್ರಪೋಸ್ ಮಾಡಿರೋದನ್ನು ಮತ್ತೋರ್ವ ಸ್ಪರ್ಧಿ ಗೋಲ್ಡ್ ಸುರೇಶ್ ಬಹಿರಂಗಪಡಿಸಿದ್ದರು. ಪ್ರಪೋಸ್ ಮಾಡಿರೋದನ್ನು ಸಹ ಇಬ್ಬರು ಒಪ್ಪಿಕೊಂಡಿದ್ದರು. ಆದರೆ ಶೋನಿಂದ ಹೊರ ಬರುತ್ತಿದ್ದಂತೆ, ಭವ್ಯ ತುಂಬಾ ಚಿಕ್ಕವಳು ಎಂದು ತ್ರಿವಿಕ್ರಂ ಶಾಕಿಂಗ್ ಹೇಳಿಕೆಯನ್ನು ನೀಡಿದ್ದರು. ಫಿನಾಲೆ ವೇದಿಕೆಯಲ್ಲಿಯೂ ತ್ರಿವಿಕ್ರಂ ಗೆಲ್ಲಬೇಕೆಂದು ಭವ್ಯಾ ಆಸೆಪಟ್ಟಿದ್ದರು. ಆದ್ರೆ ಹನುಮಂತ ಜಯಶಾಲಿಯಾದರು. ಇದರಿಂದ ಭವ್ಯಾ ಗೌಡ ಮುಖಭಾವದ ಮೂಲಕ ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಬಿಗ್‌ಬಾಸ್ ಗೆದ್ದ ಹನುಮಂತಗೆ ಸಿಕ್ಕಿದ್ದು ₹50 ಲಕ್ಷ ಮಾತ್ರವಲ್ಲ, ನಿಜವಾಗಿಯೂ ಸಿಕ್ಕಿದ್ದೆಷ್ಟು ಮೊತ್ತ?
ಬಿಗ್‌ಗಬಾಸ್ 8ನೇ ಸೀಸನ್‌ನಲ್ಲಿ ನಟಿ ದಿವ್ಯಾ ಉರುಡುಗ ಮತ್ತು ಬೈಕರ್ ಅರವಿಂದ್ ಕೆಪಿ ಅವರ ಕ್ಯೂಟ್ ಲವ್ ಸ್ಟೋರಿ ಎಲ್ಲರ ಗಮನ ಸೆಳೆದಿತ್ತು. ಈ ಸೀಸನ್‌ನಲ್ಲಿ ಅರವಿಂದ್ ಮತ್ತು ಮಂಜು ಪಾವಗಡ ಟಾಪ್ ಟು ಸ್ಥಾನಕ್ಕೆ ಬಂದು ನಟ ಸುದೀಪ್ ಅಕ್ಕಪಕ್ಕ ನಿಂತಿದ್ದರು. ಅರವಿಂದ್ ಗೆಲ್ಲಬೇಕೆಂದು ದಿವ್ಯಾ ಅವರ ಆಸೆಯಾಗಿತ್ತು. ಆದ್ರೆ ಹಾಸ್ಯ ಕಲಾವಿದ ಮಂಜು ಪಾವಗಡ ಸೀಸನ್ 8ರ ವಿಜೇತರಾದರು. ಮಂಜು ಪಾವಗಡ ಅವರ ಕೈ ಮೇಲೆತ್ತುತ್ತಿದ್ದಂತೆ ದಿವ್ಯಾ ಬೇಸರಗೊಂಡಿದ್ದರು. ಸದ್ಯ ದಿವ್ಯಾ ಉರುಡುಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುನ ನಿನಗಾಗಿ ಧಾರಾವಾಹಿಯಲ್ಲಿ ರಚನಾ ಆಗಿ ನಟಿಸುತ್ತಿದ್ದಾರೆ. ಇಂದಿಗೂ ದಿವ್ಯಾ ಮತ್ತು ಅರವಿಂದ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಇದೀಗ ನೆಟ್ಟಿಗರು ದಿವ್ಯಾ ಉರುಡುಗ ಮತ್ತು ಭವ್ಯಾ ಗೌಡ ಅವರ ಫೋಟೋ ಕೊಲ್ಯಾಜ್ ಮಾಡಿ ಇಬ್ಬರ ಪ್ರಿಯಕರ ಗೆಲಿಲ್ಲ ಎಂಬ ಶೀರ್ಷಿಕೆಯಡಿಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಂತೆಯೇ ಸೀಸನ್ 8 ಮತ್ತು 11ರ ವಿನ್ನಿಂಗ್ ಕ್ಲಿಪ್ ವಿಡಿಯೋಗಳು ಜೊತೆಯಾಗಿ ಸೇರಿಸಿ ವೈರಲ್ ಮಾಡಲಾಗುತ್ತಿದೆ. ಈ ವಿಡಿಯೋಗೆ ಕಮೆಂಟ್ ಮಾಡಿರೋ ನೆಟ್ಟಿಗರು, ನಿಮ್ಮಿಬ್ಬರಿಗಿಂತ ನಿವೇದಿತಾ ಗೌಡ ಲಕ್ಕಿ. ಅಂದು ಪ್ರಿಯಕರನಾಗಿದ್ದ ಚಂದನ್ ಶೆಟ್ಟು ವಿನ್ ಆಗಿದ್ದರು ಎಂದು ಕಮೆಂಟ್ ಮಾಡಿದ್ದರು. ಬಿಗ್‌ಬಾಸ್ ಶೋನಿಂದ ಹೊರ ಬಂದ ನಂತರ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅದ್ಧೂರಿಯಾಗಿ ಮದುವೆಯಾಗಿದ್ದರು. ನಂತರ ಸಂಸಾರದಲ್ಲಿ ಬಿರುಕು ಮೂಡಿದ್ದರಿಂದ ಪರಸ್ಪರ ಒಪ್ಪಿಗೆ ಮೇರೆ ಡಿವೋರ್ಸ್ ಪಡೆದು ಬೇರೆಯಾಗಿದ್ದಾರೆ.
ಇದನ್ನೂ ಓದಿ: BBK 11: ಭವ್ಯಾಗೊಂದೇ ಅಲ್ಲ, ಅನುಗೆ ಐ ಲವ್ ಯು ಅಂದಿದ್ದೆ: ನಟ ತ್ರಿವಿಕ್ರಮ್ ಮುಕ್ತ ಮಾತು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.