ಆಸ್ಪತ್ರೆಗೆ ದಾಖಲಾಗಿರೋ ಗೋಲ್ಡ್ ಸುರೇಶ್ ತಲೆ ಸವರಿ ಧೈರ್ಯ ಹೇಳಿದ ಚೈತ್ರಾ ಕುಂದಾಪುರ

Published : Feb 04, 2025, 10:34 AM ISTUpdated : Feb 04, 2025, 11:06 AM IST
ಆಸ್ಪತ್ರೆಗೆ ದಾಖಲಾಗಿರೋ ಗೋಲ್ಡ್ ಸುರೇಶ್ ತಲೆ ಸವರಿ ಧೈರ್ಯ ಹೇಳಿದ ಚೈತ್ರಾ ಕುಂದಾಪುರ

ಸಾರಾಂಶ

ಬಿಗ್‌ಬಾಸ್‌ ಸ್ಪರ್ಧಿ ಗೋಲ್ಡ್ ಸುರೇಶ್ ಕಾಲು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಚೈತ್ರ ಕುಂದಾಪುರ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಒಂದು ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸುರೇಶ್ ಬಿಗ್‌ಬಾಸ್‌ನಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದರು.

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಗೋಲ್ಡ್ ಸುರೇಶ್ (Bigg Boss Kannada season 11 contestant Gold Suresh) ಆಸ್ಪತ್ರೆ ಸೇರಿರೋದು ನಿಮ್ಗೆಲ್ಲ ಗೊತ್ತೇ ಇದೆ.  ಕಾಲು ನೋವಿ (leg pai)ನಿಂದ ಬಳಲುತ್ತಿರುವ ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಗೋಲ್ಡ್ ಸುರೇಶ್ ಕಾಲಿನ ಆಪರೇಷನ್ (operation) ನಡೆಯಲಿದೆ. ಆ ನಂತ್ರ ಸುರೇಶ್ ಚೇತರಿಸಿಕೊಳ್ಳಲಿದ್ದಾರೆಂದು ವೈದ್ಯರು ಭರವಸೆ ನೀಡಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಕನ್ನಡ ಸೀನಸ್ 11ರ ಸ್ಪರ್ಧಿಯಾಗಿದ್ದ ಚೈತ್ರ ಕುಂದಾಪುರ (Chaitra Kundapur), ಸುರೇಶ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸುರೇಶ್ ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದ ಚೈತ್ರ, ಅವರ ಆರೋಗ್ಯ ವಿಚಾರಿಸಿದ್ರು. ಜೊತೆಗೆ ಅವರ ತಲೆ ಸವರಿ ಧೈರ್ಯ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸುರೇಶ್ ಆಸ್ಪತ್ರೆ ಬೆಡ್ ನಲ್ಲಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿತ್ತು. ಈಗ ಚೈತ್ರ ಜೊತೆ ಮಾತನಾಡ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್, ಬೇಗ ಹುಷಾರಾಗಿ ಬನ್ನಿ ಅಂತ ಕಮೆಂಟ್ ಹಾಕಿದ್ದಾರೆ. ಅಲ್ಲದೆ ಚೈತ್ರ, ಅಮ್ಮನ ಹೃದಯ ಹೊಂದಿದ್ದಾರೆಂದು ಬರೆದಿದ್ದಾರೆ. 

BBK 11: ತ್ರಿವಿಕ್ರಮ್‌ ಪ್ರೇಮ ನಿವೇದನೆಗೆ ಭವ್ಯಾ ಗೌಡ ಉತ್ತರ ಏನಾಗಿತ್ತು? ಗೋಲ್ಡ್‌ ಸುರೇಶ್‌ ಬಳಿ ಸತ್ಯ ಬಿಚ್ಚಿಟ್ಟ ನಟಿ!

ಬಿಗ್ ಬಾಸ್ ಮನೆಯಲ್ಲಿ ಸುರೇಶ್ ಕಾಲಿಗಾದ ನೋವು ಕಡಿಮೆ ಆಗಿಲ್ಲ. ಬಿಗ್ ಬಾಸ್ ಕನ್ನಡ 11ರ ಸೀಸನ್ ಗೆ ಮೈ ತುಂಬ ಬಂಗಾರ ಹಾಕಿಕೊಂಡು ಬಂದವರು ಸುರೇಶ್. ಅವರು ಧರಿಸುವ ಬಂಗಾರದಿಂದಲೇ ಜನರು ಅವರನ್ನು ಗೋಲ್ಡ್ ಸುರೇಶ್ ಅಂತ ಕರೀತಾರೆ. ಉತ್ತರ ಕರ್ನಾಟಕದ ಗೋಲ್ಡ್ ಸುರೇಶ್ ಬಿಗ್ ಬಾಸ್ ಶೋನಲ್ಲಿ ಟಾಸ್ಕ್ ಆಡುವ ವೇಳೆ ಕಾಲಿಗೆ ಗಾಯ ಮಾಡ್ಕೊಂಡಿದ್ದರು. ಡ್ರಮ್ ನಲ್ಲಿ ನೀರು ತುಂಬಿ ಅದನ್ನು ರಕ್ಷಿಸುವ ಟಾಸ್ಕ್ ಅದಾಗಿತ್ತು. ನೀರು ತುಂಬಿದ್ದ ಡ್ರಮ್ ಸುರೇಶ್ ಕಾಲ್ಮೇಲೆ ಬಿದ್ದಿತ್ತು. ನೋವು ತಾಳಲಾರದೆ ಅವರು ಚಿಕಿತ್ಸೆ ಪಡೆದಿದ್ದರು. ವೈದ್ಯರು ರೆಸ್ಟ್ ಹೇಳಿದ್ದ ಕಾರಣ ಸುರೇಶ್ ಕೆಲ ಟಾಸ್ಕ್ ಆಡಿರಲಿಲ್ಲ. ಆದ್ರೆ ನಂತ್ರ ಉತ್ತಮ ಪ್ರದರ್ಶನ ನೀಡಿ ಕ್ಯಾಪ್ಟನ್ ಕೂಡ ಆಗಿದ್ರು. ನೋವಿನ ಮಧ್ಯೆ ಆಟ ಆಡಿದ್ರೂ ಗೋಲ್ಡನ್ ಸುರೇಶ್ ಗೆ ತುಂಬಾ ದಿನ ಬಿಗ್ ಬಾಸ್ ಮನೆಯಲ್ಲಿ ಇರೋಕೆ ಸಾಧ್ಯ ಆಗ್ಲಿಲ್ಲ. ಬ್ಯುಸಿನೆಸ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರು ಮನೆಗೆ ಬಂದಿದ್ದರು. ಬಿಗ್ ಬಾಸ್ ಮನೆಗೆ ಸುರೇಶ್ ಎಂಟ್ರಿಯಂತೆ ಅವರು ವಾಪಸ್ ಹೋಗಿದ್ದ ಕೂಡ ಫ್ಯಾನ್ಸ್ ಗೆ ಶಾಕ್ ತಂದಿತ್ತು. ಅವರು ವಾಪಸ್ ಬರ್ತಿದ್ದಂತೆ ಅನೇಕ ವದಂತಿ ಹಬ್ಬಿತ್ತು. ಆದ್ರೆ ಎಲ್ಲರದಕ್ಕೂ ಬ್ರೇಕ್ ಹಾಕಿದ್ದ ಸುರೇಶ್, ಏನಾಗಿತ್ತು ಎಂಬುದನ್ನು ಫ್ಯಾನ್ಸ್ ಮುಂದೆ ಹೇಳಿದ್ದರು. 

25ನೇ ವಯಸ್ಸಿಗೆ ಮನೆ ಕಟ್ಟಿ ಗೃಹ ಪ್ರವೇಶ ಮಾಡಿದ ʼಕಥೆಯೊಂದು ಶುರುವಾಗಿದೆʼ ನಟಿ ಅಕ್ಷತಾ ದೇಶಪಾಂಡೆ; Photos ಇಲ್ಲಿವೆ!

ಆದ್ರೆ ಆ ಕಾಲಿನ ನೋವು ಸಂಪೂರ್ಣ ಕಡಿಮೆ ಆಗಿರಲಿಲ್ಲ. ಈಗ ಮತ್ತೆ ನೋವು ಕಾಣಿಸಿಕೊಂಡಿದೆ. ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಶಸ್ತ್ರಚಿಕಿತ್ಸೆ ನಡೆಯಲಿದ್ದು, ಇನ್ನೆರಡು ದಿನ ಅವರು ಆಸ್ಪತ್ರೆಯಲ್ಲಿರಲಿದ್ದಾರೆ. ಆದ್ರೆ ಒಂದು ತಿಂಗಳು ವಿಶ್ರಾಂತಿ ಅವಶ್ಯಕ ಎಂದು ವೈದ್ಯರು ಸೂಚಿಸಿದ್ದಾರೆ. ಗೋಲ್ಡ್ ಸುರೇಶ್ ಬೆಳಗಾವಿಯ ಅಥಣಿ ತಾಲೂಕಿನವರು. ಕತ್ತಿಗೆ ಒಂದಿಷ್ಟು ಚೈನ್, ಕೈಗೆ ಬಂಗಾರದ ಬ್ರೇಸ್ಲೈಟ್ ಸೇರಿದಂತೆ ಇಡೀ ಮೈಗೆ ಬಂಗಾರ ಹಾಕಿಕೊಂಡು ತಿರುಗಾಡುವ ಸುರೇಶ್, ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಸಲಹೆ ನಂತ್ರ ತಮ್ಮ ಮೈಮೇಲಿದ್ದ ಬಂಗಾರವನ್ನು ಕಡಿಮೆ ಮಾಡಿದ್ದರು. ಸುರೇಶ್, ಕ್ರಿಯೇಟಿವ್ ಇಂಟಿರಿಯರ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!