ಸತ್ಯ+ ಪಾರು= ಬ್ರಹ್ಮಗಂಟು! ಹಳಸಲು ಕಥೆಯನ್ನೇ ಎಷ್ಟಂತ ಕೊಡ್ತೀರಾ? ಸ್ಟೋರಿನೇ ಸಿಗಲ್ವಾ ಕೇಳ್ತಿದ್ದಾರೆ ನೆಟ್ಟಿಗರು!

Published : Aug 16, 2024, 03:07 PM IST
ಸತ್ಯ+ ಪಾರು= ಬ್ರಹ್ಮಗಂಟು! ಹಳಸಲು ಕಥೆಯನ್ನೇ ಎಷ್ಟಂತ ಕೊಡ್ತೀರಾ? ಸ್ಟೋರಿನೇ ಸಿಗಲ್ವಾ ಕೇಳ್ತಿದ್ದಾರೆ ನೆಟ್ಟಿಗರು!

ಸಾರಾಂಶ

ಬ್ರಹ್ಮಗಂಟು ಸೀರಿಯಲ್​ ಹಲವು ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಹೊತ್ತಿನಲ್ಲಿಯೇ ಈ ಸೀರಿಯಲ್​ ಸತ್ಯ ಮತ್ತು ಪಾರು ಸೀರಿಯಲ್​ನ ಮಿಕ್ಸಿಂಗ್​ ಎಂದು ನೆಟ್ಟಿಗರು ತಗಾದೆ ತೆಗೆಯುತ್ತಿದ್ದಾರೆ.   

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಬ್ರಹ್ಮಗಂಟು ಸೀರಿಯಲ್​ಗೆ ಅಪಾರ ಪ್ರೇಕ್ಷಕ ವರ್ಗವಿದೆ. ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್​.

ಆದರೆ ಈ ಸೀರಿಯಲ್​ ತೆಲಗುವಿನ ಪಡಮಟಿ ಸಂಧ್ಯಾರಾಗಂ ರಿಮೇಕ್​ ಎಂದು ಹಲವರು ಹೇಳುತ್ತಿದ್ದಾರೆ. ಸ್ವಂತ ಸೀರಿಯಲ್​ ಯಾಕೆ ಮಾಡ್ತಿಲ್ಲ ಅಂತ ಕೆಲವರು ಕೇಳ್ತಿರೋ ಹೊತ್ತಿನಲ್ಲಿಯೇ ಈ ಸೀರಿಯಲ್​ ವೀಕ್ಷಕರು ಇದು ಇನ್ನೊಂದು ಸತ್ಯ ಸೀರಿಯಲ್​ ಎನ್ನುತ್ತಿದ್ದಾರೆ. ಆ ಧಾರಾವಾಹಿಯಲ್ಲಿಯೂ ಅಕ್ಕ ದಿವ್ಯಾ ಮನೆಬಿಟ್ಟು ಹೋದ ಕಾರಣ, ಮನೆ ಮರ್ಯಾದೆ ಉಳಿಸಲು ಸತ್ಯ ಮದ್ವೆಯಾದಳು, ಇಲ್ಲಿ ಕೂಡ ದೀಪಾ ಮದ್ವೆಯಾಗಿದ್ದಾಳೆ. ಅಲ್ಲಿ ಸತ್ಯ ಗಂಡುಬೀರಿಯಂತೆ ತೋರಿದ್ರೆ, ಇಲ್ಲಿ ದೀಪಾಳ ಸೌಂದರ್ಯವನ್ನು ತೆಗಳುವ ರೀತಿ ತೋರಿಸಲಾಗಿದೆ. ಅಲ್ಲಿ ಸತ್ಯ ಪ್ರತಿಕ್ಷಣವೂ ತನ್ನತನ ಬಿಂಬಿಸಿಕೊಳ್ಳಲು, ಎಲ್ಲಾ ನೋವುಗಳನ್ನು ನುಂಗಿ ಬದುಕುತ್ತಿದ್ದಂತೆಯೇ ಇಲ್ಲಿ ದೀಪಾ ಬದುಕುತ್ತಿದ್ದಾಳೆ. ಗಂಡನ ಮನೆಯ ಕಷ್ಟ ತವರಿಗೆ ಹೇಳಿಕೊಳ್ಳುತ್ತಿಲ್ಲ. ಸತ್ಯಳನ್ನು ಎಲ್ಲರೂ ಒಪ್ಪಿಕೊಳ್ಳುವಂತೆ  ಮುಂದೊಂದು ದಿನ ದೀಪಾಳನ್ನು ಒಪ್ಪಿಕೊಳ್ಳುವುದರೊಂದಿಗೆ ಸೀರಿಯಲ್​  ಮುಗಿಯುತ್ತೆ. ಮತ್ತದೇ ಹಳೇ ಕಥೆನಾ ಎಂದು ಪ್ರಶ್ನಿಸುತ್ತಿದ್ದಾರೆ.

ಡಾಕ್ಟರ್​ ಹೆಸರು ಕೇಳ್ತಿದ್ದಂತೆಯೇ ಕೈಕೊಯ್ದುಕೊಂಡ ಸೀತಾ! ವರಮಹಾಲಕ್ಷ್ಮಿ ಹಬ್ಬದಂದೇ ಸಿಹಿಯ ಗುಟ್ಟು ರಟ್ಟು?

ಅದೇ ಇನ್ನೊಂದೆಡೆ ಸದ್ಯ ಸೀರಿಯಲ್​ಗೆ ಟ್ವಿಸ್ಟ್​ ಸಿಕ್ಕಿದ್ದು, ಸೌಂದರ್ಯ ದೀಪಾಳಿಗೆ ನಿನ್ನನ್ನು ಈ ಮನೆಯ ಸೊಸೆ ಎಂದು ಒಪ್ಪಿಕೊಳ್ಳಬೇಕಾದರೆ ಕೆಲವೊಂದು ಜವಾಬ್ದಾರಿ ಕೊಡುತ್ತೇನೆ. ಅದನ್ನು ನಿಭಾಯಿಸಬೇಕು ಎನ್ನುತ್ತಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ನೆಟ್ಟಿಗರು, ಸತ್ಯ ಸೀರಿಯಲ್​ಗೆ  ಪಾರು ಸೀರಿಯಲ್​  ಮಿಕ್ಸ್​ ಮಾಡಲಾಗಿದೆ ಎನ್ನುತ್ತಿದ್ದಾರೆ.ಪಾರು ಸೀರಿಯಲ್​ನಲ್ಲಿಯೂ ಅತ್ತೆ ಪಾರುವನ್ನು ಒಪ್ಪಿಕೊಂಡಿರುವುದಿಲ್ಲ. ಹಾಗೆ ನೋಡಿದರೆ ಇಲ್ಲಿ ಕೂಡ ಪಾರು ಕೆಲಸದಾಕೆಯಾಗಿದ್ದರಿಂದ ಅತ್ತೆಗೆ ಇಷ್ಟವಿರುವುದಿಲ್ಲ. ಕೊನೆಗೆ ಕೆಲವೊಂದು ಜವಾಬ್ದಾರಿ ಕೊಡುತ್ತಾಳೆ. ತಮ್ಮ ಮನೆತನಕ್ಕೆ ಹೊಂದಿಕೊಳ್ಳುವುದಿಲ್ಲ ಎನ್ನುವ ಕಾರಣಕ್ಕೆ ಜವಾಬ್ದಾರಿ ನೀಡಲಾಗಿರುತ್ತದೆ. ಆದರೆ ಅದರಲ್ಲಿ ಪಾರು ಕೊನೆಗೆ ಗೆಲ್ಲುತ್ತಾಳೆ. ಇಲ್ಲೂ ದೀಪಾಳದ್ದು ಅದೇ ಕಥೆ. ಹಳಸಲು ಕಥೆ ತಂದು ಹೊಸ ಸೀರಿಯಲ್​ ಹೆಸರು ಯಾಕೆ ಕೇಳ್ತಿದ್ದಾರೆ ನೆಟ್ಟಿಗರು. 

ಇನ್ನು ಬ್ರಹ್ಮಗಂಟು ಕುರಿತು ಹೇಳುವುದಾದರೆ,  ಇದರಲ್ಲಿ ಅಕ್ಕನದ್ದು ಬಾಹ್ಯ ಸೌಂದರ್ಯ. ಆದರೆ ದೀಪಾಳದ್ದು ಆಂತರಿಕ ಸೌಂದರ್ಯ. ಅಕ್ಕನನ್ನು ಮದುವೆಯಾಗಬೇಕಿದ್ದ ನಾಯಕ, ಅದ್ಯಾವುದೋ ಗಳಿಗೆಯಲ್ಲಿ ತಂಗಿ ದೀಪಾಳನ್ನು ಮದುವೆಯಾಗುವ ಸ್ಥಿತಿ ಬರುತ್ತದೆ. ಆಕೆ ಸೌಂದರ್ಯವತಿ ಅಲ್ಲ ಎನ್ನುವ ಒಂದೇ ಕಾರಣಕ್ಕೆ ಗಂಡ ಸೇರಿದಂತೆ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗುತ್ತಿದ್ದಾಳೆ. ಇದೀಗ ಆಕೆಯನ್ನು ಮನೆಯಿಂದ ಹೊರಹಾಕುವಷ್ಟರ ಮಟ್ಟಿಗೆ ಈ ಸೀರಿಯಲ್​ನಲ್ಲಿ ಅತಿರೇಕ ಎನ್ನಿಸುವಂತೆ ತೋರಿಸಲಾಗಿದೆ. ದೀಪಾಳಿಗೆ ಮನೆಯವರಿಂದ ಸಿಗುವ ನೋವುಗಳು ಅಷ್ಟಿಷ್ಟಲ್ಲ. ಚಿತ್ರಹಿಂಸೆಯನ್ನೂ ನೀಡಲಾಗುತ್ತಿದೆ. ಗಂಡನಿಂದಲೂ ತಿರಸ್ಕಾರ. ಇದಕ್ಕೆ ಏಕೈಕ ಕಾರಣ ಆಕೆ ಸುಂದರಿಯಲ್ಲ ಎನ್ನುವುದು! ಎಂಥ ವಿಪರ್ಯಾಸ ಎಂದು ಸೀರಿಯಲ್​ನಲ್ಲಿ ಎನ್ನಿಸಿದರೂ ಅದೆಷ್ಟೋ ಹೆಣ್ಣುಮಕ್ಕಳು ಇಂಥ ನರಕಯಾತನೆ ಅನುಭವಿಸುತ್ತಿರುವ ಸಾಕಷ್ಟು ಘಟನೆಗಳು ನಿಜ ಜೀವನದಲ್ಲಿಯೂ ನಡೆಯುತ್ತಿವೆ ಎನ್ನುವುದು ಅಷ್ಟೇ ಸತ್ಯ. 

ಇದು ಗುಂಡಿಗೆ ಗಟ್ಟಿ ಇದ್ದವರಿಗೆ ಮಾತ್ರ! ಆಲಿಯಾ ಭಟ್​ ನಗು ಕೇಳುವ ತಾಕತ್ತು ನಿಮಗಿದ್ಯಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?