ಡಾಕ್ಟರ್​ ಹೆಸರು ಕೇಳ್ತಿದ್ದಂತೆಯೇ ಕೈಕೊಯ್ದುಕೊಂಡ ಸೀತಾ! ವರಮಹಾಲಕ್ಷ್ಮಿ ಹಬ್ಬದಂದೇ ಸಿಹಿಯ ಗುಟ್ಟು ರಟ್ಟು?

By Suchethana D  |  First Published Aug 16, 2024, 11:55 AM IST

ಸಿಹಿ ಮತ್ತು ಸೀತಾಗೆ ಇರುವ ಸಂಬಂಧ ಇನ್ನೂ ಗುಟ್ಟಾಗಿಯೇ ಉಳಿದಿದೆ. ಆದರೆ ವರಮಹಾಲಕ್ಷ್ಮಿ ಹಬ್ಬದಂದೇ ಈ ಗುಟ್ಟು ರಟ್ಟಾಗಿ ಹೋಗುತ್ತಾ? ಏನಿದು ಟ್ವಿಸ್ಟ್​?
 


ಸೀತಾ ಮತ್ತು ಸಿಹಿಯ ಗುಟ್ಟು ಇನ್ನು ಗುಟ್ಟಾಗಿಯೇ ಉಳಿದಿದೆ. ಸಿಹಿ ಸೀತಾಳ ಮಗಳು ಹೌದೋ, ಅಲ್ಲವೋ ಎನ್ನುವ ಬಗ್ಗೆ ಇದುವರೆಗೂ ಬಹಿರಂಗಗೊಳಿಸಲಿಲ್ಲ. ಈ ಬಗ್ಗೆ ರಾಮ್​ಗೆ ಸೀತಾ ಹಲವಾರು ಬಾರಿ ಹೇಳುವ ಪ್ರಯತ್ನ ಮಾಡಿದ್ದರೂ ಅದನ್ನು ರಾಮ್​ ಕೇಳಿಸಿಕೊಂಡಿರಲಿಲ್ಲ. ನಿಮ್ಮ ಇತಿಹಾಸವೆಲ್ಲಾ ನನಗೆ ಬೇಡ ಎಂದೇ ಹೇಳುತ್ತಾ ಬಂದಿದ್ದಾನೆ. ಆದ್ದರಿಂದ ಸಿಹಿ ಮತ್ತು ಸೀತಾಳ ಗುಟ್ಟು, ಸಿಹಿಯ ಹುಟ್ಟು, ಆಕೆಯ ನಿಜವಾದ ಅಪ್ಪ... ಇವೆಲ್ಲವೂ ಇನ್ನು ನಿಗೂಢವಾಗಿಯೇ ಉಳಿದಿದೆ. ಜ್ಯೋತಿಷಿಗಳು ಮನೆಗೆ ಬಂದು ಸಿಹಿಯ ಜಾತಕ ನೋಡುವಾಗಲೂ ಸೀತಾ ಗಲಿಬಿಲಿಯಿಂದ ಸಿಹಿ ನನ್ನ ಮಗಳೇ ನನ್ನ ಮಗಳೇ ಎಂದಿದ್ದು ಹೇಳುವುದನ್ನು ಕೇಳಿದರೆ ಸಿಹಿ ಸೀತಾಳ ಮಗಳಲ್ಲ ಎನ್ನುವುದು ಸಾಬೀತಾದಂತಿದೆ. ಆದರೆ ಇದೀಗ ಗುಟ್ಟು ರಟ್ಟಾಗುವ ಟೈಂ ಬಂದೇ ಬಿಟ್ಟಿದೆ!

ಹೌದು. ಇಂದು ವರಮಹಾಲಕ್ಷ್ಮಿ ಹಬ್ಬ. ಇಂದಿನ ಸಂಚಿಕೆಯಲ್ಲಿ ಸಿಹಿ ಮತ್ತು ಸೀತಾಳ ಗುಟ್ಟು ರಟ್ಟಾಗುವ ಸಂಕೇತ ಸಿಕ್ಕಿದೆ. ಅಷ್ಟಕ್ಕೂ ಇದಾಗಲೇ ಸೀತಾಳ ಹಿನ್ನೆಲೆ, ಸಿಹಿಯ ಅಪ್ಪನ ಬಗ್ಗೆ ತಿಳಿದುಕೊಳ್ಳಲು ಭಾರ್ಗವಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾಳೆ. ರುದ್ರಪ್ರತಾಪ್​ನನ್ನು ಈ ಕೆಲಸಕ್ಕೆ ಬಿಟ್ಟಿದ್ದಾಳೆ. ರಾಮ್​ ಮತ್ತು ಅಶೋಕ್​ನನ್ನು ಕೊಲ್ಲುವ ಪ್ರಯತ್ನದಲ್ಲಿರೋ ರುದ್ರಪ್ರತಾಪ್​ನಿಗೆ ಅದಕ್ಕೆ ತಾನು ಸಾಥ್​ ನೀಡುವುದಾಗಿ ಹೇಳಿರುವ ಭಾರ್ಗವಿ, ಸೀತಾಳ ರಹಸ್ಯ ತಿಳಿದುಕೊಳ್ಳು ಕಾರ್ಯ ವಹಿಸಿಕೊಟ್ಟಿದ್ದಾಳೆ. ಹಾಗೆ ಮಾಡಿದರೆ ನಾನು ನಿನಗೆ ಸಾಥ್​ ನೀಡುವುದಾಗಿ ಹೇಳಿದ್ದಾಳೆ. 

Tap to resize

Latest Videos

undefined

ಸಾಕ್ಷಾತ್​ ಲಕ್ಷ್ಮಿ ಲುಕ್​ನಲ್ಲಿ ಹಳೆಯ ಶಾರ್ವರಿ: ಯಾಕ್​ ಮೇಡಂ ಮೋಸ ಮಾಡಿದ್ರಿ ಕೇಳ್ತಿದ್ದಾರೆ ಫ್ಯಾನ್ಸ್​

ಅದೇ ಇನ್ನೊಂದೆಡೆ, ಚಾಂದನಿಗೂ ಇದೇ ಕೆಲಸ ಹಚ್ಚಿದ್ದಾಳೆ ಭಾರ್ಗವಿ. ಚಾಂದನಿಯ ಕುತಂತ್ರದ ಕಾರಣ, ರಾಮ್​ ಅವಳನ್ನು ಕೆಲಸದಿಂದ ತೆಗೆದಿದ್ದಾನೆ. ಆದರೆ ಇದಕ್ಕೆ ಸೀತಾ ಕಾರಣಳೇ ಅಲ್ಲ. ಅಸಲಿಗೆ ಅವಳು ಚಾಂದನಿ ವಿಷಯಕ್ಕೆ ಹೋದವಳೇ ಅಲ್ಲ. ಆದರೆ ಭಾರ್ಗವಿಯ ಮಾತು ಕೇಳಿರುವ ಚಾಂದನಿ ತನ್ನ ಕೆಲಸ ಹೋಗಲು ಸೀತಾ ಕಾರಣ ಎಂದು ಆಕೆಯನ್ನು ಮುಗಿಸುವ ಪ್ಲ್ಯಾನ್​ ಮಾಡಿದ್ದಾಳೆ. ಇದಕ್ಕೆ ಕುತಂತ್ರಿ ಭಾರ್ಗವಿ ಚಾಂದನಿಗೆ ಸಾಥ್​  ಕೊಟ್ಟು, ಸೀತಾಳ ಹಿನ್ನೆಲೆ ಕೆದಕುವಂತೆ ಹೇಳಿದ್ದಾಳೆ. ಚಾಂದನಿ ಕೂಡ ಈ ಕಾರ್ಯದಲ್ಲಿ ತೊಡಗಿದ್ದು, ಕೆಲವೊಂದು ಕ್ಲೂ ಅವಳಿಗೆ ಸಿಕ್ಕಿದೆ.

ಇದರ ನಡುವೆಯೇ, ಗರ್ಭಿಣಿಯಾಗುವ ಆಸೆ ಹೊತ್ತಿರೋ ಪ್ರಿಯಾ, ಸೀತಾಳ ಮನೆಗೆ ಬಂದಿದ್ದಾಳೆ. ಹಿಂದೆ ತಾವು ಗರ್ಭಿಣಿ ಎಂದು ನಂಬಿಕೊಂಡಿದ್ದಳು. ಆದರೆ ಅದು ಹುಸಿಯಾಗಿತ್ತು. ಈಗ ಮತ್ತೆ ತಾನು ಗರ್ಭಿಣಿ ಎನ್ನುವ ಅನಿಸಿಕೆ ಅವಳಿಗೆ. ಅದನ್ನೇ ಸೀತಾಳ ಬಳಿ ಹೇಳಿಕೊಳ್ಳುತ್ತಿದ್ದಾಳೆ. ನಾನು ಗರ್ಭಿಣಿ ಎಂದೇ ಎನ್ನಿಸುತ್ತಿದೆ. ಈ ಬಾರಿ ಇದು ಕನ್​ಫರ್ಮ್​. ಅದರೂ ಆಸ್ಪತ್ರೆಯಲ್ಲಿ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು, ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಿದ್ದಂತೆಯೇ, ಸೀತಾಳ ಹಿನ್ನೆಲೆಯ ಕ್ಲೂ ಪಡೆದುಕೊಂಡಿರೋ ಭಾರ್ಗವಿ ಗಂಡ ಡಾ.ಅನಂತಲಕ್ಷ್ಮಿ ಅವರ ಬಳಿಗೆ ಹೋಗಿ. ತುಂಬಾ ಚೆನ್ನಾಗಿ ಟ್ರೀಟ್​ ಮಾಡುತ್ತಾರೆ ಎನ್ನುತ್ತಾನೆ.  ತರಕಾರಿ ಹೆಚ್ಚುತ್ತಿರುವ ಸೀತಾ, ಈ ವೈದ್ಯೆಯ ಹೆಸರು ಕೇಳುತ್ತಿದ್ದಂತೆಯೇ ಶಾಕ್​ನಿಂದ ಕೈಕೊಯ್ದುಕೊಳ್ಳುತ್ತಾಳೆ! ಅಲ್ಲಿಗೆ ಸೀತಾಳ ಗುಟ್ಟು ಬಯಲಾಗುವ ಕಾಲ ಸನ್ನಿಹಿತವಾಗಿದೆ ಎಂದೇ ಅರ್ಥ. ಇದಕ್ಕಾಗಿ ಫ್ಯಾನ್ಸ್​ ಕೂಡ ಕಾಯುತ್ತಿದ್ದಾರೆ. 

'ಗೌರಿ' ನೋಡಲು ಬಂದ ನಿವೇದಿತಾ: ಅಂಗಡಿ ಮುಚ್ಕೊಳಮ್ಮಾ ಅಂತೆಲ್ಲಾ ಹೇಳೋದಾ ನೆಟ್ಟಿಗರು?

click me!