ಅಮ್ಮ ನಾಮಿನೇಟ್ ಆದ್ರೆ ಬೇಜಾರು, ಖುಷಿ ಎರಡೂ ಆಗುತ್ತೆ. ಆದರೆ ಪ್ರತೀ ರಾತ್ರಿ ಅಮ್ಮ ನೆನಪಾಗ್ತಾಳೆ ಅನ್ನೋ ಪುಟ್ಟ ಹುಡುಗನ ಮಾತೀಗ ವೈರಲ್ ಆಗ್ತಿದೆ. ಬಿಗ್‌ಬಾಸ್ ಕಂಟೆಸ್ಟೆಂಟ್ ಭಾಗ್ಯಶ್ರೀ ಪುತ್ರ ಆಯುಷ್ಮಾನ್ ಅಮ್ಮನ ಬಗ್ಗೆ ಏನ್ ಹೇಳ್ತಾನೆ ನೋಡಿ..
'ಬಿಗ್ ಬಾಸ್ ಕನ್ನಡ ಸೀಸನ್ 10' ಶೋನ ಸ್ಟ್ರಾಂಗ್ ಕಂಟೆಸ್ಟೆಂಟ್ ಭಾಗ್ಯಶ್ರೀ. ಈ ವಾರ ಯಾರಿಂದಲೂ ನಾಮಿನೇಟ್ ಆಗದೇ ಉಳಿದಿದ್ದು ಅವರೊಬ್ಬರೇ. ಇದ್ಯಾಕೆ ಹೀಗಾಯ್ತು ಅಂತ ಸುದೀಪ್ ಭಾಗ್ಯಶ್ರೀ ಅವರನ್ನು ಹಾಗೂ ಬಿಗ್‌ಬಾಸ್ ಮನೆಯಲ್ಲಿ ಇರುವವರನ್ನು ಕೇಳಿದರೆ ಬೇರೆ ಬೇರೆ ಉತ್ತರ ಬಂತು. ಅವರನ್ನು ನಾಮಿನೇಟ್ ಮಾಡಿದರೆ ಇಡೀ ದಿನ ಅವರು ಅದರ ಬಗ್ಗೆಯೇ ಯೋಚಿಸುತ್ತಿರುತ್ತಾರೆ. 'ನಾನು ಚೆನ್ನಾಗೇ ಆಡ್ತಿದ್ದೇನಲ್ಲಾ.. ಆದರೂ ಯಾಕೆ ನಾಮಿನೇಟ್ ಆದೆ ಅಂತ ತಲೆ ತಿನ್ತಿರುತ್ತಾರೆ' ಅಂತ ಕೆಲವು ಸ್ಪರ್ಧಿಗಳು ಹೇಳಿದರೆ, 'ನಾನೂ ಒಮ್ಮೆ ಅವರನ್ನು ನಾಮಿನೇಟ್ ಮಾಡಿ ತಗಲಾಗಿಕೊಂಡಿದ್ದೇನೆ' ಅಂತ ಸಂಗೀತ ಚಟಾಕಿ ಹಾರಿಸ್ತಾರೆ. ಆದರೆ ಭಾಗ್ಯಶ್ರೀ ಮಾತ್ರ 'ಬಿಗ್‌ಮನೆಯವರಿಗೆಲ್ಲಾ ನನ್ನನ್ನ ಕಂಡ್ರೆ ಪ್ರೀತಿ ಇದೆ ಅದಿಕ್ಕೆ ನಾಮಿನೇಟ್ ಮಾಡಿಲ್ಲ,' ಎಂದು ಹೇಳ್ತಾರೆ. ಸುದೀಪ್ ಅವರು 'ಓ ಭ್ರಮೆ!' ಅಂದಿದ್ದು ಸಖತ್ ಕ್ಲಾಪ್ಸ್ ಪಡ್ಕೊಳುತ್ತೆ.
ಆದರೆ ಸದ್ಯಕ್ಕೀಗ ಬಿಗ್‌ಬಾಸ್ ಕಂಟೆಸ್ಟೆಂಟ್ ಭಾಗ್ಯಶ್ರೀ ಅವರ ಮಗ ಆಯುಷ್ಮಾನ್ ಅವರ ವೀಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಯುಷ್ಮಾನ್ ಅಷ್ಟೊಂದು ಪ್ರೌಢಿಮೆಯಿಂದ ಮಾತನಾಡಿದ್ದು ನೋಡಿ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಅಮ್ಮ ಬಿಗ್‌ಬಾಸ್ ಮನೆಗೆ ಹೊರಟಾಗ, ನೀನು ಬಿಗ್ ಬಾಸ್ ಶೋಗೆ ಹೋಗು, ನಾಮಿನೇಟ್ ಆದರೆ ಮನೆಗೆ ಬಾ ಅಂತ ಹೇಳಿ ಕಳಿಸಿದ್ದೆ. ಬಿಗ್ ಬಾಸ್ (Big boss kannada) ಮನೆಯಲ್ಲಿ ಅಮ್ಮ ಚೆನ್ನಾಗಿ ಆಟ ಆಡುತ್ತಿದ್ದಾಳೆ. ಆದರೆ ದಿನಾ ರಾತ್ರಿ ಅಮ್ಮ ನೆನಪಾಗ್ತಾಳೆ. ಆಗೆಲ್ಲ ಟಿವಿಯಲ್ಲಿ ಅಮ್ಮನನ್ನು ನೋಡುತ್ತೀನಿ. ಖುಷಿ ಆಗತ್ತೆ. ವಿನಯ್ ಗೌಡ ಅವರಿಗೆ ಅಮ್ಮ ಕಾಲು ಮುಗಿತೀನಿ ಅಂತ ಹೇಳಬಾರದಿತ್ತು. ಅಮ್ಮ ಸೀನಿಯರ್ ಕಲಾವಿದೆ ಅಲ್ವಾ.. ಸುಮ್ಮನೆ ಹೇಳಿ ಬಿಡಬೇಕಿತ್ತು. ಕಾಲು ಮುಗಿತೀನಿ ಅಂತ ಹೇಳಿದ್ದು ನನಗೆ ಬೇಸರ (sadness) ಆಯ್ತು. ಅಮ್ಮ ಜೈಲಿಗೆ ಹೋಗಿದ್ದು ಬೇಸರ ಆಯ್ತು. ಜೈಲಿನಲ್ಲಿ ಅಮ್ಮ ಹೇಗೆ ಇರ್ತಾರೋ ಏನೋ ಅಂತ ಚಿಂತೆ ಆಗಿತ್ತು. ಆಮೇಲೆ ನನ್ನ ತಂದೆ ಇದು ಗೇಮ್ ಅಂತ ಹೇಳಿದಾಗ ಸಮಾಧಾನ ಆಯ್ತು,' ಎಂದು ಆಯುಷ್ಮಾನ್ ಹೇಳಿದ್ದಕ್ಕೆ ವೀಕ್ಷಕರು ಶಹಭಾಸ್ ಅಂದಿದ್ದಾರೆ.
ಕಾವೇರಿಯಂಥ ಅತ್ತೆ ಯಾರಿಗೂ ಬೇಡ, ಮಗನ ಮದ್ವೆ ಆಗೋ ಮುನ್ನ ಕುಸುಮರಂತೆ ಬದಲಾಗಿ!
ಇನ್ನುಳಿದಂತೆ ಅಮ್ಮ ನಾಮಿನೇಟ್ ಮಾಡಿದಾಗ ಒಂದುಕಡೆ ಮನೆಗೆ ಬರುತ್ತಾರೆ ಅಂತ ಖುಷಿ ಆಗುತ್ತಂತೆ. ಇನ್ನೊಂದೆಡೆ ಆಟದಿಂದ ಔಟ್ (Out) ಆಗ್ತಾರೆ ಅಂತ ಬೇಜಾರಂತೆ. ಸ್ಕೂಲ್‌ನಲ್ಲಿ ಕೆಲವು ಫ್ರೆಂಡ್ಸ್ (Friends) ನಿಮ್ಮಮ್ಮ ಚೆನ್ನಾಗಿ ಆಡ್ತಿದಾರೆ ಅಂತಾರಂತೆ. ಇನ್ನೂ ಕೆಲವರು ಎಲಿಮಿನೇಟ್ ಆಗಿ ಬರ್ತಾರೆ ಅಂತ ರೇಗಿಸ್ತಾರಂತೆ. ಅದನ್ನೆಲ್ಲ ದೊಡ್ಡವನಂತೆ ನಿಭಾಯಿಸೋದನ್ನು ಆಯುಷ್ಮಾನ್ ಕಲಿತಿದ್ದಾನೆ.
'ಬಿಗ್ ಬಾಸ್ ಮನೆಯಲ್ಲಿ ನನಗೆ ಮೈಕಲ್ ಇಷ್ಟ. ವಿನಯ್ ಗೌಡ ಅಂದರೆ ಇಷ್ಟ ಇಲ್ಲ. ನನ್ನ ಅಮ್ಮ ಅಳಬಾರದು. ನನ್ನನ್ನು ತಲೆಯಿಂದ ತೆಗೆದು ಹಾಕಿ ಅವಳು ಆಟ ಆಡಲಿ' ಎಂಬುದು ಆಯುಷ್ಮಾನ್ ಮಾತು.
ಆಯುಷ್ಮಾನ್ 'ನನ್ನಮ್ಮ ಸೂಪರ್‌ಸ್ಟಾರ್' ಶೋನಲ್ಲಿ ಭಾಗವಹಿಸಿ ಅಲ್ಲೂ ಮೆಚ್ಚುಗೆ ಪಡೆದ ಹುಡುಗ. ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿತ್ತು.
ಇನ್ನು ಭಾಗ್ಯಶ್ರೀ ಅವರು 'ಲಕ್ಷಣ', 'ಲಕ್ಷ್ಮೀ ಬಾರಮ್ಮ' ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ವಿನಯ್ ಗೌಡ, ಸಂಗೀತಾ ಮಧ್ಯೆ ಯಾಕೆ ಜಗಳ ಆಗ್ತಿದೆ ಅಂತ ಕೇಳಲು ಹೋಗಿ ಭಾಗ್ಯಶ್ರೀ ಅವರು ಸಮಸ್ಯೆ ಮಾಡಿಕೊಂಡಿದ್ದರು. ಅವಳು ಹೇಳಿದ ಮಾತು ಇನ್ನೊಂದು ಅರ್ಥ ಆಗಿ ವಿನಯ್ ಅವರು ಭಾಗ್ಯಶ್ರೀ ಮೇಲೆ ಕೂಗಾಡಿದ್ದರು. ಸ್ನೇಹಿತ್ ಅವರನ್ನು ನಾಮಿನೇಟ್ ಮಾಡಿದ್ದಕ್ಕೆ ಭಾಗ್ಯಶ್ರೀ ಮೇಲೆ ತುಕಾಲಿ ಸ್ಟಾರ್ ಸಂತು, ವಿನಯ್ ಗೌಡ ಹರಿಹಾಯ್ದಿದ್ದರು. ಇದರಿಂದ ಭಾಗ್ಯಶ್ರೀ ನಾನು ಮನೆಗೆ ಹೋಗ್ತೀನಿ ಅಂತ ಹೇಳಿ ಕಣ್ಣೀರು ಹಾಕಿದ್ದರು. ಇದೀಗ ಅವರ ಮಗನ ಮಾತು ಸಖತ್ ವೈರಲ್ ಆಗ್ತಿದೆ.
ಈ ಬಸ್ ತುಂಬಾ ಪುಟಾಣಿ ಪ್ರತಿಭೆಗಳು... ಕಂಡಕ್ಟರ್ ಮಾಸ್ಟರ್ ಆನಂದ್, ಡ್ರೈವರ್ ರಚಿತಾ ರಾಮ್...