Nivedita Gowda: ನಿವೇದಿತಾ ಕಟ್​ ಮಾಡಿದ ರಿಬ್ಬನ್​ಗೆ ಭಾರಿ ಡಿಮಾಂಡ್​: ಅಷ್ಟಕ್ಕೂ ಆಗಿದ್ದೇನು ನೋಡಿ...

Published : May 23, 2025, 12:37 PM ISTUpdated : May 23, 2025, 12:45 PM IST
Nivedita Gowda: ನಿವೇದಿತಾ ಕಟ್​ ಮಾಡಿದ ರಿಬ್ಬನ್​ಗೆ ಭಾರಿ ಡಿಮಾಂಡ್​: ಅಷ್ಟಕ್ಕೂ ಆಗಿದ್ದೇನು ನೋಡಿ...

ಸಾರಾಂಶ

ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ದೇಹ ಪ್ರದರ್ಶನದ ರೀಲ್ಸ್‌ಗಳಿಂದಾಗಿ ಸದಾ ಟ್ರೋಲ್‌ ಆಗುತ್ತಿದ್ದಾರೆ. ಬಟ್ಟೆ ಅಂಗಡಿಯ ಉದ್ಘಾಟನೆಗೆ ಹೋದಾಗಲೂ ದೇಹ ಪ್ರದರ್ಶನ ಮಾಡುವ ಬಟ್ಟೆ ಧರಿಸಿದ್ದಕ್ಕೆ ಟೀಕೆಗೆ ಗುರಿಯಾಗಿದ್ದಾರೆ. ಆದರೆ, ಇತ್ತೀಚೆಗೆ ಡಾನ್ಸರ್‌ ಕಿಶನ್‌ ಜೊತೆ ಮೈತುಂಬಾ ಬಟ್ಟೆ ಧರಿಸಿ ರೀಲ್ಸ್‌ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬಿಗ್​ಬಾಸ್​ನ ಕ್ಯೂಟ್​ ಜೋಡಿ ಎಂದೇ ಫೇಮಸ್​ ಆಗಿದ್ದ ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಬಿಗ್​ಬಾಸ್​ನಿಂದ ಹೊರಕ್ಕೆ ಬಂದು ಮದ್ವೆಯಾಗಿ, ಈಗ ಮಾಜಿಗಳಾಗಿರುವುದು ಗೊತ್ತಿರುವ ವಿಷಯವೇ. ಅತ್ತ ಚಂದನ್​ ಶೆಟ್ಟಿ ತಮ್ಮ ಆಲ್ಬಂ, ಸಿನಿಮಾ ಅಂತೆಲ್ಲಾ ಬಿಜಿಯಾಗಿದ್ದರೆ, ಇತ್ತ ನಿವೇದಿತಾ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಾ ದಿನನಿತ್ಯವೂ ರೀಲ್ಸ್​ ಮಾಡುವಲ್ಲಿ ಬಿಜಿಯಾಗಿದ್ದಾರೆ.  ಒಮ್ಮೆ ಮಂಚದ ಮೇಲೆ, ಮತ್ತೊಮ್ಮೆ ಬಾತ್​ರೂಮ್​ನಲ್ಲಿ... ಹೀಗೆ ರೀಲ್ಸ್​ ಮಾಡುತ್ತಾ ತುಂಡುಡುಗೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ನಟಿ ಬಟ್ಟೆ ಮಳಿಗೆಯೊಂದರ ಉದ್ಘಾಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಆದರೆ ಎಂದಿನಂತೆ ದೇಹ ಪ್ರದರ್ಶನ ಮಾಡುವ ಬಟ್ಟೆಯನ್ನೇ ತೊಟ್ಟು ಹೋಗಿದ್ದಾರೆ ನಿವೇದಿತಾ. ಅದೂ ಬಟ್ಟೆ ಅಂಗಡಿಯ ಉದ್ಘಾಟನೆಗೆ ಇಂಥದ್ದೊಂದು ಬಟ್ಟೆ ಧರಿಸಿ ಹೋಗಿರುವುದಕ್ಕೆ ಇನ್ನಿಲ್ಲದಂತೆ ಟ್ರೋಲ್​ಗೆ ಒಳಗಾಗಿದ್ದಾರೆ. ದಯವಿಟ್ಟು ಆಕೆ ಕಟ್​ ಮಾಡಿದ ರಿಬ್ಬನ್​ನ ತುಂಡನ್ನು ಅವಳಿಗೆ ನೀಡಿಬಿಡಿ ಎಂದು ತರ್ಲೆ ಕಮೆಂಟಿಗರು ಕಮೆಂಟ್​ನಲ್ಲಿ ಹೇಳಿದ್ದರೆ, ಬಟ್ಟೆ ಅಂಗಡಿಗೆ ಬಾಮ್ಮಾ ಎಂದ್ರೆಬಟ್ಟೆ ಇಲ್ಲದೇ ಬರೋದಾ ಎಂದು ಮತ್ತೆ ಕೆಲವರು ಪ್ರಶ್ನೆ ಮಾಡಿದ್ದಾರೆ. ಆ ರಿಬ್ಬನ್​ನಿಂದ ಅವಳನ್ನು ಸುತ್ತುಬಿಡಿ ಎಂದು ಇನ್ನಷ್ಟು ಮಂದಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ, ನಿವೇದಿತಾ ಕಟ್​ ಮಾಡಿರೋ ರಿಬ್ಬನ್​ಗೆ ಹೀಗೆಲ್ಲಾ ಡಿಮಾಂಡ್​ ಬಂದಿದೆ!  ಸದ್ಯ ನಿವೇದಿತಾ ಏನೇ ಮಾಡಿದರೂ ಟ್ರೋಲ್​ ಮಾಡಲು ಕಾಯುತ್ತಿರುವವರಿಗೆ ಇದು ಒಳ್ಳೆಯ ಆಹಾರ ಒದಗಿಸಿದೆ.  

 

ಅಷ್ಟಕ್ಕೂ ಟ್ರೋಲ್​ನಿಂದಲೇ ಫೇಮಸ್​ ಆಗುವುದು ಎನ್ನುವುದು ನಿವೇದಿತಾಳಂಥ ಹಲವು ರೀಲ್ಸ್​ ಪ್ರಿಯರಿಗೆ ತಿಳಿದಿರುವ ಕಾರಣದಿಂದಲೇ ಅಶ್ಲೀಲತೆಯಿಂದಲೇ ಫೇಮಸ್​ ಆಗಲು ನೋಡುತ್ತಿದ್ದಾರೆ ಎನ್ನುವುದೂ ನಿಜವೇ ಬಿಡಿ. ಅದೇ ರೀತಿ ಅವರನ್ನು ಬೈದುಕೊಳ್ಳುತ್ತಲೇ ಅವರ ರೀಲ್ಸ್​ ಸವಿಯುವ ದೊಡ್ಡ ವರ್ಗವೇ ಇದೆ. ಒಟ್ಟಿನಲ್ಲಿ  ನಿವೇದಿತಾ ಏನೇ ಮಾಡಿದರೂ ಟ್ರೋಲ್​ ಮಾಡಲು ಕಾಯುತ್ತಿರುವವರಿಗೆ ಇದು ಒಳ್ಳೆಯ ಆಹಾರ ಒದಗಿಸಿದೆ. ಅಷ್ಟಕ್ಕೂ ಟ್ರೋಲ್​ನಿಂದಲೇ ಫೇಮಸ್​ ಆಗುವುದು ಎನ್ನುವುದು ನಿವೇದಿತಾಳಂಥ ಹಲವು ರೀಲ್ಸ್​ ಪ್ರಿಯರಿಗೆ ತಿಳಿದಿರುವ ಕಾರಣದಿಂದಲೇ ಅಶ್ಲೀಲತೆಯಿಂದಲೇ ಫೇಮಸ್​ ಆಗಲು ನೋಡುತ್ತಿದ್ದಾರೆ ಎನ್ನುವುದೂ ನಿಜವೇ ಬಿಡಿ. ಅದೇ ರೀತಿ ಅವರನ್ನು ಬೈದುಕೊಳ್ಳುತ್ತಲೇ ಅವರ ರೀಲ್ಸ್​ ಸವಿಯುವ ದೊಡ್ಡ ವರ್ಗವೇ ಇದೆ. 

ನಿವೇದಿತಾ ಬಾಳಲ್ಲಿ ಹೊಸ ಉತ್ಸಾಹ! ಜೀವಕ್ಕೆ ಹೊಸ ದಿಕ್ಕು ತೋರಿದ ಯುವಕನ ಪರಿಚಯಿಸಿದ ನಟಿ..

 ಆದರೆ ಯಾರು ಏನೇ ಹೇಳಿದ್ರೂ  ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ! ಕೆಲ ದಿನಗಳ ಹಿಮದೆ ಬೀಚ್​ನಲ್ಲಿ ನಿವೇದಿತಾ ಅವರು ಡೀಸೆಂಟ್​ ಆಗಿರುವ ವಿಡಿಯೋ ಒಂದನ್ನು ಶೇರ್​ ಮಾಡಿದ್ದರು. ಇಲ್ಲಿ ಅವರ ಬಟ್ಟೆ ಬೀಚ್​ನಲ್ಲಿ ಸಾಮಾನ್ಯವಾಗಿ ನಟಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವಂತೇನೂ ಇಲ್ಲ. ತಮ್ಮ ಎಂದಿನ ದೇಹ ಪ್ರದರ್ಶನವನ್ನೂ ಮಾಡದೇ ಒಳ್ಳೆಯ ಉಡುಪಿನಲ್ಲಿಯೇ ಕಾಣಿಸಿಕೊಂಡಿದ್ದರು. ಇದಕ್ಕೆ ಹಲವರು ಹಾರ್ಟ್​ ಇಮೋಜಿಗಳಿಂದ ನಟಿಯ ಸೌಂದರ್ಯವನ್ನು ಹೊಗಳಿದರೆ, ಮತ್ತೆ ಕೆಲವರು ಪೂನಂ ಪಾಂಡೆಗೆ ಹೋಲಿಕೆ ಮಾಡುತ್ತಿದ್ದರು. ಒಳ್ಳೆಯ ಡ್ರೆಸ್​​ ಮಾಡಿದರೂ ತೆಗಳಿಕೆ ತಪ್ಪಿದ್ದಲ್ಲ ಎನ್ನುತ್ತಲೇ ಈಗ ಸಾಧ್ಯವಾದಷ್ಟು ಹಾಟ್​ ವಿಡಿಯೋ ಶೇರ್​ ಮಾಡುತ್ತಿದ್ದಾರೆ. 
 

ಆದರೆ, ಅಚ್ಚರಿ ಎನ್ನುವಂತೆ ಕೆಲವು ದಿನಗಳ ಹಿಂದೆ ನಿವೇದಿತಾ ಡಾನ್ಸರ್‌ ಕಿಶನ್‌ ಬಿಳಗಲಿ ಜೊತೆ ರೀಲ್ಸ್‌ ಮಾಡಿದ್ದರು. ಕಿಶನ್‌ ಅವರ ನೃತ್ಯ ಎಂದರೆ ಅದು ಒಂದು ಲೆವೆಲ್‌ ಮೇಲೆಯೇ ಇರುತ್ತದೆ. ಹೆಚ್ಚಾಗಿ ಇರುವ ಬಿಗ್‌ಬಾಸ್‌ ಖ್ಯಾತಿಯ ನಮ್ರತಾ ಗೌಡ ಅವರ ಜೊತೆ ಹಾಟ್‌ ಡಾನ್ಸ್‌ಗೆ ಸ್ಟೆಪ್‌ ಹಾಕುವುದು ಇದೆ. ಆದರೆ ಅವರು ಮೊದಲ ಬಾರಿಗೆ ಶಿಲಾಬಾಲಿಕೆಯಾಗಿ ಕಾಣಿಸಿಕೊಂಡಿದ್ದರು. ಅವರ ಜೊತೆ ನಿವೇದಿತಾ ನೃತ್ಯಮಾಡಿದ್ದರು. ಮೈತುಂಬಾ ಬಟ್ಟೆಯುಟ್ಟ ನಿವೇದಿತಾ ಅವರಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿತ್ತು. ಸದಾ ಎಲ್ಲಾ ಅಂಗಾಂಗಗಳನ್ನು ಉದ್ದೇಶಪೂರ್ವಕವಾಗಿ ತೋರಿಸುವ ನಟಿಯ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು.

ಆ ರೂಮ್​ನಲ್ಲೇ ಇಬ್ರೂ ಮಾಡ್ತೀವಿ, ಏನಿವಾಗ? ನೋಡೋಕೆ ಆಗದಿದ್ರೆ ಕಣ್ಮುಚ್ಚಿ ಎಂದ ನಿವೇದಿತಾ ಗೌಡ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!