ರಾಮ್​- ಸೀತಾ ರೊಮಾನ್ಸ್​: ಏನೇ ಹೇಳಿ... ನೀವು ತುಂಬಾ ತಪ್ಪು ಮಾಡಿಬಿಟ್ರಿ ಎನ್ನೋದಾ ನೆಟ್ಟಿಗರು?

Published : May 22, 2025, 05:21 PM IST
ರಾಮ್​- ಸೀತಾ  ರೊಮಾನ್ಸ್​: ಏನೇ ಹೇಳಿ... ನೀವು ತುಂಬಾ ತಪ್ಪು ಮಾಡಿಬಿಟ್ರಿ ಎನ್ನೋದಾ ನೆಟ್ಟಿಗರು?

ಸಾರಾಂಶ

ವೈಷ್ಣವಿ ಗೌಡ 'ಸೀತಾರಾಮ' ಧಾರಾವಾಹಿ ಮುಗಿಸಿ, ಛತ್ತೀಸ್‌ಗಢ ಮೂಲದ ಅನುಕೂಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಧಾರಾವಾಹಿಯ ರಾಮ್ ಪಾತ್ರಧಾರಿ ಗಗನ್ ಜೊತೆ ಜೋಡಿಯಾಗಬೇಕೆಂದು ಬಯಸಿದ್ದರು. ಇತ್ತೀಚೆಗೆ ಇವರಿಬ್ಬರ ರೊಮ್ಯಾಂಟಿಕ್ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವೈಷ್ಣವಿಗೆ ಈಗ ನಿಶ್ಚಿತಾರ್ಥವಾಗಿದೆ ಎಂದು ನೆನಪಿಸಿದ್ದಾರೆ.


ಸೀತಾರಾಮ ಸೀತಾ  ಉರ್ಫ್​ ನಟಿ ವೈಷ್ಣವಿ ಗೌಡ ಸದ್ಯ ಎಂಗೇಜ್​ಮೆಂಟ್​  ಖುಷಿಯಲ್ಲಿದ್ದಾರೆ. ಇದಾಗಲೇ ಭಾವಿ ಪತಿ ಅನುಕೂಲ್​ ಜೊತೆ ಡಿನ್ನರ್​ ಡೇಟಿಂಗ್​ಗೂ ಹೋಗಿದ್ದು, ಅದರ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅಂದ ಹಾಗೆ ನಟಿಯ ಫ್ಯಾನ್ಸ್​ಗೆ ತಿಳಿದಿರುವಂತೆಯೇ ಅನುಕೂಲ್​ ಅವರು ಛತ್ತೀಸಗಢದವರಾಗಿದ್ದು, ಹಿಂದಿ ಭಾಷಿಕರು. ಅವರಿಗೆ ಕನ್ನಡ ಬರುವುದಿಲ್ಲ. ಆದರೂ ತಮ್ಮ ಸೀರಿಯಲ್​, ತಾವು ಭಾಗವಹಿಸಿದ್ದ ಬಿಗ್​ಬಾಸ್ ಎಲ್ಲವನ್ನೂ ನೋಡಿರುವುದಾಗಿ ವೈಷ್ಣವಿ ಇದಾಗಲೇ  ಮಾಧ್ಯಮಗಳಿಗೆ ಹೇಳಿದ್ದಾರೆ. ಅದರ ಬೆನ್ನಲ್ಲೇ ನಟಿ ವೈಷ್ಣವಿ ಗೌಡ ಸೀತಾರಾಮ ಸೀರಿಯಲ್​ ಅನ್ನೂ ಮುಗಿಸಿಕೊಟ್ಟು ಹೋಗಿರುವುದು ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಇಮ್ಮಡಿಗೊಂಡಿದೆ. ಸಾಮಾನ್ಯವಾಗಿ ಮದುವೆಯಾದರೆ, ಸೀರಿಯಲ್​ ಬಿಟ್ಟು ಹೋಗುವುದು ಇದೆ. ಆದರೆ ನಟಿ ಸಂಪೂರ್ಣ ಸೀರಿಯಲ್​ ಮುಗಿಸಿ ಹೋಗಿದ್ದಾರೆ.

ಆದರೆ, ವೈಷ್ಣವಿ ಅವರು ಎಂಗೇಜ್​ಮೆಂಟ್​ ಆಗುವುದಕ್ಕೂ ಮುನ್ನ ಅವರ ಮತ್ತು ಸೀತಾರಾಮ ಸೀರಿಯಲ್​ ರಾಮ್​ ಅರ್ಥಾತ್​ ಗಗನ್​ ಚಿನ್ನಪ್ಪ ಅವರು ಮದ್ವೆಯಾದರೆ ಎಷ್ಟು ಚೆನ್ನಾಗಿರತ್ತೆ ಎಂದು ಹೇಳುತ್ತಲೇ ಬಂದವರು ಅಭಿಮಾನಿಗಳು. ಅಷ್ಟಕ್ಕೂ ಸೀರಿಯಲ್​ಗಳಲ್ಲಿ ಒಂದು ಜೋಡಿ ಇಷ್ಟ ಆಯ್ತು ಎಂದರೆ ರಿಯಲ್​ ಲೈಫ್​ನಲ್ಲಿಯೂ ಅವರು ಮದ್ವೆಯಾಗಲಿ ಎಂದು ಬಯಸುವವರೇ ಹಲವರು. ಅದೇ ರೀತಿ ವೈಷ್ಣವಿ ಮತ್ತು ಗಗನ್​ ಅವರ ಜೋಡಿ, ಕೆಮೆಸ್ಟ್ರಿ ಫ್ಯಾನ್ಸ್​ಗೆ ಇಷ್ಟವಾಗಿದೆ. ಅವರಿಬ್ಬರು ಹಲವಾರು ರೀಲ್ಸ್​ಗಳನ್ನು ಒಟ್ಟಿಗೇ ಮಾಡುತ್ತಲೇ ಇದ್ದಾರೆ. ಹೀಗೆ ಮಾಡಿದಾಗಲೆಲ್ಲಾ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದವರೇ ಹೆಚ್ಚು. ಆದರೆ  ಅವರಿಬ್ಬರೂ ಇದಕ್ಕೆ ತಲೆ ಕೆಡಿಸಿಕೊಂಡವರಲ್ಲ. 

Seeta Rama Serial: ಸೀತಾ ಪಾತ್ರದಿಂದ ದೂರವಾಗ್ತಿದ್ದೇನೆ: ಭಾವುಕ ಪೋಸ್ಟ್​ ಶೇರ್​ ಮಾಡಿದ ನಟಿ ವೈಷ್ಣವಿ ಗೌಡ

ಗಗನ್​ ಕೂಡ ತಮಗೆ ಬ್ರೇಕಪ್​ ಆಗಿದ್ದ ವಿಷಯ ತಿಳಿಸಿದ್ದರು. ವೈಷ್ಣವಿ ಅವರಿಗೆ ಇನ್ನೂ ಮದುವೆಯಾಗಿಲ್ಲದ ಹಿನ್ನೆಲೆಯಲ್ಲಿ ನಿಜ ಜೀವನದಲ್ಲಿಯೂ ಇಬ್ಬರೂ ಜೊತೆಯಾಗಲಿ ಎಂದು ಬಯಸಿದ್ದರು. ಆದರೆ ಇದೀಗ ವೈಷ್ಣವಿ ಅವರಿಗೆ ಬೇರೆಯವರ ಜೊತೆ ಎಂಗೇಜ್​ಮೆಂಟ್​ ಆಗಿದೆ. ಈ ನಡುವೆಯೇ ವೈಷ್ಣವಿ ಮತ್ತು ಗಗನ್​ ಅವರ ರೊಮಾನ್ಸ್​ ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಇದು ಸೀತಾರಾಮ ಸೀರಿಯಲ್​ನಲ್ಲಿ ಇವರಿಬ್ಬರೂ ಸಕತ್​ ರೊಮಾಂಟಿಕ್ ಮೂಡ್​ನಲ್ಲಿ ಇರುವುದು.  ಗಗನ್​, ನಟಿಯನ್ನು ಮುದ್ದು ಮಾಡಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಲೇ ನೆಟ್ಟಿಗರು ನಟಿ ವೈಷ್ಣವಿ ಅವರಿಗೆ ನಿಮ್ಮದು ಎಂಗೇಜ್​ಮೆಂಟ್​ ಆಗೋಗಿದೆ ಮೇಡಂ ಎಂದು ನೆನಪಿಸಿದ್ದಾರೆ. ರಾಮ್​ಗೆ, ಬಿಡಿ ಇನ್ನು ಸೀತಾ ನಿಮ್ಮ ಕೈತಪ್ಪಿ ಹೋದಳು, ಈಗ ರೊಮಾನ್ಸ್​ ಮಾಡಿ ಪ್ರಯೋಜನ ಇಲ್ಲ ಎಂದಿದ್ದಾರೆ. ಮತ್ತೆ ಕೆಲವರು ನಿಮ್ಮಬ್ಬರ ಜೋಡಿ ಸಕತ್​  ಆಗಿತ್ತು. ನೀವು ಬೇರೆ ಮದ್ವೆಯಾಗಲು ರೆಡಿಯಾಗಿ ತಪ್ಪು ಮಾಡಿಬಿಟ್ರಿ ಎಂದೂ ಹೇಳ್ತಿದ್ದಾರೆ! 

ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ,  ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.  ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

Vaishnavi Gowda: ನಿಶ್ಚಿತಾರ್ಥದ ಬೆನ್ನಲ್ಲೇ ವೈಷ್ಣವಿ ಗೌಡ ಬಾಲಿವುಡ್​ಗೆ ಎಂಟ್ರಿ? ಹೃದಯ ಜಾರಿ ಜಾರಿ ಹೋಗ್ತಿದೆ ಎಂದ ನಟಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!