ನೆನಪಿರಲಿ ಪ್ರೇಮ್ ಅವರು ಮದುವೆಯಾದ ಹೊಸತರದ ನೋವಿನ ದಿನಗಳನ್ನು ನೆನೆದು ಜೋಡಿ ನಂಬರ್ 1 ವೇದಿಕೆಯಲ್ಲಿ ಕಣ್ಣೀರಾಗಿದ್ದಾರೆ.
ಮೈತುಂಬಾ ಸಾಲ ಮಾಡಿಕೊಂಡು ಬಿಟ್ಟಿದ್ದೆ. ಸಾಲ ತೀರಿಸಲು ತಾಳಿ ತೆಗೆದುಕೊಟ್ಟರು. ನನಗೆ ನಾನ್ವೆಜ್ ಕೊಡಿಸಬೇಕು ಅಂತ ಹೇಳಿ ಪ್ರತಿವಾರ ಓವರ್ಟೈಂ ಕೆಲ್ಸ ಮಾಡುತ್ತಿದ್ದರು. ಫೋನ್ ಮಾಡಲು ಒಂದು ರೂಪಾಯಿನೂ ಇರುತ್ತಿರಲಿಲ್ಲ. ಈಕೆ ಹೆಂಡ್ತಿಯಾಗಿ ಬರಲಿಲ್ಲ, ತಾಯಿಯಾಗಿ ಬಂದ್ರು...
ಹೀಗೆ ಪತ್ನಿ ಜ್ಯೋತಿಯ ತ್ಯಾಗವನ್ನು ನೆನೆದು ಕಣ್ಣೀರಾದವರು ನೆನಪಿರಲಿ ಪ್ರೇಮ್. ಜೋಡಿ ನಂಬರ್ 1 ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರುವ ಪ್ರೇಮ್ ಅವರ ಪತ್ನಿ ಜ್ಯೋತಿ ಕೂಡ ಹಾಜರಿದ್ದು, ಈ ಸಂದರ್ಭದಲ್ಲಿ ಪತ್ನಿಯ ತ್ಯಾಗವನ್ನು ಅವರು ನೆನಪಿಸಿಕೊಂಡಿದ್ದಾರೆ. ನಂತರ ಪತಿ-ಪತ್ನಿ ಇಬ್ಬರೂ ಕಣ್ಣೀರಾಗಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಅಂದಹಾಗೆ, ಪ್ರೇಮ್ ಮತ್ತು ಜ್ಯೋತಿ 3 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಅಲ್ಲದೇ ಮನೆಯಲ್ಲಿ ವಿರೋಧವಿದ್ದ ಕಾರಣ ಓಡಿ ಹೋಗಿ ವಿವಾಹವಾಗಿದ್ದರು. ಇದನ್ನು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಹೇಳಿಕೊಂಡಿದ್ದರು.
ಗಂಗಾ, ಯಮುನೆ, ಸರಸ್ವತಿಯ ಒಡಲು ತ್ರಿವೇಣಿ ಸಂಗಮದ ಸಂಪೂರ್ಣ ದರ್ಶನ ಮಾಡಿ ಪುಳಕಿತರಾದ ಭಕ್ತರು
ಕಳೆದ ವರ್ಷ ಮೇ ತಿಂಗಳಿನಲ್ಲಿ ತಮ್ಮ ಪ್ರೀತಿಗೆ 25 ವರ್ಷ ತುಂಬಿದೆ ಎಂದು ನೆನೆಪಿಸಿಕೊಂಡಿದ್ದರು ಪ್ರೇಮ್. ಪತ್ನಿ ಜ್ಯೋತಿ ಜೊತೆ ಅವರು ಈ ಖುಷಿಯನ್ನು ಸಂಭ್ರಮಿಸಲು ಬಾಲಿಗೆ ಹೋಗಿದ್ದರು. ಪತ್ನಿಯೊಂದಿಗೆ ನೀರಿನಾಳಕ್ಕೆ ಇಳಿದು, ಕೈ ಕೈ ಹಿಡಿದು ಜ್ಯೋತಿಗೆ ಪ್ರಪೋಸ್ ಮಾಡಿ ಸಿಹಿಮುತ್ತನಿಟ್ಟಿದ್ದರು ಪ್ರೇಮ್. ಫೋಟೋಗಳ ಜತೆಗೆ ಕಿರು ವಿಡಿಯೋ ತುಣುಕನ್ನು ಶೇರ್ ಮಾಡಿರುವ ಪ್ರೇಮ್, ಭೂಮಿಯಿಂದ ಶುರುವಾದ ನಮ್ಮ ಪ್ರೀತಿ, ಆಕಾಶದಲ್ಲಿ ಹಾರಾಡಿ ಸಮುದ್ರದ ಆಳದಲ್ಲೂ ಅರಳುತ್ತಿದೆ ಎಂದು ಬರೆದುಕೊಂಡಿದ್ದರು.
ಅಂದಹಾಗೆ, ಪ್ರೇಮ್ ಅವರು ಶಿಕ್ಷಣದ ನಂತರ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಸ್ ಲಿಮಿಟೆಡ್ ನಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಬಾಲ್ಯದಿಂದಲೂ ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯಿತ್ತು ಎಂದು ಹೇಳಿಕೊಂಡಿರುವ ಪ್ರೇಮ್ ಅವರು, ವಾರಕ್ಕೆ ಕನಿಷ್ಠ ಮೂರು ನಾಲ್ಕು ಚಿತ್ರಗಳನ್ನು ನೋಡುತ್ತಿರುವುದಾಗಿ ಹೇಳುತ್ತಾರೆ. ಸಿನಿಮಾದ ಕುರಿತು ಸಾಕಷ್ಟು ಪುಸ್ತಕಗಳನ್ನೂ ಓದುತ್ತಿದ್ದರಂತೆ. ನಂತರ ಕಿರುತೆರೆಯಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಗೆಳೆಯರೊಬ್ಬರ ಸಲಹೆ ಮೇರೆಗೆ ಟಿ.ಎನ್.ಸೀತಾರಾಮ್ ರ ಮನ್ವಂತರ ಧಾರಾವಾಹಿಯಲ್ಲಿ ಸಹ ಕಲಾವಿದನಾಗಿ ನಟಿಸಿದರು. ಅದಾದ ಬಳಿಕ ಅರ್ಧ ಸತ್ಯ ಎಂಬ ಸೀರಿಯಲ್ ಒಂದು ಎಪಿಸೋಡ್ನಲ್ಲಿ ಕಾಣಿಸಿಕೊಂಡರು. 2004 ರಲ್ಲಿ ತೆರೆಕಂಡ `ಪ್ರಾಣ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿರಂಗ ಪ್ರವೇಶಿಸಿದರು. ಇದೀಗ ಪ್ರೇಮ್ ಅವರು ಕನ್ನಡ ಚಿತ್ರರಂಗದ ರೊಮ್ಯಾಂಟಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷವಷ್ಟೇ ತಮ್ಮ ಸಿನಿಮಾ ವೃತ್ತಿ ಜೀವನದ 25ನೇ ಸಿನಿಮಾ ಆಗಿ ಪ್ರೇಮಂ ಪೂಜ್ಯಂ ಬಿಡುಗಡೆ ಆಗಿತ್ತು.
ಮುಂದಿನ ತಿಂಗಳು ರಶ್ಮಿಕಾ ಜತೆ ನಿಶ್ಚಿತಾರ್ಥ ನಿಜನಾ? ಕೊನೆಗೂ ಮೌನ ಮುರಿದ ವಿಜಯ್ ದೇವರಕೊಂಡ!