ರಾಮನ್ನ ಡಮ್ಮಿ ಪೀಸ್‌ ಮಾಡ್ಬೇಡಿ, ಉರಿಬಿದ್ದ ವೀಕ್ಷಕರ ನೇರ ಮಾತು

Published : Jan 20, 2024, 12:55 PM IST
ರಾಮನ್ನ ಡಮ್ಮಿ ಪೀಸ್‌ ಮಾಡ್ಬೇಡಿ, ಉರಿಬಿದ್ದ ವೀಕ್ಷಕರ ನೇರ ಮಾತು

ಸಾರಾಂಶ

ಸೀತಾರಾಮ ಸೀರಿಯಲ್‌ನಲ್ಲಿ ದೊಡ್ಡ ಸುನಾಮಿಯೇ ಬಂದು ಹೋಗಿದೆ. ಈ ನಡುವೆ ರಾಮ ಡಮ್ಮಿ ಪೀಸ್ ಆಗೋಗ್ತಿದ್ದಾನೆ ಅನ್ನೋ ಆರೋಪ ವೀಕ್ಷಕರದು. ಸೀರಿಯಲ್ ಟೀಮ್‌ ಇದನ್ನ ಸೀರಿಯಸ್ ಆಗಿ ತಗೊಳ್ಳುತ್ತಾ?

ಸೀತಾರಾಮ ಸೀರಿಯಲ್‌ನಲ್ಲಿ ದೊಡ್ಡ ಬಿರುಗಾಳಿ ಬೀಸಿ ಯಾರ್ಯಾರ ಲೈಫು ಎಲ್ಲೆಲ್ಲೋ ಹೋಗಿಬಿಟ್ಟಿದೆ. ಈ ನಡುವೆ ಇಡೀ ಆಫೀಸ್‌ಗೆ ಬಾಸ್ ಆಗಿರೋ ರಾಮ್ ಡಮ್ಮಿ ಪೀಸ್ ಆಗ್ತಿದ್ದಾನೆ ಅಂತ ವೀಕ್ಷಕರು ಕಂಪ್ಲೇಂಟ್ ಮಾಡ್ತಿದ್ದಾರೆ. ಶ್ರೀ ರಾಮ್ ದೇಸಾಯಿ ಇಡೀ ದೇಸಾಯಿ ಗ್ರೂಪ್ ಆಫ್ ಕಂಪನೀಸ್ ಓನರ್. ಆದರೆ ಆತನ ಜೀವದ ಗೆಳೆಯ ಅಶೋಕ್‌ಗೆ ತಿಳಿಯೋ ಸೂಕ್ಷ್ಮ ವಿಚಾರಗಳು ರಾಮನಿಗೆ ಗೊತ್ತಾಗಲ್ಲ. ಪುಣ್ಯಕ್ಕೆ ಮ್ಯಾನೇಜರ್‌ ಚರಣ್‌ ಮಾತು ಕೇಳಿ ಸ್ನೇಹಿತನನ್ನ ದೂರ ಮಾಡಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದ್ದರೆ ಮತ್ತೆ ರಾಮ್‌ ಪಾತ್ರದ ತೂಕ ಮತ್ತಷ್ಟು ತಗ್ಗುತ್ತಿತ್ತು. ಆದರೆ ಇಷ್ಟು ದಿನ ರಾಮ್‌ ಪರವಾಗಿ ಆಡಳಿತ ಮಾಡುತ್ತಿದ್ದ ಅಶೋಕ್‌ಗೆ ರಾಮ್‌ ಕಂಪನಿಯಲ್ಲಿ ಭ್ರಷ್ಟಾಚಾರ ಎಲ್ಲಿ ನಡೀತಿದೆ ಅಂತ ಗೊತ್ತಾಗ್ತಿದೆ. ರಾಮ್‌ ಚಿಕ್ಕಮ್ಮ ಭಾರ್ಗವಿಯ ಎಲ್ಲ ಮಸಲತ್ತುಗಳ ಅರಿವೂ ಇದೆ. ಆದರೆ ಅದನ್ನು ಅಶೋಕ ಸಾಬೀತು ಮಾಡೋದಕ್ಕೆ ಆಗ್ತಾ ಇಲ್ಲ. ಇದಕ್ಕೆ ಭಾರ್ಗವಿ ಚಾಣಾಕ್ಷತನ ಕಾರಣ.

ರಾಮ್ ಮಾಲೀಕನಾಗಿರೋ ಕಂಪನಿಯ ಅವ್ಯವಹಾರಗಳು ಇದೀಗ ರಿವೀಲ್ ಆಗ್ತಾ ಇವೆ. ಇದನ್ನೆಲ್ಲ ಮಾಡಿಸಿರೋದು ಭಾರ್ಗವಿಯೇ ಅಂತ ಈ ಕಂಪನಿ ಮುಖ್ಯಸ್ಥರಾದ ರಾಮ್ ತಾತ ಸೂರ್ಯನಾರಾಯಣ ದೇಸಾಯಿಗೆ ಗೊತ್ತಿಲ್ಲ. ರಾಮ್‌ಗೂ ತಿಳಿದಿಲ್ಲ. ಉಳಿದ ಎಲ್ಲರಿಗೂ ಭಾರ್ಗವಿ ಎಂಥಾ ಕ್ರೂರಿ ಅನ್ನೋದು ಗೊತ್ತು. ಇಷ್ಟು ಸಮಯ ಆಫೀಸ್‌ನ ಅವ್ಯವಹಾರಗಳನ್ನು ತಿಳಿದುಕೊಳ್ಳುವ ಉದ್ದೇಶಕ್ಕಾಗಿಯೇ ಸಾಮಾನ್ಯ ಕೆಲಸಗಾರನಂತೆ ನಟಿಸಿದ್ದ ರಾಮ್‌, ಇದೀಗ ಬಾಸ್‌ ಆಗಿ ಬದಲಾಗಿ ಆ ಜಾಲ ಬೇಧಿಸುತ್ತಿದ್ದಾನೆ. ಅಶೋಕನೂ ಸಹ ಸಾಥ್‌ ನೀಡಿದ್ದಾನೆ. ಇನ್ನೊಂದೆಡೆ ಸೀತಾಳ ನೆಪದಲ್ಲಿ ಆಫೀಸ್‌ಗೆ ಬಂದು ರಾಮನ ಬಳಿ ಬೂಟಾಟಿಕೆ ಪ್ರದರ್ಶಿಸಿದ್ದಾರೆ ಸುಲೋಚನಾ ಮತ್ತಾಕೆಯ ಪತಿ. ಸಾಲ ಇದೆ, ಮನೆ ಹರಾಜಿಗೆ ಬಂದಿದೆ ಎಂದೆಲ್ಲ ರಾಮನ ಬ್ರೇನ್‌ ವಾಷ್‌ ಮಾಡಿ ಆತನಿಂದಲೇ ಹಣ ಪೀಕಲು ಸಂಚು ರೂಪಿಸಿದ್ದಾರೆ. ಇವರಾಡುವ ಮಾತಿಗೆ ರಾಮನೂ ಹ್ಞುಂ ಎಂದಿದ್ದಾನೆ.

ಸಂಕ್ರಾಂತಿ ಸಂಭ್ರಮದ ಶೂಟಿಂಗ್​ನಲ್ಲಿ ಏನೇನಾಯ್ತು? ವಿಡಿಯೋ ಮೂಲಕ ರೋಚಕ ಅನುಭವ ಹೇಳಿದ 'ಸೀತಾ'

ಈ ನಡುವೆ ಕ್ಯಾಬಿನ್‌ನಿಂದ ಆಚೆ ಬರುತ್ತಿದ್ದ ಭಾರ್ಗವಿಗೆ ಸುಲೋಚನೆ ಡಿಕ್ಕಿ ಹೊಡೆದಿದ್ದಾಳೆ. ಬಾಯಿ ಬಡಕಿ ಸುಲೋಚನಾ, ಭಾರ್ಗವಿಯನ್ನು ಹಿಗ್ಗಾ ಮುಗ್ಗಾ ಬೈಯುತ್ತಲೇ ಒಂದಷ್ಟು ವಿಚಾರಗಳನ್ನು ಬಾಯ್ಬಿಟ್ಟಿದ್ದಾಳೆ. ಸೀತಾ ರಾಮ ಇಬ್ಬರೂ ತುಂಬ ಆಪ್ತರು ಎಂಬಿತ್ಯಾದಿ ವಿಷ್ಯವನ್ನು ಧಿಮಾಕಿನಿಂದಲೇ ಹೇಳಿಕೊಂಡಿದ್ದಾಳೆ. ಇದನ್ನು ಕೇಳಿ ಮನದಲ್ಲಿಯೇ ಮತ್ತೊಂದು ಲೆಕ್ಕ ಹಾಕಿದ್ದಾಳೆ ಭಾರ್ಗವಿ. ಇತ್ತ ರಾಮ್‌ ಚೇಂಬರ್‌ಗೆ ಬಂದ ಭಾರ್ಗವಿ, ರಾಮ್‌ ಮತ್ತು ಅಶೋಕನ ಬಳಿಯೇ ಆಫೀಸ್‌ನಲ್ಲಾಗುತ್ತಿರುವ ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಿದ್ದಾಳೆ. ಮ್ಯಾನೇಜರ್‌ ಚರಣ್‌ ಡಿ ಅವರನ್ನು ಕರೆಸಿ, ಎಲ್ಲರೂ ಈ ಫ್ರಾಡ್‌ಗಳ ಬಗ್ಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ. ಆಗ ಇದಕ್ಕೆ ಉತ್ತರಿಸಿದ ಚರಣ್‌, ನೀವು ಇಲ್ಲಿಯವರೆಗೂ ಈ ಫ್ರಾಡ್‌ ಮಾಡುತ್ತಿರುವುದು ಯಾರು ಎಂದು ಕೇಳುತ್ತಿದ್ರಲ್ಲ, ಅದೆಲ್ಲವನ್ನು ಹೇಳುವ ಟೈಮ್‌ ಈಗ ಬಂದಿದೆ. ಇಷ್ಟು ದಿನ ಕಂಪನಿಯಲ್ಲಿ ಫ್ರಾಡ್‌ ನಡೆಸುತ್ತಿದ್ದದ್ದು ಅಶೋಕ್‌ ಸರ್‌ ಎಂದಿದ್ದಾನೆ ಚರಂಡಿ.

ಚರಂಡಿ ಹೀಗೆ ಹೇಳುತ್ತಿದ್ದಂತೆ, ರಾಮ, ವಿಶ್ವಜೀತ್ ಮತ್ತು ಭಾರ್ಗವಿ ಬೆರಗುಗಣ್ಣಿನಿಂದಲೇ ಅಶೋಕನ ಕಡೆ ಮುಖ ಮಾಡಿದ್ದಾರೆ. ಆದರೆ, ಏನೂ ತಿಳಿಯದ ಅಶೋಕ ಮಾತ್ರ, ಏನಾಗ್ತಿದೆ ಎಂದು ಅಚ್ಚರಿಗೊಳಗಾಗಿದ್ದಾನೆ. ಇಲ್ಲಿಯವರೆಗೂ ಚೆನ್ನಾಗಿಯೇ ಇದ್ದ ಅಶೋಕ ಮತ್ತು ರಾಮನ ನಡುವಿನ ಸ್ನೇಹಕ್ಕೆ ಕೊಳ್ಳಿ ಇಡಲು ಭಾರ್ಗವಿ ಹೊಸ ದಾಳ ಉರುಳಿಸಿದ್ದಾಳೆ. ಆದರೆ ಇದನ್ನು ರಾಮ ನಂಬದೇ ಸ್ನೇಹಿತನ ಪರ ನಿಂತಿದ್ದಾನೆ. ಚರಂಡಿ ಸರ್ ಕೊನೆಗೂ ಕಂಪನಿ ಆಚೆ ಹೋಗಿದ್ದಾರೆ. ಆದರೆ ಈಗಲಾದರೂ ರಾಮ ಸತ್ಯ ತಿಳ್ಕೊಳ್ತಾನಾ ಅಂದರೆ ಇಲ್ಲ. ರಾಮ ಮತ್ತೆ ಮತ್ತೊಂದು ತಪ್ಪು ನಿರ್ಣಯಕ್ಕೆ ಬಂದಿದ್ದಾನೆ. ಭಾರ್ಗವಿ ಬದಲಿಗೆ ವಿಶ್ವ ಚಿಕ್ಕಪ್ಪನನ್ನ ತಪ್ಪಿತಸ್ಥ ಅಂತ ತೀರ್ಮಾನಕ್ಕೆ ಬಂದಿದ್ದಾನೆ. ರಾಮನ ಹೊಸ ಯಡವಟ್ಟಿಗೆ ವೀಕ್ಷಕರು ಸಹನೆ ಕಳೆದುಕೊಂಡು ಕಾಮೆಂಟ್ ಮಾಡ್ತಿದ್ದಾರೆ.

ಕೊನೆಗೂ ಒಂದಾದ ಅಮ್ಮ-ಮಗಳು! ಆದರೆ... ಅತ್ತೆ ಸರಿನಾ, ಸೊಸೆ ಸರಿನಾ? ಫ್ಯಾನ್ಸ್​ ಫುಲ್​ ಕನ್​ಫ್ಯೂಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!