Weekend With Ramesh: ಈ ವಾರ ಸಾಧಕರ ಕುರ್ಚಿ ಏರಿದ ಕನ್ನಡದ ನಟ, ಯಾರೆಂದು ಗೆಸ್ ಮಾಡಿ!

Published : May 02, 2023, 03:03 PM IST
Weekend With Ramesh: ಈ ವಾರ ಸಾಧಕರ ಕುರ್ಚಿ ಏರಿದ ಕನ್ನಡದ ನಟ, ಯಾರೆಂದು ಗೆಸ್ ಮಾಡಿ!

ಸಾರಾಂಶ

ವೀಕೆಂಡ್ ವಿತ್ ರಮೇಶ್ ಸೀಸನ್ 5 ಈ ವಾರದ ಅತಥಿಯಾಗಿ ಕನ್ನಡ ಖ್ಯಾತ ನಟ ಭಾಗಿಯಾಗುತ್ತಿದ್ದಾರೆ. 

ವೀಕೆಂಡ್ ವಿತ್ ರಮೇಶ್ ಸೀಸನ್ 5ನ ಈ ವಾರದ ಅತಿಥಿ ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಕಳೆದ ವಾರ ಹಿರಿಯ ನಟ ಸಿಹಿ ಕಹಿ ಚಂದ್ರು ಮತ್ತು ಶಿಕ್ಷಣ ತಜ್ಞ ಗುರುರಾಜ ಕರಜಗಿ ಭಾಗಿಯಾಗಿದ್ದರು. ಈ ವಾರದ ಅತಿಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಯಾರು ಅಂತ ರಿವೀಲ್ ಆಗಿದೆ. ಸದ್ಯ ವೀಕೆಂಡ್ ಕುರ್ಚಿ ಮೇಲೆ ಕುಳಿತಿರುವ ಸಾಧರ ಬ್ಲರ್ ಫೋಟೋ ಹಾಕಿ ಯಾರೆಂದು ಗೆಸ್ ಅಂತ ಜೀ ವಾಹಿನಿ ಹೇಳಿದೆ. ಅಭಿಮಾನಿಗಳು ಗುರುತಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಕಳೆದ ವಾರ ಇಬ್ಬರೂ ಅತಿಥಿಗಳು ಕಾಣಿಸಿಕೊಂಡಿದ್ದರು. ಈ ಬಾರಿ ಒಬ್ರೆನಾ ಅಥವಾ ಇಬ್ಬರು ಅತಿಥಿಗಳು ಇರ್ತಾರ ಎನ್ನುವ ಬಗ್ಗೆ ಇನ್ನೂ ಆಗಿಲ್ಲ. ಸದ್ಯ ಒಬ್ಬರು ಸಾಧಕರು ಫೋಟೋ ಮಾತ್ರ ಪೋಸ್ಟ್ ಮಾಡಿದೆ ವಾಹಿನಿ. 

ಅಂದಹಾಗೆ ಈ ಬಾರಿ ವೀಕೆಂಡ್ ವಿತ್ ರಮೇಶ್ ಕೆಂಪು ಕುರ್ಚಿಯ ಮೇಲೆ ಸ್ಯಾಂಡಲ್ ವುಡ್ ಖ್ಯಾತ ನಟ ನೆನಪಿರಲಿ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದಾರೆ. 2004ರಲ್ಲಿ ಪ್ರಾಣ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ನಟ ಪ್ರೇಮ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2005ರಲ್ಲಿ ಬಂದ ನೆನಪಿರಲಿ ಸಿನಿಮಾ  ಪ್ರೇಮ್‌ಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಬಳಿಕ ಜೊತೆ ಜೊತೆಯಲಿ, ಪಲ್ಲಕ್ಕಿ, ಗುಮವಂತ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದರು.  ಪ್ರೇಮ್ ಕೊನೆಯದಾಗಿ ಪ್ರೇಮಮ್ ಪೂಜ್ಯಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮ ಬಳಿಕ ಪ್ರೇಮ್ ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಸದ್ಯ ಸಾಧಕರ ಸೀಟ್‌ನಲ್ಲಿ ಕೂರುತ್ತಿರುವ ಪ್ರೇಮ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಕನ್ನಡಿಗರ ಮನ ಗೆದ್ದ ಡಾಲಿ ಧನಂಜಯ್ 'ವೀಕೆಂಡ್ ವಿತ್ ರಮೇಶ್' ಎಪಿಸೋಡ್‌ಗೆ ಸಿಕ್ಕ ಟಿವಿಆರ್ ಎಷ್ಟು?

ಪ್ರೇಮ್ ಎಪಿಸೋಡ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಯಾವೆಲ್ಲ ವಿಚಾರಗಳು ರಿವೀಲ್ ಆಗಲಿದೆ ಎಂದು ಕಾದುನೋಡಬೇಕು. ಪ್ರೇಮ್ ಸಿನಿಮಾರಂಗದಲ್ಲಿ ಮಿಂಚುವ ಜೊತೆಗೆ ಅವರ ಪುತ್ರಿ  ಅಮೃತಾ ಕೂಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧನಂಜಯ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯಾ ಸಿನಿಮಾ ಮೂಲಕ ಅಮೃತಾ ನಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಸದ್ಯ ಈ ಸಿನಿಮಾ ನಿರ್ಮಾಣ ಹಂತದಲ್ಲಿದೆ. ವೀಕೆಂಡ್ ವಿತ್ ರಮೇಶ್‌ನಲ್ಲಿ ಪುತ್ರಿ ಅಮೃತಾ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪ್ರೇಮ್ ಎಪಿಸೋಡ್ ಹೇಗಿರಲಿದೆ ಎಂದು ನೋಡಲು ಮುಂದಿನ ವಾರದವರೆಗೂ ಕಾಯಲೇ ಬೇಕು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?
ಡೂಡಲ್ ಫೋಟೊ ಮೂಲಕ ಅವಿ ಬರ್ತ್ ಡೇಗೆ ವಿಶ್ ಮಾಡಿದ Divya Uruduga… ಫ್ಯಾನ್ಸ್’ಗೆ ಮದ್ವೆ ಚಿಂತೆ