ಕೋಟಿ ಗೆಲ್ಲೋ ಚಾನ್ಸ್​ ಇದ್ರೂ ಅರ್ಧಕ್ಕೆ ಶೋ ಬಿಟ್ಟ ಸ್ಪರ್ಧಿ: ಕಾರಣ ಕೇಳಿ ಅಮಿತಾಭ್ ಭಾವುಕ- ಚಪ್ಪಾಳೆಗಳ ಸುರಿಮಳೆ!

Published : Nov 02, 2024, 11:17 AM ISTUpdated : Nov 02, 2024, 11:22 AM IST
ಕೋಟಿ ಗೆಲ್ಲೋ ಚಾನ್ಸ್​ ಇದ್ರೂ ಅರ್ಧಕ್ಕೆ  ಶೋ ಬಿಟ್ಟ ಸ್ಪರ್ಧಿ: ಕಾರಣ ಕೇಳಿ ಅಮಿತಾಭ್ ಭಾವುಕ- ಚಪ್ಪಾಳೆಗಳ ಸುರಿಮಳೆ!

ಸಾರಾಂಶ

ಕೌನ್​ ಬನೇಗಾ ಕರೋರ್​ಪತಿಯಲ್ಲಿ ಕೋಟಿ ಗೆಲ್ಲೋ ಚಾನ್ಸ್​ ಇದ್ರೂ ಅರ್ಧಕ್ಕೆ ಶೋ ಬಿಟ್ಟ ಉಪಕುಲಪತಿ ನೀರಜ್​ ಸಕ್ಸೇನಾ. ಕಾರಣ ಕೇಳಿ ಖುದ್ದು ಅಮಿತಾಭ್​ ಭಾವುಕರಾದರು. ಇದಕ್ಕೆ ಕಾರಣವೇನು?   

ಕೌನ್ ಬನೇಗಾ ಕರೋರ್​ಪತಿಯ 16ನೇ ಸೀಸನ್​ ನಡೆಯುತ್ತಿದೆ.  ಆಗಸ್ಟ್ 12 ರಂದು ಗ್ರ್ಯಾಂಡ್ ಪ್ರೀಮಿಯರ್ ಸಂಚಿಕೆಯೊಂದಿಗೆ ಪ್ರಸಾರವಾಯಿತು. ಈ ಸೀಸನ್​ನಲ್ಲಿಯೂ  ನಿರೂಪಕರಾಗಿ ಬಿಗ್​ ಬಿ ಅಮಿತಾಭ್​ ಬಚ್ಚನ್​  ಮರಳಿದ್ದಾರೆ. ಆದರೆ ಕಳೆದ 15 ಸೀಸನ್​ಗಳಲ್ಲಿ ಹಿಂದೆಂದೂ ಆಗದ, ಬಹುಶಃ ಮುಂದೆ ಕೂಡ ಆಗುವುದು ಅಸಾಧ್ಯ ಎನ್ನುವ ಒಂದು ಘಟನೆಗೆ 16ನೇ ಸೀಸನ್​ ಸಾಕ್ಷಿಯಾಯಿತು. ವೀಕ್ಷಕರಿಂದ ಚಪ್ಪಾಳೆಗಳ ಸುರಿಮಳೆಯಾದರೆ, ಖುದ್ದು ಅಮಿತಾಭ್​ ಅವರೇ ಭಾವುಕರಾಗಿ ಇದು ನನ್ನ ಜೀವನದಲದಲ್ಲಿ ನಡೆದ ಮೊದಲ ಘಟನೆ ಎಂದು ಹೇಳಿದರು. ಅಷ್ಟಕ್ಕೂ ಆಗಿದ್ದೇನು ಎಂದರೆ ಕೋಟಿ ಗೆಲ್ಲುವ ಅವಕಾಶವಿದ್ದರೂ ಸ್ಪರ್ಧಿಯೊಬ್ಬರು ಅರ್ಧಕ್ಕೆ ಶೋ ಬಿಟ್ಟು, ಇಷ್ಟೇ ಸಾಕು ಎಂದದ್ದು. ಅದಕ್ಕೆ ಅವರು ಕೊಟ್ಟ ಕಾರಣ ಕೇಳಿ  ವೀಕ್ಷಕರೂ ಭಾವುಕರಾಗಿದ್ದಾರೆ.

ಅವರ ಹೆಸರು ನೀರಜ್ ಸಕ್ಸೇನಾ. ಇವರು ಪಶ್ಚಿಮ ಬಂಗಾಳದ ವಿಶ್ವವಿದ್ಯಾಲಯವೊಂದರ ಉಪಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಾ ಉತ್ತರಗಳಿಗೂ ಸಲೀಸಾಗಿಯೇ ಯಾವುದೇ ಲೈಫ್​ಲೈನ್​ ಸಹಾಯವಿಲ್ಲದೇ ಪಟ ಪಟ ಎಂದು ಉತ್ತರಿಸಿದರು. 3.20 ಲಕ್ಷ ರೂಪಾಯಿಗಳನ್ನು  ಸುಲಭದಲ್ಲಿ ಗೆದ್ದರು. ಈ ಸಂದರ್ಭದಲ್ಲಿ ಅವರು ತಾವು ಡಾಕ್ಟರ್ ಅಬ್ದುಲ್ ಕಲಾಂ ಅಡಿ ಕೆಲಸ ಮಾಡಿದ ಬಗ್ಗೆಯೂ ತಿಳಿಸಿದರು. ಜೊತೆಗೆ, ಅವರು ತಮ್ಮ ಮೇಲೆ ಬಿರಿದ ಪ್ರಭಾವದ ಬಗ್ಗೆ ವಿವರಿಸಿದ ನೀರಜ್​ ಅವರು, ಕಲಾಂ ಅವರ ಜೀವನ ಕ್ರಮ ನನಗೂ ಸ್ಫೂರ್ತಿಯಾಗಿದೆ. ಸ್ವಾರ್ಥದಿಂದ ಜೀವಿಸದೇ ಪರರಿಗಾಗಿಯೂ ಜೀವನ ಮೀಸಲು ಇಡಬೇಕು, ಬೇರೆಯವರ ಬಗ್ಗೆಯೂ ಕಾಳಜಿ ತೋರಬೇಕು ಎಂದು ಕಲಿತಿರುವುದಾಗಿ ತಿಳಿಸಿದರು. 

KBC 16: ಮದುವೆಯಾಗದ ಮಹಿಳೆಯರು ಸಂಸಾರಕ್ಕೆ ಭಾರ ಎಂದ ಸ್ಪರ್ಧಿಗೆ ಅಮಿತಾಭ್ ಬಚ್ಚನ್​ ಕ್ಲಾಸ್​! ​

ಇವೆಲ್ಲಾ ಆಗುತ್ತಿದ್ದಂತೆಯೇ, 3.20 ಲಕ್ಷ ರೂಪಾಯಿ ಗಳಿಸಿದ ಬಳಿಕ ನೀರಜ್​ ಅವರು ನನ್ನೊಂದು ರಿಕ್ವೆಸ್ಟ್​ ಎಂದರು. ಅಮಿತಾಭ್​ ಅವರು ಏನು ಎಂದು ಪ್ರಶ್ನಿಸಿದಾಗ, ನಾನು ಇಲ್ಲಿಗೇ ಶೋ ಬಿಡುತ್ತೇನೆ ಎಂದರು. ಅವರ ಬಳಿ ಲೈಫ್​ ಲೈನ್​ ಇನ್ನೂ ಇದ್ದವು. ಇನ್ನೂ ಕೋಟಿ ಕೋಟಿ ಗೆಲ್ಲುವ ಅವಕಾಶವಿತ್ತು. ಶೋ ಬಿಡುತ್ತೇನೆ ಎಂಬ ಮಾತು ಕೇಳುತ್ತಲೇ ಅಮಿತಾಭ್​ ಸೇರಿ ಎಲ್ಲರೂ ಆಶ್ಚರ್ಯಚಕಿತರಾದರು. ಕೊನೆಗೆ ಅವರು ನೀಡಿದ ಹೇಳಿಕೆ ಮಾತ್ರ ಎಲ್ಲರನ್ನೂ ಭಾವುಕರನ್ನಾಗಿಸಿತು. ಅವರು ಹೇಳಿದ್ದೇನೆಂದರೆ,   ನನಗಿಂತ ತುಂಬಾ ಕಿರಿಯರಾಗಿರುವ ಸ್ಪರ್ಧಿಗಳು ಇಲ್ಲಿ ಕುಳಿತುಕೊಳ್ಳಲು ಕಾಯುತ್ತಿದ್ದಾರೆ. ಅವರೆಲ್ಲರೂ ನನಗಿಂತ ಕಿರಿಯರು. ನಾನು ಇಲ್ಲಿ ತುಂಬಾ ಹೊತ್ತು ಕುಳಿತುಕೊಂಡರೆ ಅವರಿಗೆ ಅವಕಾಶ ಸಿಗುವುದಿಲ್ಲ. 3.20 ಲಕ್ಷ ರೂಪಾಯಿ ಗೆದ್ದ ತೃಪ್ತಿ ನನಗೆ ಇದೆ. ಇಷ್ಟು ಸಾಕು. ಅವರಿಗೂ ಅವಕಾಶ ಸಿಗಲಿ ಎಂದು ಕೈಮುಗಿದರು.

ಇಷ್ಟು ಹೇಳುತ್ತಿದ್ದಂತೆಯೇ ಅಮಿತಾಭ್​ ಅವರಿಗೆ ಮಾತೇ ಬರಲಿಲ್ಲ. ಅಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆಗಳ ಸುರಿಮಳೆಯನ್ನೇ ಸುರಿಸಿದರು. ಕೌನ್​ ಬನೇಗಾ ಕರೋರ್​ಪತಿಯ ಇತಿಹಾಸದಲ್ಲಿ ಇಂಥ ವ್ಯಕ್ತಿಯನ್ನು ನಾನು ಕಂಡೇ ಇಲ್ಲ. ಹಣ ಪಡೆಯುವ ಅವಕಾಶ ಇದ್ದರೂ ಬೇರೆಯವರಿಗಾಗಿ ಸೀಟು ಬಿಟ್ಟು ಕೊಡುವ ವ್ಯಕ್ತಿಯ ಬಗ್ಗೆ ಏನು ಹೇಳುವುದೋ ಗೊತ್ತಾಗುತ್ತಿಲ್ಲ ಎಂದು ಅಮಿತಾಭ್​ ಭಾವುಕರಾದರು. ಅಷ್ಟಕ್ಕೂ ಅವರು ಹೀಗೆ ಮಾಡಿದ್ದರಿಂದ ಅನಾಥಾಶ್ರಮದಲ್ಲಿ ಬೆಳೆದ ಹೆಣ್ಣುಮಗಳೊಬ್ಬಳಿಗೆ ಹಾಟ್​ ಸೀಟ್​ನಲ್ಲಿ ಕುಳಿತುಕೊಳ್ಳುವ ಅವಕಾಶ ದೊರೆಯಿತು. ಹೆಣ್ಣುಮಕ್ಕಳು ಎನ್ನುವ ಕಾರಣಕ್ಕೆ ಅಪ್ಪ-ಅಮ್ಮ ಮೂವರನ್ನೂ ಬಿಟ್ಟು ಹೋಗಿದ್ದು, ತಾವು ಅನಾಥಾಶ್ರಮದಲ್ಲಿ ಬೆಳೆದದ್ದನ್ನು ಆಕೆ ಹೇಳಿದರು. ನೀರಜ್​ ಅವರಿಂದಾಗಿ ತಮಗೆ ಅವಕಾಶ ಲಭಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು. ಇದನ್ನು ಕೇಳಿ ಪ್ರೇಕ್ಷಕರ ಕಣ್ಣುಗಳು ತೇವಗೊಂಡವು. 

ಹುಟ್ಟಿನಿಂದಲೇ 7 ಆಪರೇಷನ್​! ಒಂದು ಕೋಟಿ ಗೆದ್ದ ಕಾಶ್ಮಿರದ ಯುವಕ- ಏಳು ಕೋಟಿ ಪ್ರಶ್ನೆಗೂ ಸರಿಯುತ್ತರ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!