ವಿದೇಶ ಸುತ್ತುತ್ತಾ ಫೇಮಸ್ ಆಗಿರುವ ಯೂಟ್ಯೂಬರ್ ಮತ್ತು ಟ್ರಾವೆಲ್ ವ್ಲಾಗರ್ ಡಾ ಬ್ರೋ (Dr Bro) ಅಲಿಯಾಸ್ ಗಗನ್ ಶ್ರೀನಿವಾಸ್ ಈಗ ಬೀದಿಯಲ್ಲಿ ಭಿಕ್ಷುಕನಾಗಿದ್ದಾರೆ.ಯಾವ ಧರ್ಮದವರು ಹೆಚ್ಚು ಭಿಕ್ಷೆ ಹಾಕಿದರು ಇಲ್ಲಿದೆ ನೋಡಿ
ವಿದೇಶ ಸುತ್ತುತ್ತಾ ಫೇಮಸ್ ಆಗಿರುವ ಯೂಟ್ಯೂಬರ್ ಮತ್ತು ಟ್ರಾವೆಲ್ ವ್ಲಾಗರ್ ಡಾ ಬ್ರೋ (Dr Bro) ಅಲಿಯಾಸ್ ಗಗನ್ ಶ್ರೀನಿವಾಸ್ ಈಗ ಬೀದಿಯಲ್ಲಿ ಭಿಕ್ಷುಕನಾಗಿದ್ದಾರೆ. 2019ರಲ್ಲಿ ನನ್ನ ಜೀವನದಲ್ಲಿ ಏನೇನೆಲ್ಲ ಆಗಿತ್ತು ಗುರು ಎಂದು ಅಡಿಬರಹ ಬರೆದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತಲೆಯಲ್ಲಿ ಹ್ಯಾಟ್ ಹಾಕಿ ಬೀದಿಯಲ್ಲಿ ಕುಳಿತಿರುವ ಡ್ರಾ.ಬ್ರೋ ಕೈನಲ್ಲಿ ಒಂದು ಬೋರ್ಡ್ ಇದೆ. ಆ ಬೋರ್ಡ್ ನಲ್ಲಿ ಯಾವ ಧರ್ಮದವರು ಭಿಕ್ಷುಕನನ್ನು ತುಂಬಾ ಕೇರ್ ಮಾಡುತ್ತಾರೆ ಎಂದು ಬರೆದಿದೆ. ಡ್ರಾ.ಬ್ರೋ ಮುಂದುಗಡೆ ಮೂರು ಬೋರ್ಡ್ ಗಳಿದ್ದು, ಅದರಲ್ಲಿ ಕ್ರೈಸ್ತ, ಹಿಂದೂ ,ಮುಸ್ಲಿಂ ಎಂದು ಬರೆಯಲಾಗಿದೆ. ಜೊತೆಗೆ ಒಂದೇ ಬಣ್ಣದ (ಹಸಿರು) ಮೂರು ಬೌಲ್‌ಗಳನ್ನು ಇಡಲಾಗಿದೆ. ಅದರಲ್ಲಿ ಚಿಲ್ಲಿರೆ ಹಣವೂ ಇದೆ. ಒಂದೇ ಸೈಸ್‌ನ , ಒಂದೇ ಬಣ್ಣದ ಬೌಲ್ ಇಟ್ಟಿರುವುದು ಸಮಾನತೆಯನ್ನು ತೋರಿಸಿದಂತಿದೆ. ನಾವೆಲ್ಲರೂ ಒಂದೇ ಎನ್ನುವ ಭಾವವನ್ನು ಕೂಡ ಎತ್ತಿ ತೋರಿಸುತ್ತಿದೆ. ಇದರ ಜೊತೆಗೆ ಭಾರತ, ಕರ್ನಾಟಕ, ಕನ್ನಡ ಎಂಬ ಬೋರ್ಡ್ ಇಡಲಾಗಿದ್ದು, ಇದರಲ್ಲಿ ಬಣ್ಣವಿಲ್ಲದ ಡಬ್ಬವೊಂದನ್ನು ಇಡಲಾಗಿದೆ.
ಹರಿದ ಅಂಗಿಯನ್ನು ಹಾಕಿರುವ ಗಗನ್ ಇದನ್ನು ಮಲ್ಲೇಶ್ವರಂನ ಬೀದಿಗಳಲ್ಲಿ ಕುಳಿತು ತೆಗೆದ ಫೋಟೋವಾಗಿದೆ. ಏಕೆಂದರೆ ಈ ಫೋಟೋ ಹಾಕುವಾಗ ಲೊಕೇಶನ್ ಮಲ್ಲೇಶ್ವರಂ ಎಂದು ಡಾ.ಬ್ರೋ ಉಲ್ಲೇಖಿಸಿದ್ದಾರೆ.
ಇದು 2019ರ ಮೇ 28 ರಂದು ಅವರು ಮಾಡಿರುವ ವಿಡಿಯೋ ಆಗಿದ್ದು, ಇಂದಿಗೆ 5 ವರ್ಷ ಪೂರ್ಣವಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಹಳೆ ನೆನಪನ್ನು ಹಂಚಿಕೊಂಡು ನನ್ನ ಅತ್ಯಂತ ಇಷ್ಟದ ನೆನಪು ಎಂದು ಬರೆದುಕೊಂಡಿದ್ದಾರೆ. ಜಾತಿವಾದ, ಧರ್ಮದ ಕಿತ್ತಾಟದ ಬಗ್ಗೆ ಇದೊಂದು ಸಾಮಾಜಿಕ ಪ್ರಯೋಗದಂತೆ ರಿಯಾಲಿಟಿ ಚೆಕ್‌ಗಾಗಿ ಈ ವಿಡಿಯೋವನ್ನು ಮಾಡಲಾಗಿದೆ ಎಂದು ಬ್ರೋ ಹೇಳಿಕೊಂಡಿದ್ದಾರೆ.
ಜನಗಳು ಧರ್ಮವನ್ನು ಹೆಚ್ಚು ಪ್ರೀತಿಸುತ್ತಾರೋ ಅಥವಾ ದೇಶವನ್ನು ಪ್ರೀತಿಸುತ್ತಾರೋ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಈ ವಿಡಿಯೋವನ್ನು ಮಾಡಲಾಗಿದೆ. ತುಂಬಾ ಮಂದಿ ಗಗನ್ ನೋಡಿ ಶಾಕ್ ಆಗಿದ್ದಾರೆ. ಮತ್ತು ಬಂದವರಿಗೆ ತನ್ನ ಐಡಿಯಾವನ್ನು ವಿವರಿಸಿದ್ದಾರೆ. ಆಶ್ಚರ್ಯವೆಂದರೆ ಪೊಲೀಸರು ಡಾ.ಬ್ರೋ ಎದುರುಗಡೆ ಹಾದು ಹೋದರು ಕ್ಯಾರೇ ಮಾಡದೆ ಮುಂದೆ ಸಾಗಿದ್ದಾರೆ. ಬಹಳಷ್ಟು ಮಂದಿ ಡ್ರಾ ಬ್ರೋ ಗುರುತಿಸಿ ಅವರನ್ನು ಅಭಿನಂದಿಸಿದ್ದಾರೆ. ಭಾರತ, ಕರ್ನಾಟಕ, ಕನ್ನಡವನ್ನು ಆಯ್ಕೆ ಮಾಡಿದವರಿಗೆ ಕೈಕುಲುಕಿ ಸಂತಸ ವ್ಯಕ್ತಪಡಿಸಿದ್ದಾರೆ
ಕೆಲವೇ ಕೆಲವು ವ್ಯಕ್ತಿಗಳು ಧರ್ಮವನ್ನು ಆಯ್ಕೆ ಮಾಡಿ ಚಿಲ್ಲರೆ ಹಾಕಿದ್ದಾರೆ. ವಿಡಿಯೋದ ಕೊನೆಯಲ್ಲಿ ಶೇ.5ರಷ್ಟು ಮಂದಿ ಮಾತ್ರ ಜಾತಿ, ಧರ್ಮದ ಬಗ್ಗೆ ಒಲವು ಹೊಂದಿದ್ದು, ಶೇ.95 ಮಂದಿಯಷ್ಟು ಮಂದಿ ಭಾರತೀಯರಾಗಿಯೇ ಉಳಿದುಕೊಂಡಿದ್ದಾರೆ ಎಂದು ಡಾ.ಬ್ರೋ ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ಡ್ರಾ ಬ್ರೋ ಕುಳಿತಿದ್ದ ಪಕ್ಕದಲ್ಲೇ ಮುದುಕಿಯೊಬ್ಬಳು ಕುಳಿತು ಬಿಕ್ಷೆ ಬೇಡುತ್ತಿರುವುದು ವಿಡಿಯೋದಲ್ಲಿ ಕಂಡಿದೆ. ಅದೇ ಮುದುಕಿಗೆ ಸಂಗ್ರಹವಾದ ಹಣವನ್ನು ಗಗನ್ ನೀಡಿದ್ದಾರೆ. ಮುದುಕಿ ಖುಷಿ ಪಟ್ಟಿದ್ದಾರೆ.