Kannadathi : ಹರ್ಷ ಭುವಿಯ ಮದುವೆ ಆಗುತ್ತಾ ಇಲ್ವಾ, ದಿ ನೇಶನ್ ವಾಂಟ್ಸ್ ಟು ನೋ!

Published : Jun 24, 2022, 09:44 AM IST
Kannadathi : ಹರ್ಷ ಭುವಿಯ ಮದುವೆ ಆಗುತ್ತಾ ಇಲ್ವಾ, ದಿ ನೇಶನ್ ವಾಂಟ್ಸ್ ಟು ನೋ!

ಸಾರಾಂಶ

ಸದ್ಯಕ್ಕೀಗ ಸೋಷಿಯಲ್‌ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿರುವುದು ಕನ್ನಡತಿ ಸೀರಿಯಲ್‌ನ ಮದುವೆ ಬಗ್ಗೆ. ಹರ್ಷ ಭುವಿ ಮದುವೆ ಆಗ್ತಾರಾ ಇಲ್ವಾ ಅನ್ನೋದು ದೊಡ್ಡ ಪ್ರಶ್ನೆ. ಹರ್ಷ ಭುವಿ ಮದುವೆ ಆಗುತ್ತಾ ಇಲ್ವಾ, ದಿ ನೇಶನ್ ವಾಂಟ್ಸ್ ಟು ನೋ ಅಂತ ಹ್ಯಾಶ್‌ಟ್ಯಾಗ್ ಟ್ರೆಂಡ್ ಶುರುವಾಗೋದೊಂದು ಬಾಕಿ!

ಕನ್ನಡತಿ ಸೀರಿಯಲ್‌(Kannadathi serial) ನ ಹೆವ್ವಿ ಡ್ರಾಮ(Drama) ಕಂಡು ಅಭಿಮಾನಿಗಳು ತಲೆ ತಲೆ ಚಚ್ಚಿಕೊಳ್ಳೋದೊಂದು ಬಾಕಿ. ಕಳೆದೆರಡು ವಾರದಿಂದ ಭುವಿ ಹರ್ಷನ ಮದುವೆಯನ್ನು ರಬ್ಬರ್ ನಂತೆ ಎಳೆದಾಡುತ್ತಿದ್ದ ಸೀರಿಯಲ್ ಟೀಮ್(Serial Team) ಕೊನೇ ಕ್ಷಣದಲ್ಲೂ ಫಿಟ್ಟಿಂಗ್ ಇಟ್ಟು ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ. ಅವರೋ ಟೆನ್ಶನ್(Tension) ಅಲ್ಲಿ ಏನು ಮಾಡಬೇಕು ಅಂತ ಗೊತ್ತಾಗದೇ ಸೋಷಿಯಲ್ ಮೀಡಿಯಾ(Social media)ದಲ್ಲಿ ಯದ್ವಾ ತದ್ವಾ ಸ್ಟೇಟಸ್(Status) ಹಾಕಿ ಸೀರಿಯಲ್‌ ಟೀಮ್‌ನವರ ಮೇಲೆ ಹರಿಹಾಯುತ್ತಿದ್ದಾರೆ. ಬಹುಶಃ ಶೂಟಿಂಗ್(Shooting) ನಡೆಯೋ ಜಾಗ ಗೊತ್ತಿದ್ದಿದ್ರೆ ಅಲ್ಲೇ ಹೋಗಿ ಹರ್ಷಂಗೂ ಭುವಿಗೂ ತಾಳಿ ಕಟ್ಟಿಸಿಯೇ ಬಿಡ್ತಿದ್ರೇನೋ..

ಇರಲಿ ಬಿಡಿ, ಈಗ ಮ್ಯಾಟರಿಗೆ ಬರೋಣ. ಹರ್ಷ ಭುವಿ ಮದುವೆ ಸದ್ಯದ ಕನ್ನಡತಿ ಸೀರಿಯಲ್‌ನ ಹೈಲೈಟ್(Highlight). ಮಾಲಾ ಇಂಡಸ್ಟ್ರಿಯ ಒಡತಿ ರತ್ನಮಾಲಾಳ ಮಗ ಹರ್ಷ ಕುಮಾರನಿಗೂ, ಕನ್ನಡ ಟೀಚರ್ ಭುವನೇಶ್ವರಿಗೂ ಮದುವೆ(Wedding) ಅಂತ ಘೋಷಿಸಿ, ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲೇ ಭಾವೀ ಮದುಮಕ್ಕಳಿಂದ ಪೂಜೆ ಮಾಡಿಸಿ, ಲಗ್ನ ಪತ್ರಿಕೆ ಹಂಚಿ ಮದುವೆ ಶುರು ಮಾಡಿದ್ದೂ ಆಯ್ತು. ಈ ಮದುವೆ ನಿರ್ವಹಣೆಯ ಎಲ್ಲ ಜವಾಬ್ದಾರಿಯನ್ನೂ ತೆಗೆದುಕೊಂಡು ಅದ್ದೂರಿ ಆದರೆ ಅರ್ಥಪೂರ್ಣ ಮದುವೆಯ ಅರೇಂಜ್ ಮೆಂಟ್ಸ್(Arrangements) ಮಾಡಿದ್ದು ವರೂ ನಡೆಸುವ ಸಪ್ತಪದಿ ಕಂಪನಿ.

Kannadathi: ಮದುಮಗಳಂತೆ ರೆಡಿಯಾದ ವರೂ, ಹರ್ಷನ ಹೆಂಡ್ತಿ ನಾನೇ ಅಂತಿದ್ದಾಳಲ್ಲಪ್ಪಾ!

ಬೆಟ್ಟ ಗುಡ್ಡದ ಹಸಿರಿನ ನಡುವೆ ಸಹಜ ಹೂವಿನ ಅಲಂಕಾರದಲ್ಲೇ ಮೂಡಿಬಂದ ಮದುವೆಯ ಸೆಟ್ ಅಂತೂ ಬಹಳ ಯುನೀಕ್(Unique) ಅನಿಸೋ ಹಾಗಿತ್ತು. ಮದುಮಗಳು ಭುವಿಯ ಸಿಂಗಾರ, ಮದುಮಗಳ ಲುಕ್‌ನಲ್ಲಿ ಅವಳ ಚೆಲುವು ಎಲ್ಲವೂ ಸೊಗಸಾಗಿತ್ತು. ಆದರೆ ಎಲ್ಲ ಬಣ್ಣ ಮಸಿ ನುಂಗ್ತು ಅನ್ನೋ ಹಾಗೆ ವರೂ ಮಾಡಿದ ಅವಾಂತರ ಈ ಎಲ್ಲ ಸಂಭ್ರಮವನ್ನೂ ನುಂಗಿ ಹಾಕಿತು.
ಭುವಿ ಮದುಮಗಳಾಗಿ ಇನ್ನೇನು ಮಂಟಪಕ್ಕೆ ಹೋಗಬೇಕು ಅನ್ನುವ ಹೊತ್ತಿಗೆ ಹರ್ಷ ನನ್ನ ಹೀರೋ ಅವನನ್ನು ನನಗೇ ಬಿಟ್ಟು ಕೊಡು ಅಂತ ವರೂಧಿನಿಯ ಹಠ ಶುರುವಾಯ್ತು. ಭುವಿ ಸಮಾಧಾನದಲ್ಲಿ ಇದು ತನ್ನೊಬ್ಬಳ ನಿರ್ಧಾರ ಅಲ್ಲ, ಗುರು ಹಿರಿಯರು ಎಲ್ಲಾ ಸೇರಿ ನಿಶ್ಚಯಿಸಿದ ಮದುವೆ ಇದು. ಇನ್ನೇನು ಮಂಟಪಕ್ಕೆ ಹೋಗಬೇಕು ಅನ್ನುವ ಹೊತ್ತಲ್ಲಿ ನೀನು ಹೀಗೆಲ್ಲ ಮಾಡೋದು ಸರಿಯಲ್ಲ ಅಂತ ಆ ಹೊತ್ತಲ್ಲೂ ಸಾವಧಾನದಲ್ಲಿ ಬುದ್ಧಿ ಹೇಳಿದಳು. ಆದರೆ ಅವಳೀಗ ಭುವಿಯ ಗೆಳತಿ ವರೂ ಆಗಿ ಉಳಿದಿಲ್ಲ. ಹರ್ಷನನ್ನು ಹೀರೋ ಆಗಿ ಆರಾಧಿಸುವ ವರೂ ಆಗಿದ್ದಾಳೆ. ಭುವಿ ಎಷ್ಟು ಬುದ್ಧಿ ಹೇಳಿದರೂ ಕೇಳದೇ ತನ್ನ ಕೈಯನ್ನೇ ಚಾಕುವಿನಲ್ಲಿ ಕುಯ್ದುಕೊಂಡು ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಾಳೆ. ಹಸೆಮಣೆ ಏರಲು ಕೆಲವೇ ಕ್ಷಣಗಳಿರುವಾಗ ಭುವಿ ಹಸೆಮಣೆ ಬಿಟ್ಟು ಗೆಳತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾಳೆ. ವಿಧಿಯಿಲ್ಲದೇ ಹರ್ಷನೂ ಅವಳ ಹಿಂದೆ ಬಂದಿದ್ದೇನೆ.

 

ಇಷ್ಟೆಲ್ಲ ಹೈ ಡ್ರಾಮಾ ನಡೆದ ಮೇಲೆ ಈ ಮದುವೆ ನಡೆಯುತ್ತಾ, ನಡೆದರೂ ಮೊದಲಿನ ಖುಷಿ, ಸಂಭ್ರಮ ಉಳಿಯುತ್ತಾ? ಅನ್ನೋದು ಸದ್ಯದ ಪ್ರಶ್ನೆ. ಒಂದು ವೇಳೆ ಈ ಮದುವೆಯನ್ನು ಕೆಡಿಸಬೇಕು ಅನ್ನೋದೇ ಇದ್ದಿದ್ದರೆ ಸೀರಿಯಲ್‌ನವರು ಅಷ್ಟೆಲ್ಲ ದುಡ್ಡು ಖರ್ಚು ಮಾಡಿ ಯಾಕೆ ಇಂಥಾ ಅದ್ದೂರಿ ಸುಂದರ ಸೆಟ್ ಹಾಕಬೇಕಿತ್ತು ಅನ್ನೋದು ಈ ಸೀರಿಯಲ್ ಫ್ಯಾನ್ಸ್(Fans) ಪ್ರಶ್ನೆ. ಅವರ ಸಿಟ್ಟೆಲ್ಲ ಈಗ ಈ ಪಾತ್ರಗಳನ್ನು ಸೂತ್ರದ ಗೊಂಬೆಗಳ ಹಾಗೆ ಕುಣಿಸುವ ಸೀರಿಯಲ್ ಟೀಮ್ ಮೇಲೆ ಹೋಗಿದೆ. ನಿರ್ದೇಶಕರಿಂದ ಹಿಡಿದು ಕತೆಗಾರರವರೆಗೆ ಎಲ್ಲರಿಗೂ ಮನಸೋ ಇಚ್ಛೆ ಬೈಯ್ಯುತ್ತಿದ್ದಾರೆ. ಸದ್ಯಕ್ಕೆ ಇದು ಸೋಷಿಯಲ್ ಮೀಡಿಯಾದಲ್ಲಿ ಯಾವ ಲೆವೆಲ್‌ಗೆ ಬಂದು ನಿಂತಿದೆ ಅಂದರೆ, ಹರ್ಷ, ಭುವಿ ಮದ್ವೆ ಆಗುತ್ತಾ ಇಲ್ವಾ, ದಿ ನೇಶನ್ ವಾಂಟ್ಸ್ ಟು ನೋ ಅಂತ ಹ್ಯಾಶ್ ಟ್ಯಾಗ್ ಟ್ರೆಂಡ್ (Hashtags Trend) ಶುರು ಆಗೋದೊಂದು ಬಾಕಿ ಇದೆ!

ವಂಶಿಕಾ ನಟನೆ ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗುತ್ತಾ? ಮಾ.ಆನಂದ್ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?