300 ಸಂಚಿಕೆ ಪೂರೈಸಿದ ‘ನಂದಗೋಕುಲ’, ಯಶಸ್ಸಿಗೆ ಪತ್ನಿಯೇ ಕಾರಣ ಎಂದ ನಿರ್ದೇಶಕ ಶ್ರವಂತ್

Published : Jul 24, 2026, 06:20 PM IST
Nandagokula serial

ಸಾರಾಂಶ

Nandagokula Serial: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ‘ನಂದಗೋಕುಲ’ ಧಾರಾವಾಹಿ ಇದೀಗ 300 ಸಂಚಿಕೆ ಪೂರೈಸಿದ್ದು, ಧಾರಾವಾಹಿ ತಂಡ ಈ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿರ್ದೇಶಕ ಶ್ರವಂತ್ ಯಶಸ್ಸಿನ ಕ್ರೆಡಿಟನ್ನು ತಮ್ಮ ಪತ್ನಿ ರಾಧಿಕಾಗೆ ನೀಡಿದ್ದಾರೆ.

300 ಸಂಚಿಕೆ ಪೂರೈಸಿದ ‘ನಂದಗೋಕುಲ’

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ನಂದಗೋಕುಲ’ ಇದೀಗ 300 ಸಂಚಿಕೆ ಪೂರೈಸಿದೆ. ತುಂಬು ಕುಟುಂಬದ ಕತೆಯನ್ನು ಹೇಳುತ್ತಿರುವ ಈ ಧಾರಾವಾಹಿ ಜನಮನ ಗೆಲ್ಲುತ್ತಾ ಭರ್ಜರಿಯಾಗಿ ಸಾಗುತ್ತಿದೆ. ಮಾವ ಅತ್ತೆ ಅಂದ್ರೆ, ಹೇಗಿರಬೇಕು, ಅಣ್ಣ ತಮ್ಮನ ಸಂಬಂಧ ಹೇಗಿರಬೇಕು, ಅತ್ತೆ-ಸೊಸೆಯಂದಿರ ಭಾಂದವ್ಯ ಹಾವು-ಮುಂಗುಸಿಯಂತಲ್ಲ ಬದಲಾಗಿ ಮೀನಾ ಮತ್ತು ಗಿರಿಜಾರಂತೆ, ತಾಯಿ-ಮಗಳ ಸಂಬಂಧ ಇರಬೇಕು ಎಂದು ತೋರಿಸಿಕೊಂಡಂತಹ ಸುಂದರವಾದ ಧಾರಾವಾಹಿ ಇದಾಗಿದೆ. ಇದೀಗ ಧಾರಾವಾಹಿ 300 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ.

ಏನು ಹೇಳಿದ್ರು ನಟರು?

ನಂದಗೋಕುಲ ಧಾರಾವಾಹಿಯ ನಟರು 300 ಸಂಚಿಕೆ ಪೂರೈಸಿದ ಸಂಭ್ರಮದಲ್ಲಿ ಮಾತನಾಡಿ, ಇಂತಹ ಒಳ್ಳೆಯ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಕೊಟ್ಟದ್ದಕ್ಕೆ ಧನ್ಯವಾದಗಳು, ನಿರ್ದೇಶಕರಾದ ಶ್ರವಂತ್ ಸರ್ ಹೊಸಬರಿಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸಿದ್ದಾರೆ, ಇದು ನಮ್ಮ ಜೀವನದಲ್ಲಿ ಬೆಸ್ಟ್ ಅಧ್ಯಾಯ ಕೂಡ ಆಗಿದೆ ಎಂದು ನಟ-ನಟಿಯರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಧಾರಾವಾಹಿ ಬಗ್ಗೆ ನಿರ್ದೇಶಕರು ಹೇಳಿದ್ದೇನು?

ಈ ಸಂಭ್ರಮದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿರ್ದೇಶಕರಾದ ಶ್ರವಂತ್, ಪತ್ನಿಯ ಜೊತೆಗಿನ ಫೋಟೊಗಳನ್ನು ಹಂಚಿಕೊಂಡು ‘ನಂದಗೋಕುಲ’ ನನ್ನ ಜೀವನದ ಬಹು ದೊಡ್ಡ ಪಾತ್ರ ವಹಿಸಿದ ಧಾರವಾಹಿ. ಇದರ ಕಥೆಯನ್ನು ಮೊದಲು ಆಲಿಸಿ ಇದು ಯಶಸ್ಸು ಖಂಡಿತಾ ಕಾಣುತ್ತದೆ ಅಂತ ಮೊದಲ ಭರವಸೆ ಕೊಟ್ಟವಳು ನನ್ನ ಪತ್ನಿ ರಾಧಿಕಾ ಶ್ರವಂತ್. ಅಂದಿನಿಂದ ಇಲ್ಲಿಯವರೆಗೂ ಪ್ರತಿ ಹೆಜ್ಜೆಯಲ್ಲೂ ನನ್ನ ಕಷ್ಟಗಳನ್ನು ತನ್ನ ಕಷ್ಟ ಅಂದುಕೊಂಡಳು. ನನ್ನ ಗೆಲುವು ನನ್ನದು ಮಾತ್ರ ಅಲ್ಲ. ಅದು ನಿನ್ನದು ಕೂಡ. ಇಂದು ಜನರೆಲ್ಲಾರೂ ನೋಡಿ ಮೆಚ್ಚುತ್ತಿರುವ ಪಾತ್ರಗಳನ್ನ ಆಯ್ಕೆ ಮಾಡಿ ನಂದಗೋಕುಲದ ಕಥೆಯನ್ನು ಮತ್ತಷ್ಟು ಯಶಸ್ವೀ ಮಾಡಿದ ನನ್ನ ಪತ್ನಿ, ಸ್ನೇಹಿತೆ, ಹಿತೈಷಿಯಾದ ರಾಧಿಕಾ ಶ್ರವಂತ್ I Love You ನಿನ್ನ ಋಣದ ಭಾರ ನನ್ನ ಮೇಲಿದೆ ದೇವರೇ’ ಎಂದು ಬರೆದುಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರೇಣುಕಾ ಯಲ್ಲಮ್ಮ' ಜೋಡಿ ಮತ್ತೆ ಒಂದಾಯ್ತಾ? ಶಾಪಿಂಗ್ ಮಾಲ್‌ನಲ್ಲಿ ಜಯಂತ್-ಮಹತಿ
Big Exclusive - BBK13 Date Fixed: ಬಿಗ್‌ಬಾಸ್ ಕನ್ನಡ ಸೀಸನ್ 13 ಲಾಂಚ್ ಡೇಟ್ ಫಿಕ್ಸ್: ಈ ಬಾರಿ ಕಾದಿದೆ ಬಿಗ್ ಟ್ವಿಸ್ಟ್!