Big Exclusive - BBK13 Date Fixed: ಬಿಗ್‌ಬಾಸ್ ಕನ್ನಡ ಸೀಸನ್ 13 ಲಾಂಚ್ ಡೇಟ್ ಫಿಕ್ಸ್: ಈ ಬಾರಿ ಕಾದಿದೆ ಬಿಗ್ ಟ್ವಿಸ್ಟ್!

Published : Jul 24, 2026, 01:07 PM ISTUpdated : Jul 24, 2026, 01:16 PM IST
Bigg Boss Kannada 13

ಸಾರಾಂಶ

ಸದ್ಯಕ್ಕೆ ಗಾಂಧಿನಗರದ ಗಲ್ಲಿಯಿಂದ ಸೋಶಿಯಲ್ ಮೀಡಿಯಾದವರೆಗೆ ಚರ್ಚೆಯಾಗುತ್ತಿರೋದು ಒಂದೇ ವಿಷಯ... "ಯಾರಪ್ಪಾ ಆ ಹೊಸ ಸ್ಪರ್ಧಿಗಳು?" ಅಂತ. ಕೆಲವು ಫೇಮಸ್ ರೀಲ್ಸ್ ಸ್ಟಾರ್‌ಗಳು, ವಿವಾದಾತ್ಮಕ ನಾಯಕರು ಮತ್ತು ಸೀರಿಯಲ್ ತಾರೆಯರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಬಿಗ್‌ಬಾಸ್ ಅಂದ್ರೆ ಅಲ್ಲಿ ಸರ್ಪ್ರೈಸ್ ಇರಲೇಬೇಕಲ್ವಾ?

ದೊಡ್ಮನೆ ಆಟಕ್ಕೆ ದಿನಗಣನೆ ಶುರು! ಬಿಗ್‌ ಬಾಸ್ ಸೀಸನ್ 13 ಲಾಂಚ್ ಡೇಟ್ ಫಿಕ್ಸ್: ಈ ಬಾರಿ ಕಾದಿದೆ ಬಿಗ್ ಟ್ವಿಸ್ಟ್!

ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಅತೀ ಹೆಚ್ಚು ಕ್ರೇಜ್ ಹೊಂದಿರುವ ರಿಯಾಲಿಟಿ ಶೋ ಅಂದ್ರೆ ಅದು 'ಬಿಗ್‌ಬಾಸ್'. ಬಿಗ್ ಬಾಸ್ ಕನ್ನಡದ ಕಳೆದ ಸೀಸನ್‌ನಲ್ಲಿ ನಡೆದ ಹೈ-ವೋಲ್ಟೇಜ್ ಡ್ರಾಮಾ, ಕಿತ್ತಾಟ, ಪ್ರೀತಿ ಮತ್ತು ಮನರಂಜನೆಯನ್ನು ಕಂಡ ವೀಕ್ಷಕರು ಈಗ "ಮುಂದಿನ ಸೀಸನ್ ಯಾವಾಗಪ್ಪಾ ಶುರುವಾಗುತ್ತೆ?" ಅಂತ ಕಾತರದಿಂದ ಕಾಯುತ್ತಿದ್ದರು. ಈಗ ಆ ಕಾಯುವಿಕೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ಬಿಗ್‌ ಬಾಸ್ ಕನ್ನಡ (Bigg Boss Kannada 13) ಸೀಸನ್ 13ರ ಅಬ್ಬರಕ್ಕೆ ವೇದಿಕೆ ಸಜ್ಜಾಗಿದ್ದು, ಲಾಂಚ್ ಡೇಟ್ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಹೊರಬಿದ್ದಿದೆ!

ಸೆಪ್ಟೆಂಬರ್‌ನಲ್ಲಿ ಕಿಚ್ಚಿನ ಅಬ್ಬರ!

ಹೌದು, ಎಲ್ಲರೂ ಅಂದುಕೊಂಡಂತೆ ಬಿಗ್‌ಬಾಸ್ ಈ ಬಾರಿ ಸ್ವಲ್ಪ ಮುಂಚಿತವಾಗಿಯೇ ಬರಲಿದೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದಲ್ಲೇ, ಅಂದರೆ ಸೆಪ್ಟೆಂಬರ್ 5ರಂದು ದೊಡ್ಮನೆಯ ಬಾಗಿಲು ತೆರೆಯಲಿದೆ. ಶಿಕ್ಷಕರ ದಿನಾಚರಣೆಯಂದೇ ಬಿಗ್‌ಬಾಸ್ ಅಭ್ಯರ್ಥಿಗಳಿಗೆ 'ಲೈಫ್ ಲೆಸನ್' ಕಲಿಸಲು ಕಿಚ್ಚ ಸುದೀಪ್ ಸಜ್ಜಾಗುತ್ತಿದ್ದಾರೆ. ಈ ಡೇಟ್ ಕೇಳಿ ಬಿಗ್‌ಬಾಸ್ ಫ್ಯಾನ್ಸ್ ಈಗಲೇ ಸಂಭ್ರಮಿಸಲು ಶುರು ಮಾಡಿದ್ದಾರೆ.

ಕಾಮನ್ ಮ್ಯಾನ್ ಎಂಟ್ರಿ: ಯಾರಿಗೆ ಸಿಗಲಿದೆ ಲಕ್?

ಈ ಬಾರಿಯ ವಿಶೇಷತೆ ಅಂದ್ರೆ ಅದು 'ಕಾಮನ್ ಮ್ಯಾನ್' ಎಂಟ್ರಿ. ಈಗಾಗಲೇ ಸಾಮಾನ್ಯ ಜನರಿಗಾಗಿ ಆಡಿಷನ್ ಪ್ರಕ್ರಿಯೆ ಭರ್ಜರಿಯಾಗಿ ನಡೆದಿದೆ. ಸಾವಿರಾರು ಜನ ತಮ್ಮ ಪ್ರತಿಭೆಯನ್ನು ತೋರಿಸಲು 3 ನಿಮಿಷಗಳ ವಿಡಿಯೋವನ್ನು ಕಳುಹಿಸಿದ್ದಾರೆ. ಇವರಲ್ಲಿ ಯಾರಿಗೆ ಆ ಅದೃಷ್ಟದ ಬಾಗಿಲು ತೆರೆಯಲಿದೆ? ಯಾರಿಗೆ ಸೆಲೆಬ್ರಿಟಿಗಳ ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಗಲಿದೆ? ಎಂಬುದು ಲಾಂಚ್ ದಿನವೇ ರಿವೀಲ್ ಆಗಲಿದೆ. ಕಿಚ್ಚನ ಎದುರು ನಿಂತು ಆ 'ಕಾಮನ್ ಮ್ಯಾನ್' ಯಾರು ಅಂತ ಗೊತ್ತಾದಾಗ ಜನರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗೋದು ಗ್ಯಾರಂಟಿ. ಇನ್ನೇನು ಒಂದು ತಿಂಗಳು, ಬಳಿಕ ಸ್ವಲ್ಪ ದಿನ ಕಳೆದರೆ ಆ ದಿನ ಬರುತ್ತೆ.. ಬಿಗ್ ಬಾಸ್ ಕನ್ನಡ ಸೀಸನ್ 13 ಅನ್ನು ವೀಕ್ಷಿಸಬಹುದು.

ಇಂಡಿಯಾ ವೈಡ್ ಬಿಗ್‌ಬಾಸ್ ಹವಾ!

ಈ ಬಾರಿಯ ಸೀಸನ್ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಒಂದು ದೊಡ್ಡ ಇತಿಹಾಸ ಸೃಷ್ಟಿಸಲು ಬಿಗ್‌ಬಾಸ್ ಟೀಮ್ ರೆಡಿಯಾಗಿದೆ. ಮೊದಲ ಬಾರಿಗೆ ಕನ್ನಡದ ಜೊತೆಜೊತೆಗೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಾಂಗ್ಲಾ ಭಾಷೆಗಳ ಬಿಗ್‌ಬಾಸ್ ಸೀಸನ್ ಕೂಡ ಏಕಕಾಲಕ್ಕೆ ಶುರುವಾಗಲಿವೆಯಂತೆ! ಅಂದ್ರೆ ಇಡೀ ಭಾರತವೇ ಈ ಬಾರಿ ಬಿಗ್‌ಬಾಸ್ ಜ್ವರದಿಂದ ನಡುಗಲಿದೆ. ಪ್ರಾದೇಶಿಕ ಭಾಷೆಗಳ ನಡುವೆ ಈ ಬಾರಿ ಕಾಂಪಿಟೇಷನ್ ಹೇಗಿರಲಿದೆ ಎಂಬುದು ಕೂಡ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಆದ್ದರಿಂದ ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋಗಳು ಎಂದಿನದಕ್ಕಿಂತ ಭಿನ್ನವಾಗಿ ಇರಲಿವೆ.

ಸ್ಪರ್ಧಿಗಳ ಲಿಸ್ಟ್‌ನಲ್ಲಿ ಯಾರಿದ್ದಾರೆ?

ಸದ್ಯಕ್ಕೆ ಗಾಂಧಿನಗರದ ಗಲ್ಲಿಯಿಂದ ಸೋಶಿಯಲ್ ಮೀಡಿಯಾದವರೆಗೆ ಚರ್ಚೆಯಾಗುತ್ತಿರೋದು ಒಂದೇ ವಿಷಯ... "ಯಾರಪ್ಪಾ ಆ ಹೊಸ ಸ್ಪರ್ಧಿಗಳು?" ಅಂತ. ಕೆಲವು ಫೇಮಸ್ ರೀಲ್ಸ್ ಸ್ಟಾರ್‌ಗಳು, ವಿವಾದಾತ್ಮಕ ನಾಯಕರು ಮತ್ತು ಸೀರಿಯಲ್ ತಾರೆಯರ ಹೆಸರುಗಳು ಕೇಳಿಬರುತ್ತಿವೆ. ಆದರೆ ಅವೆಲ್ಲಾ ನಿಜ ಅಂದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಬಿಗ್‌ಬಾಸ್ ಅಂದ್ರೆ ಅಲ್ಲಿ ಸರ್ಪ್ರೈಸ್ ಇರಲೇಬೇಕಲ್ವಾ?

ಒಟ್ಟಿನಲ್ಲಿ, ಸೆಪ್ಟೆಂಬರ್ 5ಕ್ಕೆ ದೊಡ್ಮನೆಯಲ್ಲಿ ಮತ್ತೆ ಗಂಟೆ ಬಾರಿಸಲಿದೆ. ಮನರಂಜನೆಯ ಹೊಸ ಅಲೆ ಕರ್ನಾಟಕದ ಮನೆಮನೆಗಳಲ್ಲಿ ಎಬ್ಬಿಸಲು ಸೀಸನ್ 13 ಸಿದ್ಧವಾಗಿದೆ. ನೀವು ಕೂಡ ಆ "ದೊಡ್ಡ ಆಟ" ನೋಡಲು ರೆಡಿಯಾಗಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಕ್ರೋಚ್‌ ಪ್ರತಿಭಟನೆಯಲ್ಲಿ ಭಾಗವಹಿಸಲು ಹಣದ ಆಮಿಷ: ನಟಿ ಆಕಾಂಕ್ಷಾ ಪುರಿ ಗಂಭೀರ ಆರೋಪ!
ಮೈಸೂರು ಹುಡುಗನ ಕೈಹಿಡಿದ ಮಹಾನಟಿ ಖ್ಯಾತಿಯ ದಿವ್ಯಾಂಜಲಿ, ಅನಾಥೆಯ ಬಾಳಲ್ಲಿ ಸಂಭ್ರಮದ ಅಧ್ಯಾಯ!