ಫಸ್ಟ್‌ ನೈಟ್‌ ವೇಳೆ ಹೆಂಡ್ತಿಯಿಂದ ಒದೆ ತಿಂದ ಬಿಗ್‌ಬಾಸ್ ತುಕಾಲಿ ಸಂತೋಷ್!

By Sathish Kumar KH  |  First Published Jan 28, 2024, 12:39 PM IST

ಬಿಗ್‌ಬಾಸ್‌ ಕನ್ನಡ ಸೀಸನ್-10ರ ಫೈನಲಿಸ್ಟ್ ಹಾಗೂ ಟಾಪ್-6ನೇ ಸ್ಥಾನವನ್ನು ಪಡೆದಿರುವ ತುಕಾಲಿ ಸಂತೋಷ್ ಅವರು ಮದುವೆಯಾಗಿ ಮೊದಲ ರಾತ್ರಿಯೇ ಹೆಂಡ್ತಿಯಿಂದ ಒದೆ ತಿಂದ ವಿಚಾರ ಬೆಳಕಿಗೆ ಬಂದಿದೆ.


ಬೆಂಗಳೂರು (ಜ.28): ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಫಿನಾಲೆ ಕಂಟೆಸ್ಟೆಂಟ್ ಆಗಿ ಅಗ್ರ 6ನೇ ಸ್ಥಾನವನ್ನು ಗಿಟ್ಟಿಸಿಕೊಂಡ ತುಕಾಲಿ ಸಂತೋಷ್ ಅವರು ಕೋವಿಡ್‌ ಅವಧಿಯಲ್ಲಿ ಯಾರಿಗೂ ಹೇಳದೇ ಮದುವೆ ಮಾಡಿಕೊಂಡಿದ್ದಾರೆ ಎಂಬುದನ್ನು ನಾವು ಕೇಳಿದ್ದೇವೆ. ಆದರೆ, ಈಗ ತುಕಾಲಿ ಸಂತೋಷ್ ಅವರು ಮದುವೆಯಾಗಿ ಫಸ್ಟ್‌ ನೈಟ್ ದಿನವೇ ಹೆಂಡ್ತಿ ಮಾನಸ ಕಡೆಯಿಂದ ಒದೆ ತಿಂದಿರುವ ವಿಚಾರ ಬೆಳಕಿಗೆ ಬಂದಿದೆ.. 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಟಾಪ್‌ ಸಿಕ್ಸ್‌ ಕಂಟೆಸ್ಟಂಟ್‌ಗಳಲ್ಲಿ ಒಬ್ಬರಾಗಿ ಫೈನಲ್‌ ಪ್ರವೇಶಿಸಿದ ತುಕಾಲಿ ಸಂತೋಷ್ ಅವರು ಹಾಸ್ಯದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಇನ್ನು ಮಜಾಭಾರತ ಖ್ಯಾತಿ ಗಳಿಸಿದ್ದ ತುಕಾಲಿ ಸಂತೋಷ್ ಅವರು ಕೋವಿಡ್‌ ಅವಧಿಯಲ್ಲಿ ಯಾರಿಗೂ ಹೇಳದಂತೆ ಮದುವೆ ಮಾಡಿಕೊಂಡು ಬಂದಿದ್ದರು. ಈ ಬಗ್ಗೆ ಪ್ರತಿ ವೇದಿಕೆಯಲ್ಲೂ ತುಕಾಲಿ ಸಂತೋಷ್‌ ಅವರನ್ನು ಕಾಮಿಡಿ ಶೋಗಳಲ್ಲಿ ಕೀಟಲೆಗಳನ್ನು ಮಾಡಲಾಗುತ್ತಿತ್ತು. ಇನ್ನು ಪ್ರತಿ ಮಜಾಭಾರತ ಎಪಿಸೋಡ್‌ನಲ್ಲಿ ಅಲ್ಲಿದ್ದ ಸಹ ಸ್ಪರ್ಧಿಗಳು ಇವರನ್ನು ಊಟವನ್ನೂ ಕೊಡಿಸದೇ, ಯಾರಿಗೂ ಹೇಳದೆ ಮದುವೆ ಆಗಿದ್ದೀಯಾ ಎಂದು ಕಾಲೆಳೆದಿದ್ದೂ ಇದೆ.

Tap to resize

Latest Videos

undefined

ಬಿಗ್‌ಬಾಸ್‌ ಸೀಸನ್ 10 ಟಾಪ್ ಸಿಕ್ಸ್ ತುಕಾಲಿ, ಫೈವ್ ವಿನಯ್‌ಗೌಡ, ಟಾಪ್ ಫೋರ್‌ಗೆ ವರ್ತೂರು ಸಂತೋಷ್!

ಇನ್ನು ಬಿಗ್‌ಬಾಸ್‌ ಮನೆಯಲ್ಲಿ ಫಿನಾಲೆ ಎಪಿಸೋಡ್‌ ನಡೆಸಿಕೊಡುತ್ತಿದ್ದ ಕಿಚ್ಚ ಸುದೀಪ್ ಅವರು ತುಕಾಲಿ ಸಂತೋಷ್ ಅವರ ಪತ್ನಿಯನ್ನು ಮಾತನಾಡಿಸಿದ್ದಾರೆ. ಈ ವೇಳೆ ತುಕಾಲಿ ಸಂತೋಷ್ ಅವರ ಪತ್ನಿ ಮಾನಸ ಅವರು ಮಾತನಾಡುತ್ತಾ ತಮ್ಮ ಪತಿ ಬಿಗ್‌ಬಾಸ್‌ ಮನೆಯಲ್ಲಿರುವ ಎಲ್ಲರ ಬಗ್ಗೆಯೂ ಮಾತನಾಡಿದ್ದಾರೆ. ಸ್ವತಃ ಅವರ ಜೊತೆಜೊತೆಗೆ ಇರುವ ಆಪ್ತ ಸ್ನೇಹಿತ ವರ್ತೂರು ಸಂತೋಷ್ ಅವರ ಬಗ್ಗೆಯೂ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಇವರು ಮತ್ತೊಬ್ಬರ ಬಗ್ಗೆ ಇಷ್ಟೊಂದು ಗಾಸಿಪ್ ಮಾಡುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ಈಗ ಬಿಗ್‌ಬಾಸ್‌ ಮನೆಯಲ್ಲಿ ಬೇರೊಬ್ಬರ ಬಗ್ಗೆ ಎಷ್ಟು ಗಾಸಿಪ್‌ ಮಾಡುತ್ತಾರೆಂಬುದು ತಿಳಿದಿದೆ. ನನಗೇನಾದರೂ ಪ್ರತಿದಿನ 5 ನಿಮಿಷ ಸಮಯ ಕೊಟ್ಟಿದ್ದರೆ ಅವರಿಗೆ ಚೆನ್ನಾಗಿ ಕಜ್ಜಾಯ ಕೊಡುತ್ತಿದ್ದೆ ಎಂದು ಹೇಳಿದ್ದಾರೆ.

ಆಗ ಮಾತನ್ನು ಮುಂದುವರೆಸಿದ ಕಿಚ್ಚ ಸುದೀಪ್ ಅವರು ಮಾನಸ ಅವರೇ ಬಿಗ್‌ಬಾಸ್‌ ಮನೆಯಿಂದ ಹೊರಗೆ ಬರುವ ನಿಮ್ಮಪತಿ ತುಕಾಲಿ ಸಂತೋಷ್ ಅವರಿಗೆ ಯಾವ ತಿಂಡಿ ಕೊಡುತ್ತೀರಿ ಎಂದಾಗ ಕಜ್ಜಾಯ ಕೊಡ್ತೀನಿ ಎಂದು ಹೇಳುತ್ತಾರೆ. ಆಗ, ಕಜ್ಜಾಯ ಮನೆಯಲ್ಲಿ ಮಾಡಿ ಕೊಡುವುದಾ ಹೇಗೆ ಎಂದು ಕೇಳಿದಾಗ, ಮನೆಗೆ ಹೋಗುವ ಮೊದಲೇ ಇದೇ ವೇದಿಕೆಯಲ್ಲಿ ಕಜ್ಜಾಯ ಕೊಡ್ತೀನಿ ಎಂದು ಮಾನಸ ಹೇಳಿದ್ದಾರೆ. ನನ್ನದೂ 1000 ಕಜ್ಜಾಯವನ್ನು ಕೊಡಿ ಎಂದು ಮಾನಸ ಅವರಿಗೆ ಹೇಳುತ್ತಾ ತುಕಾಲಿ ಅವರ ಕಾಲೆಳೆದು ನಕ್ಕಿದ್ದಾರೆ.

ಡ್ರೋನ್ ಪ್ರತಾಪ್ ಅಭಿಮಾನಿಗಳಿಗೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ವಿನ್ನರ್ ಒಳ್ಳೆ ಹುಡುಗ ಪ್ರಥಮ್!

ಮೊದಲು ತುಕಾಲಿ ಅವರಿಗೆ ಹೊಡೆದಿದ್ದು ಯಾವಾಗ?
ಇಷ್ಟಕ್ಕೆ ವಿಚಾರವನ್ನು ಬಿಡದ ಕಿಚ್ಚ ಸುದೀಪ್‌ ಅವರು ಮಾನಸ ಅವರನ್ನು ಮಾತನಾಡಿಸುತ್ತಾ ನೀವು ತುಕಾಲಿ ಸಂತೋಷ್ ಅವರಿಗೆ ಯಾವಾಗ ಮೊದಲ ಬಾರಿ ಹೊಡೆದಿದ್ದು ಯಾವಾಗ ಎಂದು ಕೇಳಿದ್ದಾರೆ. ಆಗ ಮಾನಸ ಅವರು ಮಾತನಾಡುತ್ತಾ ನಾನು ನನ್ನ ಗಂಡನಿಗೆ ಫಸ್ಟ್‌ ನೈಟ್‌ ದಿನವೇ ಗಂಡನಿಗೆ ಹೊಡೆದಿದ್ದೇನೆ ಎಂದು ಹೇಳುತ್ತಾರೆ. ಇದಕ್ಕೆ ಇಡೀ ಫಿನಾಲೆ ವೇದಿಕೆಯೇ ನಗೆಗಡಲಲ್ಲಿ ತೇಲಿದೆ. ಇನ್ನಷ್ಟು ಮಾತನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟಾಗ ನಾನು ಅವರಿಗೆ ಚಿಕ್ಕದಾಗಿ ಹೊಡೆಯುತ್ತೇನೆ. ಮದುವೆ ದಿನವೂ ಅವರಿಗೆ ಹೊಡೆದಿದ್ದೆ, ಮದುವೆಗೆ ಬರುವಾಗ ಅವರ ಪಂಚೆ ಕೆಳಗೆ ಬಿದ್ದಿತ್ತು. ಅದನ್ನು ನೋಡಿ ನಮ್ಮ ಮನೆಯವರು ನಗಾಡಿದ್ದಕ್ಕೆ ಕೋಪ ಬಂದು ತುಕಾಲಿ ಅವರಿಗೆ ಹೊಡೆದಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಇದೆಲ್ಲವೂ ಗಂಡ ಹೆಂಡತಿ ನಡುವೆ ಪ್ರೀತಿಯಿಂದಲೇ ನಡೆಯುವ ಚಟುವಟಿಕೆ ಎಂಬಂತೆ ಹೇಳಿಕೊಂಡಿದ್ದಾರೆ. ಹಾಗಂತ ಅವರ ನಡುವೆ ಪ್ರೀತಿ ಇಲ್ಲವೆಂದೇನಿಲ್ಲ.

click me!