ಅಬ್ಬಬ್ಬಾ! ಬಿಗ್ ಬಾಸ್ ತನಿಷಾ ಹಾಟ್ ಫೋಟೋ ಎಲ್ಲೆಡೆ ವೈರಲ್
ಸಾಮಾಜಿಕ ಜಾಲತಾಣದಲ್ಲಿ ತನಿಷಾ ಹಾಟ್ ಫೋಟೋಗಳನ್ನು ವೈರಲ್ ಮಾಡುತ್ತಿರುವ ಫ್ಯಾನ್ಸ್....
ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಲು ಎಂಟ್ರಿ ಕೊಟ್ಟಿರುವ ಕನ್ನಡ ಚಿತ್ರರಂಗದ ಅದ್ಭುತ ನಟಿ ತನಿಷಾ ಕುಪ್ಪಂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಕೊಡಗಿನ ಈ ಸುಂದರಿ ನಟಿಸಿರುವ ಸಿನಿಮಾಗಳು ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತದೆ. ಹೀಗಾಗಿ ತನಿಷಾ (Tanisha) ಕೊಂಚ ಫೇಮಸ್.
ಬಿಗ್ ಬಾಸ್ ಸೀಸನ್ 10ಗೆ ಎಂಟ್ರಿ ಕೊಟ್ಟ ಸುಂದರಿ ಕಡಿಮೆ ವೋಟಿಂಗ್ ಪಡೆದು ಅಸಮರ್ಥರು ಅನ್ನೋ ಪಟ್ಟ ಪಡೆದುಕೊಂಡು ಮನೆಯೊಳೆ ಎಂಟ್ರಿ ಕೊಟ್ಟರು.
ಮನೆಗೆ ಕಾಲಿಟ್ಟ ದಿನದಿಂದ ಈವರೆಗೂ ತನಿಷಾ ಅಡುಗೆ ಮನೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸಂಪೂರ್ಣ ಅಡುಗೆ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಲಾರ್ಡ್ ಪ್ರಥಮ್ ಕೊಟ್ಟ ಡೈಸ್ ಟಾಸ್ಕ್ನ ಮೊದಲು ಮುಗಿಸಿ ಗೇಮ್ ಗೆದ್ದಿದ್ದಾರೆ. ಇದನ್ನು ನೋಡಿ ವೀಕ್ಷಕರು ತನಿಷಾ ಸಖತ್ ಸ್ಟ್ರಾಂಗ್ ಎಂದಿದ್ದಾರೆ.
ಅಲ್ಲದೆ ತನಿಷಾ ಮತ್ತು ನಮ್ರತಾ ಗೌಡ ನಡುವೆ ಸಣ್ಣ ಮಾತಿನ ಜಗಳ ನಡೆಯಿತ್ತು. ಆಗಲೂ ನಮತ್ರಾ ಹೇಳುವುದು ಸರಿ ಎಂದು ಒಪ್ಪಿಕೊಂಡ ಜನರು ತನಿಷಾಗೂ ಮಾತನಾಡಲು ಅವಕಾಶ ಕೊಡಬೇಕು ಎಂದಿದ್ದರು.
ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ಸಖತ್ ಸ್ಟ್ರಾಂಗ್ ಸ್ಪರ್ಧಿಯಾಗಿರುವ ತನಿಷಾ ನಾಲ್ಕನೇ ದಿನಕ್ಕೆ ವೀಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಅಲ್ಲದೆ ಮೊದಲ ವಾರವೇ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ