ಅಕುಲ್‌ನನ್ನು ಎತ್ತಿ ಕೆಳಗೆ ಬೀಳಿಸಿದ ಶಿಲ್ಪಾ ಶೆಟ್ಟಿ ಬಾಡಿಗಾರ್ಡ್; ಹಳೆಯ ವಿಡಿಯೋ ವೈರಲ್

Published : Feb 06, 2023, 06:35 PM IST
ಅಕುಲ್‌ನನ್ನು ಎತ್ತಿ ಕೆಳಗೆ ಬೀಳಿಸಿದ ಶಿಲ್ಪಾ ಶೆಟ್ಟಿ ಬಾಡಿಗಾರ್ಡ್; ಹಳೆಯ ವಿಡಿಯೋ ವೈರಲ್

ಸಾರಾಂಶ

ಖ್ಯಾತ ನಿರೂಪಕ ಅಕುಲ್ ಬಾಲಾಜಿ ಮತ್ತು ಶಿಲ್ಪಾ ಶೆಟ್ಟಿ ಬಾಡಿಗಾರ್ಡ್ ರವಿ ಇಬ್ಬರೂ ಡಾನ್ಸ್ ಮಾಡಿ ಬಿದ್ದ ಹಳೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. 

ಕನ್ನಡದ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಅನೇಕ ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಕಿರುತೆರೆಯ ಸ್ಟಾರ್ ನಿರೂಪಕರಲ್ಲಿ ಒಬ್ಬರಾಗಿರುವ ಅಕುಲ್ ಡಾನ್ಸ, ಗಾಯನ, ಕಾಮಿಡಿ ಶೋ ಹೀಗೆ ಅನೇಕ ಶೋಗಳನ್ನು ನಿರೂಪಣೆ ಮಾಡುವ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಪ್ರೇಕ್ಷಕರನ್ನು ಸೆಳೆಯಲು, ಅತಿಥಿಗಳನ್ನು ಸೆಳೆಯಲು ಅಕುಲ್ ವೇದಿಕೆ ಮೇಲೆ ತರಹೇವಾರಿ ಡ್ರಾಮ ಮಾಡುತ್ತಾರೆ. ಕೆಲವೊಮ್ಮೆ ಪ್ರೇಕ್ಷಕರಿಗೆ ಇಷ್ಟವಾದರೇ ಇನ್ನು ಕೆಲವೊಮ್ಮೆ ಅತಿರೇಕ ಎನಿಸುತ್ತದೆ. ಸದ್ಯ ಅಕುಲ್ ಕನ್ನಡ ಕಿರುತೆರೆಯಲ್ಲಿ ಅಪರೂಪ ಆಗಿದ್ದಾರೆ. ಇತ್ತೀಚಿಗಷ್ಟೆ ಗಾನ ಬಜಾನ ಶೋ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ನಡುವೆ ಅಕುಲ್ ನಡೆಸಿಕೊಟ್ಟ ಡಾನ್ಸ್ ರಿಯಾಲಿಟಿ ಶೋನ ವಿಡಿಯೋ ಈಗ ವೈರಲ್ ಆಗಿದೆ. 

ಕರ್ನಾಟಕ ಮೂಲದ ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ವಿಶೇಷ ಅತಿಥಿಯಾಗಿ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ರಿಯಾಲಿಟಿ ಶೋ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಡಾನ್ಸ್ ಡಾನ್ಸ್ ಶೋಗೆ ಶಿಲ್ಪಾ ಶೆಟ್ಟಿ ವಿಶೇಷ ಅತಿಯಾಗಿ ಕಾಣಿಸಿಕೊಂಡಿದ್ದರು. ಶಿಲ್ಪಾ ಶೆಟ್ಟಿಯನ್ನು ಇಂಪ್ರೆಸ್ ಮಾಡಲು ಹೋಗಿ ಅವರ ಬಾಡಿ ಬಾರ್ಡ್‌ನಿಂದ ಸರಿಯಾಗಿ ಏಟು ಮಾಡಿಕೊಂಡಿದ್ದರು. ಆದರೂ ಏನು ಆಗಿಲ್ಲ ನಾನು ಓಕೆ.. ಎಂದು ಕಾರ್ಯಕ್ರಮ ಮುಂದುವರೆಸಿದ್ದರು. 

ಅಷ್ಟಕ್ಕೂ ಏನಾಗಿತ್ತು ಎಂದರೆ ವೇದಿಕೆಯಲ್ಲಿದ್ದ ಅಕುಲ್, ಜಡ್ಜ್ ಸ್ಥಾನದಲ್ಲಿ ಕುಳಿತಿದ್ದ ಶಿಲ್ಪಾ ಶೆಟ್ಟಿ ಜೊತೆ ಡಾನ್ಸ್ ಮಾಡಲು ಹೋಗುತ್ತಾರೆ. ಶಿಲ್ಪಾ ಶೆಟ್ಟಿಗೆ ಮಲ್ಲಿಗೆ ಹೂವಿನ ಹಾರ ಹಾಕಿ ಇಂಪ್ರೆಸ್ ಮಾಡಲು ಮುಂದಾಗುತ್ತಾರೆ. ಆದರೆ ಶಿಲ್ಪಾ ಶೆಟ್ಟಿ ಇಂಪ್ರೆಸ್ ಆಗುವುದಿಲ್ಲ. ಅಕುಲ್ ತನ್ನದೆ ಶೈಲಿಯಲ್ಲಿ ತಮಾಷೆ ಮಾಡುತ್ತಾ ಶಿಲ್ಪಾ ಶೆಟ್ಟಿ ಕೈ ಹಿಡಿದು ಡಾನ್ಸ್ ಮಾಡಲು ಮುಂದಾದರು. ಆದರೆ ಶಿಲ್ಪಾ ಶೆಟ್ಟಿ ಡಾನ್ಸ್ ಮಾಡಿಲ್ಲ. ಬದಲಿಕೆ ಡಾನ್ಸರ್‌ಗೆ ಚೆನ್ನಾಗಿ ಡಾನ್ಸ್ ಮಾಡಿದವರಿಗೆ ಹಾರ್ಟ್ ಇಮೋಜಿ ಪಿಲೋ ಕೊಡುವುದಾಗಿ ಹೇಳಿದರು. ಅಕುಲ್ ಅದನ್ನು ಕಿತ್ತುಕೊಂಡು ಓಡಿದರು. 

ತೆಲುಗು ಡ್ಯಾನ್ಸ್‌ ಶೋಗೆ ಅಕುಲ್ ಬಾಲಾಜಿ ಆಂಕರ್; ಈ ಗುರುತಿಗೆ ಕನ್ನಡಿಗರೇ ಕಾರಣವಂತೆ!

ಪಕ್ಕದಲ್ಲೇ ಕುಳಿತಿದ್ದ ಡಾನ್ಸ್ ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್, ನಟಿ ಶರ್ಮಿಳಾ ಮಾಂಡ್ರೆ, ಶಿಲ್ಪಾ ಶೆಟ್ಟಿ ಬಾಡಿಗಾರ್ಡ್ ಬರ್ತಾರೆ ಎಂದು ಹೇಳಿದರು. ಆಗ ಅಕುಲ್ ಕೂಡ ಶಿಲ್ಪಾ ಶೆಟ್ಟಿ ಬಾಡಿಗಾರ್ಡ್ ಅವರನ್ನು ಕರೆದರು. ಶಿಲ್ಪಾ ಶೆಟ್ಟಿ ತನ್ನ ಬಾಡಿ ಗಾರ್ಡ್ ಅನ್ನು ವೇದಿಕೆ ಮೇಲೆ ಕರೆದರು. ಶಿಲ್ಪಾ ಶೆಟ್ಟಿ ಬಾಡಿಗಾರ್ಡ್ ರವಿ ವೇದಿಕೆ ಬರ್ತಾ ಇದ್ದಂತೆ ಅಕುಲ್ ಗಾಬರಿಯಾದ ಹಾಗೆ ನಟಿಸುತ್ತಾರೆ. ಬಳಿಕ ರವಿ ಅವರ ಜೊತೆ ತಮಾಷೆ ಮಾಡಿ ಡಾನ್ಸ್ ಮಾಡಿದರು. ಕೊನೆಯಲ್ಲಿ ಅಕುಲ್ ಅವರನ್ನು ಎತ್ತಿಕೊಂಡರು ರವಿ. ಎತ್ತಿಕೊಂಡು ವೇದಿಕೆಯಿಂದ ಕಳಗೆ ಇಳಿಯುತ್ತಿದ್ದಂತೆ ಎಡವಿ ಬಿದ್ದರು. ಅಕುಲ್ ಅವರನ್ನು ಎತ್ತಿಕೊಂಡಿದ್ದ ರವಿ ಕೆಳಗೆ ಬಿಡುತ್ತಾರೆ. ಅಕುಲ್ ಕೆಳಗೆ ಬಿದ್ದರು. ತಕ್ಷಣ ಶಿಲ್ಪಾ ಶೆಟ್ಟಿ ಏನಾದರೂ ಆಯಿತಾ ಅಕುಲ್ ಎಂದು ಕೇಳಿದರು. ಆದರೆ ಅಕುಲ್ ಏನು ಆಗಿಲ್ಲ ಎನ್ನುತ್ತಾ ಕಾರ್ಯಕ್ರಮ ಮುಂದುವರೆಸಿದರು.

2021ರಲ್ಲಿ ಇದ್ದಕ್ಕಿದ್ದಂತೆ ಸಣ್ಣ ಆಗಲು ನನ್ನ ತಾಯಿ, ಹೆಂಡ್ತಿ ಕಾರಣ: Akul Balaji

ಈ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋ ನೋಡಿ ಅನೇಕರು ವಿವಿಧ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಓವರ್ ಆಕ್ಟಿಂಗ್ ಅವಕಶ್ಯತೆ ಇರಲಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಸ್ಟಾರ್ ನಟಿಯನ್ನು ಕರೆದುಕೊಂಡು ಬಂದು ಹೀಗೆಲ್ಲ ಮಾಡಬಾರದು ಎಂದು ಹೇಳಿದ್ದಾರೆ. ಅನೇಕರು ಅಕುಲ್ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಯಾರು ಏನೆ ಕಾಮೆಂಟ್ ಮಾಡಿದರೂ ಸಹ ಅಕುಲ್ ಅನೇಕ ಶೋಗಳನ್ನು ನಡೆಸಿಕೊಟ್ಟರು. ಸ್ಟಾರ್ ನಿರೂಪಕರಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!