
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ (Nagini 2) ಧಾರಾವಾಹಿಯಲ್ಲಿ ನಮ್ರತಾ ಗೌಡ (Namratha Gowda) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದ್ದವಾದ ಕೂದಲು ಮತ್ತು ಸ್ಟೈಲಿಷ್ ಡ್ರೆಸಿಂಗ್ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ. ಇತ್ತೀಚಿಗೆ ಯೂಟ್ಯೂಬ್ ಲೋಕಕ್ಕೆ ಕಾಲಿಟ್ಟ ನಮ್ರತಾ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫಾಲೋವರ್ಸ್ ಕೇಳಿರುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಲವ್ ಲೈಫ್, ಮ್ಯಾರೇಜ್, ಸ್ಕಿನ್ ಕೇರ್ ಮತ್ತು ಹೇರ್ ಕೇರ್ ಬಗ್ಗೆ ಹಂಚಿಕೊಂಡಿದ್ದಾರೆ.
ನಿಮ್ಮ ಕೈಯಲ್ಲಿರುವ ಟ್ಯಾಟೂ ಯಾವುದು?
ನಾನು ಹಾಕಿಸಿಕೊಂಡಿರುವುದು ಪುನೀತ್ ರಾಜ್‌ಕುಮಾರ್ (Puneeth Rajkumar) ಟ್ಯಾಟೂ, ಅವರು ನನಗೆ ಸ್ಫೂರ್ತಿ.
ಸ್ಕಿನ್ ಕೇರ್ ಹಂಚಿಕೊಳ್ಳಿ
ಫೋಟೋದಲ್ಲಿರುವ ಲುಕ್ ನೋಡಿ ನಂಬಬೇಡಿ. ದಿನ ಮೇಕಪ್ ಹಾಕಿ ಹಾಕಿ ಸ್ಕಿನ್ ಹಾಳಾಗಿರುತ್ತದೆ. ಬೆಳಗ್ಗೆಯಿಂದ ರಾತ್ರಿವರೆಗೂ ಒಂದು Routine ಇರುತ್ತದೆ. ವಿಡಿಯೋ ಮೂಲಕ ಮಾಹಿತಿ ಹಂಚಿಕೊಳ್ಳುತ್ತೀನಿ.
ಎಷ್ಟು ಒಡಹುಟ್ಟಿದವರು?
ಅಪ್ಪ ಅಮ್ಮಂಗೆ ನಾನು ಒಬ್ಬಳೆ ಮುದ್ದಿನ ಮಗಳು. ನಾನು ಚಿಕ್ಕವಯಸ್ಸಿನಲ್ಲಿ ಹೇಳುತ್ತಿದ್ದೆ ತಮ್ಮ ಅಥವಾ ತಂಗಿ ಬೇಡ ಅವರು ಬಂದ್ರೆ ಸಾಯಿಸಿ ಬಿಡುತ್ತೀನಿ ಅಂತಿದ್ದೆ.
ಪ್ರೀತಿಯಲ್ಲಿದ್ದೀರಾ?
ಯಾಕೆ ನನ್ನ ಲವರ್ ಬಗ್ಗೆ ನನ್ನ ಫ್ಯೂಚರ್ ಪತಿ ಬಗ್ಗೆ ಇಷ್ಟೊಂದು ಪ್ರಶ್ನೆ ಕೇಳಿದ್ದೀರಾ? ಹೌದು ನಾನು ಪ್ರೀತಿಯಲ್ಲಿದ್ದೀನಿ ನನ್ನ ಕ್ಯಾಮೆರಾ, ನನ್ನ ಕೆಲಸದ ಜೊತೆ ಪ್ರೀತಿಯಲ್ಲಿದ್ದೀನಿ.
ಮದುವೆ ಯಾವಾಗ?
ನೀವು ನನ್ನ ಸಂಬಂಧಿಗಳ? ಯಾಕೆ ನನ್ನ ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಕೇಳ್ತೀರಾ? ಈಗಷ್ಟೆ ನಾನು ಜೀವನದಲ್ಲಿ ಬೆಳೆಯುತ್ತೀದ್ದೀನಿ ಸಾಧನೆ ಮಾಡಿದ ನಂತರ ಮದುವೆ ಎಲ್ಲಾ.
ಮನೆ ಎಲ್ಲಿದೆ?
ನಮ್ಮ ಮನೆ ಇರುವುದು ಬೆಂಗಳೂರಿನಲ್ಲಿ (Bangalore). ತುಂಬಾ ಆಳವಾಗಿ ಉತ್ತರ ಕೊಟ್ಟರೆ ಕಷ್ಟ ಆಗಬಹುದು..
ಕೇರಳ ನೋಡಿದ್ದೀರಾ?
ನನಗೆ ತುಂಬಾ ಕೇರಳ (Kerala) ಫ್ಯಾನ್ಸ್ ಇದ್ದಾರೆ. ಹೀಗಾಗಿ ಕೇರಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ನಾನು 10ನೇ ಕ್ಲಾಸ್ ಸ್ಕೂಲ್ ಟ್ರಿಪ್‌ಗೆ ಬಂದಿದ್ದೆ. ಶೀಘ್ರದಲ್ಲಿ ಬರ್ತೀನಿ...vlog ಮಾಡ್ತೀನಿ.
ಯಾವ ಸಂದರ್ಭದಲ್ಲಿ ಹೆಚ್ಚಿಗೆ ಕೋಪ ಬರುತ್ತೆ?
ನನಗೆ ಬೇಗ ಕೋಪ ಬರುತ್ತೆ. ಕೆಲಸಕ್ಕಿಂತ ಮಾತು ಜಾಸ್ತಿ ಮಾಡಿದರೆ ಕೋಪ ಬರುತ್ತೆ. ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡಬೇಕು.
ಪ್ರಧಾನ ಮಂತ್ರಿಗಳಾದರೆ ಯಾವ ಹೊಸ ನಿಯಮ ಜಾರಿ ಮಾಡುತ್ತೀರಾ?
ಈ ಪ್ರಶ್ನೆ ತುಂಬಾ ಚೆನ್ನಾಗಿದೆ. ನಾನು ಜಾರಿ ಮಾಡುವ ರೂಲ್ ಒಂದೇ, ಎಲ್ಲಿ ಸಿನಿಮಾ ನೋಡಿದರೂ ಸಿನಿಮಾ ಟಿಕೆಟ್‌ಗೆ 50 ರೂ. ಸಣ್ಣದಾಗಲಿ ದೊಡ್ಡದಾಗಲಿ ಎಲ್ಲರಿಗೂ ಒಂದೇ ಇರಬೇಕು.
ಹೇರ್‌ಕೇರ್ ಏನು?
ತುಂಬಾ ಚಿಕ್ಕವಯಸ್ಸಿನಿಂದಲೂ ನನಗೆ ಉದ್ದ ಕೂದಲು ಇರುವುದು ಅಮ್ಮ ಎಣ್ಣಿ ಹಾಕಿ ಮೇಟೈನ್ ಮಾಡುತ್ತಿದ್ದರು. ಈಗ ಕೂದಲಿಗೆ ದಿನ ಒಂದೊಂದು ಸ್ಟೈಲಿಂಗ್ ಮಾಡುತ್ತೀನಿ ಹೀಗಾಗಿ ಸಣ್ಣ ಆಗಿದೆ ಆದರೂ ಕಾಪಾಡಿಕೊಳ್ಳುತ್ತಿದ್ದೀನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.