
ಹಿಂದಿ ಕಿರುತೆರೆ ಜನಪ್ರಿಯಾ ರಿಯಾಲಿಟಿ ಶೋ ಕಾಫಿ ವಿತ್ ಕರಣ್ (Koffee with Karan) ಮತ್ತೆ ಆರಂಭವಾಗಲು ಸಜ್ಜಾಗಿದೆ. ಪ್ರತಿ ವರ್ಷವೂ ಟ್ರೆಂಡ್‌ನಲ್ಲಿರುವ ಸೆಲೆಬ್ರಿಟಿಗಳನ್ನು ಕರಣ್ ಜೋಹಾರ್ ಕರೆಸಿ ಮಾತನಾಡಿಸಿ, ಗಾಸಿಪ್ ಕ್ರಿಯೇಟ್ ಆಗುವಂತೆ ಮಾಹಿತಿಗಳನ್ನು ರಿವೀಲ್ ಮಾಡಿಸುತ್ತಾರೆ. ಹಾಸ್ಯಮ ತಮಾಷೆ ಮತ್ತು ವಿವಾದ ತುಂಬಿಕೊಂಡಿರುವ ಈ ಶೋನಲ್ಲಿ ರಶ್ಮಿಕಾ ಮಂದಣ್ಣ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
2019ರಲ್ಲಿ ಕಾಫಿ ವಿತ್ ಕರಣ್ ಸೀಸನ್ 6 ಪ್ರಸಾರವಾಗಿತ್ತು. ಕೊರೋನಾ ವೈರಸ್ (Covid19) ಹಾವಳಿ ಹೆಚ್ಚಿದಂತೆ ಮನೋರಂಜನೆ ಕ್ಷೇತ್ರಕ್ಕೆ ಬ್ರೇಕ್ ಹಾಕಲಾಗಿತ್ತು ಹೀಗಾಗಿ 2020ರಲ್ಲಿ ಶೋ ನಿಲ್ಲಿಸುವುದಾಗಿ ಘೋಷಣೆ ಮಾಡಿದ್ದರು. ಕರಣ್ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ, ಲಾಕ್‌ಡೌನ್ (Lockdown) ಸಮಯದಲ್ಲಿ ಹಳೆ ವಿಡಿಯೋ ನೋಡಿಕೊಂಡು ಟೈಂ ಪಾಸ್ ಮಾಡುತ್ತಿದ್ದಂತೆ ಹೀಗಾಗಿ ಮತ್ತೆ ಶೋ ಆರಂಭಿಸಿ ಎಂದು ಒತ್ತಾಯ ಮಾಡಿದ್ದಾರೆ ವೀಕ್ಷಕರು.
ಈ ವರ್ಷ ಹೆಡ್‌ಲೈನ್ ಮಾಡಿದ ನವಜೋಡಿ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಾಲ್ (Vikky Kaushal), ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kaoor), ಸರೋಗೆಸಿ ಮೂಲಕ ಮಗು ಮಾಡಿಕೊಂಡಿರುವ ಪ್ರಿಯಾಂಕಾ ಚೋಪ್ರಾ (Priynaka Chopra) ಮತ್ತು ನಿಕ್, ಪುಷ್ಪ ಹಿಟ್‌ನಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಅಲ್ಲು ಅರ್ಜುನ್, ಕಾಶ್ಮೀರಿ ಫೈಲ್ (Kashmir Files) ಮೂಲಕ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದ ವಿವೇಕ್ ಅಗ್ನೊಹೋತ್ರಿ, ಕೆಜಿಎಫ್ ಅಖಾಡಕ್ಕೆ ಎಂಟ್ರಿ ಕೊಟ್ಟಿರುವ ರವೀನಾ ಟೆಂಡನ್ (Raveena Tandon) ಮತ್ತು ಸಂಜಯ್ ದತ್ತ (Sanjay Dutt) ಓಪನಿಂಗ್ ಎಪಿಸೋಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ನಿರೂಪಕ ಕರಣ್ ಜೋಹಾರ್ (Karan Johar) ಕೇಳುವ ಪ್ರಶ್ನೆಗಳು ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತದೆ. ಕಳೆದ ಸೀಸನ್‌ನಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ (Hardik Pandey) ಹಾಗೂ ಕರ್ನಾಟಕದ ಕೆಎಲ್ ರಾಹುಲ್ (KL Rahul) ಅತಿಧಿಗಳಾಗಿ ಭಾಗವಹಿಸಿದ್ದರು. ಈ ವೇಳೆ ಹಾರ್ದಿಕ್ ಪಾಂಡ್ಯಾ ಹೇಳಿದ ಮಾತುಗಳು ತ್ರೀವ ವಿವಾದಕ್ಕೆ ಕಾರಣವಾಯ್ತು ಇದರಿಂದ ಕೆಲವೊಂದು ಪಂದ್ಯಗಳ ಕೈ ಬಿಡಲಾಯಿತ್ತು. ದೊಡ್ಡ ಮಟ್ಟದಲ್ಲಿ ಗಲಾಟೆ ಆದ ಕಾರಣ ಶೋ ಕೆಲವು ದಿನಗಳ ಮಟ್ಟಕ್ಕೆ ಬಂದ್ ಮಾಡಲಾಗಿತ್ತು.
ಕರ್ನಾಟಕದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ (Allu Arjun) ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಸಿನಿಮಾ ಆಯ್ಕೆ ಮಾಡಿಕೊಳ್ಳುವ ರೀತಿ ಬದಲಾಗಿದೆ. ಪುಷ್ಪ ರಿಲೀಸ್‌ಗೂ ಮುನ್ನವೇ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amithab Bachchan) ಜೊತೆ ಗುಡ್ ಬೈ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜಲು ಸಿನಿಮಾ ಸಹಿ ಮಾಡಿದ್ದರು. ಸಿನಿಮಾ ಚಿತ್ರೀಕರಣ ಶುರುವಾಗುತ್ತಿದ್ದಂತೆ ಬಾಂದ್ರದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ವರುಣ್ ಧವನ್ ಜೊತೆ ಸಿನಿಮಾ ಸಹಿ ಮಾಡಿದ್ದಾರೆ.
ಹ್ಯಾಪನಿಂಗ್‌ನಲ್ಲಿರುವ ರಶ್ಮಿಕಾ ಮಂದಣ್ಣ ಕರಣ್ ಜೋಹಾರ್ ಜೊತೆ ಕಾಫಿ ಕುಡಿಯಲು ಬಂದೇ ಬರುತ್ತಾರೆಂದು ಸುದ್ದಿ ಹರಿದಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.