ಮನೆಯಲ್ಲಿ ಜಾರಿ ಬಿದ್ದು ಕಾಲು ಆಪರೇಷನ್‌ ಮಾಡಿಕೊಂಡ ಬಿಗ್ ಬಾಸ್ ಶ್ರುತಿ ಪ್ರಕಾಶ್

Published : Feb 06, 2025, 01:18 PM IST
ಮನೆಯಲ್ಲಿ ಜಾರಿ ಬಿದ್ದು ಕಾಲು ಆಪರೇಷನ್‌ ಮಾಡಿಕೊಂಡ ಬಿಗ್ ಬಾಸ್ ಶ್ರುತಿ ಪ್ರಕಾಶ್

ಸಾರಾಂಶ

ಬೆಳಗಾವಿಯಲ್ಲಿ ಮೆಟ್ಟಿಲುಗಳಿಂದ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡ ಗಾಯಕಿ ಶ್ರುತಿ ಪ್ರಕಾಶ್, ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಅವಧಿಯಲ್ಲಿಯೇ ತಮ್ಮ ಮೊದಲ ಹಿಂದಿ ಚಿತ್ರ 'Haunted 2' ಚಿತ್ರೀಕರಣ ಆರಂಭಿಸಿದ್ದಾರೆ. ಫಿಸಿಯೋಥೆರಪಿ ಮತ್ತು ಧ್ಯಾನದ ಮೂಲಕ ಚೇತರಿಕೆ ಕಾಣುತ್ತಿರುವ ಶ್ರುತಿ, ಹೊಸ ಇಂಗ್ಲಿಷ್ ಚಿತ್ರವೊಂದರಲ್ಲೂ ನಟಿಸಲಿದ್ದಾರೆ.

ಬಿಗ್ ಬಾಸ್ ಕನ್ನಡ ಸ್ಪರ್ಧಿ, ಗಾಯಕಿ ಶ್ರುತಿ ಪ್ರಕಾಶ್ ಕಳೆದ ಎರಡು ತಿಂಗಳಿನಿಂದ ಬೆಡ್‌ ರೆಸ್ಟ್‌ನಲ್ಲಿದ್ದಾರೆ. ತಮ್ಮ ಬೆಳಗಾವಿ ನಿವಾಸದಲ್ಲಿ ಮೆಟ್ಟಿಲು ಜಾರಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಸಣ್ಣ ಪೆಟ್ಟು ಎಂದುಕೊಂಡು ವೈದ್ಯ ಬಳಿ ಹೋದಾಗ ತಿಳಿಯಿತ್ತು ಆಪರೇಷನ್ ಮಾಡಲೇ ಬೇಕು ಎಂದು. ಸದ್ಯ ಆಪರೇಷನ್ ಮಾಡಿಸಿಕೊಂಡು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಇದೇ ಸಮಯದಲ್ಲಿ ಶ್ರುತಿ ತಮ್ಮ ಮೊದಲ ಹಿಂದಿ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ.

'ಇದು ಅನಿರೀಕ್ಷಿತಾ ಎನ್ನಬಹುದು. ಎಮ್‌ಆರ್‌ಐ ಮಾಡಿಸಿದ ಮೇಲೆ ನನಗೆ ಸರ್ಜರಿ ಮಾಡಬೇಕು ಎಂದು ತಿಳಿಯಿತ್ತು. ನನ್ನ ತಂದೆ ತಲೆ ಕೆಡಿಸಿಕೊಂಡಿದ್ದರು ಆದರೆ ತಡೆ ಮಾಡದೆ ಸರ್ಜರಿ ಮಾಡಿಸಲು ಮುಂದಾದೆ. ಹೀಗಾಗಿ ಪೂನೆಯಲ್ಲಿ ಆಪರೇಷನ್‌ ಮಾಡಿಸಿದೆ. ನಮ್ಯತೆ ಬರಲಿ ಎಂದು ಅದೇ ದಿನ ಫಿಸಿಯೋಥೆರಪಿ ಆರಂಭಿಸಿದೆ. ನಾನು ನಾರ್ಮಲ್ ಆಗಿ ಮಾಡುವ ಕೆಲಸಗಳನ್ನು ಮಾಡಲು ಕಷ್ಟವಾಗುತ್ತದೆ ಅಂದುಕೊಂಡು ಭಯ ಪಟ್ಟಿದ್ದೆ. ಆದರೆ ಇದನ್ನು ಒಪ್ಪಿಕೊಂಡು ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ, ಹೆಚ್ಚು ಪುಸ್ತಕ ಓದುವುದು ಮತ್ತು ಧ್ಯಾನ ಮಾಡುತ್ತೀನಿ' ಎಂದು ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಶ್ರುತಿ ಮಾತನಾಡಿದ್ದಾರೆ. 

ಅಬ್ಬಬ್ಬಾ....ಬೆಂಗಾಲಿಯಾಗಿ ಬದಲಾದ ಬಿಗ್ ಬಾಸ್ ನಮ್ರತಾ; ಫೋಟೋ ವೈರಲ್

'ನನ್ನ ಸಿನಿಮಾ ತಂಡದ ತುಂಬಾ ಸಹಕರಿಸುತ್ತದೆ. ಜನವರಿಯಲ್ಲಿ ಚಿತ್ರೀಕರಣ ಮಾಡಬೇಕಿತ್ತು ಆದರೆ ಈ ಸಮಸ್ಯೆಯಿಂದ ಫೆಬ್ರವರಿಗೆ ಮುಂದೂಡಲಾಗಿದೆ' ಎಂದಿದ್ದಾರೆ. ವಿಕ್ರಾಂತ್ ಭಟ್ ನಿರ್ದೇಶನದ Haunted 2 ಸಿನಿಮಾದಲ್ಲಿ ಶ್ರುತಿ ಅಭಿನಯಿಸುತ್ತಿದ್ದಾರೆ. 2011ರಲ್ಲಿ ರಿಲೀಸ್‌ ಆದ ಚಿತ್ರದ ಸೀಕ್ವೆಲ್‌ ಇದು. ಸುಮಾರು 60 ಕಲಾವಿದರಲ್ಲಿ ಶ್ರುತಿ ಯಾಮಿನಿ ಪಾತ್ರಕ್ಕೆ ಆಯ್ಕೆ ಆಗಿದ್ದರು. ಗ್ರೇ ಗೇಮ್ ಎನ್ನುವ ಕನ್ನಡ ಸಿನಿಮಾದಲ್ಲೂ ಶ್ರುತಿ ನಟಿಸಿದ್ದರು. ಕನ್ನಡ ಮತ್ತು ಹಿಂದಿ ಮಾತ್ರ ಶ್ರುತಿ ಸೀಮಿತವಾಗಿಲ್ಲ ನಿನ್ನೆ ತಮ್ಮ ಮೊದಲ ಇಂಗ್ಲಿಷ್‌ ಸಿನಿಮಾ ಘೋಷನೆ ಮಾಡಿದ್ದಾರೆ. 'ಇದು ನನ್ನ ಮೊದಲ ಇಂಗ್ಲಿಷ್‌ ಸಿನಿಮಾ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಇದು ಜರ್ನಿ ನನ್ನ ಮನಸ್ಸಿಗೆ ತುಂಬಾನೇ ಹತ್ತಿರವಾಗಿದೆ' ಎಂದು ಶ್ರುತಿ ಬರೆದುಕೊಂಡಿದ್ದರು.

ಅಂದು ಪತ್ನಿಗೆ ಕೈ ಹಿಡಿದು ನಡೆಸಿದ್ದು ಶಿವಣ್ಣ, ಇಂದು ಶಕ್ತಿಯಾಗಿ ನಿಂತಿದ್ದು ಗೀತಕ್ಕ; ಭಾವುಕರಾದ ತಾರಾ- ಶ್ರುತಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಕ್ಷಿತಾ ಶೆಟ್ಟಿ ನಿಷ್ಕಲ್ಮಶ ನಗುವಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಂಡ ಅಭಿಮಾನಿಗಳು
Bigg Bossಗೆ ವೋಟ್​ ಮಾಡುವ ಅಭಿಮಾನಿಗಳಿಗೆ 'ಲಕ್ಷ್ಮೀ ನಿವಾಸ' ನಟಿ ಹೇಳಿರೋ ಕಿವಿಮಾತೇನು?