
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಸೀರಿಯಲ್ ಕನ್ನಡದ ಪ್ರಮುಖ ಧಾರಾವಾಹಿಗಳಲ್ಲಿ ಒಂದಾಗಿದೆ. ದಿಟ್ಟತನಕ್ಕೆ ಹೆಸರುವಾಸಿಯಾಗಿರೋ ಭಾಗ್ಯ ಪದೇ ಪದೇ ಕಣ್ಣೀರು ಹಾಕೋದು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಧಾರಾವಾಹಿ ನಾಯಕಿ ಗೆಲ್ಲಬೇಕು ಎಂಬವುದು ವೀಕ್ಷಕರ ಅಭಿಪ್ರಾಯ. ಆದ್ರೆ ಧಾರಾವಾಹಿ ವೀಕ್ಷಕರು ಊಹೆಗೂ ಮೀರಿ ಪ್ರತಿ ಸಂಚಿಕೆಯಲ್ಲಿಯೂ ಹೊಸ ತಿರುವು ಪಡೆದುಕೊಳ್ಳುತ್ತಿರುತ್ತದೆ. ಕೊನೆಯ ಸಂಚಿಕೆಯಲ್ಲಿ ತಾಂಡವ್ ಹೊಟ್ಟೆ ಉರಿದುಕೊಂಡಿದ್ದನ್ನು ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ಇತ್ತ ಜೀವನಕ್ಕೆ ಆಸರೆಯಾಗಿದ್ದ ಕೆಲಸವನ್ನು ಕಳೆದುಕೊಂಡು ಭಾಗ್ಯ ಕಂಗಾಲಾಗಿದ್ದಾಳೆ. ತಾಂಡವ್ ಹೊಟ್ಟೆ ಉರಿ ಮತ್ತು ಭಾಗ್ಯಳ ಕಸಿವಿಸಿ ಕಂಡು ಕೆಲ ವೀಕ್ಷಕರು ಸಾಕಪ್ಪಾ ಸಾಕು ಅಂತಿದ್ದಾರೆ.
ತಾಂಡವ್ ಮತ್ತು ಶ್ರೇಷ್ಟಾ ಊಟಕ್ಕಾಗಿ ಹೋಟೆಲ್‌ಗೆ ತೆರಳಿರುತ್ತಾರೆ. ಗೆಳತಿಯೊಂದಿಗೆ ತಾಂಡವ್ ಕ್ವಾಲಿಟಿ ಸಮಯ ಕಳೆಯುತ್ತಿರುವಾಗಲೇ ಅಲ್ಲಿಗೆ ಶೇಷ್ಠಾಳ ಕಾಲೇಜು ಸ್ನೇಹಿತ ಅಲ್ಲಿಗೆ ಬರುತ್ತಾನೆ. ತನ್ನ ಕಾಲೇಜು ಗೆಳೆಯ ಬರುತ್ತಲೇ ಶ್ರೇಷ್ಠಾ ಫುಲ್ ಖುಷಿಯಾಗುತ್ತಾಳೆ. ಶ್ರೇಷ್ಠಾಗೆ ಇಷ್ಟವಾದ ಆಹಾರವನ್ನ ಆರ್ಡರ್ ಮಾಡುತ್ತಾನೆ. ಇದರಿಂದ ಶ್ರೇಷ್ಠಾ ಫುಲ್ ಇಂಪ್ರೆಸ್ ಆಗುತ್ತಾಳೆ. ಇಷ್ಟಕ್ಕೆ ಸುಮ್ಮನಾಗದ ಗೆಳೆಯ, ತಾಂಡವ್‌ಗೂ ಡ್ರೆಸಿಂಗ್ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡುತ್ತಾನೆ. ಇದರಿಂದ ತಾಂಡವ್ ಕೋಪಗೊಳ್ಳುತ್ತಾನೆ. ಗೆಳೆಯ ಹೋದ ಬಳಿಕ ಶೇಷ್ಠಾಗೆ ತಾಂಡವ್ ವಾರ್ನ್ ಮಾಡುತ್ತಾನೆ.
ಇನ್ಮುಂದೆ ನಾವು ಜೊತೆಯಲ್ಲಿರುವಾಗ ನಿನ್ನ ಗೆಳೆಯ ಬಂದ್ರೆ ನಾನು ಎದ್ದು ಹೋಗುತ್ತೇನೆ. ನಾನು ಬೇಕು ಅಂದ್ರೆ ನಮ್ಮ ಬಳಿಗೆ ನಿನ್ನ ಗೆಳೆಯನಿಗೆ ಬರಬೇಡ ಎಂದು ಹೇಳು. ನನಗೆ ಈ ರೀತಿಯ ವರ್ತನೆ ಇಷ್ಟವಾಗಿಲ್ಲ ಎಂದು ತಾಂಡವ್ ಹೇಳಿದ್ದಾನೆ. ಇದಕ್ಕೆ ಪ್ರತಿಯಾಗಿ, ಆತ ಇರೋದೇ ಹಾಗೆ. ನೀನ್ಯಾಕೆ ಇಷ್ಟೊಂದು ಜಲಸ್ ಆಗ್ತಿದೆಯಾ ಎಂದು ಶ್ರೇಷ್ಠಾ ಹೇಳಿದ್ದಾಳೆ. ಈ ದೃಶ್ಯದಿಂದ ತಾಂಡವ್ ಮತ್ತು ಶ್ರೇಷ್ಠಾ ಪ್ರೀತಿಗೆ ಆಕೆಯ ಗೆಳೆಯನೇ ವಿಲನ್ ಆಗಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.
ಇದನ್ನೂ ಓದಿ: Aravanipuram Movie: ಬಹುಭಾಷಾ ನಟ ಕಿಶೋರ್ ಜೊತೆ ಹೊಸ ಸಾಹಸಕ್ಕಿಳಿದ ಭಾಗ್ಯಲಕ್ಷ್ಮೀ ಧಾರಾವಾಹಿ ನಟ ಸುದರ್ಶನ್ ರಂಗಪ್ರಸಾದ್!
ಮತ್ತೊಂದೆಡೆ ಕೆಲಸ ಕಳೆದುಕೊಂಡಿರುವ ಭಾಗ್ಯ ಮಗಳ ಫೀಸ್ ಕಟ್ಟಲು ಹೆಣಗಾಡುತ್ತಿದ್ದಳು. ಇದನ್ನು ಗಮನಿಸಿದ ಮಗಳು ತಾನ್ವಿ, ತಂದೆ ತಾಂಡವ್ ಸಹಾಯ ಪಡೆದುಕೊಂಡು ಫೀಸ್ ಭರ್ತಿ ಮಾಡಿದ್ದಾಳೆ. ಈ ವಿಷಯ ತಿಳಿದ ಭಾಗ್ಯಗೆ, ಮಗಳು ತನ್ನಿಂದ ದೂರವಾಗ್ತಾಳಾ ಅನ್ನೋ ಆತಂಕ ಶುರುವಾಗಿದೆ. ಹೀಗೆ ಮುಂದೆ ಒಬ್ಬೊಬ್ಬರೇ ನನ್ನ ಜೊತೆ ಬರುತ್ತಾರೆ. ಮುಂದೆ ನೀನು ಒಬ್ಬಳೇ ಇರಬೇಕು ಎಂದು ತಾಂಡವ್ ಭವಿಷ್ಯ ನುಡಿದಿದ್ದಾನೆ.
ಭಾಗ್ಯಾಗೆ ಯಾವುದೇ ಕಂಪನಿಯಲ್ಲಿ ಕೆಲಸ ಸಿಗುತ್ತಿಲ್ಲ. ಹೀಗೆ ಮುಂದುವರಿದ್ರೆ ಮನೆಯ ಪರಿಸ್ಥಿತಿ ಏನು ಎಂದು ಕುಸುಮಾ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ. ಭಾಗ್ಯಾಗೆ ಹೊಸ ಕೆಲಸ ಸಿಗುತ್ತಾ ಅಥವಾ ತನ್ನದೇ ಸ್ವಂತ ಹೋಟೆಲ್ ಆರಂಭಿಸುತ್ತಾಳಾ ಎಂಬುವುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಇದನ್ನೂ ಓದಿ: ಭಾಗ್ಯಲಕ್ಷ್ಮಿ ಸೀರಿಯಲ್ ಗೆ ಸುಕೃತಾ ನಾಗ್ ಎಂಟ್ರಿ... ಇಲ್ಲೂ ಮನೆ ಹಾಳು ಮಾಡೋದ ಕೇಳ್ತಿದ್ದಾರೆ ವೀಕ್ಷಕರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.