ಫಿಟ್ನೆಸ್ ಗುರು ಆದ ಗೀತಾ ಭಾರತಿ ಭಟ್. ಸಣ್ಣಗಾಗಲು ಕೋಚ ಕಾರಣ ಎಂದ ನಟಿ....
ಕಿರುತೆರೆ ಜನಪ್ರಿಯ ನಟಿ ಗೀತಾ ಭಾರತಿ ಭಟ್ ನಟಿಸಿರುವ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ತಮ್ಮ ಫಿಟ್ನೆಸ್ ಗುಟ್ಟು ರಿವೀಲ್ ಮಾಡಿದ್ದಾರೆ.
'ನಾನು ಈಗ ಕಡಿಮೆ ಮಾಡಿಕೊಂಡಿರುವುದು 30 ಕೆಜಿ. ತೂಕ ಕಡಿಮೆ ಮಾಡಿಕೊಳ್ಳಲು ನಾನು ಸುಮಾರು 1 ವರ್ಷ ಸಮಯ ತೆಗೆದುಕೊಂಡಿರುವೆ. ಯಾವುದೇ ಶಾರ್ಟ್ ಕಟ್ ಇಲ್ಲದೆ ಎಕ್ಸಟ್ರಾ ಪ್ರಾಡೆಕ್ಟ್ ಇಲ್ಲದೆ ನ್ಯಾಚುರಲ್ ಆಗಿ ಬರೀ ಆಹಾರ ಮತ್ತು ವ್ಯಾಯಾಮದಿಂದ ಸಣ್ಣಗಾಗಿರುವುದು. ವ್ಯಾಯಮದಲ್ಲಿ ಏನ್ ಏನ್ ಮಾಡಬೇಕು ಹಾಗೂ ದಿನ ನಿತ್ಯದ ರೂಟಿನ್‌ನಲ್ಲಿ ಎನು ಬದಲಾವಣೆ ಮಾಡಿಕೊಂಡೆ ಅದರಿಂದ ಈ ಬದಲಾವಣೆ ಕಾಣಿಸುತ್ತಿದೆ. ಈ ಸಮಯದಲ್ಲಿ ನನ್ನ ಬೆನ್ನೆಲುಬಾಗಿ ನಿಂತವರು ಕೋಚ್ ಕಿರಣ್ ಸಾಗರ್. ಅವರ ಸಪೋರ್ಟ್ ಇಲ್ಲದೆ ನಾನು ಈ ಟ್ರಾನ್ಸ್‌ಫಾರ್ಮೆಷನ್ ಜರ್ನಿಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ನನ್ನ ತಲೆಯಲ್ಲಿ ಈ ರೀತಿ ನೀವು ಯಾಕೆ ಪ್ರಯತ್ನ ಮಾಡಬಾರದು ಇದು ನಿಮ್ಮ ಕೈಯಲ್ಲಿ ಸಾಧ್ಯ ಎಂದು ತುಂಬಿದವರೇ ಅವ್ರು. ಈಗ ದಿನಕ್ಕೆ ಒಂದೆರಡು ಗಂಟೆ ಕಷ್ಟ ಪಟ್ಟು ಜಿಮ್‌ಗೆ ಹೋಗಿ ವರ್ಕೌಟ್ ಮಾಡಿ ಬೆವರು ಇಳಿಸಬಹುದು ಆದರೆ ಈ ಡಯಟ್ ಅನ್ನೋದು ದೊಡ್ಡ ತಲೆ ನೋವು, ಮಾಡಲು ಕಷ್ಟವಾಗುತ್ತದೆ. ಮಳೆ ಬರುವಾಗ ಅಥವಾ ಚಳಿ ಇರುವಾಗ ಎಲ್ಲರೂ ಪಾನಿಪೂರಿ ತಿನ್ನುತ್ತಾರೆ ಬಜ್ಜಿ ತಿನ್ನುತ್ತಾರೆ ಅದೆಲ್ಲ ನೋಡಿದಾಗ ನಾನು ಯಾಕೆ ಇನ್ನು ಬದುಕಿದ್ದೀನಿ ನನಗೆ ಯಾಕೆ ಬೇಕು ಈ ಜೀವನ ಅಂತ ಅನಿಸುತ್ತದೆ. ಅದೆಲ್ಲಾ ತ್ಯಾಗ ಮಾಡಿ ಈಗ ನನಗೆ ಸಿಕ್ಕಿರುವ ಫಲಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಕಷ್ಟ ನೋವು ಎಲ್ಲಾ ನಮ್ಮ ಫ್ರೆಂಡ್ಸ್ ತರ ಯಾವಾಗಲೂ ಜೊತೆಗಿರುತ್ತಾರೆ ಅದರ ಜೊತೆ ಬದುಕಲು ಕಲಿಯಬೇಕು. ಡಯಟ್ ವರ್ಕೌಟ್‌ನಿಂದ ನಾನು ಬ್ರೇಕ್ ತೆಗೆದುಕೊಂಡಿದ್ದೀನಿ ಆಫ್ ಟ್ರ್ಯಾಕ್ ಅಗಿದ್ದೀನಿ. ನನ್ನ ಗುರಿ ತಲುಪುತ್ತೀನಿ ಅನ್ನೋದು ಮೈಂಡ್‌ನಲ್ಲಿ ಸೆಟ್ ಮಾಡಿಕೊಂಡಿರುವೆ' ಎಂದು ಗೀತಾ ಖಾಸಗಿ ವಾಹಿನಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನಾನು ಡಿಪ್ರೆಶನ್‌ಗೆ ಹೋಗಿದ್ದು ಪಾತ್ರ ಸಿಕ್ಕಿಲ್ಲ ಅಥವಾ ನಾನು ದಪ್ಪ ಇದ್ದೀನಿ ಅಂತಲ್ಲ. ಡಿಪ್ರೆಶನ್‌ಗೆ ಹೋಗಿದ್ದು ಡಯಟ್ ಮಾಡಬೇಕು ಅಂತ. ಆರಂಭದಲ್ಲಿ ಕೀಳರಿಮೆ ಇದ್ದದ್ದು ನಿಜ ನಾನು ಯಾಕೆ ಇಷ್ಟೊಂದು ದಪ್ಪ ಇದ್ದೀನಿ ಯಾಕೆ ಅನ್ನೋ ಯೋಚನೆ ಇತ್ತು. ಒಂದು ಸಮಯದಲ್ಲಿ ಇರೋದೇ ಹೀಗೆ ಯಾಕೆ ಇದೆಲ್ಲಾ ತ್ಯಾಗ ಮಾಡಬೇಕು ಅನ್ನೋ ಯೋಚನೆ ಬಂದಿತ್ತು ಆದರೆ ಬದಲಾಗಿದ್ದು ನನ್ನ ಆರೋಗ್ಯ ವಿಚಾರದಿಂದ. ವಯಸ್ಸು ಆಗುತ್ತಿದ್ದಂತೆ ಹೊಸ ಹೊಸ ಆರೋಗ್ಯ ಸಮಸ್ಯೆ ಶುರುವಾಗುತ್ತದೆ ಇದೆಲ್ಲ ಸರಿ ಮಾಡಿಕೊಳ್ಳಬೇಕು ಹಲವು ವರ್ಷಗಳ ಕಾಲ ಬದುಕಬೇಕು ಅಂತ ಇದ್ರೆ ಒಂದೇ ಒಂದು ಪರಿಹಾರ ಅಂದ್ರೆ ಲೈಫ್‌ಸ್ಟೈಲ್ ಬದಲಾಯಿಸಿಕೊಳ್ಳುವುದು. ನನ್ನ ಆಯಸ್ಸು ಸ್ವಲ್ಪ ಜಾಸ್ತಿಯಾಗಿದೆ.' ಎಂದು ಗೀತಾ ಹೇಳಿದ್ದಾರೆ.
ಮೈ ಮೇಲೆ ಕುದಿಯುವ ನೀರು ಬಿದ್ದರೂ ಹೇಳಿಕೊಂಡಿರಲಿಲ್ಲ; ತಾಯಿ ನೆನೆದು ಭಾವುಕರಾದ ಗೀತಾ
'ಈ ವಿಚಾರದಿಂದ ಒಬ್ಬರಿಗೂ ನಾನು ಸ್ಫೂರ್ತಿ ಆಗುತ್ತಿನಿ ಎಂದು ಅಂದುಕೊಂಡಿರಲಿಲ್ಲ. ದಪ್ಪ ಇದ್ದರೂ ಪಾತ್ರ ಮಾಡುತ್ತಿರುವೆ ಅನ್ನೋ ಆತ್ಮವಿಶ್ವಾಸ ಇತ್ತು ಆದರೆ ಈ ರೀತಿನೂ ನಾನು ಹೆಸರು ಮಾಡಬಹುದು ಹಾಗೂ ಅನೇಕರಿಗೆ ಸ್ಪೂರ್ತಿ ಆಗಬಹುದು ಅನ್ನೋದು ಈಗ ಗೊತ್ತಾಗಿದೆ. ಇದನ್ನು ನಾನು ಅರ್ಧಕ್ಕೆ ನಿಲ್ಲಿಸಬಹುದು ಎಂದು ನನ್ನ ಕೋಚ್ ಯೂಟ್ಯೂಬ್ ವಿಡಿಯೋ ಮಾಡಿಸಿದ್ದರು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿಸಿದ್ದರು ಏಕೆಂದರೆ ಇದೆಲ್ಲ ಜನರು ನೋಡುತ್ತಾರೆ ಆ ಯೋಚನೆಯಿಂದ ನಾವು ವರ್ಕೌಟ್ ನಿಲ್ಲಿಸುವುದಿಲ್ಲ ಎಂದು. ವೈರಲ್ ಆಗುತ್ತಿದ್ದಂತೆ ಅನೇಕರು ನನಗೆ ನೀವು ನಮ್ಮ ಸ್ಪೂರ್ತಿ ಎನ್ನುತ್ತಿದ್ದರು. ಇಷ್ಟೊಂದು ಪರಿಣಾಮ ಬೀರುತ್ತದೆ ಅಂತ ಗೊತ್ತಾಗಿತ್ತು. ಬದಲಾವಣೆ ಮನುಷ್ಯನ ಮೂಲ ಎಂದು ಗೊತ್ತಾಗಿದೆ ಮುಂಬರು ದಿನಗಳಲ್ಲಿ 50 ಕೆಜಿ ಇಳಿಸಿಕೊಂಡು ಬರುವೆ' ಎಂದಿದ್ದರು.