Jothe jotheyali : ಅನು ಪ್ರೆಗ್ನೆಂಟ್ ಆಗಿ ಅಷ್ಟು ಟೈಮಾಯ್ತು, ಯಾಕಿನ್ನೂ ಹೊಟ್ಟೆನೇ ಬಂದಿಲ್ಲ!

By Suvarna News  |  First Published Feb 14, 2023, 11:12 AM IST

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಅನು ಪ್ರೆಗ್ನೆಂಟ್ ಆಗಿ ಯಾವ್ದೋ ಕಾಲ ಆಯ್ತು. ಆದ್ರೆ ಇನ್ನೂ ಯಾಕೆ ಹೊಟ್ಟೆನೇ ಬಂದಿಲ್ಲ ಅನ್ನೋದು ವೀಕ್ಷಕರ ಡೌಟು.


ಜೊತೆ ಜೊತೆಯಲಿ ಸೀರಿಯಲ್ ಶುರುವಾಗಿ ಕೆಲವು ವರ್ಷಗಳಾದವು. ಮಧ್ಯ ವಯಸ್ಸಿನ ಬಾಸ್ ಮತ್ತು ಚಿಕ್ಕ ವಯಸ್ಸಿನ ಉದ್ಯೋಗಿ ಜೊತೆಗಿನ ಪ್ರೀತಿ, ವಿರಹ, ನೋವು, ನಲಿವಿನ ಕಥೆ ಇದು ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ಈ ಇಬ್ಬರ ಜೋಡಿ ಸಖತ್ ಫೇಮಸ್ ಆಯ್ತು. ಅನು ಸಿರಿಮನೆ ಮತ್ತು ಆರ್ಯವರ್ಧನ್ ಜೋಡಿಯನ್ನು ಅನೇಕರು ಆರಾಧಿಸತೊಡಗಿದರು. ಅನೇಕ ಅಡೆತಡೆಗಳ ನಡುವೆ ಈ ಜೋಡಿಯ ಪ್ರೇಮ ಯಶಸ್ವಿಯಾಗಿ ಇವರಿಬ್ಬರೂ ಸಪ್ತಪದಿಯನ್ನೂ ತುಳಿದರು. ಸಾಮಾನ್ಯವಾಗಿ ಸೀರಿಯಲ್‌ನಲ್ಲಿ ನಾಯಕ ನಾಯಕಿಗೆ ಮದುವೆ ಆದ್ಮೇಲೆ ಟಿಆರ್‌ಪಿ ಫುಲ್ ಇಳಿಯೋದು ರೂಢಿ. ಇದಕ್ಕೆ ಕನ್ನಡತಿ ಬೆಸ್ಟ್ ಎಕ್ಸಾಂಪಲ್. ಇಂಥಾ ಟೈಮಲ್ಲಿ ಟಿಆರ್‌ಪಿ ಏರಿಸಿಕೊಳ್ಳಲು ಏನಾದರೂ ಹೊಸ ಕಥೆ ಎಳೆ ತರಲೇಬೇಕಾಗುತ್ತದೆ. ಅಂಥದ್ದೊಂದು ಟ್ರಿಕ್ ಆಗಿ ಬಂದಿದ್ದೇ ರಾಜ ನಂದಿನಿ ಪಾತ್ರ. ಆರ್ಯವರ್ಧನ್ ಮೊದಲ ಹೆಂಡತಿಯ ಎಪಿಸೋಡ್‌ಗಳು ಸಖತ್ ಇಂಟರೆಸ್ಟಿಂಗ್ ಆಗಿ ವೀಕ್ಷಕರನ್ನು ಹಿಡಿದಿಟ್ಟವು. ಆಮೇಲೆ ಹೀರೋ ಆರ್ಯವರ್ಧನ್‌ನನ್ನೇ ವಿಲನ್ ಮಾಡಲಾಯ್ತು. ಆರಂಭದಲ್ಲಿ ವಿರೋಧದ ಮೇಲೆ ವಿರೋಧ ಬಂದರೂ ವೀಕ್ಷಕರು ಇದನ್ನು ಒಪ್ಪಿಕೊಂಡರು. ಆ ಬಳಿಕ ಹೀರೋ ಪಾತ್ರವೇ ಬದಲಾಯ್ತು. ಅದಕ್ಕೆ ಸ್ಕಿನ್ ಟ್ರಾನ್ಸ್ ಪ್ಲಾಂಟ್‌ನ ಸ್ಟೋರಿ ಹೆಣೆಯಲಾಯ್ತು. ಆದರೆ ಇದು ಮಾತ್ರ ಅಂದುಕೊಂಡ ಯಶಸ್ಸು ಕಾಣಲಿಲ್ಲ.

ಸದ್ಯ ಈ ಸೀರಿಯಲ್‌ನಲ್ಲಿ ಸಂಜುವೇ ಆರ್ಯವರ್ಧನ್ ಅನ್ನೋ ಸತ್ಯ ಬಯಲಾಗಿದೆ. ಅನು ಮತ್ತು ಆರ್ಯನ ನಡುವಿನ ಅಪನಂಬಿಕೆಗಳೆಲ್ಲ ಇನ್ನೇನು ದೂರವಾಗಿ ಅವರಿಬ್ಬರೂ ಒಂದಾಗ್ತಾರೆ ಅನ್ನೋ ಟೈಮಲ್ಲೇ ಝೇಂಡೆ ವಿಷಯ ಬಂದಿದೆ. ಇದೇ ಒಂದಾಗಬೇಕಿದ್ದ ಅನು ಆರ್ಯನ ನಡುವೆ ಗ್ಯಾಪ್ ಹುಟ್ಟೋ ಹಾಗೆ ಮಾಡಿದೆ. ಜೀವದ ಗೆಳೆಯ ಝೇಂಡೆ ವಿಚಾರ ಗೊತ್ತಾಗೋವರೆಗೂ ತಾನು ಅನು ಜೊತೆಗೆ ಇರೋದಕ್ಕೆ ಸಾಧ್ಯ ಇಲ್ಲ ಅನ್ನೋ ಮಾತು ಆರ್ಯನಿಂದ ಬಂದಿದೆ. ಇನ್ನೊಂದೆಡೆ ದೂರ ಕಾಪಾಡಿಕೊಂಡೇ ಅನುವನ್ನ ಖುಷಿಯಾಗಿಡಬೇಕು ಅಂತ ಆರ್ಯ ಅಂದುಕೊಂಡಿದ್ದಾನೆ.

Tap to resize

Latest Videos

ಶ್ವೇತಾಗೆ ಕೊಲೆ ಬೆದರಿಕೆ ಹಾಕಿದ ಡೆವಿಲ್; ಮೊಬೈಲ್ ಕ್ಯಾಮೆರಾದಲ್ಲಿ ಫುಲ್ ರೆಕಾರ್ಡ್‌?

ಇದೆಲ್ಲ ಸೀರಿಯಲ್ ಕತೆಯ ದಿಕ್ಕುತಪ್ಪಿದ ನಡಿಗೆ ಆಯ್ತು. ಆದರೆ ಈ ನಡುವೆ ಪದೇ ಪದೇ ವೀಕ್ಷಕರ ಮನಸ್ಸಿಗೆ ಬರ್ತಿರೋ ಪ್ರಶ್ನೆ ಅಂದರೆ ಗರ್ಭಿಣಿ(Pregnent) ಅನುಗ್ಯಾಕೆ ಇನ್ನೂ ಹೊಟ್ಟೆ ಬಂದಿಲ್ಲ ಅನ್ನೋದು. ಇದರ ಜೊತೆಗೆ ಅನು ಪ್ರೆಗ್ನೆನ್ಸಿ ಬಗ್ಗೆ ಯಾವ ವಿಚಾರಗಳೂ ಬರ್ತಿಲ್ಲ. ಅನು ಪ್ರೆಗ್ನೆನ್ಸಿ ವಿಚಾರ ಏನಾಯ್ತು ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಇನ್ನಾದ್ರೂ ಸ್ವಲ್ಪ ಹೊಟ್ಟೆ ತೋರಿಸಬಹುದಲ್ವಾ ಅನ್ನೋ ಮಾತು ಕೇಳಿ ಬರ್ತಿದೆ. ಜೊತೆಗೆ ಅನು ಹೊಟ್ಟೇಲಿರೋ ಮಗುವಿನ ಬಗ್ಗೆ ಎಲ್ಲೂ ಪ್ರಸ್ತಾಪ ಬರದೇ ಇರೋದ್ರಿಂದ ನಡುವೆ ಎಲ್ಲೋ ಅನು ಪ್ರೆಗ್ನೆನ್ಸಿ ಲಾಸ್(Loss) ಆಗಿರೋ ಥರದ ಎಪಿಸೋಡ್ ಏನಾದ್ರೂ ಪ್ರಸಾರ ಆಗಿದ್ಯಾ ಅನ್ನೋ ಡೌಟೂ ಇದೆ. ಒಂದು ವೇಳೆ ಹಾಗಾಗಿದ್ದರೆ ಆ ಬಗ್ಗೆ ಅನುಗೆ ನೆನಪಾಗೋದಾಗಿರಲಿ, ಆ ಬಗೆಗಿನ ಮಾತು ಬರೋದಾಗಿರಲಿ ಆಗಬೇಕಿತ್ತಲ್ವಾ, ಯಾಕೆ ಆ ವಿಚಾರ ಪ್ರಸ್ತಾಪನೇ ಮಾಡ್ತಿಲ್ಲ ಅನ್ನೋ ಪ್ರಶ್ನೆ ಇದೆ.

ಈ ನಡುವೆ ಕೇಳಿ ಬರ್ತಿರೋ ಇನ್ನೊಂದು ಫನಿ ಪ್ರಶ್ನೆ(Question) ಅಂದರೆ ಮೊದಲು ಬೆಳ್ಳಗಿದ್ದ ಆರ್ಯವರ್ಧನ್ ಗಡ್ಡ ಇದೀಗ ಹೇಗೆ ಕಪ್ಪಗಾಗಿದೆ, ಆರ್ಯನ ವಯಸ್ಸು ಇದ್ದಕ್ಕಿದ್ದ ಹಾಗೆ ಚಿಕ್ಕದಾಯ್ತಾ ಅನ್ನೋದು. ಇದೀಗ ಅನು ಆರ್ಯ ನಡುವೆ ಡಿವೋರ್ಸ್ ವಿಷ್ಯನೂ ಬರ್ತಿದೆ. ಇದೆಲ್ಲ ಬೇಕಾ ಅಂತ ವೀಕ್ಷಕರು ಕೇಳ್ತಿದ್ದಾರೆ.

ಒಟ್ಟಾರೆ ಯಾಕೋ ಈ ಸೀರಿಯಲ್ ಬಗ್ಗೆ ನೆಗೆಟಿವ್ ಮಾತುಗಳೇ ಕೇಳಿ ಬರ್ತಿವೆ. ಈ ನಡುವೆ ಒಂದೊಂದೇ ವಿಚಾರಗಳು ಕ್ಲಿಯರ್(Clear) ಆಗ್ತಿವೆ. ಸೋ ಬೇಗ ಈ ಸೀರಿಯಲ್ ಮುಕ್ತಾಯವಾಗುತ್ತೆ ಅನ್ನೊ ಮಾತಿದೆ.

ಕನ್ನಡತಿ ಸರಿಯಾಗಿ ಕೊನೆಯಾಗಿಲ್ಲ, ಪಾರ್ಟ್ 2 ಶುರುಮಾಡಿ ಅಂತಿದ್ದಾರೆ ವೀಕ್ಷಕರು

click me!