ಶೂಟಿಂಗ್ ಆದ್ಮೇಲೆ ಅನುಶ್ರೀ ಬಾಯ್ ಅಂತಾನೂ ಹೇಳಲ್ಲ, ನಮ್ಮಿಬ್ಬರ ಕೆಮಿಸ್ಟ್ರಿ ಯಾಕ್ ವೈರಲ್ ಅಯ್ತು ಗೊತ್ತಿಲ್ಲ: ಅರ್ಜುನ್ ಜನ್ಯ

Published : Nov 04, 2024, 12:07 PM IST
ಶೂಟಿಂಗ್ ಆದ್ಮೇಲೆ ಅನುಶ್ರೀ ಬಾಯ್ ಅಂತಾನೂ ಹೇಳಲ್ಲ, ನಮ್ಮಿಬ್ಬರ ಕೆಮಿಸ್ಟ್ರಿ ಯಾಕ್ ವೈರಲ್ ಅಯ್ತು ಗೊತ್ತಿಲ್ಲ: ಅರ್ಜುನ್ ಜನ್ಯ

ಸಾರಾಂಶ

 ಎಲ್ಲೆ ಹೋದರು ಅನುಶ್ರೀ ಎಲ್ಲಿ ಎಂದು ಕೇಳ್ತಾರೆ....ಅರ್ಜುನ್ ಜನ್ಯ ಆಂಡ್‌ ಅನುಶ್ರೀ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ನೆಟ್ಟಿಗರ ರಿಯಾಕ್ಷನ್..... 

ಕನ್ನಡ ಚಿತ್ರರಂಗದ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಖ್ಯಾತ ನಿರೂಪಕಿ ಅನುಶ್ರೀ ಕಾಂಬಿನೇಷನ್‌ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಅನುಶ್ರೀ ಇದ್ದಲಿ ಅರ್ಜುನ್ ಜನ್ಯ ಇರಬೇಕು ಇಲ್ಲವಾದರೆ ಅರ್ಜುನ್ ಇದ್ದಲ್ಲಿ ಅನುಶ್ರೀ ಇರಬೇಕು ಅನ್ನೋ ಮಟ್ಟಕ್ಕೆ ಹೆಸರು ಮಾಡಿದೆ ಈ ಕಾಂಬಿನೇಷನ್‌. ತಮಾಷೆಗೆಂದು ಆರಂಭವಾದ ಇವರಿಬ್ಬರು ಕಾಮಿಡಿ ಕೊನೆ ಕೊನೆಯಲ್ಲಿ ಎಷ್ಟು ಸೀರಿಯಸ್ ಅಯ್ತು ಅಂದ್ರೆ ಇವರು ಎಲ್ಲೇ ಹೋದರು ಮತ್ತೊಬ್ಬರು ಎಲ್ಲಿ ಎಂದು ಪ್ರಶ್ನೆ ಮಾಡುವ ಹಂತಕ್ಕಿತ್ತು. ಈ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಜನರು ಇಷ್ಟ ಪಡುತ್ತಿದ್ದಾರೆ ಅದರೆ ಅರ್ಜುನ್ ಜನ್ಯ ಮನೆಯಲ್ಲಿ ರಿಯಾಕ್ಷನ್ ಹೇಗಿತ್ತು, ಇದನ್ನು ಯಾವಾಗ ಸೀರಿಯಸ್ ಆಗಿ ಪರಿಗಣಿಸಿದ್ದರು ಎಂದು ರಿವೀಲ್ ಮಾಡಿದ್ದಾರೆ.

'ಜೀ ಸರಿಗಮಪ ಕಾರ್ಯಕ್ರಮಕ್ಕೆ ವಿಜಯ್ ಪ್ರಕಾಶ್ ಸರ್ ಹೇಳಿದ್ದರು ಎಂದು ನಾನು ಹೋದಾಗ ನನಗೆ ಏನೂ ಗೊತ್ತಿರಲಿಲ್ಲ. ಅಲ್ಲಿ ಒಬ್ಬರು ಕಾಮಿಡಿ ಮಾಡುತ್ತಾರೆ ಕೌಂಟರ್ ಕೊಡುತ್ತಾರೆ ನಾನು ಮಾತನಾಡಬೇಕು ಅಲ್ಲದೆ ಅನುಶ್ರೀ ಅವರು ನಿಮ್ಮ ಕಾಲೆಳೆಯುತ್ತಾರೆ ಅಂದ್ರು ಅಯ್ಯೋ ನನ್ನ ಕಾಲು ಯಾಕೆ ಎಳೆಯುತ್ತಾರೆ ಎಂದು ಪ್ರಶ್ನೆ ಮಾಡಿದಾಗ ಸುಮ್ಮನೆ ಫನ್‌ ಮಾಡಲು ಎಂದರು. ಅಷ್ಟೇ ನನಗೆ ಗೊತ್ತಿರುವುದು...ಅವರು ಏನು ಕೇಳಿದ್ದರು ಅದಕ್ಕೆ ನಾನು ಏನು ಉತ್ತರ ಕೊಟ್ಟೆ ಅದು ಯಾಕೆ ಇಷ್ಟು ವೈರಲ್ ಆಯ್ತು ಅನ್ನೋದು ಏನೂ ಗೊತ್ತಿಲ್ಲ. ಶೂಟಿಂಗ್ ದಿನ ನಾನು ಮತ್ತು ಅನುಶ್ರೀ ಚೆನ್ನಾಗಿ ಮಾತನಾಡುತ್ತೀವಿ ಒಂದೊಂದು ಸಲ ಹೋಗುವಾಗ ಬಾಯ್ ಕೂಡ ಹೇಳಿರುವುದಿಲ್ಲ ನೆಕ್ಸಟ್‌ ಸಿಗುವುದು ಮುಂದಿನ ವಾರದ ಶೂಟಿಂಗ್‌ನಲ್ಲೇ. ತೆರೆ ಮೇಲೆ ನಡೆಯುವ ಕೆಮಿಸ್ಟ್ರಿ ಜನರಿಗೆ ಇಷ್ಟವಾಗಿದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಅರ್ಜುನ್ ಜನ್ಯ ಮಾತನಾಡಿದ್ದಾರೆ. 

ಬ್ರೇಕಪ್ ಸ್ಪಷ್ಟನೆ ಕೊಟ್ಟ ಬಿಗ್ ಬಾಸ್ ಜಯಶ್ರೀ ಆರಾಧ್ಯ; 'ರಾಜಾ ರಾಣಿ'ಗೆ ಕಾಲಿಟ್ಟವರ ಕಥೆ

'ನಾನು ಕಾರ್ಯಕ್ರಮದ ಮೇಲೆ ಎಲ್ಲೇ ಹೋದರು ಸುಮಾರು 40 ವಯಸ್ಸಿನ ತಾಯಂದಿರು ಕೇಳುವುದು ಅನುಶ್ರೀ ಎಲ್ಲಿ ಅನುಶ್ರೀ ಎಲ್ಲಿ ಎಂದು...ನಮ್ಮನ್ನು ಒಂದು ಫ್ಯಾಮಿಲಿ ರೀತಿಯಲ್ಲಿ ನೋಡುತ್ತಾರೆ ಇದಕ್ಕೆ ಕಾರಣ ಜೀ ಕನ್ನಡ. ಯಾವುದೇ ಪ್ಲ್ಯಾನ್ ಇಲ್ಲದೆ ಮಾತನಾಡುತ್ತೀವಿ ತಲೆ ಕೆಡಿಸಿಕೊಂಡು ಹೀಗೆ ಮಾತನಾಡಬೇಕು ಅನ್ನೋದು ಸರಿ ಹೋಗುವುದಿಲ್ಲ ಆ ಕ್ಷಣ ಅವರು ಏನು ಕೇಳುತ್ತಾರೆ ಅದಕ್ಕೆ ನಾನು ಉತ್ತರ ಕೊಡುತ್ತೀನಿ. ನನ್ನ ಹೆಂಡತಿ ಸೀರಿಯಸ್ ಆಗಿ ತೆಗೆದುಕೊಂಡಾಗ ಅರ್ಥವಾಗುತ್ತಿದೆ ಓ ಇದು ಸೀರಿಯಸ್  ಆಗಿ ತೆಗೆದುಕೊಳ್ಳುವ ವಿಚಾರನಾ ಎಂದು. ಟಿವಿಯಲ್ಲಿ ನೋಡುವಾಗ ನಮಗೆ ಹಾಗೆ ಅನಿಸುತ್ತದೆ ಎಂದು ಮನೆಯವರು ಹೇಳುತ್ತಾರೆ ಯಾಕೆ ಹಾಗೆ ಅನಿಸುತ್ತದೆ ಏನೋ ಎಂದು ಹೆಚ್ಚಾಗಿ ಕೇಳುವುದಿಲ್ಲ ಏಕೆಂದರೆ ತಿಳಿದುಕೊಳ್ಳದೆ ಹೋದರೆ ಒಳ್ಳೆಯದು' ಎಂದು ಅರ್ಜುನ್ ಜನ್ಯ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Sri Raghavendra Mahathme: ರಾಯರ ಪತ್ನಿ ಸರಸ್ವತಿಯಾಗಿ ನಟಿಸುತ್ತಿರುವ ಸುಂದರಿ ಇವರೇ
Karavali Beauties: ಕನ್ನಡ ಕಿರುತೆರೆಯಲ್ಲಿ ಹವಾ ಸೃಷ್ಟಿಸಿದ ಕರಾವಳಿಯ ಸುಂದರಿಯರು