ಬಿಬಿಕೆಯಿಂದ ಮಾನಸ ಔಟ್, ಹೆಂಡತಿಗಾಗಿ ಕರ್ನಾಟಕದ ಕ್ಷಮೆ ಕೇಳಿದ ತುಕಾಲಿ ಸಂತೋಷ

By Gowthami K  |  First Published Nov 3, 2024, 11:51 PM IST

ಐದನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದ ಮಾನಸಾ ಭಾವುಕರಾಗಿದ್ದಾರೆ. ತಮ್ಮ ತಪ್ಪಿನ ಬಗ್ಗೆ ಮಾನಸಾ ಪ್ರತಿಕ್ರಿಯಿಸಿದ್ದಾರೆ. ತುಕಾಲಿ ಸಂತೋಷ್ ಅವರು ಮಾನಸಾ ಅವರನ್ನು ಸಮಾಧಾನಪಡಿಸಿದ್ದಾರೆ.


ಬಿಗ್ ಬಾಸ್ ಕನ್ನಡ  11ರಿಂದ  ಐದನೇ ವಾರ ತುಕಾಲಿ ಸಂತೋಷ್ ಪತ್ನಿ ಮಾನಸಾ ಅವರು ಎಲಿಮಿನೇಟ್ ಆಗಿದ್ದಾರೆ. ತುಂಬಾ ಬೇಗ ವಾಪಸ್‌ ಬಂದೆ ಅನ್ನಿಸುತ್ತಿದೆ.  ದೊಡ್ಡದಾಗಿ ಎಡವಿಬಿದ್ದೆ, ಗೊತ್ತಾಗಲಿಲ್ಲ ಏನು ಮಾಡಬೇಕು? ಹೇಗಿರಬೇಕು ಎಂಬುದು ಗೊತ್ತಾಗಲಿಲ್ಲ. ಯಾವತ್ತೂ ಯಾರನ್ನು ಬಿಟ್ಟು ಇದ್ದವಳಲ್ಲ. ಸಂತು ಇಲ್ಲದೆ ಜೀವನ ಮಾಡಿದವಳು ಕೂಡ ಅಲ್ಲ. 

ಏನು ತಪ್ಪಾಯ್ತು ಅಂತ ಸುದೀಪ್ ಕೇಳಿದ್ದಕ್ಕೆ ನಾನೇ ಏನು ಮಾಡಿಲ್ಲ ಅನ್ನಿಸುತ್ತೆ. ಸುಮ್ಮನೆ ಕರೆಸೋದಿಲ್ಲ ಅಲ್ವಾ? ಎಕ್ಸ್‌ಪೆಕ್ಟೇಷನ್ ಇಟ್ಟು ಕಳಿಸುತ್ತಾರೆ. ನನ್ನಿಂದ ದೊಡ್ಡದಾಗಿ ತಪ್ಪಾಗಿದೆ. ಏನೂ ಮಾಡಿರುದಿಲ್ಲ.  ಏನಾದ್ರೂ ಮಾಡಬಹುದೆಂದು ಒಂದು ಧೈರ್ಯ ಇತ್ತು. ಆದರೆ ಒಳಗಡೆ ಹೋದ ಮೇಲೆ ಗೊತ್ತಾಗೋದು ಎಷ್ಟು ಆಳ ಇದೆ. ಎಷ್ಟು ಈಜಬೇಕು ಅಂತ. 

Tap to resize

Latest Videos

undefined

ಬಿಗ್‌ಬಾಸ್‌ ಕನ್ನಡದಲ್ಲಿ ತೆಲುಗು ಅಭಿಮಾನಿಗಳಿಗೆ ನಗುತ್ತಲೇ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್

ತುಂಬಾ ಬೇಜಾರಿದೆ. ದೊಡ್ಡದಾಗಿ ಹೇಳಿ ಹೋಗಿದ್ದೆ. ಸಂತುಗೆ ಮುಖ ತೋರಿಸೋಕೆ ಸ್ವಲ್ಪ ನಾಚಿಕೆನೂ ಆಗುತ್ತಿದೆ. ಇದ್ದಷ್ಟು ದಿನ ನಾನು ಖುಷಿ ಪಟ್ಟಿದ್ದೇನೆ ಎಂದರು. 

ಇನ್ನು ತುಕಾಲಿ ಸಂತೋಷ್ ಮಾತನಾಡಿ, ಎಲ್ಲೋ ಒಂದು ಕಡೆ ಬೇಸರ ಇದೆ. ಒಂದು ಕಡೆ ಖುಷಿನೂ ಇದೆ. ಏಕೆಂದರೆ ಆಕೆಗೆ ಏನೂ ಗೊತ್ತಿಲ್ಲ. ಎಲ್ಲೂ ಒಂದು ಹಳ್ಳಿಲಿ ಹುಟ್ಟಿ. ಕಡುಬಡತನ, ಫ್ಯಾಮಿಲಿ ಸಮಸ್ಯೆಗಳನ್ನು ಒಬ್ಬಳೇ ಎದುರಿಸುತ್ತಿದ್ದಾಗ ಅಲ್ಲಿಗೆ ನಾನು ಎಂಟ್ರಿ ಕೊಡುತ್ತೇನೆ. ಅಲ್ಲಿಂದ ಆಕೆಗೆ ಹೊಸ ಬದುಕು ಸಿಗುತ್ತದೆ. 

ಬೆಂಗಳೂರು ನೋಡದ ಆಕೆಯನ್ನು ಕರೆದುಕೊಂಡು ಬಂದು ರಿಯಾಲಿಟಿ ಶೋ ಮಾಡಿಸಿ, ಅಲ್ಲಿಂದ ದೇಶದ ನಂಬರ್ 1 ರಿಯಾಲಿಟಿ ಶೋ ಬಿಗ್‌ಬಾಸ್‌ ಗೆ ಅವಳು ಸ್ಪರ್ಧಿಯಾಗಿ ಹೋಗಿ ಬಂದಿರುವುದೇ ದೊಡ್ಡ ಸಾಧನೆ. ನನ್ನ ಹೆಂಡತಿ ಈಗಾಗಲೇ ಗೆದ್ದಿದ್ದಾಳೆ. ಅದಕ್ಕೆ ನಾನು ಯಾವಾಗಲೂ ಚಿರರುಣಿ ಆಗಿರುತ್ತೇನೆ. 

ದಕ್ಷಿಣದ ನಟ ಸೂರ್ಯ ಬಾಲಿವುಡ್‌ಗೆ ಎಂಟ್ರಿ, ಫ್ಯಾನ್ಸ್ ಫುಲ್ ಖುಷ್!

ಇದನ್ನು ಮನೆಯಲ್ಲಿದ್ದ ಎಲ್ಲರೂ ನೆನಪಿಸಿಕೊಳ್ಳಬೇಕು. ಒಂದು ದಿನ ಮನೆಯಲ್ಲಿ ಇದ್ದು ವಾಪಸ್‌ ಬಂದ್ರೂ, 5 ವಾರ ಮನೆಯಲ್ಲಿ ಇದ್ರೂ ಬಿಗ್‌ಬಾಸ್ ಖ್ಯಾತಿಯ ಅಂತ ಉಲ್ಲೇಖಿಸುತ್ತಾರೆ. ಎಲ್ಲ ಪೋಸ್ಟರ್‌ ಹಾಕುತ್ತಾರೆ. ಅದು ಬಿಟ್ರೆ ಬೇರೆ ಡಿಫರೆನ್ಸ್ ಇಲ್ಲ. ಒಂದಲ್ಲ ಒಂದು ದಿನ ಆ ಮನೆಯಿಂದ ವಾಪಸ್‌ ಬರಬೇಕು. ಮಾನಸ ಗೆದ್ದಿದ್ದಾಳೆ ಪಾಸ್ ಆಗಿದ್ದಾಳೆ. 

ಅಳಬೇಡ ಮಾನಸ, ನನಗೆ ನೀನು ಯಾವಾಗಲೂ , ಮೊನಸಲೀಸಾ, ಮಿಸ್‌ ಇಂಡಿಯಾ, ಮಿಸ್‌ ಯೂನಿರ್ವ್ ಆಗಿರುತ್ತೀಯಾ. ನಿನ್ನನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲ್ಲ. ನೀನು ಸಾಧಿಸಿದ್ದೀಯಾ. ಏನೋ ಒಂದು ಮಾತಾಡುವ ಭರದಲ್ಲಿ ನನ್ನ ಹೆಂಡತಿಯಿಂದ ಕೆಲವು ಪದಗಳು ಬಂದಿರಬಹುದು. ಎಲ್ಲೋ ತಪ್ಪಾಗಿರಬಹುದು. ಆದರೆ ಆಕೆ ಇರುವ ಶೈಲಿಯೇ ಹಾಗೆ. ಆಕೆ ಒಂದು ಮಗು ತರ ಹಿಂದೆ ಮುಂದೆ ಏನೂ ಗೊತ್ತಿಲ್ಲ. ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ ತುಕಾಲಿ ಸಂತೋಷ್ 

click me!