ಬಿಗ್‌ಬಾಸ್‌ ಕನ್ನಡದಲ್ಲಿ ತೆಲುಗು ಅಭಿಮಾನಿಗಳಿಗೆ ನಗುತ್ತಲೇ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್

By Gowthami K  |  First Published Nov 3, 2024, 11:20 PM IST

ಬಿಗ್‌ಬಾಸ್‌ ವೇದಿಕೆಯಲ್ಲಿ ಕಿಚ್ಚ ಸುದೀಪ್‌ ಅವರ ಕಾಫಿ ಕುಡಿಯುವ ಅಭ್ಯಾಸದ ಬಗ್ಗೆ ತೆಲುಗು ಅಭಿಮಾನಿಗಳಿಗೆ ತಮಾಷೆಯಾಗಿ ಸ್ಪಷ್ಟನೆ ನೀಡಿದ್ದಾರೆ. ಉಗ್ರಂ ಮಂಜು ಸಹಾಯದಿಂದ ತೆಲುಗಿನಲ್ಲೇ ಮಾತನಾಡಿ ಕಾಫಿ ಎಂದು ಅರ್ಥ ಮಾಡಿಸಿದ್ದಾರೆ.


ಬಿಗ್‌ಬಾಸ್‌ ಕನ್ನಡ 11 ರಲ್ಲಿ ನಿರೂಪಕ, ನಟ ಕಿಚ್ಚ ಸುದೀಪ್‌ ಅವರು ತೆಲುಗು ಬಿಗ್‌ಬಾಸ್‌ ಅಭಿಮಾನಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ  ತೆಲುಗಿನಲ್ಲೇ ಮಾತನಾಡಲು ಪ್ರಯತ್ನಿ ಸ್ಪಷ್ಟನೆ ಕೊಟ್ಟರು.

ಕಿಚ್ಚನಿಗೆ ಬ್ಲಾಕ್‌ ಕಾಫಿ ಎಂದರೆ ಬಲು ಇಷ್ಟ. ಬಿಗ್‌ಬಾಸ್‌ ವೇದಿಕೆಯಲ್ಲಿ ಕಿಚ್ಚ ನಿರೂಪಣೆ ಮಾಡುವಾಗ ಪ್ರತೀ ದಿನ ಬ್ಲಾಕ್‌ ಕಾಫಿ ಕುಡಿಯುತ್ತಿರುತ್ತಾರೆ. ಹೀಗಾಗಿ ತೆಲುಗು ಬಿಗ್‌ಬಾಸ್‌ ಅಭಿಮಾನಿಗಳು ಸುದೀಪ್‌ ದಿನಾಲು ಸ್ಟೇಜ್ ಮೇಲೆ ಪದೇ ಪದೇ  ಕುಡಿಯುತ್ತಾರಲ್ಲ ಅದು ಏನು ಎಂದು ಕೇಳುತ್ತಿದ್ದಾರಂತೆ.

Tap to resize

Latest Videos

undefined

ಭಾರತದ ಟಾಪ್ 10 ನದಿಗಳು: ಜೀವನದಿ ಕಾವೇರಿ ಎಷ್ಟನೇ ಸ್ಥಾನದಲ್ಲಿದೆ

ಇದಕ್ಕೆ ಸ್ಪಷ್ಟನೆ ಕೊಟ್ಟ ಕಿಚ್ಚ ತಪಾಷೆಯಾಗಿ ಉಗ್ರಂ ಮಂಜು ಸಹಾಯದಿಂದ ತೆಲುಗಿನಲ್ಲಿ ಅಲ್ಪ ಸ್ವಲ್ಪ ಮಾತನಾಡಿ ನಾನು ಕುಡಿಯುತ್ತಿರುವುದು ಕಾಫಿ ಎಂದು ಅರ್ಥ ಮಾಡಿಸಿದ್ದಾರೆ.

ರಾಮ್ ಚರಣ್ , ಉಪಾಸನಾ ಇದ್ದ ಕಾರು ಮೇಲೆ ಅಟ್ಯಾಕ್‌, ವಿವಾದದ ಬಗ್ಗೆ ನಟ ಹೇಳಿದ್ದೇನು?

ಕಾಫಿ ಕುಡಿಯುತ್ತಲೇ ವಿವರಣೆ ನೀಡಿದ ಕಿಚ್ಚ ಕೊಂಚ ರಮ್‌ ಉಂದಿ,ಕೊಂಚ ಟಕೀಲಾ ಉಂದಿ, ಅನ್ನಿ ಥಿಂಕ್‌ ಚೆಯೊದ್ದು ಓ ಕಾಫಿ ಉಂದಿ ಕಾನಿ ಈ ಕಂಟೆಸ್ಟೆಂಟ್‌ ಕೊ ನಾಕು ಸಾರಾಯಿ ಕಾವಾಲಿ, ಇಕ್ಕಡ ಲೇದು(ಇದರಲ್ಲಿ ಸ್ವಲ್ಪ ರಮ್ಮು, ಸ್ವಲ್ಪ ವಿಸ್ಕಿ, ಸ್ವಲ್ಪ ಟಕೀಲಾ ಇದೆ ಎಂದು ಯೋಚಿಸಬೇಡಿ ಕಾಫಿ ಇದೆ ಅಷ್ಟೇ, ಮತ್ತೆ ಈ ಕಂಟೆಸ್ಟೆಂಟ್‌ ಗಳಿಗೂ ನನಗೂ ಸಾರಾಯಿ ಬೇಕು. ಇಲ್ಲಿ ಇಲ್ಲ ) ಎಂದು ತಮಾಷೆಯಾಗಿ ಹೇಳಿದ್ದಾರೆ.

click me!