ಬ್ರೇಕಪ್ ಸ್ಪಷ್ಟನೆ ಕೊಟ್ಟ ಬಿಗ್ ಬಾಸ್ ಜಯಶ್ರೀ ಆರಾಧ್ಯ; 'ರಾಜಾ ರಾಣಿ'ಗೆ ಕಾಲಿಟ್ಟವರ ಕಥೆ ಮುಗೀತು ಎಂದು ಕಾಲೆಳೆದ ನೆಟ್ಟಿಗರು!

ಗಾಸಿಪ್‌ಗೆ ಬ್ರೇಕ್ ಹಾಕಲು ಕ್ಲಾರಿಟಿ ಕೊಟ್ಟ 'ರಾಜ ರಾಣಿ' ಜಯಶ್ರೀ. ರಿಯಾಲಿಟಿ ಶೋಯಿಂದ ಕಣ್ಣು ಬಿತ್ತು ಅಂತಿದ್ದಾರೆ ನೆಟ್ಟಿಗರು..... 

Bigg boss Jayashree aradya confirms breakup with live in relationship boyfriend vcs

ಬಿಗ್ ಬಾಸ್ ಓಟಿಟಿ ಸೀಸನ್ 1ರ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾದ ಜಯಶ್ರೀ ಆರಾಧ್ಯ ವೈಯಕ್ತಿಕ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ಜಯಶ್ರೀ ಆರಾಧ್ಯ ಮತ್ತು ಸ್ಟೀವನ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎನ್ನಲಾಗಿದೆ.  ರಾಜಾ ರಾಣಿ ರೀ-ಲೋಡೆಡ್ ಕಾರ್ಯಕ್ರಮದ ಮೂಲಕ ಜಯಶ್ರೀ ಮತ್ತು ಸ್ಟೀವನ್ ಸಂಬಂಧವನ್ನು ಬಹಿರಂಗ ಪಡಿಸಿದ್ದರು. ಕನ್ನಡಿಗರಲ್ಲಿ ಈ ಲಿವ್‌ ಇನ್‌ ಸಂಬಂಧ ಕಡಿಮೆ ಇರುವ ಕಾರಣ ಆರಂಭದಲ್ಲಿ ಒಪ್ಪಿಕೊಳ್ಳಲು ಜನರು ಕೊಂಚ ಕಷ್ಟ ಪಟ್ಟರು ಆದರೆ ಇವರಿಬ್ಬರ ಅನ್ಯೋನ್ಯತೆಯನ್ನು ಮೆಚ್ಚಿಕೊಂಡರು. ಆದರೆ ಈಗ ಬ್ರೇಕಪ್ ಗಾಸಿಪ್ ಎದಿದೆ. 

ಕೆಲವು ದಿನಗಳಿಂದೆ ಜಯಶ್ರೀ ಮತ್ತು ಸ್ಟೀವನ್ ಬ್ರೇಕಪ್ ಮಾಡಿಕೊಂಡಿದ್ದಾರೆ, ಒಟ್ಟಿಗೆ ಇಲ್ಲ ಎಂದು ಮಾತನಾಡುತ್ತಿದ್ದಾರೆ. ಅಲ್ಲದೆ ಇಬ್ಬರು ಒಟ್ಟಿಗೆ ಸೇರಿಕೊಂಡು ಬ್ಯುಸಿನೆಸ್‌ ಮಾಡುತ್ತಿದ್ದರು ಈಗ ನಷ್ಟ ಕಂಡಿದೆ ಎಂದು ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಸ್ವತಃ ಜಯಶ್ರೀ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. 

ರೀಲ್ಸ್‌ ರಾಣಿ ವರ್ಷ ಕಾವೇರಿ ತಂದೆ ಆಸ್ಪತ್ರೆಗೆ ದಾಖಲು

ಜಯಶ್ರೀ ಪೋಸ್ಟ್: 

ಹೌದು! ನೀವು ಕೇಳುತ್ತಿರುವ ಗಾಳಿ ಮಾತುಗಳು ಸತ್ಯ, ನನ್ನ ಬಾಯ್‌ಫ್ರೆಂಡ್‌ನಿಂದ ದೂರ ಆಗಿದ್ದೀನಿ.ಇನ್ನು ಮುಂದೆ ದಿ ಗ್ಲಾಮರ್ ರೂಮ್‌ಗೆ ಸಂಬಂಧ ಪಟ್ಟ ಮಾಹಿತಿಗೆ ನನ್ನನ್ನು ಸಂಪರ್ಕ ಮಾಡಿ, ಇಲ್ಲವಾದರೆ ದಿ ಗ್ಲಾಮ್ ರೂಮ್‌ ತಂಡವನ್ನು ಸಂಪರ್ಕಿಸಿ. 

ನಾನು ಕಟ್ಟಿರುವ ಗ್ಲಾಮ್ ರೂಮ್ ಸಂಸ್ಥೆ ಯಾವುದೇ ಪಾರ್ಟನರ್‌ಶಿಪ್ ಅಥವಾ ಹೂಡಿಕೆದಾರರ ಮೇಲೆ ನಡೆಯುತ್ತಿರಲಿಲ್ಲ. ಇದಕ್ಕೆ ಹಣವನ್ನು ಬ್ಯಾಂಕ್ ಲೋನ್‌ ಮುಖಾಂತರ ಹೊಂದಿಸಿದ್ದೆ ಅದನ್ನು ನಾನೇ ಕಟ್ಟುತ್ತಿರುವುದು. ಹಿಂದೆ ಮತ್ತು ಮುಂದೆ ಕೂಡ ನಾನೇ ಕಟ್ಟುವುದು. 

ಇದುವರೆಗೂ ನೀವು ನನ್ನ ಮೇಲೆ ತೋರಿಸಿರುವ ಪ್ರೀತಿ, ಕಾಳಜಿ ಮತ್ತು ಸಹನೆಗೆ ನಾನು ಎಂದಿಗೂ ಚಿರ ಋಣಿಯಾಗಿರುತ್ತೀವಿ. 

ನಿಮ್ಮ ಪ್ರೀತಿಯ ಜಯಶ್ರೀ ಆರಾಧ್ಯಾ

ಬೈಕ್‌ನಲ್ಲಿ ಓಡಾಡಬೇಡ ಎಂದು ತಮ್ಮ ಕಾರನ್ನು ಕಾಶಿನಾಥ್‌ ಪುತ್ರನಿಗೆ ಕೊಡಲು ನಿರ್ಧರಿಸಿದ್ದ

Latest Videos
Follow Us:
Download App:
  • android
  • ios